ಎಸ್ಸಿ ಎಸ್ಟಿ ಭೂಮಿಯನ್ನು ಯಾವ ರೀತಿಯಾಗಿ ಖರೀದಿ ಮಾಡಬಹುದು ಇದಕ್ಕೆ ಕಾನೂನು ಏನು ಹೇಳುತ್ತೆ

ಉಪಯುಕ್ತ ಮಾಹಿತಿ

ನಮಸ್ತೇ ಪ್ರಿಯ ಓದುಗರೇ, ನಮ್ಮ ಕರ್ನಾಟಕದಲ್ಲಿ ಇರುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಹಲವಾರು ಸೌಲಭ್ಯಗಳನ್ನು ನಮ್ಮ ಕರ್ನಾಟಕ ಸರ್ಕಾರ ಮಾಡಿ ಕೊಟ್ಟಿದೆ. ಇನ್ನೂ ಈ ಎರಡು ಪಂಗಡದವರು ಕರ್ನಾಟಕದಲ್ಲಿ ಭೂಮಿಯನ್ನು ಖರೀದಿ ಮಾಡಬಹುದೇ? ಏಸ್ಸಿ, ಎಸ್ಟಿ ಲ್ಯಾಂಡ್ ಅನ್ನು ಖರೀದಿ ಮಾಡಬಹುದೇ. ಹಾಗೆ ಖರೀದಿ ಮಾಡಿದ ಈ ಲ್ಯಾಂಡ್ ರಿಜಿಸ್ಟ್ರೇಷನ್ ಅನ್ನು ಪಡೆದುಕೊಂಡಿರುತ್ತದೆಯೆ ಇದಕ್ಕೆಲ್ಲಾ ಕಾನೂನು ಅಧಿಕಾರವನ್ನು ಕೊಟ್ಟಿರುತ್ತದೆಯೇ? ಇಲ್ಲವಾದರೆ ಕಾನೂನು ಮೂಲಕ ಯಾವೆಲ್ಲ ಅಡಚಣೆಗಳು ಬರುತ್ತವೆ ಅಂತ ಇಂದಿನ ಲೇಖನದಲ್ಲಿ ನಾವು ತಿಳಿಯೋಣ. ಮೊದಲಿಗೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ವರ್ಗದವರಿಗೆ ಸೇರಿದ ಕೃಷಿ ಭೂಮಿಯನ್ನು ಯಾರಾದರೂ ಖರೀದಿ ಮಾಡಿದರೆ, ಅದನ್ನು ಕಾನೂನು ಮೂಲಕ ರಿಜಿಸ್ಟರ್ ಆಗಿರುತ್ತದೆಯೋ ಇಲ್ಲವೋ ಅನ್ನುವುದು ತುಂಬಾ ಜನರ ದೊಡ್ಡ ಪ್ರಶ್ನೆ ಆಗಿ ಉಳಿದು ಬಿಟ್ಟಿದೆ. ಪ್ರೋಹಿಬಿಷನ್ ಆಫ್ ಟ್ರಾನ್ಸ್ಫರ್ ಸರ್ಟೇನ್ ಲ್ಯಾಂಡ್ ಆಕ್ಟ್ 1978 ಅಂದರೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಭೂಮಿಗಳ ವರ್ಗಾವಣೆ ನಿಷೇಧ ಕಾಯ್ದೆ. 1/1/1979 ನಂತರ ಕರ್ನಾಟಕ ಸರ್ಕಾರ ಪೂರ್ವಾನುಮತಿ ಇಲ್ಲದೇ ಯಾವುದೇ ಎಸ್ಸಿ ಎಸ್ಟಿ ಲ್ಯಾಂಡ್ ಅನ್ನು ಖರೀದಿ ಮಾಡಬಾರದು ಅನ್ನುವುದು ಜಾರಿಯಲ್ಲಿತ್ತು. ಹಾಗೆಯೇ ಅದನ್ನು ಮಾರಾಟ ಮಾಡುವ ಹಾಗೆ ಇಲ್ಲ ಮತ್ತು ದಾನವನ್ನು ಮಾಡುವ ಹಾಗೆ ಇಲ್ಲ ಗೆಳೆಯರೇ, ಅಗ್ರಿಮೆಂಟ್ ಮಾಡಿಕೊಳ್ಳುವ ಹಾಗಿಲ್ಲ ಮತ್ತು ಸಾಲಕ್ಕೆ ಭೂಮಿಯನ್ನು ಬರೆಸಿಕೊಳ್ಳುವಂತಿಲ್ಲ.

ಖರೀದಿ ಮಾಡುವ ಆಸೆ ಇದ್ದರೂ ಕೂಡ ಅದು ಇನ್ ವ್ಯಾಲಿಡ್ ಅಂತ ಅದನ್ನು ಸ್ವೀಕಾರ ಮಾಡಲಾಗುತ್ತದೆ. ಅಂದರೆ ಸೇಲ್ ಡೀಡ್ ಪತ್ರವು ಇನ್ ವ್ಯಾಲಿಡ್ ಆಗುತ್ತದೆ. ಇದರ ಅಧಿಕಾರವೂ ಕೇವಲ ಅಸಿಸ್ಟಂಟ್ ಕಮಿಷನರ್ ಅವರು ಹೊಂದಿರುತ್ತಾರೆ. ಹಾಗಾದರೆ ಈ ಎಸ್ಸಿ, ಎಸ್ಟಿ ಲ್ಯಾಂಡ್ ಅನ್ನು ಹೇಗೆ ಖರೀದಿ ಮಾಡುವುದು ಅಂತ ತಿಳಿಯುವುದಾದರೂ ಇದಕ್ಕೆ ಕರ್ನಾಟಕ ಸರ್ಕಾರ ದ ಪೂರ್ವಾನುಮತಿ ಪಡೆಯಬೇಕು ಗೆಳೆಯರೇ, ಸರ್ಕಾರಕ್ಕೆ ಒಂದು ಅನುಮತಿ ಪತ್ರವನ್ನು ನೀಡಬೇಕು.ಸಹ ಸರ್ಕಾರ ಅನುಮತಿ ಇಲ್ಲದೆ ಖರೀದಿ ಮಾಡುವ ಅಧಿಕಾರವನ್ನು ಹೊಂದುವುದಿಲ್ಲ. ಅದಕ್ಕಾಗಿ ಅನುಮತಿ ಪತ್ರವನ್ನು ಪಡೆಯುವುದು ಕಡ್ಡಾಯವಾಗಿದೆ. ಆಗ ಮಾತ್ರವೇ ನಾವು ಲ್ಯಾಂಡ್ ಅನ್ನು ಖರೀದಿ ಮಾಡಬಹುದು, ಮಾರಾಟ ಮಾಡಬಹುದು ಅಗ್ರಿಮೆಂಟ್ ಮಾಡಿಕೊಳ್ಳಬಹುದು. ಇಲ್ಲವಾದರೆ ಅದು ಇನ್ ವ್ಯಾಲಿಡ್ ಆಗುತ್ತದೆ ಹೀಗಾಗಿ ಎಸ್ಸಿ ಎಸ್ಟಿ ಅದನ್ನು ಹಿಂದೆ ಪಡೆದುಕೊಳ್ಳಬಹುದು. ಇನ್ನೂ ಎಸ್ಸಿ ಎಸ್ಟಿ ಗೆ ಸೇರಿದ ಹಾಗೂ ಅವರೇ ಖುದ್ದು ತನ್ನ ಸ್ವಂತ ಸಾಮರ್ಥ್ಯದಿಂದ ಆಸ್ತಿಯನ್ನು ಮಾಡಿಕೊಂಡಿದ್ದರೆ, ಅದನ್ನು ಅವರಿಂದ ಖರೀದಿ ಮಾಡುವವರು ಇದ್ದರೆ ಸುಲಭವಾಗಿ ಖರೀದಿ ಮಾಡಬಹುದು.

