ನಮಸ್ತೇ ಪ್ರಿಯ ಓದುಗರೇ, ಹಾವುಗಳು ಅಥವಾ ಸರ್ಪ ದೋಷ ಅಂದ್ರೆ ಮೊದಲಿಗೆ ನೆನಪಿಗೆ ಬರುವುದು ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ. ಹೌದು ಇದು ನಮ್ಮ ಕರ್ನಾಟಕದಲ್ಲಿ ಒಂದು ಪುಣ್ಯ ಕ್ಷೇತ್ರ ಅಂತ ಹೇಳಬಹುದು. ಇಲ್ಲಿರುವ ಒಂದು ಅದ್ಭುತವಾದ ಹುತ್ತದಿಂದ ತೆಗೆದ ಮಣ್ಣು ಬಹಳ ಶ್ರೇಷ್ಠವಾದದ್ದು. ಮತ್ತು ಪರಮ ಪವಿತ್ರವಾಗಿದೆ. ಏಕೆಂದರೆ ವರ್ಷದಲ್ಲಿ ಕೇವಲ ಒಂದು ಬಾರಿ ಮಾತ್ರ ಮಣ್ಣು ತೆಗೆಯುವುದು ರೂಢಿಯಲ್ಲಿದೆ. ನಿಮಗೆ ಸರ್ಪ ದೋಷ ಇದ್ದರೆ ಅಥವಾ ಕನಸಿನಲ್ಲಿ ಸರ್ಪಗಳು ಬಂದು ಕಾಡುತ್ತಿದ್ದರೆ ಮತ್ತು ನಿಮಗೆ ಮಾತನಾಡಲು ಅಂದರೆ ತುಂಬಾನೇ ತೊಡಲುತ್ತಿದ್ದರೆ, ನೀರಿನಲ್ಲಿ ಈ ಹುತ್ತದ ಮಣ್ಣನ್ನು ಹಾಕಿಕೊಂಡು ಕುಡಿದರೆ ಈ ಸಮಸ್ಯೆಗಳು ದೂರವಾಗುತ್ತದೆ. ಈ ದೇವಸ್ಥಾನದಿಂದ ತೆಗೆದ ಮಣ್ಣು ಯಾವ ದೇವಸ್ಥಾನದ ಗರ್ಭಗುಡಿಯಲ್ಲಿ ದೊರೆಯುವುದಿಲ್ಲ. ಹಾಗಾದರೆ ಬನ್ನಿ ಆ ದೇವಾಲಯ ಯಾವುದು, ಅದು ಇರುವುದಾದರು ಎಲ್ಲಿ? ಹಾಗೂ ಆ ದೇವಾಲಯ ಯಾಕೆ ಇಷ್ಟೊಂದು ಪ್ರಸಿದ್ದಿಯನ್ನು ಪಡೆದಿದೆ ಮತ್ತು ಇದರ ಹಿಂದೆ ಇರುವ ವಿಚಿತ್ರ ವಿಸ್ಮಯ ಚರಿತ್ರೆಯನ್ನು ಯಾವ ರೀತಿ ಹೊಂದಿದೆ ಅಂತ ವಿವರವಾಗಿ ತಿಳಿಯೋಣ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರುವ ಪ್ರಸಿದ್ಧ ನಾಗ ದೇವಾಲಯವೇ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ. ಕಾರ್ತಿಕ ಮಾಸದಲ್ಲಿ ಚಂಪಾ ಷಷ್ಠಿ ಸಂಭ್ರಮ ಪ್ರಾರಂಭ ಆಗುತ್ತದೆ. ಈ ಸಂಭ್ರಮ ಶುರು ಆಗುವ ಮುನ್ನವೇ ಮೂಲ ಪ್ರತೀಕ ಪ್ರಸಾದವನ್ನು ಸಾಂಪ್ರದಾಯಕದ ಮೂಲಕ ತೆಗೆಯಲಾಗುತ್ತದೆ.
