ಬಾಳೆಹಣ್ಣಿನ ಸಿಪ್ಪೆಯನ್ನು ತಿಪ್ಪೆಗೆ ಎಸೆಯುವ ಮುನ್ನ ಅರಿತುಕೊಳ್ಳಿ ಇದರ ಲಾಭಗಳನ್ನು

ಆರೋಗ್ಯ

ನಮಸ್ತೇ ಗೆಳೆಯರೇ, ಬಾಳೆಹಣ್ಣು, ಹೌದು ಈ ಹಣ್ಣು ಅಂದರೆ ಚಿಕ್ಕವರಿನಿಂದ ಹಿಡಿದು ದೊಡ್ಡವರವರೆಗೆ ತುಂಬಾನೇ ಇಷ್ಟವಾದ ಹಣ್ಣುಗಳಲ್ಲಿ ಒಂದಾಗಿದೆ. ಎಲ್ಲ ಹಣ್ಣುಗಳಲ್ಲಿ ಅತಿ ಹೆಚ್ಚು ಪ್ರಶಂಸೆಯನ್ನು ಪಡೆದಿರುವ ಹಣ್ಣು ಕೂಡ ಇದಾಗಿದೆ. ಎಲ್ಲ ಹಣ್ಣುಗಳಿಗೆ ಹೋಲಿಕೆ ಮಾಡಿದರೆ ಕಡಿಮೆ ಬೆಲೆಗೆ ದೊರೆಯುವ ಹಣ್ಣು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಬಾಳೆಹಣ್ಣು ರುಚಿಯಲ್ಲಿ ಸಿಹಿಯಾಗಿದ್ದು, ಪೌಷ್ಟಿಕಾಂಶಗಳ ಆಗರವಾಗಿದೆ. ನಿಮಗೆ ಗೊತ್ತೇ ಕೇವಲ ಬಾಳೆಹಣ್ಣಿನಲ್ಲಿ ಪೋಷಕಾಂಶಗಳು ಅಡಗಿರುವುದಲ್ಲದೆ ಇದರ ಸಿಪ್ಪೆಯಲ್ಲಿಯೂ ಕೂಡ ಪೌಷ್ಟಿಕತೆ ಅಡಗಿದೆ. ಆದರೆ ನಾವುಗಳು ಏನು ಮಾಡುತ್ತೇವೆ ಗೆಳೆಯರೇ, ಕೇವಲ ಬಾಳೆಹಣ್ಣು ಸೇವನೆ ಮಾಡಿ ಸಿಪ್ಪೆಯನ್ನು ಬಿಸಾಡುತ್ತೇವೆ. ಆದರೆ ಈ ಸಿಪ್ಪೆಯಲ್ಲಿರುವ ಲಾಭಗಳನ್ನು ನೀವು ಅರಿತುಕೊಂಡರೆ ಬಾಳೆಹಣ್ಣು ಸೇವನೆ ಜೊತೆಗೆ ಇದರ ಬಳಕೆ ಮಾಡಲು ಮುಂದಾಗುತ್ತೀರಿ ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಬಾಳೆಹಣ್ಣಿನ ಸಿಪ್ಪೆಯ ರಹಸ್ಯಕರ ಆರೋಗ್ಯಕರ ಲಾಭಗಳ ಪಟ್ಟಿಯನ್ನು ನಿಮ್ಮೊಂದಿಗೆ ಇಡುತ್ತೇವೆ. ಬಾಳೆಹಣ್ಣು ಪೋಷಕಾಂಶಗಳ ಆಗರವಾಗಿದೆ ಅಂತ ಈಗಾಗಲೇ ಹೇಳಿರುವ ಹಾಗೆ ಬಾಳೆ ಸಿಪ್ಪೆಯಲ್ಲಿ ವಿಟಮಿನ್ 6, ಹಾಗು ವಿಟಮಿನ್ ಬಿ12 ಅಧಿಕವಾಗಿದೆ. ಮ್ಯಾಗ್ನಿಶಿಯಂ, ಪೊಟ್ಯಾಶಿಯಂ ಕೂಡ ಹೇರಳವಾಗಿದೆ. ಮುಖವು ಸೌಂದರ್ಯವಾಗಿ ಕಾಣಲು ನಾವು ದುಬಾರಿ ಸೌಂದರ್ಯ ವರ್ಧಕಗಳನ್ನು ಬಳಕೆ ಮಾಡುತ್ತೇವೆ.

