ಏಲಕ್ಕಿ ನೀರು ಕುಡಿಯುವುದರಿಂದ ದೇಹಕ್ಕೆ ನೂರೆಂಟು ಲಾಭಗಳು

ಆರೋಗ್ಯ

ನಮಸ್ತೇ ಪ್ರಿಯ ಸ್ನೇಹಿತರೆ, ನಾವು ಸೇವಿಸುವ ಗಾಳಿ ನೀರು ಆಹಾರ ತುಂಬಾನೇ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಹೌದು ಆರೋಗ್ಯ ಚೆನ್ನಾಗಿದ್ದರೆ ನಾವು ಕೂಡ ತುಂಬಾನೇ ಆಕ್ಟಿವ್ ಆಗಿ ಇರುತ್ತೇವೆ ಅಲ್ಲವೇ. ಆರೋಗ್ಯಕರ ಆರೋಗ್ಯ ನಮಗೆ ದೇವರು ಕೊಟ್ಟ ದೊಡ್ಡ ಉಡುಗೊರೆ ಅಂತ ಹೇಳಬಹುದು ಅದನ್ನು ನಾವು ಚೆನ್ನಾಗಿ ಇಟ್ಟುಕೊಂಡು ಕಾಪಾಡಿಕೊಂಡು ಹೋಗುವುದು ನಮ್ಮ ಜವಾಬ್ದಾರಿಯೂ ಕೂಡ ಹೌದು. ಹೀಗಾಗಿ ಕೇವಲ ಹಣ್ಣುಗಳು ತರಕಾರಿ ಸೊಪ್ಪುಗಳು ಕಾಳುಗಳು ಸೇವಿಸಬೇಕೇ? ಹೌದು ಆದರೆ ಇದರ ಜೊತೆಗೆ ನಾವು ಇನ್ನಿತರ ಸಪ್ಲಿಮೆಂಟ್ ವಿಧಾನಗಳನ್ನು ಕೂಡ ಮಾಡಿಕೊಂಡರೆ ಇನ್ನಷ್ಟು ನಮ್ಮ ಆರೋಗ್ಯದಲ್ಲಿ ನಾವು ಸುಧಾರಣೆಯನ್ನು ಮಾಡಿಕೊಳ್ಳಬಹುದು. ಹಾಗಾದರೆ ಏನು ಮಾಡಬೇಕು ಅಂತ ತಿಳಿಯೋಣ. ಇಂದಿನ ಲೇಖನದ ವಿಶೇಷತೆ ಏಲಕ್ಕಿಯನ್ನು ನೀರಿನಲ್ಲಿ ಹಾಕಿ ಕುಡಿಯುವುದರಿಂದ ಏನೆಲ್ಲ ಪ್ರಯೋಜನೆಗಳು ಆಗುತ್ತವೆ ಅಂತ ತಿಳಿಯೋಣ ಬನ್ನಿ.
ಆರೋಗ್ಯದ ಗುಟ್ಟು ಅನ್ನುವುದು ಅಡುಗೆ ಮನೆಯಲ್ಲಿ ಇರುತ್ತದೆ ಅನ್ನುವ ಮುತ್ತಿನಂತ ಮಾತು ಕೆಲವು ಜನರಿಗೆ ಗೊತ್ತೇ ಇಲ್ಲ ಮಿತ್ರರೇ.

ನಮ್ಮ ಆರೋಗ್ಯವನ್ನು ಕಾಪಾಡುವ ವೃದ್ಧಿಸುವ ಆಹಾರಗಳು ಅಡುಗೆ ಮನೆಯಲ್ಲಿಯೇ ರಾರಾಜಿಸುತ್ತವೆ. ಆದರೆ ಅವುಗಳ ಬಗ್ಗೆ ತಿಳಿದು ಕೊಳ್ಳದೆ ಅವುಗಳನ್ನು ಬಳಕೆ ಮಾಡದೆ ಸೇವನೆ ಮಾಡದೇ ನಮ್ಮ ಆರೋಗ್ಯವನ್ನು ನಮ್ಮ ಕೈಯಿಂದಲೇ ಹಾಳು ಮಾಡಿಕೊಂಡು ನಾವು ಆಸ್ಪತ್ರೆಯ ಬಾಗಿಲನ್ನು ತಟ್ಟುತ್ತಾ ಇದ್ದ ಹಣವೆಲ್ಲವನ್ನು ಖರ್ಚು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಪೂರ್ವಜರಿಗೆ ಯಾಕೆ ಅವರಿಗೆ ಕಾಯಿಲೆಗಳು ಬರುತ್ತಿರಲಿಲ್ಲ. ಒಂದು ವೇಳೆ ನಿಮ್ಮ ಮನೆಯಲ್ಲಿ ಹಿರಿಯರನ್ನು ನೀವು ಗಮನಿಸಿ ನೋಡಿ ಗೆಳೆಯರೇ ಅವರಿಗೆ ಯಾವುದೇ ಕಾಯಿಲೆಗಳ ಪ್ರಭಾವ ಅಷ್ಟೊಂದು ಬಲವಾಗಿ ಬೀಳುವುದಿಲ್ಲ ಅವರು ತುಂಬಾನೇ ವರ್ಷಗಳವರೆಗೆ ಬದುಕುಳಿಯುತ್ತಾರೆ. ಅದಕ್ಕೆ ಕಾರಣ ಅವರು ಮಾಡಿಕೊಂಡು ಬಂದಿರುವ ಹಳೆಯ ಕಾಲದ ಮನೆಮದ್ದುಗಳು ಕಾರಣ. ಅಡುಗೆ ಮನೆಯಲ್ಲಿ ಸಿಗುವ ಪದಾರ್ಥಗಳನ್ನು ನಮ್ಮ ಹಿರಿಯರು ಬಳಕೆ ಮಾಡುತ್ತಿದ್ದರು. ಹಾಗಾದರೆ ಬನ್ನಿ ಕೇವಲ ಏಲಕ್ಕಿಯನ್ನು ನೀರಿನಲ್ಲಿ ಹಾಕಿ ಕುಡಿಯುವುದರಿಂದ ಹೇಗೆ ನಮಗೆ ಲಾಭಗಳು ಉಂಟಾಗುತ್ತವೆ ಅಂತ ತಿಳಿಯೋಣ. ಮೊದಲಿಗೆ ಹೌದು ಈ ಏಲಕ್ಕಿ ನೀರು ಕುಡಿಯುವುದರಿಂದ ದೇಹದಲ್ಲಿ ನೀರಿನ ಅಂಶವನ್ನು ಕಾಪಾಡುತ್ತದೆ. ಬೆಳಿಗ್ಗೆ ಒಂದು ಲೀಟರ್ ಬಿಸಿ ನೀರಿಗೆ ಒಂದು ಏಲಕ್ಕಿಯನ್ನು ಹಾಕಿ ಕುಡಿಯಿರಿ. ಉಳಿದ ನೀರನ್ನು ಮಧ್ಯಾಹ್ನ ಕುಡಿಯಿರಿ. ಏಲಕ್ಕಿ ಬಾಯನ್ನು ಒಣಗಿಸುತ್ತಾರೆ. ಹೀಗಾಗಿ ನೀವು ದಿನಕ್ಕೆ ಕನಿಷ್ಠ ಎಂಟು ಲೋಟ ನೀರು ಕುಡಿಯಬೇಕಾಗುತ್ತದೆ.

