ಯಾವುದೇ ರೀತಿಯಾದ ಕೆಲಸ ಮಾಡದೇ ನಿಶಕ್ತಿ ಹಾಗು ಸುಸ್ತು ಆಗುತಿದ್ದರೆ ಇದನ್ನು ಕುಡಿದರೆ ಸಾಕು ಎಲ್ಲಿಲ್ಲದ ಶಕ್ತಿ ಬರುತ್ತದೆ

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ದುಡಿಮೆ ಮಾಡಿ ಸಾಕಷ್ಟು ಹಣವನ್ನು ಮಾಡಿಕೊಂಡು ಐಷಾರಾಮಿ ಜೀವನವನ್ನು ನಡೆಸಬೇಕು ಅಂತ ಈಗಿನ ಆಧುನಿಕ ಕಾಲದ ಯುವಜನತೆ ತುದಿಗಾಲಿನಲ್ಲಿ ನಿಂತಿದೆ. ಹೌದು ಆದರೆ ಈ ಮಾತು ಕೂಡ ಅಷ್ಟೇ ನಿಜವಾಗಿದೆ. ನಾವು ಎಷ್ಟೇ ದುಡಿದರು ಕೂಡ ಆರೋಗ್ಯವನ್ನು ಖರೀದಿಸಲು ಸಾಧ್ಯವಿಲ್ಲ ಅನ್ನುವುದು ನಿಜವಿದೆ. ಆದ್ದರಿಂದ ಅನಾರೋಗ್ಯ ಶುರು ಹತ್ತುವ ಮೊದಲು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಮನುಷ್ಯನ ಆರೋಗ್ಯವನ್ನು ಕಾಪಾಡಿಕೊಳ್ಳಲು ಅನೇಕ ರೀತಿಯ ಆಹಾರ ಪದಾರ್ಥಗಳು ತರಕಾರಿಗಳು ಇವೆ. ಅದರಲ್ಲಿ ಪ್ರಕೃತಿ ನೀಡಿರುವ ಕೊಡುಗೆಗಳಲ್ಲಿ, ಹಾಲು ಕೂಡ ಒಂದಾಗಿದೆ. ಬೇರೆ ಯಾವುದೇ ಪದಾರ್ಥಗಳಲ್ಲಿ ದೊರೆಯದ ಪೌಷ್ಟಿಕಾಂಶಗಳು ಇದರಲ್ಲಿ ಅಡಗಿದೆ. ಅದರಲ್ಲೂ ಬಾದಾಮಿ ಹಾಲು ಆರೋಗ್ಯಕ್ಕೆ ತುಂಬಾನೇ ಉತ್ತಮ. ಆದರೆ ಬಾದಾಮಿ ಹಾಲಿನಲ್ಲಿ ಸಕ್ಕರೆ ಹಾಕಿ ಕುಡಿಯುವ ಬದಲು ಜೇನುತುಪ್ಪವನ್ನು ಹಾಕಿ ಕುಡಿದರೆ ಆರೋಗ್ಯವು ದುಪ್ಪಟ್ಟು ಆಗುತ್ತದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಜೇನುತುಪ್ಪವನ್ನು ಬಾದಾಮಿ ಹಾಲಿನಲ್ಲಿ ಹಾಕಿ ಕುಡಿದರೆ ಯಾವ ರೀತಿಯ ಲಾಭಗಳು ಆಗುತ್ತವೆ ಅಂತ ತಿಳಿಸಿ ಕೊಡುತ್ತೇವೆ.

ಹೌದು ಇದು ದೇಹದ ಕಾರ್ಯ ಕ್ಷಮತೆಯನ್ನು ಹೆಚ್ಚಿಸುತ್ತದೆ. ಹಾಗೂ ಪ್ರತಿ ರಕ್ಷಣಾ ವ್ಯವಸ್ಥೆಯನ್ನೂ ಅಭಿವೃದ್ಧಿ ಮಾಡುತ್ತದೆ. ಪ್ರತಿ ರಕ್ಷಣಾ ವ್ಯವಸ್ಥೆ ಸರಿಯಾಗಿ ಇದ್ದರೆ ಪ್ರತಿಜನಕಗಳು ದೇಹದ ಮೇಲೆ ದಾಳಿ ಮಾಡುವುದಿಲ್ಲ. ಈಗಿನ ಆಧುನಿಕ ಆಹಾರ ಶೈಲಿಯಿಂದ ಮೂವತ್ತು ವಯಸ್ಸು ದಾಟಿರುವುದಿಲ್ಲ ಆಗಲೇ ಕಾಯಿಲೆಗಳು ಬಂದು ಸೇರುತ್ತವೆ ಆದರೆ ಮೊದಲಿನ ಕಾಲದ ಹಿರಿಯರು ತುಂಬಾನೇ ಗಟ್ಟಿ ಮುಟ್ಟಾಗಿ ಇರುತ್ತಿದ್ದರು. ಕಾರಣ ಅವರು ಸೇವನೆ ಮಾಡುವ ಆಹಾರವು ಪೌಷ್ಟಿಕಾಂಶದಿಂದ ಕೊಡಿರುತಿತ್ತು. ಆದರೆ ಈಗಿನ ಆಹಾರ ಪದ್ಧತಿಯಲ್ಲಿ ಹಲವಾರು ಬದಲಾವಣೆಗಳು ಅನಾರೋಗ್ಯಕ್ಕೆ ಕಾರಣವಾಗಿದೆ. ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಸಿಗದೆ ಇದ್ದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತಗೊಳ್ಳುತ್ತದೆ. ಇದರಿಂದ ಕಾಯಿಲೆಗಳು ಬರಲು ಶುರು ಆಗುತ್ತದೆ. ಅದಕ್ಕಾಗಿ ರೋಗಗಳನ್ನು ಬರದಂತೆ ತಡೆಗಟ್ಟಲು ನಿತ್ಯವೂ ಬಾದಾಮಿ ಹಾಲನ್ನು ಕುಡಿಯಬೇಕು. ಬಾದಾಮಿ ಹಾಲು ಮತ್ತು ಜೇನುತುಪ್ಪವನ್ನು ಮಿಕ್ಸ್ ಮಾಡಿ ಕುಡಿದರೆ ಬಹು ದೊಡ್ಡ ಲಾಭವಿದೆ. ಬಾದಾಮಿ ಹಾಲು ಮತ್ತು ಜೇನುತುಪ್ಪವನ್ನು ಕುಡಿಯುವುದರಿಂದ ಶೀತ ನೆಗಡಿ ಕೆಮ್ಮು ಮಾಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕಾಡುವ ಸಮಸ್ಯೆ ಅಂದರೆ ಅದು ನಿದ್ರಾಹೀನತೆ ಸಮಸ್ಯೆ.

