ಮನೆಯಿಂದ ನಕಾರಾತ್ಮಕ ಶಕ್ತಿಗಳು ದೂರ ಆಗಲು ಈ ಟಿಪ್ಸ್ ಅನುಸರಿಸಿ

ಜ್ಯೋತಿಷ್ಯ ಧಾರ್ಮಿಕ

ನಮಸ್ತೇ ಪ್ರಿಯ ಓದುಗರೇ, ಪ್ರತಿಯೊಬ್ಬರೂ ಹೇಳುತ್ತಾರೆ ಸಕಾರಾತ್ಮಕ ಯೋಚನೆಗಳನ್ನು ಮಾಡು ಅಂತ. ಇದರಿಂದ ನಿಮ್ಮಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚುತ್ತದೆ. ಹಾಗೆಯೇ ನೀವು ಅಂದುಕೊಂಡ ಎಲ್ಲ ಕೆಲಸಗಳು ಆಗುತ್ತದೆ ಅಂತ ಎಲ್ಲರೂ ಹೇಳುತ್ತಾರೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ದೂರವಾಗಲು ಏನೆಲ್ಲ ಸರಳವಾದ ಸಲಹೆಗಳನ್ನು ಅನುಸರಣೆ ಮಾಡಬೇಕು ಅಂತ ತಿಳಿಯೋಣ. ಹೌದು ನಾವು ಯಾವಾಗ ಸಕಾರಾತ್ಮಕ ಯೋಚನೆಗಳನ್ನು ಮಾಡಬೇಕು ಇದರಿಂದ ನಮ್ಮ ಮನಸ್ಸು ಹಾಗೂ ನಮ್ಮ ದಿನವೂ ತುಂಬಾನೇ ಚೆನ್ನಾಗಿ ಆಗುತ್ತದೆ ಅದೇ ನೀವು ಏನಾದ್ರೂ ನೆಗೆಟಿವ್ ಥಿಂಕಿಂಗ್ ಇಟ್ಟುಕೊಂಡರೆ ಯಾವುದೇ ಕೆಲಸವನ್ನು ಮಾಡಿದರು ಕೂಡ ಅಡಚನೇಗಳು ಬರುತ್ತಾ ಇರುತ್ತವೆ. ಇನ್ನೂ ಸಾಮಾನ್ಯವಾಗಿ ದೊಡ್ಡ ದೊಡ್ಡ ವ್ಯಕ್ತಿಗಳು ಮನೆಯ ಮುಖ್ಯ ಬಾಗಿಲಿನ ಬಳಿ ತಮ್ಮ ಹೆಸರಿನ ಪ್ಲೇಟ್ ಅನ್ನು ಹಾಕಿರುತ್ತಾರೆ. ಹೌದು ಈ ಲಕ್ಷಣ ತುಂಬಾನೇ ಒಳ್ಳೆಯದು. ಹೀಗೆ ಮಾಡುವುದರಿಂದ ಜನರು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಬೆಂಕಿ ಅಂಧಕಾರವನ್ನು ಓಡಿಸುತ್ತದೆ ಅಂತ ಹಿರಿಯರು ಹೇಳುತ್ತಾರೆ ಅಷ್ಟೇ ಅಲ್ಲದೇ ಇದು ಜೀವನದಲ್ಲಿ ಒಂದು ಹೊಸ ದಾರಿಗೆ ದೀಪವಾಗುತ್ತದೆ ಆದ್ದರಿಂದ ಹಣತೆಯಲ್ಲಿ ಸದಾ ಕಾಲ ದೀಪ ಉರಿಯುತ್ತಿರುವ ಹಾಗೆ ನೋಡಿಕೊಳ್ಳಿ. ಹಾಗೆಯೇ ಲಕ್ಷ್ಮೀ ದೇವಿ ಸದಾ ಕಾಲ ಮನೆಯಲ್ಲಿ ಉಳಿಯಲು ಬೆಳಿಗ್ಗೆ ಸಂಜೆ ಊದುಬತ್ತಿ ಹಚ್ಚಿ.

