ಒಂದು ಬಾರಿ ಸೇವಿಸಿ. ವಾಂತಿ ಭೇಧಿ ತಲೆನೋವು ತಲೆ ಸುತ್ತುವಿಕೆ, ಹೊಟ್ಟೆ ತೊಳೆಸುವುದು ಹೊಟ್ಟೆ ಉಬ್ಬರ ಉರಿ ನಿವಾರಣೆ

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ನಾವು ಸೇವಿಸಿದ ಆಹಾರ ಚೆನ್ನಾಗಿ ಜೀರ್ಣವಾಗದೆ ಇದ್ದರೆ ಹೊಟ್ಟೆಯಲ್ಲಿ ಪಿತ್ತ ಜಾಸ್ತಿ ಆಗುತ್ತದೆ. ಹಾಗೂ ಸಿಕ್ಕ ಸಿಕ್ಕ ಸಮಯದಲ್ಲಿ ಏನಾದ್ರೂ ತಿಂದು ಬಾಯಿ ಚಪ್ಪರಿಸುತ್ತಾ ಇದ್ದರೆ ಹೊಟ್ಟೆ ಉಬ್ಬರ ಉಂಟಾಗುತ್ತದೆ. ಜೊತೆಗೆ ವಾಕರಿಕೆ, ಹೊಟ್ಟೆ ಉಬ್ಬರ, ಹೊಟ್ಟೆ ಉರಿ, ತಲೆನೋವು, ತಲೆ ಸುತ್ತುವಿಕೆ ಹಾಗೂ ಲೂಸ್ ಮೋಷನ್ ಆಗುತ್ತದೆ. ದೇಹದಲ್ಲಿ ಧೂಳು ಸೇರಿಕೊಂಡರು ಕೂಡ ವಾಂತಿ ಆಗುತ್ತದೆ. ನಮ್ಮ ಪರಿಸರದಲ್ಲಿ ತೊರೆಯುವ ಗಿಡಮೂಲಿಕೆಯಿಂದ ಸಸ್ಯಗಳಿಂದ ಸುಲಭವಾಗಿ ಮನೆಮದ್ದು ಬಳಕೆ ಮಾಡಿಕೊಂಡು ಅಥವಾ ಕಷಾಯ ಮಾಡಿಕೊಂಡು ಕುಡಿಯುವುದು ಹೇಗೆ ಅಂತ ತಿಳಿಯೋಣ. ಈ ಕಷಾಯವನ್ನು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರು ಕೂಡ ಕುಡಿಯಬಹುದು ಈ ಕಷಾಯ ಕುಡಿಯುವುದರಿಂದ ವಾಂತಿ ವಾಕರಿಕೆ ಪಿತ್ತ ಆಗುವುದಿಲ್ಲ. ಹೊಟ್ಟೆ ಎಳೆಯುವುದು ಹೊಟ್ಟೆ ಕಾಡಿದ ಹಾಗೆ ಆಗುವುದು ಹೊಟ್ಟೆ ನೋವು ಎಲ್ಲವೂ ಕಡಿಮೆ ಆಗುತ್ತದೆ. ಹಾಗಾದರೆ ಈ ಕಷಾಯವನ್ನು ಹೇಗೆ ಮಾಡುವುದು ಅಂತ ತಿಳಿಯೋಣ ಬನ್ನಿ.

ಈ ಕಷಾಯವನ್ನುನ್ನು ಮಾಡಲು ಮಲ್ಪ್ ತ್ರೆ ಬೇಕಾಗುತ್ತದೆ. ಇದು ಸಾಮಾನ್ಯವಾಗಿ ಎಲ್ಲಕಡೆಗೆ ಸಿಗುತ್ತದೆ ಇದು ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನು ಒಂದು ಹಿಡಿಯಷ್ಟು ತೆಗೆದುಕೊಂಡು ಇದು ಔಷಧೀಯ ಗುಣಗಳನ್ನು ಹೊಂದಿದ್ದು ಹೊಟ್ಟೆ ನೋವಿಗೆ ರಾಮಬಾಣ. ಇನ್ನೂ ಮಕ್ಕಳಿಗೆ ಹೊಟ್ಟೆ ಕಚ್ಚಿದ ಹಾಗೆ ಆಗುತ್ತದೆ ಚಿಕ್ಕ ಮಕ್ಕಳಿಗೂ ಕೂಡ ಇದನ್ನು ಕೊಡಬಹುದು. ಎರಡನೆಯ ಸೊಪ್ಪು ದೊಡ್ಡ ಪತ್ರೆ ಎಲೆ ಅಥವಾ ಸಾಂಬಾರ್ ಎಲೆ ಅಂತ ಕೂಡ ಇದನ್ನು ಕರೆಯುತ್ತಾರೆ. ಈ ಎಲೆಯು ಕೂಡ ಹೊಟ್ಟೆ ನೋವನ್ನು ನಿವಾರಿಸುತ್ತದೆ. ಇನ್ನೂ ನಿಂಬೆ ಗಿಡದ ಎಲೆಗಳನ್ನು ತೆಗೆದುಕೊಳ್ಳಿ. ಇದನ್ನು ಔಷಧೀಯ ಸಸ್ಯವಾಗಿ ಬಳಕೆ ಮಾಡುತ್ತಾರೆ. ನಂತರ ತುಳಸಿ ಎಲೆಗಳನ್ನು ತೆಗೆದುಕೊಳ್ಳಿ. ತುಳಸಿ ಎಲೆಗಳು ಆರೋಗ್ಯಕ್ಕೆ ಒಳ್ಳೆಯದು. ಇದು ಬ್ಯಾಕ್ಟೀರಿಯಾ ವಿರೋಧಿ ಆಗಿ ಕೆಲಸವನ್ನು ಮಾಡುತ್ತದೆ. ಹಾಗೂ ಶೀತ ಗಂಟಲು ನೋವು ಕೆಮ್ಮು ಕಫದ ಸಮಸ್ಯೆ ಇದು ದಿವ್ಯ ಔಷಧ ಅಂತ ಹೇಳಬಹುದು. ಇನ್ನೂ ಕೊನೆಯದಾಗಿ ಪೇರಲೆ ಗಿಡದ ಚಿಗುರು ಎಲೆಗಳನ್ನು ತೆಗೆದುಕೊಳ್ಳಿ. ಬಲಿತಿರುವ ಎಲೆಗಳನ್ನು ತೆಗೆದುಕೊಳ್ಳಬೇಡಿ. ಈ ಎಲ್ಲ ಸೊಪ್ಪುಗಳನ್ನು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳಿ. ನಂತರ ಸ್ವಲ್ಪ ಕೆಂಪು ಅಕ್ಕಿ ತೆಗೆದುಕೊಳ್ಳಿ. ಈ ಕೆಂಪು ಅಕ್ಕಿಯನ್ನು ತವೆಯಲ್ಲಿ ಹಾಕಿ ಕಂದು ಬಣ್ಣ ಬರುವವರೆಗೂ ಹುರಿದುಕೊಳ್ಳಿ. ಆಮೇಲೆ ಸ್ವಲ್ಪ ಮೆಂತ್ಯೇ ಕಾಳುಗಳನ್ನು ಜೊತೆಗೆ ಸ್ವಲ್ಪ ಜೀರಿಗೆಯನ್ನು ತೆಗೆದುಕೊಳ್ಳಿ.

ಈ ಎರಡು ಸಾಮಗ್ರಿಗಳನ್ನು ಕೆಂಪು ಅಕ್ಕಿಯಲ್ಲಿ ಹಾಕಿ ಹುರಿದುಕೊಳ್ಳಿ. ಇದರಲ್ಲಿ ಎರಡು ಲೋಟ ನೀರು ಹಾಕಿ ಆಮೇಲೆ ಇದರಲ್ಲಿ ಮೇಲೆ ಹೇಳಿರುವ ಅಷ್ಟು ಎಲೆಗಳನ್ನು ಚೆನ್ನಾಗಿ ತೊಳೆದು ಇದರಲ್ಲಿ ಹಾಕಿಕೊಳ್ಳಿ. ಸ್ವಲ್ಪ ಕಡಿಮೆ ಉರಿ ನಲ್ಲಿ ಇಟ್ಟು ಕುದಿಸಿಕೊಳ್ಳಿ. ಸ್ವಲ್ಪ ಶುಂಠಿ ಹಾಕಿ ಕುದಿಸಿಕೋಳ್ಳಿ. ಎರಡು ಲೋಟ ನೀರು ಒಂದು ಲೋಟ ನೀರು ಆಗುವವರೆಗೂ ಕುದಿಸಿಕೊಳ್ಳಿ ತದ ನಂತರ ಇದನ್ನು ಚೆನ್ನಾಗಿ ಶೋಧಿಸಿ ಕೊಳ್ಳಿ. ನಂತರ ಕಾಲು ಭಾಗದಷ್ಟು ಕುಡಿಯಬೇಕು. ಇದರಲ್ಲಿ ಯಾವುದೇ ಬೇರೆ ಪದಾರ್ಥಗಳನ್ನು ಬೆರೆಸಬಾರದು. ಹಾಗೆಯೇ ಕುಡಿಯಬೇಕು. ಮಕ್ಕಳಿಗೆ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಕೊಡಬೇಕು. ಇದನ್ನು ಕುಡಿಯುವುದರಿಂದ ವಾಕರಿಕೆ ಹೊಟ್ಟೆ ತೊಳೆಸುವುದು ಹೊಟ್ಟೆ ನೋವು ಹೊಟ್ಟೆ ಉಬ್ಬರ ಉರಿ ತಲೆ ಸುತ್ತುವಿಕೆ ತಲೆ ನೋವು ಎಲ್ಲವೂ ಒಂದೇ ಬಾರಿಗೆ ಕಡಿಮೆ ಆಗುತ್ತದೆ. ಇದನ್ನು ಒಂದು ವಾರದಲ್ಲಿ ಒಮ್ಮೆಯಾದರೂ ಮಾಡಬಹುದು. ಇದರಲ್ಲಿ ಬಳಕೆ ಮಾಡಿರುವ ಪ್ರತಿ ಸೊಪ್ಪು ಔಷಧೀಯ ಗುಣಗಳನ್ನು ಹೊಂದಿದೆ. ಯಾವುದೇ ರೀತಿಯ ಅಡ್ಡ ಪರಿಣಾಮಗಳೂ ಬೀರುವುದಿಲ್ಲ. ಶುಭದಿನ.

Leave a Reply

Your email address will not be published. Required fields are marked *