ಆರ್, ಟಿ, ಐ ಗೆ ಹೇಗೆ ಸುಲಭವಾಗಿ ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ತಿಳಿಯಿರಿ

ಉಪಯುಕ್ತ ಮಾಹಿತಿ

ನಮಸ್ತೇ ಪ್ರಿಯ ಸ್ನೇಹಿತರೆ, ಸಾರ್ವಜನಿಕ ಕಚೇರಿಗೆ ನೀವು ಮಾಹಿತಿ ಹಕ್ಕು ಕಾಯಿದೆ ಅಡಿ ಅರ್ಜಿಯನ್ನು ಸಲ್ಲಿಸಬಹುದು. ಇಂದಿನ ಲೇಖನದಲ್ಲಿ ನಾವು ನಿಮಗೆ, ಈ ಅರ್ಜಿಯನ್ನು ಹೇಗೆ ಸಲ್ಲಿಸುವುದು ಇದಕ್ಕೆ ಯಾವೆಲ್ಲ ನಿಯಮಗಳು ಬರುತ್ತವೆ ತಿಳಿಸಿ ಕೊಡುತ್ತೇವೆ ಬನ್ನಿ. ರೈಟ್ ಟು ಇನ್ಫರ್ಮೇಷನ್ ಆಕ್ಟ್ ಇದರ ಅಡಿ ನೀವು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಇಲ್ಲವಾದರೆ ನೀವು ಆಫ್ಲೈನ್ ಕೂಡ ಅರ್ಜಿ ಹಾಕಿಕೊಳ್ಳಬಹುದು. ನಾವು ಈ ವಿಧಾನದ ಮೂಲಕ ಹೇಗೆ ಅರ್ಜಿಯನ್ನು ಸಲ್ಲಿಸಬಹುದು ಅಂತ ತಿಳಿಸಿ ಕೊಡುತ್ತೇವೆ ಬನ್ನಿ. ಮೊದಲಿಗೆ ಆನ್ಲೈನ್ ಮುಖಾಂತರ ನೀವು ಅರ್ಜಿಯನ್ನು ಸಲ್ಲಿಸಬೇಕು ಅಂದರೆ ಈ ವೆಬ್ ಪುಟಕ್ಕೆ ಹೋಗಬೇಕು. ಮೊದಲಿಗೆ ಗೂಗಲ್ ಗೆ ಹೋಗಿ ಅಲ್ಲಿ ಆರ್, ಟಿ, ಐ ಕರ್ನಾಟಕ ಅಂತ ನೀವು ಸರ್ಚ್ ಮಾಡಿ. ಅಲ್ಲಿ ನಿಮಗೆ ಒಂದು ವೆಬ್ ಪುಟ ಸಿಗುತ್ತದೆ ಅಲ್ಲಿಗೆ ಹೋಗಿ ನೀವು ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮಗೆ ಲಿಸ್ಟ್ ಆಫ್ ಡಿಪಾರ್ಟ್ಮೆಂಟ್ ಸಿಗುತ್ತದೆ. ಕರ್ನಾಟಕ ಎಲ್ಲ ಡಿಪಾರ್ಟ್ಮೆಂಟ್ ಗಳು ನೀವು ಲಭ್ಯವಾಗುತ್ತದೆ. ಕೆಳಗಡೆ ಒಂದು ವಾಕ್ಯವನ್ನು ಕೊಟ್ಟಿರುತ್ತಾರೆ ಅದನ್ನು ನೀವು ಎಸ್ ಮಾಡಿ ಸಬ್ಮಿಟ್ ಗೆ ಕ್ಲಿಕ್ ಮಾಡಿರಿ. ಆಗ ನಿಮಗೆ ಮುಂದಿನ ಪುಟವೂ ದೊರೆಯುತ್ತದೆ. ಅಲ್ಲಿ ನಿಮ್ಮ ಇಮೇಲ್ ಐಡಿ ಫೋನ್ ನಂಬರ್ ಮತ್ತು ಕ್ಯಾಪಚ್ ಕೊಟ್ಟಿರುತ್ತಾರೆ ಅದನ್ನು ಹಾಕಿ ನೀವು ಎಸ್ ಅಂತ ಕ್ಲಿಕ್ ಮಾಡೀರಿ.

