ಈ ಸಸ್ಯದಿಂದ ಈ ಪ್ರಯೋಗವನ್ನು ಮಾಡಿ ಶನಿ ದೇವರ ಆಶೀರ್ವಾದ ಅನುಗ್ರಹ ಪಡೆಯಿರಿ

ಜ್ಯೋತಿಷ್ಯ ಧಾರ್ಮಿಕ

ನಮಸ್ತೇ ಪ್ರಿಯ ಸ್ನೇಹಿತರೆ, ಕೆಲವು ವಸ್ತುಗಳನ್ನು ನಾವು ವಿಶೇಷವಾದ ದಿನದಂದು ಪಡೆದುಕೊಂಡರೆ ಅವುಗಳಿಂದ ನಮಗೆ ಬರುವ ಲಾಭಕ್ಕಿಂತ ಮತ್ತಷ್ಟು ಹೆಚ್ಚಿನ ಅದೃಷ್ಟ ನಮಗೆ ಒಲಿಯುತ್ತದೆ. ಒಂದು ವೇಳೆ ನೀವು ಹಣದ ಪರಿಸ್ಥಿತಿಯಲ್ಲಿ ಸಿಕ್ಕಿ ಒದ್ದಾಡುತ್ತಿದ್ದರೆ ಶತ್ರುಗಳ ಕಾಟ ಬೆನ್ನ ಬಿಡದೇ ಕಾಡುತ್ತಿದ್ದರೆ ಸಾಲವನ್ನು ಬಹಳಷ್ಟು ಮಾಡಿ ತುಂಬಾನೇ ಸಾಲದಿಂದ ಒದ್ದಾಡುತ್ತಿದ್ದರೆ ಶನಿವಾರದ ದಿನ ಈ ವಸ್ತುಗಳನ್ನು ನೀವು ಪಡೆದು ಕೊಂಡರೆ ಇದರಿಂದ ನಿಮ್ಮ ಜೀವನವೇ ಬದಲಾಗುತ್ತದೆ. ಶನಿವಾರ ದಿನ ಬಹಳ ಪವಿತ್ರವಾದ ದಿನವಾಗಿದೆ. ಇದನ್ನು ಶನಿ ದೇವರ ದಿನ ಅಥವಾ ಶನಿ ಗ್ರಹ ಅಂತ ಕರೆಯುತ್ತೇವೆ.
ಶನಿ ದೇವರ ಕೆಟ್ಟ ವಕ್ರವಾದ ದೃಷ್ಟಿಯಿಂದಲೇ ಜನರ ಜೀವನದಲ್ಲಿ ಕಷ್ಟಗಳು ದುಃಖ ದುಮ್ಮಾನಗಳನ್ನು ಬರುತ್ತದೆ. ಏನೂ ಹೇಳದೆ ಕೇಳದೆ ಏನು ಆಗುತ್ತಿದೆಯೇ ಜೀವನದಲ್ಲಿ ಅಂತ ಗೊತ್ತೇ ಆಗುವುದಿಲ್ಲ. ತುಂಬಾನೇ ನೋವು ಬಾಧೆ ಪಡುತ್ತಾರೆ. ಕೇವಲ ಭಯ ಚಿಂತೆ ಕಾಡುತ್ತಿರುತ್ತವೆ.

