ನಮಸ್ತೇ ಪ್ರಿಯ ಓದುಗರೇ, ಸಕ್ಕರೆ ಕಾಯಿಲೆ ಅನ್ನುವುದು ಮೊದಲಿನ ಕಾಲದಲ್ಲಿ ಕೇವಲ ಶ್ರೀಮಂತರಿಗೆ ಮಾತ್ರ ಬರುತ್ತಿತ್ತು. ಅದರೆ ಈಗಿನ ಕಾಲದಲ್ಲಿ ಒಬ್ಬರಿಗೆ ಸಕ್ಕರೆ ಕಾಯಿಲೆ ಬಂದರೆ ಮನೆಯ ಜನರನೆಲ್ಲ ಆವರಿಸುತ್ತದೆ. ಸಕ್ಕರೆ ಕಾಯಿಲೆ ಒಂದು ಬಾರಿ ಬಂದು ದೇಹವನ್ನು ಸೇರಿಕೊಂಡರೆ ಅದನ್ನ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಹೀಗಾಗಿ ನಾವು ತಿನ್ನುವ ಆಹಾರ ಪದಾರ್ಥಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕಾಗುತ್ತದೆ ನಮಗೆ ಇಷ್ಟವಾದ ಯಾವುದೇ ಸಿಹಿ ಪದಾರ್ಥಗಳನ್ನು ತಿನ್ನಲು ಕೂಡ ಕಷ್ಟವಾಗುತ್ತದೆ. ಹಾಗೂ ವೈದ್ಯರು ನೀಡುವ ಚಿಕಿತ್ಸೆಯಲ್ಲಿಯೇ ಬದುಕುಳಿಯಬೇಕಾಗುತ್ತದೆ. ವಿವಿಧ ರೀತಿಯ ವೈದ್ಯರಲ್ಲಿ ವಿವಿಧ ಚಿಕಿತ್ಸೆ ಮಾತ್ರೆಗಳು ಔಷಧಗಳು ಸಿಗುತ್ತವೆ. ಆದರೆ ಈ ಇಂಗ್ಲಿಷ್ ಮೆಡಿಸಿನ್ ಗಳು ತುಂಬಾನೇ ದುಬಾರಿಯಾಗಿರುತ್ತವೆ ಅಷ್ಟೇ ಅಲ್ಲದೆ ಇವುಗಳನ್ನು ಕೊಂಡುಕೊಳ್ಳಲು ಎಲ್ಲರಿಗೂ ಆಗುವುದಿಲ್ಲ ಹೀಗಾಗಿ ಮನೆಯಲ್ಲಿ ಸಿಗುವ ಆಹಾರ ಪದಾರ್ಥಗಳನ್ನು ಬಳಕೆ ಮಾಡಿಕೊಂಡು ಸಕ್ಕರೆ ಕಾಯಿಲೆ ದೂರ ತಳ್ಳಬಹುದು. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಮನೆಯಲ್ಲಿ ಸಿಗುವ ಆಹಾರ ಪದಾರ್ಥಗಕನ್ನು ಬಳಕೆ ಮಾಡಿಕೊಂಡು ಯಾವ ರೀತಿಯಾಗಿ ಮಧುಮೇಹವನ್ನು ನಿಯಂತ್ರಣದಲ್ಲಿ ಇಡಬೇಕು ಅಂತ ತಿಳಿಸಿ ಕೊಡುತ್ತೇವೆ ಬನ್ನಿ.
ಮೊದಲಿಗೆ ಸಕ್ಕರೆ ಕಾಯಿಲೆಯನ್ನು ಹೋಗಲಾಡಿಸಲು ಈ ಮನೆಮದ್ದು ತಯಾರಿಸಲುಬೇಕಾಗುವ ಸಾಮಗ್ರಿಗಳು ಅಂದರೆ ಮೆಂತ್ಯೆ ಕಾಳುಗಳು, ಜೀರಿಗೆ ಮತ್ತು ಬಿಸಿಲಿನಲ್ಲಿ ಒಣಗಿಸಿದ ಕರಿಬೇವು ಸೊಪ್ಪು ಬೇಕಾಗುತ್ತದೆ. ಇದನ್ನು ಹೇಗೆ ತಯಾರಿಸಬೇಕು ಅಂತ ಹೇಳುವುದಾದರೆ, ಮೊದಲಿಗೆ ಒಂದು ಪಾತ್ರೆಯನ್ನು ಬಿಸಿ ಮಾಡಿಕೊಂಡು ಅದರಲ್ಲಿ ಮೆಂತ್ಯೆ ಕಾಳು ಚೆನ್ನಾಗಿ ಹುರಿದುಕೊಳ್ಳಿ. ಹೌದು ಮೆಂತ್ಯೆ ಕಾಳು ತಿನ್ನಲೂ ರುಚಿಯಲ್ಲಿ ಕಹಿಯಾಗಿ ಇರುವ ಕಾರಣ ಇದನ್ನು ತುಂಬಾನೇ ಜನರ ಅಲಕ್ಷ್ಯ ಮಾಡುತ್ತಾರೆ. ಆದರೆ ಈ ಮೆಂತ್ಯೆ ಕಾಳು ಸಕ್ಕರೆ ಕಾಯಿಲೆ ಇದ್ದವರಿಗೆ ತುಂಬಾನೇ ಒಳ್ಳೆಯದು ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಇದು ಮಧುಮೇಹಿಗಳಿಗೆ ರಾಮಬಾಣ ಇದ್ದಂತೆ, ಅಷ್ಟೇ ಅಲ್ಲದೇ ಮುಂದೆ ಸಕ್ಕರೆ ಕಾಯಿಲೆ ಬರದಂತೆ ತಡೆಯುತ್ತದೆ. ಇನ್ಸುಲಿನ್ ಹೀರುವಿಕೆಯನ್ನು ಇದರಲ್ಲಿ ಇರುವ ಗ್ಲುಕೋಜನ್ ಎಂಬ ನಾರಿನ ಅಂಶವು ರಕ್ತದಿಂದ ತಗ್ಗಿಸುತ್ತದೆ. ಇದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಇದರಲ್ಲಿ ನಾರಿನ ಅಂಶ ಇರುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಕೂಡ ಸರಿಯಾಗಿಸುತ್ತದ್ದೆ. ಇನ್ನೂ ಎರಡನೆಯ ಸಾಮಗ್ರಿ ಯಾವುದು ಅಂದರೆ ಅದುವೇ ಜೀರಿಗೆ, ಹೌದು ನೀವು ಎಷ್ಟು ಪ್ರಮಾಣದಲ್ಲಿ ಮೆಂತ್ಯೆ ಕಾಳುಗಳನ್ನು ತೆಗೆದು ಕೊಂಡಿದ್ದೀರಿ ಅಷ್ಟೇ ಪ್ರಮಾಣದಷ್ಟು ಜೀರಿಗೆಯನ್ನು ತೆಗೆದುಕೊಳ್ಳಬೇಕು.
ಜೀರಿಗೆ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಜೀರ್ಣಾಂಗ ವ್ಯವಸ್ಥೆಯನ್ನು ಕೂಡ ಅಭಿವೃದ್ಧಿ ಪಡಿಸುತ್ತದೆ. ಇದರಲ್ಲಿ ವಿಟಮಿನ್ ಎ ಮತ್ತು ವಿಟಾಮಿನ್ ಇ ಸೋಂಕುಗಳ ವಿರುದ್ಧ ಹೋರಾಡುತ್ತದೆ ಜೊತೆಗೆ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಜೀರಿಗೆಯನ್ನು ಚೆನ್ನಾಗಿ ಹುರಿದುಕೊಳ್ಳಿ. ನಂತರ ಒಂದು ಮಿಕ್ಸಿ ಜಾರಿಗೆ ಹಾಕಿ ಎರಡು ಬೇರೆ ಬೇರೆಯಾಗಿ ಮಿಶ್ರಣ ಮಾಡದೇ ಸೆಪರೇಟ್ ಆಗಿ ಪುಡಿ ಮಾಡಿಕೊಳ್ಳಿ. ಇನ್ನು ಕೊನೆಯದಾಗಿ ಕರಿಬೇವು ಎಲೆಗಳು. ಇವುಗಳನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಬೇಕು. ಮುಟ್ಟಿದರೆ ಪುಡಿಯಾಗುವಷ್ಟು ಒಣಗಿಸಬೇಕು. ಇದನ್ನು ಕೂಡ ಪುಡಿ ಮಾಡಿಕೊಳ್ಳಿ. ನಂತರ ಮೂರು ಸಾಮಗ್ರಿಗಳ ಪುಡಿಯನ್ನು ಚೆನ್ನಾಗಿ ಶೋಧಿಸಿಕೊಳ್ಳಿ. ನಂತರ ಮತ್ತೆ ಈ ಮೂರು ಪುಡಿಗಳನ್ನು ಮಿಕ್ಸ್ ಮಾಡಿ ಮತ್ತೆ ರುಬ್ಬಿಕೊಳ್ಳಿ. ಇದರಿಂದ ಮೂರು ಪದಾರ್ಥಗಳು ಚೆನ್ನಾಗಿ ಮಿಕ್ಸ್ ಆಗುತ್ತವೆ. ಇನ್ನೂ ಇದನ್ನು ಸೇವಿಸುವ ವಿಧಾನವನ್ನು ನೋಡುವುದಾದರೆ ಒಂದು ಚಮಚ ಈ ಪುಡಿಯನ್ನು ತೆಗೆದುಕೊಂಡು ಒಂದು ಲೋಟ ಬಿಸಿ ನೀರಿಗೆ ಹಾಕಿ ಬೆಳಿಗ್ಗೆ ಎದ್ದು ತಕ್ಷಣ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇನ್ನೂ ಸಕ್ಕರೆ ಕಾಯಿಲೆ ಜಾಸ್ತಿ ಇದ್ದವರು ನಿತ್ಯವೂ ಕುಡಿದರೆ ಇನ್ನಷ್ಟು ಉತ್ತಮ.