ಇದಾದ ನಂತರ ನಿಮಗೆ ಮುಂದಿನ ಪುಟವು ಆರ್,ಟಿ,ಐ ಆನ್ಲೈನ್ ರಿಕ್ವೆಸ್ಟ್ ಫಾರ್ಮ್ ಲಭ್ಯವಾಗುತ್ತದೆ. ಈ ಫಾರ್ಮ್ ನ ಎಡಭಾಗದಲ್ಲಿ ಪಬ್ಲಿಕ್ ಅಥಾರಿಟಿ ಅಂತ ಇರುತ್ತದೆ. ಅಲ್ಲಿ ನೀವು ಯಾವ ಡಿಪಾರ್ಟ್ಮೇಂಟ್ ಅರ್ಜಿ ಹಾಕಲು ಬಯಸುತ್ತೀರಿ ಅಲ್ಲಿ ನೀವು ಸೆಲೆಕ್ಟ್ ಮಾಡಿ ಹಾಕಿಕೊಳ್ಳಬಹುದು. ಉದಾಹರಣೆಗೆ ಬಳ್ಳಾರಿ ಸಿಟಿ ಕಾರ್ಪೋರೇಶನ್ ಅಂತ ಹಾಕಿಕೋಳ್ಳೋಣ. ನಂತರ ಬಳ್ಳಾರಿ ರೆವೆನ್ಯೂ ಅಂತ ನಿಮಗೆ ಸಿಗುತ್ತದೆ ಅದನ್ನು ಆಯ್ಕೆ ಮಾಡಿಕೊಳ್ಳಿ. ತದ ನಂತರ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನೀಡಬೇಕಾಗುತ್ತದೆ. ಅಂದರೆ ಹೆಸರು, ಅಡ್ರೆಸ್, ಫೋನ್ ನಂಬರ್ ಹಾಗೂ ನಿಮ್ಮ ಈಮೇಲ್ ಐಡಿ ಎಲ್ಲ ಮಾಹಿತಿಯನ್ನು ಒಂದೊಂದಾಗಿ ಹಾಕಿಕೊಳ್ಳುತ್ತಾ ನಿಮ್ಮ ತಾಲೂಕು ಜಿಲ್ಲೆ ಎಲ್ಲವನ್ನು ತುಂಬಬೇಕು. ಅದರ ನಂತರ ಕೆಳಗಡೆ, ಟೆಸ್ಟ್ ಆಫ್ ಆರ್ ,ಟಿ,ಐ ರಿಕ್ವೆಸ್ಟ್ ಅಪ್ಲಿಕೇಶನ್ ಅಂತ ಆಪ್ಷನ್ ಇರುತ್ತದೆ ಗೆಳೆಯರೇ, ಅಲ್ಲಿ ನೀವು ಬೇಕಾದ ಮಾಹಿತಿಯನ್ನು ಟೈಪ್ ಮಾಡಿ ಹಾಕಿಕೊಳ್ಳಬಹುದು. ಈ ಮಾಹಿತಿಯನ್ನು ನೀವು ಒಂದು ಎಮ್.ಬಿ. ಯಲ್ಲಿ ಸೆಲೆಕ್ಟ್ ಮಾಡಿಕೊಂಡು ಸ್ಕ್ಯಾನ್ ಮಾಡಿ ಇಟ್ಟುಕೊಳ್ಳಬೇಕು. ನಂತರ ಸಬಮಿಟ್ ಕೊಡಬೇಕು. ಇದಾದ ಬಳಿಕ ನಿಮಗೆ ಅದು ಪೇಮೆಂಟ್ ಅನ್ನು ಕೇಳುತ್ತದೆ.

ತುಂಬಾ ಪೇಜ್ ಗಳು ಇದ್ದರೆ ಒಂದು ಪೇಜ್ ಗೆ ಎರಡು ರೂಪಾಯಿ ಆಗುತ್ತದೆ ಅದನ್ನು ಪೇಮೆಂಟ್ ಮಾಡಿ ನೀವು ಅರ್ಜಿಯ ಮಾಹಿತಿಯನ್ನು ಪಡೆದುಕೊಳ್ಳಬಹುದು. ಈ ರೀತಿಯಾಗಿ ಆನ್ಲೈನ್ ಮೂಲಕ ನೀವು ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿಯನ್ನು ಸಲ್ಲಿಸಬಹುದು. ನಿಮಗೆ ಆನ್ಲೈನ್ ಮೂಲಕ ಹಾಕಲು ಕಷ್ಟವಾಗುತ್ತಿದ್ದರೆ, ಮಾಹಿತಿ ಪಡೆಯುವ ಹಕ್ಕು 2005 ಅಡಿಯಲ್ಲಿ ಮಾಹಿತಿಗಾಗಿ ಅರ್ಜಿ ಸಲ್ಲಿಸುವಿಕೆ ಅಂತ ಪತ್ರ ಸಿಗುತ್ತದೆ. ಅದು ನಿಮಗೆ ಡೌನ್ಲೋಡ್ ಮಾಡಿಕೊಳ್ಳಲು ಆಗದೇ ಇದ್ದರೆ ನೀವು ಹ್ಯಾಂಡ್ ರೈಟಿಂಗ್ ಹೇಗೆ ಇದೆಯೋ ಹಾಗೆ ಬರೆಯಬೇಕು. ಅದರಲ್ಲಿ ಕೇಳಿರುವ ಎಲ್ಲ ಮಾಹಿತಿಯನ್ನು ಸರಿಯಾಗಿ ತುಂಬಿ ಇದಕ್ಕೆ ಹತ್ತು ರೂಪಾಯಿ ಚಾರ್ಜ್ ಕಟ್ಟುತ್ತಾರೆ ಅದನ್ನು ಕಟ್ಟಿ ಪೋಸ್ಟಲ್ ಆರ್ಡರ್ ಮಾಡಿ ನೀವು ಇದನ್ನು ಸಲ್ಲಿಸಬೇಕು. ನೀವು ಬಿಪಿಎಲ್ ಕಾರ್ಡ್ ಹೊಂದಿದ್ದರೆ, ಹತ್ತು ರೂಪಾಯಿ ಕೂಡ ಕಟ್ಟುವ ಅವಶ್ಯಕತೆ ಇರುವುದಿಲ್ಲ. ಕೊನೆಗೆ ಸಹಿ ಮಾಡಿ ನಿಮ್ಮ ಸಂಪೂರ್ಣವಾದ ಮಾಹಿತಿಯೊಂದಿಗೆ ನೀವು ಅರ್ಜಿ ಸಲ್ಲಿಸಿ ನೀವು ಮಾಹಿತಿಯನ್ನು ಪಡೆದುಕೊಳ್ಳಬಹುದು. ಶುಭದಿನ.

Leave a Reply

Your email address will not be published. Required fields are marked *