ಆರೋಗ್ಯದ ಕಣಜ ಅಣಬೆ ತಿನ್ನುವುದರಿಂದ ಎಷ್ಟೊಂದು ಲಾಭಗಳಿವೆ ಇದು ಸಸ್ಯಾಹಾರ ಮತ್ತು ಮಾಂಸಾಹಾರ ಯಾವುದುಕ್ಕೆ ಸೇರುತ್ತದೆ ಗೊತ್ತಾ

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ನಾಯಿಕೊಡೆ ಅಂತ ಅದ್ಭುತವಾದ ಹೆಸರಿನಿಂದ ಕಂಗೊಳಿಸುವ ಅಣಬೆಯು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಈ ಅಣಬೆ ಅನ್ನುವುದು ಕೆಲವರು ಸಸ್ಯಾಹಾರ ಮತ್ತು ಮಾಂಸಾಹಾರಕ್ಕೆ ಹೋಲಿಕೆ ಮಾಡುತ್ತಾರೆ. ಆದರೆ ಅವರ ತಿಳುವಳಿಕೆಗೆ ಅನುಗುಣವಾಗಿ ಅವರು ಅದನ್ನು ಬಳಕೆ ಮಾಡುತ್ತಾರೆ. ಮಶ್ರೂಮ್​ಗಳು ಶಿಲೀಂಧ್ರ ಪ್ರಭೇದಕ್ಕೆ ಸೇರಿದೆ. ಆದರೆ ಅದನ್ನೂ ಒಂದು ತರಕಾರಿಯಂತೆ ಆಹಾರದಲ್ಲಿ ಬಳಕೆ ಮಾಡುತ್ತಾರೆ. ಅಣಬೆಯಲ್ಲಿ ಇರುವ ವಿಟಮಿನ್ ಗಳು ಪ್ರೊಟೀನ್ ಗಳು ಅಮೈನೋ ಆಮ್ಲಗಳು ಆರೋಗ್ಯಕ್ಕೆ ಸಹಕಾರಿಯಾಗಿದೆ. ಈ ಮಶ್ರೂಮ್ ನಲ್ಲಿ ದೇಹಕ್ಕೆ ಅಗತ್ಯವಾದ ಅನೇಕ ಪೋಷಕಾಂಶಗಳು ಅಡಗಿವೆ. ಇದರಿಂದ ಹಲವಾರು ಪ್ರಯೋಜನಗಳು ಇರುವ ಕಾರಣ ಆಯುರ್ವೇದದಲ್ಲಿಯೂ ಇದಕ್ಕೆ ತನ್ನದೇ ಆದ ವಿಶೇಷತೆ ಇದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಅಣಬೇಯಲ್ಲಿ ಇರುವ ಆರೋಗ್ಯಕರ ಲಾಭಗಳನ್ನು ತಿಳಿಯೋಣ ಬನ್ನಿ. 100-250 ಗ್ರಾಂ ಒಣಗಿದ ಅಣಬೆಯಲ್ಲಿ ಆರೋಗ್ಯಕ್ಕೆ ಬೇಕಾಗುವ ಪೌಷ್ಟಿಕತೆ ಇದರಲ್ಲಿ ಅಡಗಿದೆ. ಇದರಲ್ಲಿ ಪೊಟ್ಯಾಶಿಯಂ ಕ್ಯಾಲ್ಸಿಯಂ ವಿಟಮಿನ್ ಪ್ರೊಟೀನ್,ಮಿನರಲ್, ಅಮೈನೊ ಆಸಿಡ್, ಆಂಟಿ ಬಯೊಟಿಕ್, ಮತ್ತು ಆಂಟಿ ಆಕ್ಸಿಡಂಟ್ ಗಳು ಹೇರಳವಾಗಿವೆ. ಇನ್ನೂ ಈ ಅಣಬೆ ಇಂದ ದೊರೆಯುವ ಆರೋಗ್ಯಕರ ಲಾಭಗಳ ಬಗ್ಗೆ ಊಹಿಸಲು ಸಾಧ್ಯವಿಲ್ಲ. ಅಷ್ಟೊಂದು ಪ್ರಯೋಜನಗಳನ್ನು ಒಳಗೊಂಡಿದೆ ಈ ಅಣಬೆ.