ಕೆಲವರಿಗೆ ಹಣದ ಕೊರತೆ ಇದ್ದರೆ ಇನ್ನೂ ಕೆಲವರಿಗೆ ಹಣ ಇಲ್ಲದೆ ಇರುವುದು ಚಿಂತೆ ಹಾಗೂ ಇನ್ನೂ ಕೆಲವರಿಗೆ ಸಂತಾನ ಭಾಗ್ಯ ಲಭಿಸುತ್ತಿಲ್ಲ ಅಂತ ಚಿಂತೆ ಆಗುತ್ತದೆ. ಇನ್ನೂ ಮನೆಯಲ್ಲಿ ಕಳ್ಳತನ ನಡೆಯುತ್ತಿರುತ್ತದೆ. ಇವುಗಳಿಗೆ ನಾವು ಎಂದಿಗೂ ನಮ್ಮ ಹಣೆಬರಹಕ್ಕೇ ಶಾಪ ಹಾಕಬಾರದು. ಇದಕ್ಕೆ ಕಾರಣ ಶನಿ ದೇವರ ಪ್ರಭಾವ ಬೀರಿರುವುದು ಕಾರಣ ಆಗಿರುತ್ತದೆ. ಶನಿ ದೇವರ ಕಾಟ ಯಾಕೆ ಪ್ರಾರಂಭ ಆಗುತ್ತದೆ ಅಂದರೆ ಅವರು ಈ ಕೆಲವು ವಿಷಯಗಳ ಬಗ್ಗೆ ಗಮನ ಹರಿಸುವುದಿಲ್ಲ. ಹಾಗಾದ್ರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಶನಿವಾರ ದಿನ ಯಾವೆಲ್ಲ ವಸ್ತುಗಳನ್ನು ಪಡೆದುಕೊಂಡರೆ ನೀವು ಶನಿ ದೇವರ ಕಾಟದಿಂದ ಮುಕ್ತಿಯನ್ನು ಪಡೆಯುತ್ತೀರಿ ಎಂದು. ಅಷ್ಟೇ ಅಲ್ಲದೇ ಜೀವನದಲ್ಲಿ ಎಂತಹ ಕಷ್ಟಗಳು ಇದ್ದರೂ ಕೂಡ ಆದಷ್ಟು ಬೇಗನೆ ನಿವಾರಣೆ ಆಗುತ್ತದೆ. ಯಾರು ಶನಿ ಗ್ರಹ ದ ಒಳ್ಳೆಯದನ್ನು ಬಯಸುತ್ತಾರೆ ಶನಿ ದೇವರನ್ನು ಮೆಚ್ಚಿಸಲು ಪ್ರಯತ್ನ ಪಡುತ್ತಾರೆ.
ಅವರು ಶನಿ ದೇವರನ್ನು ಪೂಜಿಸಬೇಕು. ಏಕೆಂದ್ರೆ ಶನಿ ದೇವರೆ ಹಣದ ಸಮಸ್ಯೆಯನ್ನು ದೂರ ಮಾಡುತ್ತಾನೆ. ಶನಿ ದೇವರು ಭಗವಂತನಾದ ಶಿವನ ನಿಷ್ಟಾವಂತ ಭಕ್ತರು ಕೂಡ ಆಗಿದ್ದರು. ಇವರು ತಂತ್ರ ಮಂತ್ರ ಪ್ರಚಂಡ ವ್ಯಕ್ತಿಯಾಗಿ ಜನರ ನಂಬಿಕೆಯನ್ನು ಪಡೆದಿದ್ದಾರೆ. ಶಿವನೇ ಶನಿ ದೇವರನ್ನು ನ್ಯಾಯದ ದೇವರು ಅಂತ ಬಿರುದು ನೀಡಿದ್ದಾರೆ. ಹೀಗಾಗಿ ಇವರು ಕೆಟ್ಟ ಪಾಪಗಳನ್ನು ಮಾಡುವವರು ಕೆಟ್ಟ ಕೆಲಸಗಳನ್ನು ಮಾಡುವವರು ದುಷ್ಟರನ್ನು ಕಂಡರೆ ಕೋಪ ಕೆಂಡಾ ಮಂಡಲ ಆಗುತ್ತಾರೆ. ಇವರಿಗೆ ಪಾಪಿಗಳನ್ನು ಕಂಡರೆ ಎಂದಿಗೂ ಆಗುವುದಿಲ್ಲ.

ಶಮಿ ಸಸ್ಯ ಶನಿ ದೇವರ ಸಸ್ಯವಾಗಿದೆ. ಶನಿವಾರದ ದಿನ ಈ ಸಸ್ಯದಲ್ಲಿ ಸಾಕ್ಷಾತ್ ಶನಿ ದೇವರೆ ಅಡಗಿರುತ್ತಾರೆ. ಇದಕ್ಕೆ ನೀವು ಶನಿವಾರದ ದಿನ ನೀರನ್ನು ಹಾಕಬೇಕು ತದ ನಂತರ ಅದರ ಬೇರನ್ನು ತೆಗೆದುಕೊಂಡು ಶಿವ ಲಿಂಗಕ್ಕೆ ಅರ್ಪಣೆ ಮಾಡಿ ಒಂದು ಕಪ್ಪು ಬಟ್ಟೆಯಲ್ಲಿ ಕಟ್ಟಬೇಕು. ಮನೆಯ ಪೂರ್ವ ದಿಕ್ಕಿನಲ್ಲಿ ಬಾಗಿಲ ಬಳಿ ಇದನ್ನು ಹೂತು ಹಾಕಿದ್ದರೆ ಶನಿ ದೇವರ ಕಾಟ ಎಲ್ಲವೂ ಮಾಯವಾಗಿ ಶನಿದೇವರ ಕೃಪಾ ಕಟಾಕ್ಷ ದೊರೆಯುತ್ತದೆ. ಮನೆಯ ಸದಸ್ಯರ ಮೇಲೆ ಯಾವುದೇ ಕೆಟ್ಟ ಪ್ರಭಾವಗಳು ಬೀರುವುದಿಲ್ಲ. ಆದರೆ ಈ ಪ್ರಯೋಗವನ್ನು ನೀವು ಪ್ರತಿ ಮೂರು ತಿಂಗಳಿಗೆ ಬದಲಾವಣೆ ಮಾಡಬೇಕು. ಹೂತು ಹಾಕಿದ ಬೇರುಗಳನ್ನು ತೆಗೆದು ಬೇರೆ ಬೇರುಗಳನ್ನು ಹಾಕಬೇಕು. ಇದೆಲ್ಲವನ್ನೂ ನೀವು ಶಮಿ ಸಸ್ಯದ ಕೆಳಗಡೆ ಬದಲಾಯಿಸಿ ಹೊಸದಾಗಿ ಬೇರದನ್ನು ಹಾಕಿ ಹೂತು ಹಾಕಬೇಕು. ಮತ್ತೆ ಪೂರ್ವ ದಿಕ್ಕಿನಲ್ಲಿ ಹೂತು ಹಾಕಬೇಕು.ಈ ರೀತಿ ಮಾಡುವುದರಿಂದ ಶನಿ ದೇವರ ಕಾಟ ದೂರವಾಗಿ ಆಶೀರ್ವಾದ ಸಿಗುತ್ತದೆ.

Leave a Reply

Your email address will not be published. Required fields are marked *