ಸೋಲು ಸೋಲು ಅಂತ ಅನುಭವಿಸಿ ಸಾಕಾಗಿದ್ದರೆ ಇವುಗಳನ್ನು ಒಮ್ಮೆ ಜೀವನದಲ್ಲಿ ಅಳವಡಿಸಿ ಕೊಳ್ಳಿ ಗೆದ್ದೇ ಗೆಲ್ಲುತ್ತೀರಾ

ಆರೋಗ್ಯ

ನಮಸ್ತೇ ಪ್ರಿಯ ಸ್ನೇಹಿತರೆ, ಜೀವನದಲ್ಲಿ ಯಶಸ್ಸು ಕಾಣಬೇಕು ಅಂದರೆ, ನಾವು ಸೋಲು ಗೆಲುವು ಎರಡನ್ನೂ ಅನುಭವಿಸಬೇಕು. ಹೌದು ಸೋಲು ಗೆಲುವು ಇವೆರಡೂ ಒಂದು ಮುಖದ ನಾಣ್ಯಗಳು. ಕೆಲವರಿಗೆ ಗೆಲುವು ಅನ್ನುವುದು ಬೇಗನೆ ಸಿಕ್ಕರೆ ಇನ್ನೂ ಕೆಲವರಿಗೆ ಗೆಲುವಿನ ಮುಖವೂ ಕೂಡ ಎಂದಿಗೂ ತೋರಿಸುವುದಿಲ್ಲ. ಅವರು ಯಾವಾಗ್ಲೂ ಸೋಲು ಅನುಭವಿಸುತ್ತಲೇ ಇರುತ್ತಾರೆ. ಹೀಗಾಗಿ ಅವರು ಯಶಸ್ಸು ಕಾಣುವ ದಾರಿಯನ್ನೇ ಮರೆತು ಬಿಡುತ್ತಾರೆ.ಹಾಗಾದರೆ ಬನ್ನಿ ನಿಮಗೆ ಸೋಲು ಉಂಡು ಜೀವನವೇ ಬೇಡ ಅನ್ನಿಸುತ್ತಿದ್ದರೆ ಹದಿನೈದು ಅಂಶಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಮೊದಲಿಗೆ ನಾವು ಸಾಮಾನ್ಯವಾಗಿ ಈ ಮಾತನ್ನು ಕೇಳಿಯೇ ಇರುತ್ತೇವೆ. ನಮ್ಮ ಕಾಲಿಗೆ ಆದ ಗಾಯ ನಾವು ಹೇಗೆ ನಡೆಯಬೇಕೆಂದು ನಮಗೆ ಪಾಠವನ್ನು ಕಲಿಸುತ್ತದೆ. ಆದರೆ ಮನಸ್ಸಿಗೆ ಆದ ಗಾಯ ಹೇಗೆ ಬದುಕಬೇಕೆಂದು ಕಲಿಸುತ್ತದೆ. ಇದೆ ಜೀವನ ಅಂತ ನಮ್ಮ ಹಿರಿಯರು ಹೇಳುತ್ತಾರೆ. ಕಂಡಿದ್ದು ಸುಳ್ಳಾಗಬಹುದು ಕೇಳಿದ್ದು ಸುಳ್ಳಾಗಬಹುದು ಅಂತ ನಾವು ಹಾಡು ಕೇಳಿದ್ದೇವೆ. ಹೌದು ನೀವು ಕಣ್ಣಾರೆ ಕಂಡ ಎಲ್ಲ ಅಂಶಗಳು ಎಂದಿಗೂ ಸತ್ಯವಾಗಿ ಇರುವುದಿಲ್ಲ. ಹಾಗಾಗಿ ಅವುಗಳನ್ನು ನಂಬಲು ಕೂಡ ಹೋಗಬೇಡಿ. ಏಕೆಂದರೆ ದೂರದಿಂದ ಉಪ್ಪು ಕೂಡ ಸಕ್ಕರೆ ಹಾಗೆ ಕಾಣಿಸುತ್ತದೆ.