ಯಾವಾಗಲೂ ಆಗ್ನೇಯ ದಿಕ್ಕಿನ ಕಡೆಗೆ ಅಡುಗೆ ಮನೆ ಇರಬೇಕು ಹಾಗೂ ಪೂರ್ವ ದಿಕ್ಕಿನ ಕಡೆಗೆ ಮುಖವನ್ನು ಮಾಡಿ ಅಡುಗೆಯನ್ನು ಮಾಡಬೇಕು. ಇಲ್ಲವಾದರೆ ನಿಮ್ಮ ಅಡುಗೆ ಒಲೆಯನ್ನು ಆಗ್ನೇಯ ದಿಕ್ಕಿಗೆ ಆದರೂ ಇರುವಂತೆ ನೋಡಿಕೊಳ್ಳಿ. ಋಣಾತ್ಮಕ ಶಕ್ತಿಯನ್ನು ಹೋಗಲಾಡಿಸಲು ನೀವು ಗಾಜಿನ ಲೋಟದಲ್ಲಿ ನಿಂಬೆ ಹಣ್ಣು ಹಾಕಿ ಇಡೀ. ಪ್ರತಿ ವಾರವೂ ಅದನ್ನು ಬದಲಾವಣೆ ಮಾಡುತ್ತಾ ಇರಿ. ಇದು ಎಲ್ಲ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡಿ ಪಾಸಿಟಿವ್ ಅನ್ನು ಹೆಚ್ಚಿಸುತ್ತದೆ. ಇನ್ನೂ ಮುಖ್ಯವಾಗಿ ಅಡುಗೆ ಮಾಡುವ ಸ್ಥಳದಲ್ಲಿ ಅಥವಾ ಕೋಣೆಯಲ್ಲಿ ಎಂದಿಗೂ ಔಷಧಗಳನ್ನು ಇಡಬೇಡಿ. ಇದು ತುಂಬಾನೇ ಅಪಶಕುನ ಇದರಿಂದ ಅನಾರೋಗ್ಯ ಮತ್ತಷ್ಟು ಹೆಚ್ಚುತ್ತದೆ. ದಿನಕ್ಕೆ ಹತ್ತು ನಿಮಿಷ ಆದರೂ ಧ್ಯಾನ ಮಾಡಿ. ಇದರಿಂದ ನಿಮ್ಮ ಮನಶ್ಶಾಂತಿ ಹೆಚ್ಚುತ್ತದೆ. ಅಷ್ಟೊಂದು ಶಕ್ತಿ ಈ ಮನಸ್ಸಿನ ಏಕಾಗ್ರತೆ ಮಾಡುವಲ್ಲಿ ಅಡಗಿದೆ. ಕೆಲವರಿಗೆ ತಮ್ಮ ಬೆಡ್ ರೂಮ್ ನಲ್ಲಿ ಕನ್ನಡಿ ಇಟ್ಟುಕೊಳ್ಳುವ ಅಭ್ಯಾಸ ಇರುತ್ತದೆ ಆದರೆ ಇದು ತಪ್ಪು ಈ ರೀತಿ ಕನ್ನಡವನ್ನು ಬೆಡ್ ರೂಮ್ ನಲ್ಲಿ ಇಟ್ಟುಕೊಳ್ಳಬಾರದು. ಇದರಿಂದ ನಕಾರಾತ್ಮಕ ಶಕ್ತಿಗಳು ಹೆಚ್ಚುತ್ತವೆ ಜೊತೆಗೆ ಆರೋಗ್ಯ ಹಾಳಾಗುತ್ತದೆ ಮತ್ತು ಕುಟುಂಬದಲ್ಲಿ ಬಿರುಕುಗಳು ಶುರು ಆಗುತ್ತವೆ. ಒಂದು ವೇಳೆ ನಿಮಗೆ ಬೇಕಾದರೆ ಅದನ್ನು ರಾತ್ರಿ ಮಲಗುವ ವೇಳೆ ಒಂದು ಕಾಗದ ಅಥವಾ ಬಟ್ಟೆಯಿಂದ ಮುಚ್ಚಿರಿ.

ಈ ರೀತಿ ಮಾಡುವುದು ತುಂಬಾನೇ ಒಳ್ಳೆಯದು. ಮನೆಯ ಮುಖ್ಯ ಬಾಗಿಲಿನ ಬಳಿ ಸ್ವಸ್ತಿಕ್ ಓಂ ಚಿನ್ಹೆ ಹಾಕಿರಿ. ಮನೆಯಲ್ಲಿ ಆಗಾಗ ಮೂರು ವರ್ಷಗಳಿಗೊಮ್ಮೆ ಗಣೇಶನ ಪೂಜೆ ಅಥವಾ ನವಗ್ರಹ ಪೂಜೆ ಮಾಡಿಸಿ ಇದರಿಂದ ಮನೆಗೆ ಅಂಟಿಕೊಂಡಿರುವ ಎಲ್ಲ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ. ಮನೆಯಲ್ಲಿ ಆಳುತ್ತಿರುವ ಚಿತ್ರ, ಹದ್ದು ಗೂಬೆ ಸಿಟ್ಟಾಗಿರುವ ಫೋಟೋ ಇದ್ದರೆ ತೆಗೆದು ಬಿಡಿ.ಇವುಗಳು ಅಶುಭದ ಸಂಕೇತ. ಆದ್ದರಿಂದ ಯಾವಾಗ್ಲೂ ಸಕಾರಾತ್ಮಕವಾಗಿ ಇರಿ. ಪಾಸಿಟಿವ್ ಆಗಿ ಆಲೋಚನೆಗಳನ್ನು ಮಾಡಿರಿ. ಮನೆಯ ಬಾಗಿಲಿನ ಹತ್ತಿರ ಲೋಹದ ಗಂಟೆಯನ್ನು ನೇತು ಹಾಕಿ. ಇದರಿಂದ ಬರುವ ಇಂಪಾದ ನಾದ ಮನೆಯನ್ನು ಸೇರುವ ನಕಾರಾತ್ಮಕ ಶಕ್ತಿಗಳನ್ನು ಹೊಡೆದೋಡಿಸುತ್ತದೆ. ಹೌದು ಮನೆಯ ಪ್ರತಿ ಕೋಣೆ ಯಲ್ಲಿ ಒಂದು ಚಿಕ್ಕ ಲೋಟದಲ್ಲಿ ಉಪ್ಪು ಹಾಕಿ ಇಡಿ. ಉಪ್ಪಿಗೆ ಋಣಾತ್ಮಕ ಅಂಶಗಳನ್ನು ಹೀರಿಕೊಳ್ಳುವ ಶಕ್ತಿ ಇದೆ.

Leave a Reply

Your email address will not be published. Required fields are marked *