ಮೊಟ್ಟೆ ಮೀನು ಮಾಂಸಕ್ಕಿಂತ ಅಧಿಕವಾದ ಪೌಷ್ಟಿಕತೆ ಇದರಲ್ಲಿದೆ ಅದು ಯಾವುದು ಗೊತ್ತೇ

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ಮಾಂಸಾಹಾರ ಮೀನು ಮೊಟ್ಟೆ ಕೋಳಿ ಕುರಿ ಮಾಂಸ ಅಂದರೆ ನೋನ್ ವೇಜ್ ಅನ್ನು ಎಲ್ಲರೂ ತುಂಬಾನೇ ಇಷ್ಟ ಪಡುತ್ತಾರೆ ಹಾಗೂ ಅವರು ಈ ಮೀನು ಮೊಟ್ಟೆ ಮತ್ತು ಮಾಂಸಾಹಾರದಲ್ಲಿ ಮಾತ್ರ ಶಕ್ತಿಯು ಅಡಗಿದೆ ಅಂತ ತಪ್ಪಾಗಿ ತಿಳಿದುಕೊಂಡಿದ್ದಾರೆ. ಆದರೆ ಈ ಮಾಂಸಾಹಾರವೂ ಕೆಲವರಿಗೆ ಮಾತ್ರ ಇಷ್ಟವಾಗುತ್ತದೆ ಇನ್ನೂ ಕೆಲವರಿಗೆ ಇದು ಇಷ್ಟವಾಗುವುದಲ್ಲದೆ ಇದನ್ನು ಸೇವನೆ ಕೂಡ ಮಾಡಲು ಹೋಗುವುದಿಲ್ಲ. ಇನ್ನೂ ಈ ಮೀನು ಮೊಟ್ಟೆ ಮಾಂಸದಲ್ಲಿರುವ ಇರುವ ಎಲ್ಲ ಬಗೆಯ ಪೋಷಕಾಂಶಗಳು ಪ್ರೊಟೀನ್ ಗಳು ಸಸ್ಯಾಹಾರದಲ್ಲಿ ಕೂಡ ಅಡಕವಾಗಿದೆ ಲಭ್ಯವಾಗಿ ದೊರೆಯುತ್ತದೆ. ಹಾಗಾದರೆ ಅಂತಹ ಅದ್ಭುತವಾದ ಪೋಷಕಾಂಶವುಳ್ಳ ಆಹಾರಗಳು ಯಾವುವು ಅಂತ ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.

ಮೊದಲನೆಯದು ಅಗಸೆ ಬೀಜ, ಹೌದು ಈ ಬೀಜವನ್ನು ಮೊದಲಿನ ಕಾಲದ ಜನರು ಬಳಕೆ ಮಾಡುತ್ತಿದ್ದರು ಆದರೆ ಈಗಿನ ಆಧುನಿಕ ಕಾಲದಲ್ಲಿ ಈ ಅಗಸೆ ಬೀಜದ ಬಳಕೆಯನ್ನು ಜನರು ಮರೆತು ಬಿಟ್ಟಿದ್ದಾರೆ. ಅಗಸೆ ಬೀಜದಲ್ಲಿ ಸಿಗುವ ಪೌಷ್ಟಿಕತೆ ಮತ್ತು ಪ್ರೊಟೀನ್ ಗಳು ಇನ್ನಿತರ ಯಾವುದೇ ಆಹಾರದಲ್ಲಿ ಸಿಗುವುದಿಲ್ಲ ಅಂತ ಹೇಳಿದರೆ ತಪ್ಪಾಗಲಾರದು. ಅಷ್ಟೊಂದು ಆರೋಗ್ಯಕರ ಗುಣಗಳನ್ನು ಹೊಂದಿದೆ. ಅಷ್ಟೇ ಅಲ್ಲದೇ ಇದರಲ್ಲಿ ಒಮೆಗಾ ತ್ರೀ ಫ್ಯಾಟಿ ಆಸಿಡ್ ಅಧಿಕವಾಗಿ ಇರುವುದರಿಂದ ಇದು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ನಿತ್ಯವೂ ಇದರ ಬಳಕೆ ಮಾಡುವುದರಿಂದ ನೀವು ಆರೋಗ್ಯದಲ್ಲಿ ಬದಲಾವಣೆ ಕಾಣಬಹುದು. ಪ್ರಪಂಚದ ಎಲ್ಲ ಆಹಾರದ ಪಟ್ಟಿಯಲ್ಲಿ ಅಗಸೆ ಬೀಜವು ಮೊದಲನೆಯ ಸ್ಥಾನವನ್ನು ಪಡೆದಿದೆ. ನಿತ್ಯವೂ ಒಂದು ಹಿಡಿಯಷ್ಟುಅಗಸೆ ಬೀಜದಲ್ಲಿ 20 ಕೆಜಿ ಶೇಂಗಾ ಮತ್ತು ಹತ್ತು ಕೆಜಿ ಬಾದಾಮಿ ಮತ್ತು ಒಂದು ಕೆಜಿ ಮೀನಿನಲ್ಲಿ ಇರುತ್ತದೆ ಅಂತೆ. ಇದರಿಂದ ಹೃದಯದ ಸಮಸ್ಯೆಗಳು ಹಾಗೂ ಹೃದಯಾಘಾತ ಆಗುವುದಿಲ್ಲ. ಇನ್ನೂ ಇದರಲ್ಲಿ ನಾರಿನ ಅಂಶ ಅಧಿಕವಾಗಿ ಇರುವುದರಿಂದ ತೂಕ ಇಳಿಸಿಕೊಳ್ಳಲು ತುಂಬಾನೆ ಸುಲಭವಾದ ಮನೆಮದ್ದು ಇದಾಗಿದೆ ಅಂತ ಹೇಳಬಹುದು.
ಅಗಸೆ ಬೀಜವನ್ನು ನಿತ್ಯವೂ ಸೇವಿಸಿದರೆ ಕಣ್ಣಿನ ಆರೋಗ್ಯವೂ ವೃದ್ಧಿಯಾಗುತ್ತದೆ ಹಾಗೂ ದೇಹದಲ್ಲಿ ಉತ್ತಮವಾದ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗೂ ಬ್ಯಾಡ್ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ.

