ನಮಸ್ತೇ ಪ್ರಿಯ ಮಿತ್ರರೇ, ಮನುಷ್ಯ ಹುಟ್ಟುತ್ತಾನೆ ಸಾಯುತ್ತಾನೆ. ಮನುಷ್ಯ ಹುಟ್ಟಿದ ಮೇಲೆ ಸಾವು ಅನ್ನುವುದು ಕೂಡ ಅಷ್ಟೇ ಖಚಿತ. ಮನುಷ್ಯನಿಗೆ ದೇವರು ಬುದ್ದಿ ಶಕ್ತಿಯನ್ನು ಕೊಟ್ಟಿದ್ದಾನೆ. ನಿಮಗೆ ಗೊತ್ತಿರುವ ಹಾಗೆ ಪ್ರತಿಯೊಬ್ಬ ವ್ಯಕ್ತಿ ರಾತ್ರಿ ಮಲಗಿಕೊಂಡಾಗ ಆತನಿಗೆ ಕನಸುಗಳು ಬೀಳುವುದು ಸಹಜ. ಆದರೆ ಇಂಥಹ ಕೆಲವು ಕನಸುಗಳು ನಿಮಗೆ ಕಾಣಿಸಿಕೊಂಡರೆ ಅವುಗಳನ್ನು ನೀವು ಇನ್ನೊಬ್ಬರ ಹತ್ತಿರ ಹೇಳಿಕೊಂಡರೆ ನಿಮಗೆ ಸಂಕಷ್ಟಗಳು ಅನ್ನುವುದು ಕಟ್ಟಿಟ್ಟ ಬುತ್ತಿ ಆಗಿದೆ. ಅದಕ್ಕಾಗಿ ಈ ತಪ್ಪುಗಳನ್ನು ನೀವು ಎಂದಿಗೂ ಮಾಡಬೇಡಿ. ಪ್ರತಿಯೊಬ್ಬರೂ ಜೀವನದಲ್ಲಿ ನಾವು ತಿಳಿಸುವ ಈ ಕನಸುಗಳು ಒಂದಲ್ಲ ಒಂದು ದಿನ ನೀವು ಕಂಡಿರುತ್ತೀರಿ. ಆದರೆ ನೀವು ತಪ್ಪು ಮಾಡುವ ಸಂಗತಿ ಅಂದರೆ ಅವುಗಳನ್ನು ನೀವು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುತ್ತೀರಿ. ಈ ಕೆಲವು ಕನಸುಗಳನ್ನು ನೀವು ಯಾರಿಗೂ ಹೇಳಬಾರದು ನಿಮ್ಮ ಕುಟುಂಬದವರಿಗೂ ಕೂಡ ಹೇಳಬಾರದು. ಹಾಗಾದರೆ ಬನ್ನಿ ಆ ಕನಸುಗಳು ಯಾವುವು? ಅವುಗಳನ್ನು ಇನ್ನೊಬ್ಬರಿಗೆ ಹಂಚಿಕೊಳ್ಳುವುದರಿಂದ ಯಾವ ರೀತಿಯಾಗಿ ಸಮಸ್ಯೆಗಳು ಉದ್ಭವಿಸುತ್ತವೆ ಅಂತ ವಿವರವಾಗಿ ನಾವು ನಿಮಗೆ ನಮ್ಮ ಈ ಲೇಖನದಲ್ಲಿ ಪರಿಚಯಿಸಿ ಕೊಡುತ್ತೇವೆ ಬನ್ನಿ. ಕನಸು ಕಾಣುವುದು ಪ್ರಕೃತಿಯ ಒಂದು ಸಹಜವಾದ ನಿಯಮ ಆಗಿದೆ. ರಾತ್ರಿ ಮಲಗಿದಾಗ ಪ್ರತಿಯೊಬ್ಬರೂ ಕನಸುಗಳನ್ನು ಕಾಣುತ್ತಾರೆ.
ಹೌದು ಈ ಕನಸುಗಳು ಪ್ರತಿ ದಿನವೂ ಬೀಳುತ್ತಾ ಇರುತ್ತವೆ. ಕೆಲವು ಕನಸುಗಳು ಯಾವ ರೀತಿ ಇರುತ್ತವೆ ಅಂದರೆ ಬೆಳಗ್ಗೆ ಎದ್ದು ತಕ್ಷಣ ನೆನಪಿನಲ್ಲಿ ಇರುವುದಿಲ್ಲ. ಇನ್ನೂ ಕೆಲವು ಅಲ್ಪ ಸ್ವಲ್ಪ ನೆನಪಿನಲ್ಲಿ ಇರುತ್ತವೆ. ಸಾಮಾನ್ಯವಾಗಿ ನೀವು ಈ ಮಾತನ್ನು ಕೇಳಿರಬಹುದು, ನನಗೆ ಇವತ್ತು ಒಂದು ಭಯಾನಕವಾದ ಕನಸು ಬಿದ್ದಿತ್ತು, ಅಂತ ಈ ವಿಚಾರ ಅವರು ಅವರ ಸ್ನೇಹಿತರೊಂದಿಗೆ ಅಥವಾ ಮನೆಯ ಜನರ ಜೊತೆಗೆ ಹಂಚಿಕೊಳ್ಳುವುದನ್ನು ನೀವು ನೋಡಿದ್ದೀರಿ. ಕೆಲವು ಕನಸುಗಳು ಯಾವ ರೀತಿಯಾಗಿ ಇರುತ್ತವೆ ಅಂದರೆ ಅವುಗಳನ್ನು ನಾವು