ಇದರಿಂದ ನಮ್ಮ ದೇಹದಲ್ಲಿ ನೀರಿನ ಅಂಶವನ್ನು ಕಾಪಾಡುತ್ತದೆ. ಏಲಕ್ಕಿ ನೀರು ಸುಸ್ತು ಮಾಯ ಮಾಡುತ್ತದೆ. ಕೆಲಸದ ಒತ್ತಡ ಅಧಿಕವಾಗಿದ್ದರೂ ಸುಸ್ತು ಅನ್ನಿಸುವುದಿಲ್ಲ. ದಿನವೂ ಆರೋಗ್ಯವಾಗಿ ಚೈತನ್ಯವಾಗಿ ಇರುತ್ತೇವೆ. ಏಲಕ್ಕಿ ನೀರು ಕುಡಿಯುವುದರಿಂದ ಹೊಟ್ಟೆ ಹಸಿವು ಆಗುವುದಿಲ್ಲ ಹೀಗಾಗಿ ನಿಮ್ಮ ತೂಕವು ಕೂಡ ಹೆಚ್ಚುವುದಿಲ್ಲ. ಇದರಿಂದ ನೀವು ತೂಕ ಇಳಿಸಲು ಭಾರೀ ಪ್ರಯತ್ನ ಮಾಡುವ ಅಗತ್ಯವಿಲ್ಲ. ಜೊತೆಗೆ ಜಂಕ್ ಫುಡ್ ಗಳ ಚಪಲತೆ ದೂರವಾಗುತ್ತದೆ. ಹೀಗಾಗಿ ನೀವು ಮೂರು ಹೊತ್ತು ಆರೋಗ್ಯಕರ ಆಹಾರವನ್ನು ಸೇವನೆ ಮಾಡಬಹುದು. ಕಾಂತಿಯನ್ನು ಹೆಚ್ಚು ಮಾಡುತ್ತದೆ ಈ ಏಲಕ್ಕಿ ನೀರು. ಹೌದು ಕೇವಲ ಹದಿನೈದು ದಿನಗಳವರೆಗೆ ನೀವು ಏಲಕ್ಕಿ ನೀರು ಕುಡಿಯುವುದರಿಂದ ನಿಮ್ಮ ಮುಖದ ಕಾಂತಿ ದೇಹದ ಕಾಂತಿಯಲ್ಲಿ ನೀವು ಬದಲಾವಣೆ ಕಾಣಬಹುದು. ಹೌದು ಅಷ್ಟೊಂದು ಆರೋಗ್ಯಕರವಾಗಿದೆ ಈ ಏಲಕ್ಕಿ ನೀರು. ಏನು ಮಾಡುವ ಅಗತ್ಯವಿಲ್ಲ ಗೆಳೆಯರೇ ಕೇವಲ ಬೆಳಿಗ್ಗೆ ಒಂದು ಲೀಟರ್ ನೀರಿನಲ್ಲಿ ಏಲಕ್ಕಿ ಹಾಕಿ ಸ್ವಲ್ಪ ಹೊತ್ತು ಬಿಟ್ಟು ಕುಡಿಯಿರಿ. ಹಲವಾರು ಪ್ರಯೋಜನಗಳನ್ನು ಪಡೆದುಕೊಳ್ಳಿ. ಶುಭದಿನ.

Leave a Reply

Your email address will not be published. Required fields are marked *