ಅಷ್ಟೇ ಅಲ್ಲದೇ ಮಹಿಳೆಯರಲ್ಲಿ ಕಾಡುವ ಸ್ತನ ಕ್ಯಾನ್ಸರ್ ಅನ್ನು ಕೂಡ ತಡೆಯುತ್ತದೆ. ಮೀನಿನಲ್ಲಿ ಇರುವ ಒಮೆಗಾ ತ್ರಿ ಆಸಿಡ್ ಈ ಅಗಸೆ ಬೀಜದಲ್ಲಿ ಅಡಗಿದೆ. ಮೀನು ತಿನ್ನಲು ಇಷ್ಟ ಪಡದೇ ಇರುವವರು ಈ ಅಗಸೆ ಬೀಜವನ್ನು ತಿಂದು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹೌದು ಒಮೆಗಾ ತ್ರಿ ಅಂಶ ಇರುವ ಆಹಾರವನ್ನು ಸೇವನೆ ಮಾಡುವುದರಿಂದ ಹೃದಯಾಘಾತ ಬರುವುದಿಲ್ಲ. ಕೀಲುಗಳ ಹಾನಿಯನ್ನು ದೂರ ಮಾಡುತ್ತದೆ ಮೆದುಳಿನ ಕಾರ್ಯ ಕ್ಷಮತೆಯನ್ನು ನಿರ್ವಹಿಸುತ್ತದೆ. ಲಿವರ್ ಸಮಸ್ಯೆಯನ್ನು ದೂರ ಮಾಡುವುದರ ಜೊತೆಗೆ ಸಕ್ಕರೆ ಕಾಯಿಲೆಯನ್ನು ಕೂಡ ದೂರ ತಳ್ಳುತ್ತದೆ. ಮಧುಮೇಹಿಗಳು ಕೂಡ ಈ ಅಗಸೆ ಬೀಜವನ್ನು ಸೇವನೆ ಮಾಡಬಹುದು. ಅಗಸೆ ಬೀಜವು ಆರೋಗ್ಯದ ಎಲ್ಲ ದೃಷ್ಟಿ ಕೋನದಿಂದ ಒಳ್ಳೆಯದು. ನಿತ್ಯವೂ ಸೇವನೆ ಮಾಡಲು ಕಷ್ಟವಾದರೆ ವಾರದಲ್ಲಿ ಮೂರು ಬಾರಿ ಸೇವನೆ ಮಾಡಿರಿ. ಒಂದು ಬಾರಿ ಆರೋಗ್ಯವು ಹದಗೆಟ್ಟರೆ ಒಂದು ಸಲ ವೈದ್ಯರ ಮೊರೆ ಹೋದರೆ ಸಾಕು ಪದೇ ಪದೇ ಹೋಗುವ ಅವಕಾಶಗಳು ಉಂಟಾಗುತ್ತವೆ. ಆದ್ದರಿಂದ ಅನಾರೋಗ್ಯ ಬರುವ ಮುನ್ನವೇ ವೈದ್ಯರ ಮೊರೆ ಹೋಗುವ ಮುನ್ನವೇ ಉತ್ತಮವಾದ ಆಹಾರವನ್ನು ಸೇವನೆ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳವುದು ನಮ್ಮ ಕರ್ತವ್ಯವಾಗಿದೆ. ಇನ್ನೂ ಈ ಅಗಸೆ ಬೀಜವು ಎಲ್ಲ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಖಂಡಿತವಾಗಿ ಬಳಕೆ ಮಾಡುವುದು ಒಳ್ಳೆಯದು. ಶುಭದಿನ.

Leave a Reply

Your email address will not be published. Required fields are marked *