ವಿಟಮಿನ್ ಡಿ ಹೊಂದಿರುವ ಏಕೈಕ ತರಕಾರಿಯೆಂದರೆ ಅಣಬೆ. ರಕ್ತದೊತ್ತಡ ಕಡಿಮೆ ಮಾಡಲು ವಿಟಮಿನ್‌ ಡಿ ಅತ್ಯವಶ್ಯಕ. ಇದನ್ನು ಅಣಬೆ ಒದಗಿಸುತ್ತದೆ. ಅಣಬೆಗಳನ್ನು ಸೇವಿಸುವುದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಚರ್ಮ ಹಾಗೂ ಕೂದಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಅಣಬೆಯನ್ನು ಸೇವಿಸುವುದರಿಂದ ಮುಖದಲ್ಲಿನ ಮೊಡವೆಗಳು ದೂರವಾಗಿ ಮುಖದ ಸೌಂದರ್ಯ ಹೆಚ್ಚಾಗುತ್ತದೆ. ಇದರಲ್ಲಿ ವಿಟಮಿನ್ ಬಿ2 ಹೇರಳವಾಗಿವೆ. ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಸೂರ್ಯನ ಬಿಸಿಲಿಗೆ ಒಡ್ಡಿದರೆ ಮಶ್ರೂಮ್ ವಿಟಮಿನ್ ಡಿ ಯನ್ನು ಉತ್ಪಾದಿಸುತ್ತದೆ. ಹಾಗಾಗಿ ಒಣ ಮಶ್ರೂಮ್ ತಿನ್ನುವುದರಿ೦ದ ನಿಮ್ಮ ದೇಹ ವಿಟಮಿನ್ ಡಿ2 ಮತ್ತು ಡಿ3 ಯನ್ನು ಪಡೆಯುತ್ತದೆ. ಮತ್ತು ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಇದರಿಂದಾಗಿ ದೇಹಕ್ಕೆ ಉಂಟಾಗುವ ಅನೇಕ ರೀತಿಯ ಕಾಯಿಲೆಗಳನ್ನು ದೂರ ಮಾಡುವಲ್ಲಿ ಮತ್ತು ಹೋರಾಡುವಲ್ಲಿ ಅಣಬೇಯು ಸಹಾಯ ಮಾಡುತ್ತದೆ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ ದೇಹದಲ್ಲಿ ಉಂಟಾಗುವ ಚಿಕ್ಕ ಚಿಕ್ಕ ತೊಂದರೆಗಳು ಆಗುವುದಿಲ್ಲ.

ಮಧುಮೇಹಿಗಳಿಗೆ ಅಣಬೆ ಉತ್ತಮ ಆಹಾರ. ಏಕೆಂದರೆ ಇದರಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಇಲ್ಲ. ಇದರಲ್ಲಿನ ನೈಸರ್ಗಿಕ ಇನ್ಸುಲಿನ್ ಮತ್ತು ಎಂಜೈಮುಗಳು ಸೇವಿಸಿದ ಆಹಾರದಲ್ಲಿನ ಸಕ್ಕರೆ ಅಂಶವನ್ನು ತೆಗೆದುಹಾಕುತ್ತದೆ. ಅಷ್ಟೇ ಅಲ್ಲದೆ, ಅಣಬೆಯಲ್ಲಿ ಕಾರ್ಬೋಹೈಡ್ರೇಟ್ಸ್ ಮಟ್ಟವು ತುಂಬಾ ಕಡಿಮೆಯಾಗಿರುವ ಕಾರಣ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ. ಅಧ್ಯಯನಗಳ ಪ್ರಕಾರ ಅಣಬೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತದೆ.ಅಣಬೆ ಸೇವನೆಯಿಂದ ದೇಹಕ್ಕೆ ಕಬ್ಬಿಣ ಅಂಶ ದೊರೆತು ಹಿಮೋಗ್ಲೋಬಿನ್, ಕೆಂಪು ರಕ್ತ ಕಣಗಳು ಹೆಚ್ಚಾಗುತ್ತದೆ. ಅಣಬೆಯು ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕ ದೊರೆಯುವಂತೆ ಮಾಡುತ್ತದೆ, ಅಲ್ಲದೇ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇದು ಕೊಬ್ಬು ರಹಿತವಾಗಿದೆ ಮತ್ತು ಕೊಲೆಸ್ಟ್ರಾಲ್ ಮಟ್ಟವು ಕಡಿಮೆ ಇರುತ್ತದೆ. ಆದ್ದರಿಂದ ಅಣಬೆಯನ್ನು ನಿಮ್ಮ ಆಹಾರದಲ್ಲಿ ಕಡ್ಡಾಯವಾಗಿ ಸೇವಿಸಿ. ನಿತ್ಯವೂ ಅಲ್ಲದಿದ್ದರೂ ಸರಿಯೇ ವಾರದಲ್ಲಿ ಅಥವಾ ಹದಿನೈದು ದಿನಗಳಲ್ಲಿ ಒಂದುಬಾರಿ ಅಥವಾ ಎರಡು ಬಾರಿಯಾದರೂ ಸೇವನೆ ಮಾಡಿರಿ. ಶುಭದಿನ

Leave a Reply

Your email address will not be published. Required fields are marked *