ಮೈಗ್ರೇನ್ ಅಥವಾ ಅರ್ಧ ತಲೆನೋವು ಮತ್ತು ಕಣ್ಣಿನ ಆರೋಗ್ಯಕರ ದೃಷ್ಟಿಗೆ ಇಲ್ಲಿದೆ ಮನೆಮದ್ದು

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ಇತ್ತೀಚಿನ ದಿನಗಳಲ್ಲಿ ತಲೆನೋವು ಅನ್ನುವುದು ಆರೋಗ್ಯಕರ ಸಮಸ್ಯೆಗಳಲ್ಲಿ ತುಂಬಾನೇ ಸಾಮಾನ್ಯವಾದ ಸಮಸ್ಯೆಯಾಗಿದೆ ಅಂತ ಹೇಳಬಹುದು. ಕೆಲವರಿಗೆ ಪೂರ್ತಿಯಾಗಿ ತಲೆನೋವು ಕಾಣಿಸಿಕೊಂಡರೆ ಇನ್ನೂ ಕೆಲವರಿಗೆ ಅರ್ಧ ತಲೆನೋವು ಬರುತ್ತದೆ. ಹೀಗೆ ನಿತ್ಯವೂ ಇದರ ಪ್ರಭಾವ ಜಾಸ್ತಿಯಾಗುತ್ತಾ ಇದು ಮೈಗ್ರೇನ್ ಎಂಬ ರೋಗಕ್ಕೆ ಕಾರಣ ಆಗುತ್ತದೆ. ಈ ತಲೆನೋವು ಬಂದು ಸೇರಿಕೊಂಡರೆ ಮತ್ತಷ್ಟು ದೇಹದಲ್ಲಿ ಅನಾರೋಗ್ಯಕರ ಸಮಸ್ಯೆಗಳಿಗೆ ದಾರಿ ಮಾಡಿ ಕೊಡುತ್ತದೆ. ಇದನ್ನು ಕೆಲವು ಸಂಶೋಧನೆಗಳು ಅಪರೂಪದ ಕಾಯಿಲೆ ಅಂತ ಕರೆಯುತ್ತಾರೆ. ಕಾರಣ, ಇದು ನಮ್ಮ ನಿಮ್ಮ ಮಧ್ಯದಲ್ಲಿ ಹಲವಾರು ಜನರು ಈ ಭಯಂಕರವಾದ ತಲೆನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಮೈಗ್ರೆನ್ ಸಮಸ್ಯೆ ಅನ್ನುವುದು ಕೆಲವರಿಗೆ ಮಾನಸಿಕ ಒತ್ತಡ ಟೆನ್ಷನ್ ನಿಂದ ಬರುತ್ತದೆ. ಇನ್ನೂ ಕೆಲವರಿಗೆ ಇದು ಅನುವಂಶೀಯವಾಗಿ ನಮ್ಮ ಕುಟುಂಬದ ಹಿರಿಯರಿಂದ ನಮಗೆ ವರದಾನವಾಗಿ ಬರುತ್ತದೆ ಅಂತ ಕೆಲವು ಸಂಶೋಧನೆ ಮೂಲಗಳು ತಿಳಿಸಿವೆ. ಮೈಗ್ರೇನ್ ಸಮಸ್ಯೆಯನ್ನು ನ್ಯೂರಾಲಜಿಕಲ್ ಸ್ಥಿತಿ ಅಂತ ಕರೆಯುತ್ತಾರೆ. ಈ ತಲೆನೋವು ಆಗಾಗ ಕಾಣಿಸಿಕೊಳ್ಳಲು ಶುರು ಆಗುತ್ತದೆ. ತದ ನಂತರ ಒಮ್ಮೆ ಬಂದು ಸೇರಿದರೆ ಪೂರ್ತಿ ತಲೆಯೆಲ್ಲಾ ಆವರಿಸುತ್ತದೆ. ಆಮೇಲೆ ಕೆಲವು ನಿಮಿಷಗಳಿಂದ ಹಿಡಿದು ದಿನಗಳವರೆಗೆ ವ್ಯಾಪಿಸುತ್ತದೆ. ಹೀಗೆ ಮುಂದುವರೆಯುತ್ತಾ ದೊಡ್ಡದಾಗಿ ಪರಿಣಮಿಸುತ್ತದೆ.