ಅಲ್ಲಿರುವ ಅರ್ಚಕರು ಮುಂಜಾನೆ ಎದ್ದು ಅಲ್ಲಿ ವಿಧಿವಿಧಾನದ ಮೂಲಕ ಶುಭ ಮೂಹೂರ್ತದಲ್ಲಿ ಪ್ರಸಾದವನ್ನು ತೆಗೆಯುತ್ತಾರೆ. ಆದಿ ಸುಬ್ರಹ್ಮಣ್ಯ ಸ್ವಾಮಿ ಗರ್ಭ ಗುಡಿಯಿಂದ ತೆಗೆಯಲಾಗುತ್ತದೆ ಈ ಪ್ರಸಾದವನ್ನು. ಇದನ್ನು ಭಕ್ತಾದಿಗಳಿಗೆ ನೀಡಲಾಗುತ್ತದೆ. ಕಾರ್ತಿಕ ಮಾಸದ ಏಕಾದಶಿ ದಿನದಂದು ಆದಿ ಸುಬ್ರಹ್ಮಣ್ಯ ಸ್ವಾಮಿ ಗರ್ಭ ಗುಡಿಯಿಂದ ಈ ಪ್ರಸಾದವನ್ನು ತೆಗೆಯಲಾಗುತ್ತದೆ. ಇದನ್ನು ತುಂಬಾನೇ ಪವಿತ್ರವಾದ ಪ್ರಸಾದ ಅಂತ ನಂಬಲಾಗುತ್ತದೆ. ಮರುದಿನ ಕೊಪ್ಪರಿಕೆ ಏರುವ ಮೂಲಕ ಚಂಪಾ ಷಷ್ಠಿ ವಾರ್ಷಿಕ ಆಚರಣೆ ಶುರು ಆಗುತ್ತದೆ. ಮೂಲ ಪ್ರತೀಕ ಪ್ರಸಾದವನ್ನು ತೆಗೆಯಲು ಕೆಲವು ಆಚರಣೆಗಳು ವಿಧಿವಿಧಾನಗಳು ಸಂಪ್ರದಾಯಗಳು ಇವೆ. ಏಕೆಂದರೆ ಈ ಮಣ್ಣು ಬೇರೆ ಯಾವುದೇ ದೇವಾಲಯದಲ್ಲಿ ಸಿಗುವುದಿಲ್ಲ. ಆದಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಗರ್ಭದಲ್ಲಿ ಇರುವ ಮೂರು ಹಿಡಿ ಮಣ್ಣು ತೆಗೆದು ಕುಮಾರ ಪರ್ವತದ ತುದಿಯ ಮಣ್ಣನ್ನು ಸೇರಿಸಿ ಭಕ್ತರಿಗೆ ನೀಡುತ್ತಾರೆ. ಇದನ್ನು ಪ್ರತೀಕಾ ಪ್ರಸಾದ ಅಂತ ಕರೆಯುತ್ತಾರೆ. ಇದು ಹಲವಾರು ಕಾಯಿಲೆಗಳಿಗೆ ರಾಮಬಾಣ. ಕನಸಿನಲ್ಲಿ ಬರುವ ಸರ್ಪಗಳ ಭಯ ಆತಂಕ ಇರುವುದಿಲ್ಲ. ಹಾವುಗಳ ಭಯ ಇರುವುದಿಲ್ಲ ಜೊತೆಗೆ ತೋದಲುವಿಕೆ ಸಮಸ್ಯೆ ನಿವಾರಣೆ ಆಗುತ್ತದೆ. ಅದಕ್ಕಾಗಿ ಈ ಮಣ್ಣನ್ನು ನೀರಿನಲ್ಲಿ ಹಾಕಿ ಕುಡಿಯಬೇಕು. ಇದರಿಂದ ತೊದಲುವಿಕೇ ನಿವಾರಣೆ ಆಗುತ್ತದೆ. ಇದು ನೂರಾರು ವರ್ಷದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ ಆಗಿದೆ. ಮತ್ತು ಇದು ಜನರ ಗಾಢವಾದ ನಂಬಿಕೆ ಕೂಡ ಆಗಿದೆ. ಈ ಮೂಲ ಪ್ರತೀಕ ಪ್ರಸಾದವನ್ನು ತೆಗೆದ ಮೇಲೆ ಮಧ್ಯಾಹ್ನನ ನಂತರ ದೇವರ ದರ್ಶನವನ್ನು ಮಾಡಲು ಭಕ್ತರಿಗೆ ಅವಕಾಶ ನೀಡಲಾಗುತ್ತದೆ.