ಅಪ್ಪಿತಪ್ಪಿಯೂ ಚರ್ಚೆಯನ್ನು ಮಾಡಬಾರದು. ಏಕೆಂದರೆ ಈ ಕನಸುಗಳಿಂದ ಭವಿಷ್ಯದಲ್ಲಿ ಸಿಗುವ ಫಲಗಳು ಮುಂಚಿತವಾಗಿ ನಷ್ಟಗೊಳ್ಳುತ್ತವೆ. ಹಾಗಾದರೆ ಅಂಥಹ ಕನಸುಗಳು ಯಾವುವು? ಅಂತ ಹೇಳುವುದಾದರೆ ಮೊದಲಿಗೆ ಪ್ರಕೃತಿಯ ಕನಸು. ಈ ರೀತಿಯಾಗಿ ಕನಸುಗಳು ಕಂಡರೆ ನೀವು ಪ್ರಕೃತಿಗೆ ತುಂಬಾನೇ ಹತ್ತಿರವಾಗಿದ್ದೀರಿ ಎಂದು ಅರ್ಥ. ಕನಸಿನಲ್ಲಿ ನದಿ ಕಾಡು ನೀರು ಗಿಡ ಮರ ಪ್ರಾಣಿ ಪಕ್ಷಿ ಕಾಣಿಸುವುದನ್ನು ನೀವು ಅನುಭವ ಮಾಡಿರಬಹುದು. ಇದು ನಿಮಗೆ ಜೀವನದಲ್ಲಿ ಒಳ್ಳೆಯ ಸುದ್ದಿಗಳನ್ನು ತಂದು ಕೊಡುತ್ತದೆ. ಪ್ರಕೃತಿಯನ್ನು ನೋಡಿದ ಮೇಲೆ ನಮ್ಮ ಮನಸ್ಸಿಗೆ ಎಷ್ಟು ಸಮಾಧಾನ ಆಗುತ್ತದೆಯೋ ಹಾಗೆ ನಮ್ಮ ಮನಸ್ಸಿಗೆ ಶಾಂತಿ ಕೊಡುತ್ತದೆ ಈ ಪ್ರಕೃತಿಯ ಕನಸು. ಈ ಕನಸುಗಳನ್ನು ನೀವು ಇನ್ನೊಬ್ಬರಿಗೆ ಹಂಚಿಕೊಂಡರೆ ಅದರಿಂದ ನಿಮಗೆ ಲಾಭ ಫಲಗಳು ಸಿಗುವುದಿಲ್ಲ.
ಇನ್ನೂ ಕನಸಿನಲ್ಲಿ ಬೇರೆಯವರು ಅಥವಾ ನಮ್ಮವರು ಸತ್ತ ಹಾಗೆ ಕನಸುಗಳು ಬೀಳುತ್ತವೆ. ಇದರಿಂದ ನೀವು ತುಂಬಾನೇ ಚಿಂತೆಗೆ ಒಳಗಾಗಿ ಭಯ ಆತಂಕ ಪಡುತ್ತೀರಿ. ಆದರೆ ಸಾವಿನ ಕನಸುಗಳು ನಿಮ್ಮ ತೊಂದರೆಗಳನ್ನು ನಾಶ ಮಾಡುವ ಕನಸುಗಳು ಆಗಿರುತ್ತವೆ. ಆದ್ದರಿಂದ ಈ ಬಗೆಯ ಕನಸುಗಳನ್ನು ಇನ್ನೊಬ್ಬರಿಗೆ ಹೇಳಬಾರದು. ಇನ್ನೂ ಮೂರನೆಯದು ಸಾಮಾನ್ಯವಾಗಿ ಕನಸಿನಲ್ಲಿ ಹಾವುಗಳು ಕಂಡು ಬರುತ್ತವೆ. ಇದರಿಂದ ಭಯ ಪಡುವ ಅವಶ್ಯಕತೆ ಇಲ್ಲ ಗೆಳೆಯರೇ. ಇದರ ಅರ್ಥ ನೀವು ಮಾಡುವ ವ್ಯಾಪಾರದಲ್ಲಿ ಅಭಿವೃದ್ದಿ ಆಗುತ್ತದೆ ಅನ್ನುವ ಸಂಕೇತವನ್ನು ನೀಡುತ್ತದೆ. ಅದಕ್ಕಾಗಿ ಕನಸಿನಲ್ಲಿ ಹಾವುಗಳು ಬಂದರೆ ಎಂದಿಗೂ ಯಾರ ಬಳಿಯೂ ಹೇಳಬೇಡಿ. ನಾಲ್ಕನೆಯ ಕನಸು. ಇದನ್ನು ನೀವು ಯಾರೊಂದಿಗೆ ಕೂಡ ಹಂಚಿ ಕೊಳ್ಳಬಾರದು. ಅದುವೇ ಸಾಕ್ಷಾತ್ ದೇವರ ದರ್ಶನ. ದೇವರು ಯಾವುದೋ ಒಂದು ರೂಪದಲ್ಲಿ ದರ್ಶನವನ್ನು ನೀಡುತ್ತಾರೆ. ಇದರ ಅರ್ಥ ನೀವು ನಿಮ್ಮ ಜೀವನದಲ್ಲಿ ಅತಿ ಶೀಘ್ರದಲ್ಲಿ ಸಂತೋಷವನ್ನು ಕಾಣುತ್ತೀರಿ ಎಂದು ಸೂಚನೆಯನ್ನು ನೀಡುತ್ತದೆ.ಆದ್ದರಿಂದ ಈ ವಿಷಯವನ್ನು ಯಾರಿಗೂ ಹೇಳಬೇಡಿ. ಇದರಿಂದ ಆಗುವ ಶುಭಫಲಗಳು ನಿಂತು ಹೋಗುತ್ತವೆ. ಶುಭದಿನ.