ಹೌದು ರಾತ್ರಿ ಹೊತ್ತು ತುಂಬಾ ಸಮಯದವರೆಗೆ ನಿದ್ರೆ ಬರದೆ ಇದ್ದರೆ ಒಂದು ಲೋಟ ಬಾದಾಮಿ ಹಾಲಿಗೆ ಒಂದು ಚಮಚ ಜೇನು ತುಪ್ಪವನ್ನು ಹಾಕಿ ಕುಡಿಯಿರಿ ಇದರಿಂದ ನಿದ್ರೆ ತುಂಬಾ ಚೆನ್ನಾಗಿ ಬರುತ್ತದೆ. ಮತ್ತು ನೀವು ಬೇಗನೆ ನಿದ್ರೆಗೆ ಜಾರುತ್ತೀರಿ. ಇನ್ನು ಯಾರಿಗೆ ತುಂಬಾನೇ ನಿಶ್ಯಕ್ತಿ ಇರುತ್ತದೆ. ಯಾವುದೇ ಕೆಲಸವನ್ನು ಕೂಡ ಮಾಡಲು ಕೂಡ ಮನಸ್ಸಾಗುವುದಿಲ್ಲ. ಅಂಥವರು ಒಂದು ಲೋಟ ಬಾದಾಮಿ ಹಾಲಿನಲ್ಲಿ ಜೇನುತುಪ್ಪವನ್ನು ಹಾಕಿ ಕುಡಿಯಬೇಕು ಇದರಿಂದ ನಿಮ್ಮಲ್ಲಿ ಕಾಡುವ ನಿಶ್ಯಕ್ತಿ ದೂರವಾಗುತ್ತದೆ ಹಾಗೂ ನೀವು ತುಂಬಾನೇ ಜಾಗ್ರತೆಯಿಂದ ಇರುತ್ತೀರಿ. ಬಾದಾಮಿ ಮತ್ತು ಜೇನುತುಪ್ಪದಲ್ಲಿ ಇರುವ ಅಂಶಗಳು ಹೃದಯದ ಆರೋಗ್ಯವನ್ನು ಕೂಡ ಚೆನ್ನಾಗಿ ಕಾಪಾಡುತ್ತದೆ. ಮತ್ತು ಹೃದಯಕ್ಕೆ ರಕ್ತ ಸಂಚಾರವನ್ನು ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ ಈ ಎರಡು ಪದಾರ್ಥಗಳು. ಈ ಹಾಲಿನಲ್ಲಿ ಇರುವ ವಿಟಮಿನ್ ಬಿ ಅಂಶವು ದೇಹದ ಸ್ನಾಯುಗಳನ್ನು ಬಲ ಪಡಿಸುತ್ತದೆ ಹಾಗೂ ಇದರಲ್ಲಿ ಇರುವ ವಿಟಮಿನ್ ಇ ಅಂಶವು ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ಆದರೆ ಇಲ್ಲಿ ನೆನಪಿಡಬೇಕಾದ ಅಂಶವೇನೆಂದರೆ ಬಾದಾಮಿ ಪೌಡರ್ ಅನ್ನು ಖರೀದಿ ಮಾಡುವಾಗ ಶುಗರ್ ಕಂಟೆಂಟ್ ಇಲ್ಲದೆ ಇರುವುದನ್ನು ನೋಡಿ ಖರೀದಿಸಿ. ಬಾದಾಮಿ ಹಾಲು ಮತ್ತು ಜೇನುತುಪ್ಪ ಮಿಕ್ಸ್ ಮಾಡಿ ಕುಡಿಯುವುದರಿಂದ ಹಲವಾರು ಲಾಭಗಳಿವೆ. ಶುಭದಿನ.

Leave a Reply

Your email address will not be published. Required fields are marked *