ನಮಸ್ತೇ ಪ್ರಿಯ ಓದುಗರೇ, ನಾವು ಹುಟ್ಟಿದ ಘಳಿಗೆಯಿಂದ ನಮ್ಮ ಅದೃಷ್ಟ ದುರದೃಷ್ಟ ಹುಟ್ಟುತ್ತದೆ. ಹಾಗೆಯೇ ನಾವು ಹುಟ್ಟಿದ ದಿನಾಂಕ ಹಾಗೂ ಸಮಯ ಕೂಡ ತುಂಬಾನೇ ಮುಖ್ಯವಾಗಿರುತ್ತದೆ. ಹಾಗಾದ್ರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಹುಟ್ಟಿದ ದಿನಾಂಕಿನಿಂದ ನಿಮ್ಮ ಲಕ್ಕಿ ನಂಬರ್ ಯಾವುದು ಅಂತ ತಿಳಿಯೋಣ ಬನ್ನಿ. ಕೆಲವು ವ್ಯಕ್ತಿಗಳಿಗೆ ಮತ್ತೊಬ್ಬ ವ್ಯಕ್ತಿಯ ಹೆಸರು ಇಷ್ಟವಾಗುತ್ತದೆ, ಇನ್ನೂ ಕೆಲವರಿಗೆ ಅವರ ವ್ಯಕ್ತಿತ್ವ ಇಷ್ಟವಾಗುತ್ತದೆ. ಪ್ರತಿಯೊಬ್ಬರೂ ಕೂಡ ತಮ್ಮನ್ನು ತಾವು ಇಷ್ಟ ಪಡುತ್ತಾರೆ. ಅಂದರೆ ಅವರು ತಮ್ಮ ಇಷ್ಟಗಳನ್ನು ಕಷ್ಟಗಳನ್ನು ಚೆನ್ನಾಗಿ ಅರಿತು ಕೊಂಡಿರುತ್ತಾರೆ. ಹೀಗಾಗಿ ಪ್ರತಿಯೊಬ್ಬರೂ ಕೂಡ ಒಂದೊಂದು ಲಕ್ಕಿ ನಂಬರ್ ಅಂತ ಇಷ್ಟ ಪಡುತ್ತಾರೆ. ಈ ರೀತಿ ಮಾತುಗಳನ್ನು ನಾವು ಕೇಳಿರಬಹುದು. ಇದು ನನ್ನ ಲಕ್ಕಿ ನಂಬರ್ ಅಂತ ಲಕ್ಕಿ ಚಾರ್ಮಿಂಗ್ ನಂಬರ್ ಅಂತ ಸಾಮಾನ್ಯ ಜನರು ಹೇಳುವುದನ್ನು ಕೇಳಿದ್ದೇವೆ. ಹೀಗಾಗಿ ಅವರು ಅವುಗಳನ್ನು ನಂಬುತ್ತಾರೆ ಹಾಗೆಯೇ ನೆನಪಿಗಾಗಿ ಮೊಬೈಲ್ ನಂಬರ್ ಆಗಿ ಇಟ್ಟುಕೊಳ್ಳುತ್ತಾರೆ, ವಾಹನಗಳ ಹಿಂದೆ ನಂಬರ್ ಪ್ಲೇಟ್ ಆಗಿ ಬಳಕೆ ಮಾಡುತ್ತಾರೆ.