ಆ ಸಮಯದಲ್ಲಿ ಆ ಸಂಧರ್ಭಕ್ಕೆ ಅನುಗುಣವಾಗಿ ನಾವು ಸುಂದರವಾಗಿ ಕಾಣುತ್ತೇವೆ. ಆದರೆ ಅದು ಕೇವಲ ತಾತ್ಕಾಲಿಕ. ಆದರೆ ಕಾಲ ಕ್ರಮೇಣವಾಗಿ ನಮ್ಮ ತ್ವಚೆಯೂ ಹಾಳಾಗುತ್ತಾ ಬರುತ್ತದೆ ಅಷ್ಟೇ ಅಲ್ಲದೇ ಮುಖದ ಮೇಲೆ ಮೊಡವೆಗಳು ಮೂಡುತ್ತವೆ. ಮತ್ತು ಮುಖವು ಸುಕ್ಕು ಗಟ್ಟುತ್ತಾ ಹೋಗುತ್ತದೆ. ಇದರಿಂದ ಕುರುಪಿಯಾಗಿ ಕಾಣಲು ಶುರು ಆಗುತ್ತದೆ ಮುಖವು. ಹೌದು ಸುಂದರವಾಗಿ ಕಾಣಲು ಎಲ್ಲರಿಯೂ ಇಷ್ಟ ಅದರಲ್ಲೂ ಮಹಿಳೆಯರು ಸುಂದರವಾಗಿ ಕಾಣಲು ತುಂಬಾನೇ ಇಷ್ಟ ಪಡುತ್ತಾರೆ. ಆದರೆ ಮುಖದಲ್ಲಿ ಮೊಡವೆಗಳು ಕಾಣಿಸಿಕೊಂಡರೆ ತುಂಬಾನೇ ಮುಜುಗರ ಶುರು ಆಗುತ್ತದೆ. ಆದರೆ ಈ ಬಾಳೆಹಣ್ಣಿನ ಸಿಪ್ಪೆಯಲ್ಲಿ ಮೊಡವೆಗಳನ್ನು ದೂರ ಮಾಡುವ ಶಕ್ತಿಯನ್ನು ಹೊಂದಿದೆ. ಹೌದು ಇನ್ನೂ ಈ ಬಾಳೆಹಣ್ಣಿನ ಸಿಪ್ಪೆಯನ್ನು ಹೇಗೆ ಉಪಯೋಗಿಸಬೇಕು ಅಂದರೆ ಬಾಳೆಹಣ್ಣಿನ ಸಿಪ್ಪೆಯ ಒಳಭಾಗದಿಂದ ಮುಖವನ್ನು ಹತ್ತು ನಿಮಿಷಗಳ ಕಾಲ ಮಸಾಜ್ ಮಾಡಿಕೊಳ್ಳಬೇಕು. ಮುಖದ ಮೇಲೆ ಗುಳ್ಳೆಗಳು ಆಗಿದ್ದರೆ ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ. ಒಂದು ಗಂಟೆಗಳ ಕಾಲ ಹಾಗೆಯೇ ಬಿಟ್ಟು ನಂತ್ರ ಮುಖವನ್ನು ತೊಳೆದುಕೊಳ್ಳಿ. ಇದರಿಂದ ನಿಮ್ಮ ಮುಖದಲ್ಲಿ ಆಗಿರುವ ಮೊಡವೆಗಳು ಕಪ್ಪು ಕಲೆಗಳು ಮಾಯವಾಗುತ್ತದೆ.

ಇನ್ನು ನೀವು ಸಾಮಾನ್ಯವಾಗಿ ನೋಡಿರುತ್ತೀರಿ ಮೊಣಕಾಲಿನಲ್ಲಿ ಕಪ್ಪಗೆ ಆಗುವುದು ಹಾಗೂ ಮೊಣಕೈ ಕಪ್ಪಗೆ ಆಗುವುದು ಅಂತ. ಅದಕ್ಕೆ ನೀವು ಆ ಜಾಗದಲ್ಲಿ ಈ ಬಾಳೆಹಣ್ಣಿನ ಸಿಪ್ಪೆಯಿಂದ. ಮಸಾಜ್ ಮಾಡುವುದರಿಂದ ಕಪ್ಪಗೆ ಆಗಿರುವುದು ಕಡಿಮೆ ಆಗುತ್ತದೆ. ಇನ್ನೂ ನಿಮಗೇನಾದರೂ ನರಾಹುಲಿ ಆಗಿದ್ದರೆ, ರಾತ್ರಿ ಮಲಗುವಾಗ ಬ್ಯಾನ್ಡೇಜ್ ರೀತಿಯಾಗಿ ಬಾಳೆ ಸಿಪ್ಪೆಯನ್ನು ಕಟ್ಟಿ ಮಲಗಬೇಕು ಮರುದಿನ ತೆಗೆಯಬೇಕು. ಇದರಿಂದ ನರಹುಲಿ ಉದುರಿ ಹೋಗುತ್ತದೆ. ಇನ್ನೂ ನಿಮಗೆ ಗಾಯವಾಗಿ ತುರಿಕೆ ಆಗಿ ನೋವು ಗುಳ್ಳೆಗಳು ಆಗಿದ್ದರೆ ಬಾಳೆ ಹಣ್ಣಿನ ಸಿಪ್ಪೆಯಿಂದ ಚೆನ್ನಾಗಿ ಉಜ್ಜಿ. ಇದರಿಂದ ನೋವು ಕಡಿಮೆ ಅಗುತ್ತದೆ. ಇನ್ನೂ ಕೆಲವರು ಹಲ್ಲುಗಳು ಹಳದಿ ಬಣ್ಣದಾಗಿರುತ್ತದೆ. ಅಂಥವರು ಹಲ್ಲುಗಳನ್ನು ಬಾಳೆ ಸಿಪ್ಪೆಯಿಂದ ಚೆನ್ನಾಗಿ ಉಜ್ಜಿದರೆ ಹಲ್ಲುಗಳು ಬೆಳ್ಳಗೆ ಆಗುತ್ತವೆ. ಇನ್ನು ಸೋರಿಯಾಸಿಸ್ ಸಮಸ್ಯೆ ಇದ್ದವರಿಗೆ ತುರಿಕೆ ಆಗುವುದು ಸರ್ವೇ ಸಾಮಾನ್ಯವಾಗಿದೆ. ಅಂಥವರು, ಬಾಳೆ ಸಿಪ್ಪೆಯಿಂದ ಉಜ್ಜಿದರೆ ತುರಿಕೆ ಕಡಿಮೆ ಆಗುತ್ತದೆ ಏಕೆಂದರೆ ಇದು ತೇವ ಭರೀತವಾದ ಗುಣಗಳನ್ನು ಹೊಂದಿರುವ ಕಾರಣ ತ್ವರಿತವಾಗಿ ತುರಿಕೆಯನ್ನು ಉಪಶಮನ ಮಾಡುತ್ತದೆ. ಇನ್ನೂ ಯಾವ ರೀತಿಯ ಬಾಳೆಹಣ್ಣು ಉಪಯೋಗಿಸಬೇಕೆಂದರೆ, ಹಣ್ಣಾದ ಬಾಳೆಹಣ್ಣು ಉಪಯೋಗಿಸಬೇಕು ಹಸಿಯಾದ ಬಾಳೆಹಣ್ಣು ಉಪಯೋಗಿಸಿ ಕಾರಣ. ಹಣ್ಣಾದ ಬಾಳೆಹಣ್ಣಿನ ಸಿಪ್ಪೆ ಮೃದುವಾಗಿದ್ದು ಇದು ಚರ್ಮಕ್ಕೆ ತುಂಬಾನೇ ಸೂಕ್ಶ್ಮವಾದದ್ದು, ಆದ್ದರಿಂದ ಉಪಯೋಗಿಸುವ ಮುನ್ನ ಅರಿತುಕೊಳ್ಳಿ. ಈ ಅದ್ಭುತವಾದ ಬಾಳೆಹಣ್ಣಿನ ಸಿಪ್ಪೆಯ ಲಾಭಗಳ ಮಾಹಿತಿ ಇಷ್ಟವಾದರೆ ಲೈಕ ಮಾಡಿ ಶೇರ್ ಮಾಡಿ ಶುಭದಿನ.

Leave a Reply

Your email address will not be published. Required fields are marked *