ಅಷ್ಟೇ ಅಲ್ಲದೇ ತಲೆನೋವು ಜಾಸ್ತಿಯಾದರೆ ಇದರ ಜೊತೆಗೆ ಶೀತ ನೆಗಡಿ ಜ್ವರ ಇನ್ನಿತರ ಸಮಸ್ಯೆಗಳನ್ನು ಗಂಭೀರವಾಗಿ ಎದುರಿಸಬೇಕಾಗುತ್ತದೆ. ಹಾಗಾದರೆ ಮೈಗ್ರೇನ್ ಕಾಣಿಸಿಕೊಂಡಾಗ ನಿಮ್ಮಲ್ಲಿ ಯಾವ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಅಂದರೆ, ವಾಕರಿಕೆ, ವಾಂತಿ, ಕಣ್ಣುಗಳು ಮಂಜಾಗುವುದು, ಕೈ ಕಾಲುಗಳು ಹಿಡಿದುಕೊಂಡಂತೆ ಮತ್ತು ಮುಳ್ಳು ಚುಚ್ಚಿದಂತ ಅನುಭವ ಆಗಬಹುದು. ಹಸಿವು ಕಡಿಮೆಯಾಗುವುದು, ಕೆಲಸದಲ್ಲಿ ಆಸಕ್ತಿ ಕಡಿಮೆಯಾಗುವುದು, ಬೆಳಕು ಹಾಗೂ ಗಟ್ಟಿ ಧ್ವನಿ ಕೇಳಿದಾಗ ಹೆದರಿಕೆಯಾಗುವುದು, ಮುಂತಾದವು. ಈ ಬಗೆಯ ಗುಣಲಕ್ಷಣಗಳು ನಿಮ್ಮಲ್ಲಿ ಕಾಣಿಸಿಕೊಂಡರೆ ಖಂಡಿತವಾಗಿ ನೀವು ಮೈಗ್ರೇನ್ ಸಮಸ್ಯೆಗೆ ಒಳಗಾಗಿದ್ದೀರಿ ಎಂದು ಅರ್ಥವನ್ನು ನೀಡುತ್ತದೆ. ಮೈಗ್ರೇನ್ ಸಮಸ್ಯೆಗೆ ಈ ಲಕ್ಷಣಗಳು ಮಾತ್ರ ಕಾರಣ ಅಂತ ಹೇಳಲು ಆಗುವುದಿಲ್ಲ. ಇದಕ್ಕೆ ಅನುವಂಶೀಯತೆ ಕಾರಣವಾಗಬಹುದು ಹಾರ್ಮೋನ್ ಗಳ ಅಸಮತೋಲನ ಆಗಬಹುದು. ಗರ್ಭ ನಿರೋಧಕ ಅಡ್ಡ ಪರಿಣಾಮಗಳು ಅಸಮರ್ಪಕ ಆಹಾರ ಅಡ್ಡವಾಗಬಹುದು. ನಾವು ತಲೆನೋವು ಬಂದಾಗ ಮೆಡಿಕಲ್ ಗೆ ಓಡಿ ಹೋಗಿ ನೋವು ನಿವಾರಕ ಗುಳಿಗೆಗಳನ್ನು ತೆಗೆದುಕೊಂಡು ಸೇವನೆ ಮಾಡುತ್ತೇವೆ.

ಈ ಮಾತ್ರೆಗಳು ಕೊಂಚ ನಮಗೆ ತಲೆನೋವಿನಿಂದ ವಿಶ್ರಾಂತಿಯನ್ನು ನೀಡಿದರು ಕೂಡ ಶಾಶ್ವತವಾಗಿ ಪರಿಹಾರ ಸಿಗುವುದಿಲ್ಲ. ಹಾಗೆಯೇ ಇದು ದೇಹವನ್ನು ಮತ್ತಷ್ಟು ಬಾಧಿಸುತ್ತದೆ. ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅದಕ್ಕಾಗಿ ನಾವು ನಿಮಗೆ ಒಂದು ಸೂಪರ್ ಮನೆಮದ್ದು ತಿಳಿಸಿಕೊಡುತ್ತೇವೆ ಬನ್ನಿ. ಆ ಮನೆಮದ್ದು ಈ ಕೆಳಗಿನಂತಿದೆ. ಮೊದಲಿಗೆ ಬೇಕಾಗುವ ಸಾಮಗ್ರಿಗಳು, ಒಂದು ಕೊಬ್ಬರಿ ಗಿಟುಗು, ಹಾಲು, ಗಸಗಸೆ ಹಾಗೂ ಬಾದಾಮಿಯನ್ನು ತೆಗೆದುಕೊಳ್ಳಬೇಕು. ಕೊಬ್ಬರಿ ಗಿಟುಗಿನ ಮೇಲೆ ಒಂದು ರಂಧ್ರವನ್ನು ಮುಚ್ಚಳದ ರೀತಿಯಲ್ಲಿ ಕಟ್ ಮಾಡಿಕೊಳ್ಳಬೇಕು.ಅದಕ್ಕೆ ಒಂದು ಚಮಚ ಗಸಗಸೆ ಮತ್ತು ಬಾದಾಮಿ ಹಾಕಿ ಅದರ ಬಾಯಿಯನ್ನು ಮುಚ್ಚಬೇಕು.ತದ ನಂತರ ಇದನ್ನು ಒಂದು ಹಾಲಿನ ಪಾತ್ರೆಯಲ್ಲಿ ಇಟ್ಟು ಕುದಿಸಬೇಕು.40 ನಿಮಿಷದವರೆಗೆ ಚೆನ್ನಾಗಿ ಹಾಲಿನಲ್ಲಿ ಕುದಿಸಬೇಕು. ಕುದಿಸಿದ ನಂತರ ಅದನ್ನು ಹಾಲಿನಿಂದ ಬೇರ್ಪಡಿಸಬೇಕು ಆರಿದ ಮೇಲೆ ಅದರ ಮೇಲೆ ಇರುವ ಕೊಬ್ಬರಿಯನ್ನು ಕಟ್ ಮಾಡಬೇಕು. ಒಳಗಡೆ ಇರುವ ಗಸಗಸೆ ಮತ್ತು ಬಾದಾಮಿ ಹಾಗೂ ಅದಕ್ಕೆ ಕಲ್ಲು ಸಕ್ಕರೆಯನ್ನು ಹಾಕಿ ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು. ಈ ಪುಡಿಯನ್ನು ನೀವು ರಾತ್ರಿ ಮಲಗುವಾಗ ಹಾಲಿನಲ್ಲಿ ಮಿಕ್ಸ್ ಮಾಡಿ ಚೆನ್ನಾಗಿ ಕಲಕಿ ಕುಡಿಯಬೇಕು. ಇದರಿಂದ ಮೈಗ್ರೇನ್ ಸಮಸ್ಯೆ ನಿಮಗೆ ಎಂದಿಗೂ ಕಾಣುವುದಿಲ್ಲ. ಶುಭದಿನ.

Leave a Reply

Your email address will not be published. Required fields are marked *