ಹೌದು ಇಲ್ಲಿ ಯಾವುದೇ ಭಯ ಆತಂಕ ಪಡುವ ಅಗತ್ಯವಿಲ್ಲ ಕಾರಣ ಇದು ಯಾವುದೇ ಸರ್ಕಾರದಿಂದ ಪಡೆದಿರುವ ಆಸ್ತಿ ಅಥವಾ ಭೂಮಿ ಆಗಿರುವುದಿಲ್ಲ. ಇನ್ನೂ ಒಬ್ಬ ಎಸ್ಸಿ ಎಸ್ಟಿ ವ್ಯಕ್ತಿಯು ಇನ್ನೊಬ್ಬ ಎಸ್ಸಿ ಎಸ್ಟಿ ವ್ಯಕ್ತಿಯ ಹತ್ತಿರ ಭೂಮಿಯನ್ನು ಖರೀದಿಸುವ ಬಗ್ಗೆ ಯೋಚನೆ ಮಾಡಿದ್ದರೆ ಇಲ್ಲಿ ಸರ್ಕಾರದಿಂದ ಯೋಜನೆ ಮಾಡಿದ ಮಾನ್ಯತೆಗಳು ಅಡ್ಡಿ ಬರುತ್ತವೆ. ಅದಕ್ಕಾಗಿ ನೀವು ಕಳೆದ ಮೂವತ್ತು ವರ್ಷಗಳ ಈಸಿ ತೆಗೆಯಬೇಕಾಗುತ್ತದೆ. ಅಲ್ಲಿ ನೀವು ಕರ್ನಾಟಕ ಸರ್ಕಾರ ದಿಂಡ ಯಾವುದೇ ಭೂಮಿಯನ್ನು ಪಡೆದಿಲ್ಲ ಎಂದು ದೃಢ ಪಡಿಸಬೇಕು. ಹೀಗೆ ಮಾಡಿದರೆ ಮಾತ್ರ ನೀವು ಒಬ್ಬರಿಂದ ಒಬ್ಬರಿಗೆ ಜಮೀನು ಖರೀದಿ ಮಾಡಬಹುದು. ಆ ವ್ಯಕ್ತಿಯು ತನ್ನ ಸ್ವಂತ ಸಾಮರ್ಥ್ಯದಿಂದ ಮಾತ್ರವೇ ಜಮೀನು ಮಾರಾಟ ಮಾಡುತ್ತಿದ್ದಾರೆ ಅಂತ ದೃಢ ಪಡಿಸಿದ ಮೇಲೆ ನೀವು ಜಮೀನು ಖರೀದಿ ಮಾಡಬಹುದು. ಇನ್ನೂ ಬ್ಯಾಂಕ್ ಮೂಲಕ ಖರೀದಿ ಮಾಡಿರುವ ಎಸ್ಸಿ ಎಸ್ಟಿ ಭೂಮಿಗಳು ವ್ಯಾಲಿಡ್ ಆಗಿರುತ್ತವೆಯೋ ಇಲ್ಲವೋ ಅಂತ ತಿಳಿಯುವುದಾದರೆ, ಪ್ರೋಹಿಬಿಷನ್ ಆಫ್ ಟ್ರಾನ್ಸ್ಫರ್ ಸರ್ಟೇನ್ ಲ್ಯಾಂಡ್ ಆಕ್ಟ್ 1978 ಸೆಕ್ಷನ್ 4 ಅಡಿಯಲ್ಲಿ ಬ್ಯಾಂಕ್ ಗಳಿಗೆ ಕೆಲವು ವಿನಾಯತಿ ನೀಡಲಾಗಿದೆ. ಹಾಗೂ ಅವರು ಭೂಮಿಯನ್ನು ಹರಾಜು ಹಾಕಬಹುದು ಈ ರೀತಿ ಭೂಮಿಯು ವ್ಯಾಲಿಡ್ ಆಗಿರುತ್ತದೆ ಗೆಳೆಯರೇ. ನೀವು ಈ ಮೂಲಕ ಕೂಡ ಸುಲಭವಾಗಿ ಜಮೀನು ಖರೀದಿ ಮಾಡಬಹುದು.

Leave a Reply

Your email address will not be published. Required fields are marked *