ನಮ್ಮ ನೋವುಗಳು ನಮಗೆ ಅರ್ಥವಾದರೆ ನಮ್ಮ ಜೀವನದ ಬಗ್ಗೆ ನಾವು ಚೆನ್ನಾಗಿ ಅರಿತುಕೊಂಡಿದ್ದೇವೆ ಎಂದು ಅರ್ಥ. ಹಾಗೆಯೇ ಇನ್ನೊಬ್ಬರ ಕಷ್ಟಗಳು ನೋವುಗಳು ದುಃಖಗಳು ದುಮ್ಮಾನಗಳು ಅರ್ಥ ಮಾಡಿಕೊಂಡರೆ, ನಾವು ಮನುಷ್ಯರಾಗಿದ್ದೇವೆ. ನಮ್ಮ ಜೀವನಕ್ಕೆ ಒಂದು ಅರ್ಥವಿದೆ ಎಂದು ತಿಳಿದುಕೊಳ್ಳಬೇಕು. ಹೆಂಡದ ಅಮಲು ನಡಿಗೆಯನ್ನೂ ತಪ್ಪಿಸಿದರೆ ಹಣವೂ ನಡವಳಿಕೆಯನ್ನು ನಾಶ ಮಾಡುತ್ತದೆ. ಚಿಂತೆಗಳು ನಮ್ಮ ಜೀವನದಲ್ಲಿ ಬೆನ್ನು ಬಿಡದಂತೆ ಕಾಡುತ್ತಲೇ ಇರುತ್ತವೆ. ಅವುಗಳು ತಲೆಯ ಮೇಲೆ ಹಾರಾಡುವ ಹಕ್ಕಿಗಳು ಇದ್ದ ಹಾಗೆ. ಅವುಗಳು ಹಾರಾಡಲಿ ಬಿಡಿ ಆದರೆ ಅವುಗಳಿಗೆ ಗೂಡು ಕಟ್ಟಿ ನಿಮಗೆ ಜೀವನ ಪರ್ಯಂತ ನೋವು ಕಷ್ಟಗಳನ್ನು ಕೊಡುವಷ್ಟು ದಾರಿ ಮಾಡಿ ಕೊಡಬೇಡಿ. ನಾವು ಇನ್ನೊಬ್ಬರಿಗೆ ಸಹಾಯ ಮಾಡಿದ್ದನ್ನು ಎಂದಿಗೂ ತೋರಿಸಿ ಕೊಡಬಾರದು. ಹಾಗೂ ಪಡೆದದ್ದನ್ನು ಎಂದಿಗೂ ಮರೆಯಬಾರದು. ಅವರನ್ನು ನಾವು ಜಗತ್ತಿನಲ್ಲಿ ಧನ್ಯರು ಅಂತ ಕರೆಯುತ್ತೇವೆ. ಪ್ರತಿಯೊಬ್ಬರ ಬೆಲೆ ತಿಳಿಯುವುದು ಅವರು ನಮ್ಮ ನಂಬಿಕೆ ವಿಶ್ವಾಸ ಪಡೆದುಕೊಂಡಾಗ ಮತ್ತು ಕಳೆದುಕೊಂಡಾಗ ಅದು ವ್ಯಕ್ತಿಯಾಗಲಿ ವಸ್ತುವಾಗಲಿ.

ಇದು ತುಂಬಾನೇ ಮುಖ್ಯ ಆಗಿರುತ್ತದೆ. ನಾವು ಯಾರನ್ನೂ ಕಣ್ಣು ಮುಚ್ಚಿ ನಂಬಲು ಹೋಗಬಾರದು. ನಮ್ಮ ಮನಸ್ಸಿಗೆ ನಾವು ಸತ್ಯ ಹೇಳುವುದು ನಮ್ಮ ನಿಷ್ಠೆ. ಹಾಗೆಯೇ ಇನ್ನೊಬ್ಬರಿಗೆ ಸತ್ಯ ಹೇಳಿದರೆ ಅದು ನಮ್ಮ ಪ್ರಾಮಾಣಿಕತೆ. ಹೌದು ದೊಡ್ಡವರು ಹೇಳುತ್ತಾರೆ. ಅರಮನೆ ಕಟ್ಟುವಶ್ಟು ಶ್ರೀಮಂತನಾಗದೆ ಇದ್ದರೇನು ಕಷ್ಟ ಕಾಲದಲ್ಲಿ ಕಣ್ಣೀರು ಒರೆಸುವ ಓಡೆಯನಾಗಬೇಕು ಜನರು ನಮ್ಮನ್ನು ನೋಡುವ ಉದ್ದೇಶದಿಂದ ಪರ್ವತವನ್ನು ಹಟ್ಟಬಾರದು ಬದಲಾಗಿ ಜಗತ್ತು ನಮ್ಮನ್ನು ನೋಡುವ ಇಚ್ಛೆಯನ್ನು ಹೊಂದಬೇಕು. ನಗು ಇಲ್ಲದೆ ಇರುವವರು ಬಡವರಲ್ಲ. ಆದರೆ ಸುಖದಲ್ಲಿ ಕೂಡ ನಗದೇ ಇರುವವರು ಖಂಡಿತವಾಗಿ ಬಡವರು. ಈ ಮಾತು ನಿಜಕ್ಕೂ ಸತ್ಯವೇ ಗೆಳೆಯರೇ.ಹೌದು ನಂಬಿಕೆ ಇದ್ದವರು ಕಲ್ಲಿನಲ್ಲಿ ಕೂಡ ದೇವರನ್ನು ಹುಡುಕುತ್ತಾರೆ ಆದರೆ ನಂಬದೇ ಇರುವವರ ಮನಸ್ಸೇ ಕಲ್ಲಾಗಿರುತ್ತದೆ. ಹೌದು ಬೆಟ್ಟ ಎಂದಿಗೂ ಬಾಗುವುದಿಲ್ಲ. ಅದು ಯಾವಾಗಲೂ ನಮ್ಮನ್ನು ಹೀಯಾಳಿಸುತ್ತದೆ. ಆದರೆ ಅದನ್ನು ಕಷ್ಟ ಪಟ್ಟು ಮೆಟ್ಟಿ ನಿಲ್ಲಿ ಖಂಡಿತವಾಗಿ ಬೆಟ್ಟ ನಿಮ್ಮ ಪಾದದಡಿ ಇರುತ್ತದೆ. ಆದ್ದರಿಂದ ಗುರಿ ಮುಟ್ಟುವವರೆಗೆ ಪ್ರಯತ್ನ ಮಾಡಿ ಮುಂದೆ ಸಾಗಿರಿ. ಗುಣ ಇರುವವರು ಮನುಷ್ಯ ಕುಲಕ್ಕೆ ಯಜಮಾನ. ಹೌದು ನೀವು ಸೋಲಿನಿಂದ ತುಂಬಾನೇ ಕಂಗಾಲು ಆಗಿದ್ದರೆ ಈ ಸಲಹೆಯನ್ನು ಅನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.

Leave a Reply

Your email address will not be published. Required fields are marked *