ಇದೆ ಕಾರಣಕ್ಕೆ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದರ್ಶನವನ್ನು ಪಡೆಯಲು ರಾಜ್ಯ ಹೊರ ರಾಜ್ಯಗಳಿಂದ ಬರುತ್ತಾರೆ. ಇಲ್ಲಿ ಪ್ರತಿ ಕಾರ್ತಿಕ ಮಾಸದಲ್ಲಿ ಅದ್ಭುತವಾದ ರಥೋಸ್ತನ ಮತ್ತು ಅದ್ಧೂರಿ ಜಾತ್ರೆ ನಡೆಯುತ್ತದೆ. ವಿವಾಹ ನಿಶ್ಚಯ, ಬಾಲ ಗ್ರಹ ದೋಷ ಆರೋಗ್ಯದಲ್ಲಿ ಚೇತರಿಕೆ ಚರ್ಮರೋಗ ಜ್ಞಾಪಕ ಶಕ್ತಿ ಕುಂದುವಿಕೆ ಮತ್ತು ಸಂತಾನ ಭಾಗ್ಯಕ್ಕಾಗಿ ಸುಬ್ರಹ್ಮಣ್ಯ ಸ್ವಾಮಿ ಮೂಲ ಪ್ರತೀಕ ಪ್ರಸಾದವು ವರವಾಗಿದೆ ಎಂದು ನಂಬಲಾಗಿದೆ. ಇದು ಬೇರೆ ಯಾವುದೇ ದೇವಾಲಯದಲ್ಲಿ ನಮಗೆ ಸಿಗುವುದಿಲ್ಲ. ಇದು ಬಹಳ ಮಹತ್ವದ ಪ್ರಸಾದ ಅಂತ ಹೇಳಬಹುದು. ಇದು ಚರ್ಮ ವ್ಯಾಧಿಗಳಿಗೆ ರಾಮಬಾಣ ಆಗಿದ್ದು ಇದನ್ನು ನಟರು ಇತ್ಯಾದಿ ದೊಡ್ಡ ವ್ಯಕ್ತಿಗಳು ಬೇಡಿಕೊಂಡು ತೆಗೆದುಕೊಂಡು ಹೋಗುತ್ತಾರೆ. ಇದನ್ನು ದೇಹಕ್ಕೆ ಕೂಡ ಕಟ್ಟಿಕೊಳ್ಳಬಹುದು ಆದರೆ ಹೀಗೆ ದೇಹದಲ್ಲಿ ಧಾರಣೆ ಮಾಡಿದರೆ ಯಾವುದೇ ಕೆಟ್ಟ ಆಲೋಚನೆಗಳು ಕಾಮದ ಆಲೋಚನೆಗಳು ಮತ್ತು ಮಾಂಸಾಹಾರವನ್ನು ಸೇವನೆ ಮಾಡಬಾರದು. ಏಕೆಂದರೆ ಇದು ಬಹಳ ಪವಿತ್ರವಾದ ಮಣ್ಣು ಆಗಿದೆ. ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ನಾಗ ದೋಷ ಚರ್ಮ ವ್ಯಾಧಿ ಸಮಸ್ಯೆಗಳಿಗೆ ವಿಶ್ವದಲ್ಲಿ ಪ್ರಸಿದ್ಧವಾದ ಸ್ಥಾನವನ್ನು ಪಡೆದಿದೆ ಅಂತ ಹೇಳಬಹುದು. ಶುಭದಿನ.