ಆದರೆ ಇದನ್ನು ನಾವು ನಮ್ಮ ಇಚ್ಛೆಗೆ ಅನುಸಾರವಾಗಿ ಇಟ್ಟುಕೊಂಡರೆ ಸಾಲದು ಗೆಳೆಯರೇ, ಇದನ್ನು ನಾವು ನಮ್ಮ ಹುಟ್ಟಿದ ದಿನಾಂಕ ದೊಂದಿಗೆ ಹೊಂದಾಣಿಕೆ ಮಾಡಿ ಬರುವ ಲಕ್ಕಿ ನಂಬರ್ ಅನ್ನು ಬಳಸಿದರೆ ಶುಭಫಲಗಳು ದೊರಕುತ್ತವೆ ಅಂತ ನಂಬಲಾಗಿದೆ. ಅದಕ್ಕಾಗಿ ಯಾವ ರೀತಿಯಾಗಿ ಈ ಲಕ್ಕಿ ನಂಬರ್ ಮಾಡಿಕೊಳ್ಳಬಹುದು ಅಂತ ನಾವು ಇಂದಿನ ಲೇಖನದಲ್ಲಿ ತಿಳಿಯೋಣ. ಈ ಮಾಹಿತಿಯನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಅವರಿಗೂ ಕೂಡ ಸಹಾಯವಾಗಲಿದೆ. ಮೊದಲಿಗೆ ಈ ದಿನಾಂಕಿನಲ್ಲಿ ಜನಿಸಿದವರಿಗೆ ಅಂದರೆ 1,10,19,28 ಜನಿಸಿದವರಿಗೆ 1,2,3,9 ನಂಬರ್ ಗಳು ಅದೃಷ್ಟದ ನಂಬರ್ ಆಗಿರುತ್ತವೆ.ಇನ್ನೂ 2,11,20,29 ಈ ದಿನಾಂಕಗಳು ನಿಮ್ಮ ಜನ್ಮ ದಿನವಾದರೆ 2,1,5,6 ಈ ನಂಬರ್ ಗಳು ಲಕ್ಕಿ ನಂಬರ್ ಆಗಿರುತ್ತವೆ. ಇನ್ನೂ ಮೂರನೆಯದು, ಈ ದಿನಾಂಕ ಅಂದರೆ 3,12,21,30 ದಿನಾಂಕಿನಲ್ಲಿ ಜನಿಸಿದರೆ ಅವರಿಗೆ ಈ ನಂಬರ್ ಗಳು ಅಂದ್ರೆ 3,1,2,9 ಅದೃಷ್ಟ ಶಾಲಿ ನಂಬರ್ ಆಗಿರುತ್ತದೆ. 4,13,22 31 ಈ ದಿನಾಂಕಗಳು ನಿಮ್ಮ ಜನ್ಮ ದಿನವಾದರೆ 3,2,6,8 ಈ ನಂಬರ್ ಗಳು ನಿಮ್ಮ ಅದೃಷ್ಟವನ್ನು ಬದಲಾಯಿಸುವ ನಂಬರ್ ಆಗಿರುತ್ತವೆ. 5,14,23 ತಾರೀಖಿನಲ್ಲಿ ಜನಿಸಿದವರಿಗೆ 5,1,6,8 ಲಕ್ಕಿ ನಂಬರ್ ಆಗಿರುತ್ತವೆ.
6,15,24 ದಿನಾಂಕ ಜನ್ಮ ದಿನವಾದರೆ 6,5,8 ನಂಬರ್ ಗಳು ಲಕ್ಕಿ ನಂಬರ್ ಆಗಿರುತ್ತವೆ. 7,16,25 ದಿನಾಂಕ ನಲ್ಲಿ ಜನಿಸಿದವರಿಗೆ 7,1,2,9 ಅದೃಷ್ಟದ ಸಂಖ್ಯೆ ಆಗಿರುತ್ತದೆ. 8,17,26 ದಿನಾಂಕ ನಿಮ್ಮ ಹುಟ್ಟಿದ ದಿನವಾದರೆ 8,5,6 ಈ ನಂಬರ್ ಗಳು ನಿಮ್ಮ ಅದೃಷ್ಟವನ್ನು ಬದಲಾಯಿಸುವ ಸಂಖ್ಯೆ ಆಗಿದೆ ಅವುಗಳೇ 8,5,6.9,18,27 ದಿನದಂದು ನೀವು ಜನಿಸಿದರೆ 9,1,2,3 ನಿಮ್ಮ ಲಕ್ಕಿ ನಂಬರ್ ಆಗಿರುತ್ತದೆ. ನೀವು ಕೂಡ ನಿಮ್ಮ ಲಕ್ಕಿ ನಂಬರ್ ತಿಳಿಯಬೇಕು ಅಂತ ಇಷ್ಟ ಪಟ್ಟರೆ ನಮ್ಮ ಈ ಲೇಖನವನ್ನು ಕೊನೆಯವರೆಗೂ ಓದಿ. ಹಾಗೆಯೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಶುಭದಿನ.