ನಮಸ್ತೇ ಪ್ರಿಯ ಓದುಗರೇ, ಪೇರಳೆ ಹಣ್ಣು ಮತ್ತು ಸೇಬು ಹಣ್ಣುಗಳು ಯಾರಿಗೆ ತಾನೇ ಗೊತ್ತಿಲ್ಲ. ಈ ಎರಡು ಹಣ್ಣುಗಳು ನಮಗೆ ಸುಲಭವಾಗಿ ಮಾರುಕಟ್ಟೆಯಲ್ಲಿ ಸಿಗುತ್ತವೆ. ಅಷ್ಟೇ ಅಲ್ಲದೇ ನಮ್ಮ ಬಾಲ್ಯದ ನೆನಪುಗಳನ್ನು ಕೂಡ ಈ ಹಣ್ಣನ್ನು ನೋಡಿದರೆ ಮೆಲಕು ಹಾಕಬಹುದು. ಹೌದು ಚಿಕ್ಕ ವಯಸ್ಸಿನಲ್ಲಿ ಅಂದರೆ ಶಾಲೆಗೆ ಹೋಗುವಾಗ ಶಾಲೆಗಳ ಎದುರಿಗೆ ಈ ಹಣ್ಣುಗಳು ಬರುತ್ತಿದ್ದವೂ ಇದಕ್ಕೆ ಉಪ್ಪು ಖಾರವನ್ನು ಹಾಕಿ ಕೊಡುತ್ತಿದ್ದರು. ಹೌದು ಇದನ್ನು ತಿಂದರೆ ಎಲ್ಲಿಲ್ಲದ ಆನಂದ ಬಾಲ್ಯದಲ್ಲಿ ಹೌದಲ್ವಾ ಗೆಳೆಯರೇ. ಈ ಹಣ್ಣಿನ ಬೆಲೆ ಇತ್ತೀಚಿಗೆ ಸ್ವಲ್ಪ ಜಾಸ್ತಿಯಾಗಿದೆ. ಈ ಹಣ್ಣಿನ ಗಿಡ ಸಿಕ್ಕರೆ ನಿಮ್ಮ ಮನೆಯ ಎದುರುಗಡೆಗೆ ಹಚ್ಚಿ. ಏಕೆಂದರೆ ಇದನ್ನು ಸುರಕ್ಷತೆ ಮಾಡುವ ಹಾಗೂ ಮೆಂಟೈನ್ ಮಾಡುವ ಅಷ್ಟೊಂದು ಅವಶ್ಯಕವಿಲ್ಲ. ಹಾಗೂ ಈ ಗಿಡವು ತುಂಬಾನೇ ಬೇಗನೆ, ಬೆಳೆಯುತ್ತದೆ. ಮತ್ತು ಇದರ ಪ್ರತಿಯೊಂದು ಭಾಗವಾದ ಹೂವು ಹಣ್ಣು ಕಾಯಿ ಎಲೆ ಎಲ್ಲವೂ ತುಂಬಾನೇ ಉಪಯುಕ್ತವಾಗಿದೆ. ಅಷ್ಟೊಂದು ಔಷಧೀಯ ಗುಣಗಳನ್ನು ಹೊಂದಿದೆ. ಮೂರ್ನಾಲ್ಕು ಸೇಬು ಹಣ್ಣಿನ ಸೇವನೆಯು ಒಂದು ಪೇರಳೆ ಹಣ್ಣಿಗೆ ಸಮ ಅಂತ ಹೇಳಿದರೆ ತಪ್ಪಾಗಲಾರದು. ಸೇಬಿಗಿಂತಲೂ ಇದು ಅಧಿಕವಾದ ಪೋಷಕಾಂಶಗಳನ್ನು ಮತ್ತು ಪೌಷ್ಟಿಕತೆಯನ್ನು ಹೊಂದಿರುವ ಕಾರಣ ಇದರ ಬೆಲೆಯು ಕೊಂಚ ಹೆಚ್ಚಾಗಿದೆ.
ಒಂದು ಕಾಲದಲ್ಲಿ ತುಂಬಾನೇ ಕಡಿಮೆ ಬೆಲೆಗೆ ಸಿಗುವ ಸೀಬೆ ಕಾಯಿ ಬೆಲೆ ಏರಿಕೆ ಆಗಲು ಇದೆ ಕಾರಣ. ಹಿತ್ತಲಿನಲ್ಲಿ ಬೆಳೆಯುವ ಈ ಸೀಬೆ ಹಣ್ಣು ಪೋಷಕಾಂಶಗಳ ಖನಿಜವಾಗಿದೆ. ಆದ್ದರಿಂದ ಇದು ಆರೋಗ್ಯಕ್ಕೆ ಇದು ಒಂದು ವರವಾಗಿದೆ. ಇದರಲ್ಲಿ ಅನೇಕವಾದ ಔಷಧೀಯ ಗುಣಗಳನ್ನು ಹೊಂದಿದೆ. ಹೀಗಾಗಿ ಇದು ಹಲವಾರು ರೋಗಗಳು ಬರದಂತೆ ನೋಡಿಕೊಳ್ಳುತ್ತದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಸೀಬೆ ಕಾಯಿ ತಿನ್ನುವುದರಿಂದ ಯಾವೆಲ್ಲ ರೋಗ ರುಜಿನಗಳಿಂದ ದೂರ ಮಾಡಿಕೊಳ್ಳಬಹುದು ಅಂತ ತಿಳಿಯೋಣ. ಸೀಬೆ ಹಣ್ಣು ಔಷಧೀಯ ಗುಣಗಳನ್ನು ಹೊಂದಿರುವ ಒಂದು ಅದ್ಭುತವಾದ ಸೂಪರ್ ಫ್ರೂಟ್ ಆಗಿದೆ. ಇದರ ಪ್ರತಿಯೊಂದು ಹಣ್ಣು ಬೀಜ ಎಲೆ ಕಾಯಿ ಎಲ್ಲವನ್ನು ತಿನ್ನಬಹುದು. ನಿತ್ಯವೂ ಸೀಬೆ ಹಣ್ಣು ತಿನ್ನುವುದರಿಂದ ಹಲವಾರು ರೋಗಗಳಿಂದ ದೂರವಿರಬಹುದು. ಹಾಗೂ ಪೇರಲೇ ಹಣ್ಣಿನ ಗಿಡದ ಎಲೆಗಳನ್ನು ಕೂಡ ಮನೆಮದ್ದು ಆಗಿ ಬಳಕೆ ಮಾಡಬಹುದು. ಈ ಹಣ್ಣಿನಲ್ಲಿ ಬೀಟಾ ಕೆರೋಟಿನ್ ಎಂಬ ಅಂಶವು ಸಕ್ಕರೆ ಕಾಯಿಲೆಗೆ ಇದು ರಾಮಬಾಣ ವಿದ್ದಂತೆ.
ಹಾಗೂ ಮರುವಿನ ಕಾಯಿಲೆಯನ್ನು ದೂರ ಮಾಡುತ್ತದೆ ಹಾಗೂ ಸಂಧಿವಾತ ಯಾವುದೇ ಸಮಸ್ಯೆಗಳಿದ್ದರೂ ಕೂಡ ದೂರ ಮಾಡುತ್ತದೆ.
ಈ ಪೇರಲೇ ಹಣ್ಣು. ಈ ಹಣ್ಣಿನಲ್ಲಿ ನಾರಿನಂಶ ಇರುವುದರಿಂದ ಉತ್ತಮವಾದ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಹೌದು ನಾರಿನ ಅಂಶವು ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ಇದ್ದರೆ ಮಲಬದ್ಧತೆ ಸಮಸ್ಯೆ ಕೂಡ ಬರುವುದಿಲ್ಲ. ರಾತ್ರಿ ಮಲಗುವ ವೇಳೆಗೆ ನೀವು ಒಂದು ಪೂರ್ತಿಯಾದ ಪೇರಳೆ ಹಣ್ಣು ತಿನ್ನುವುದರಿಂದ ಬೆಳಿಗ್ಗೆ ಎದ್ದು ತಕ್ಷಣವೇ ಮಲಮೂತ್ರ ವಿಸರ್ಜನೆ ಆಗುತ್ತದೆ. ಮಲಬದ್ಧತೆ ಸಮಸ್ಯೆಯಿಂದ ಪರಾದರೆ 140 ಬಗೆಯ ರೋಗಗಳಿಂದ ದೂರವಿರಬಹುದು. ಆದ್ದರಿಂದ ಪೇರಲೆ ಹಣ್ಣು ತಿನ್ನಿರಿ. ಸೀಬೆ ಹಣ್ಣು ಮತ್ತು ಇದರ ಎಲೆಗಳ ರಸವು ಸೂಕ್ಷ್ಮಾಣು ಜೀವಿಗಳ ಜೊತೆಗೆ ಹೋರಾಡುತ್ತದೆ. ಈ ಹಣ್ಣು ಸೇವನೆ ಮಾಡುವುದರಿಂದ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿರುವ ಅಂಶಗಳು ಕಣ್ಣಿನ ಸುತ್ತಲೂ ಪೊರೆ ಆಗದಂತೆ ನೋಡಿಕೊಳ್ಳುತ್ತದೆ. ಅಷ್ಟೇ ಅಲ್ಲದೇ ಇದು ಮೊಡವೆಗಳನ್ನು ಕೂಡ ಮಾಯ ಮಾಡಲು ಸಹಾಯ ಮಾಡುತ್ತದೆ. ಈ ಸೀಬೆ ಗಿಡದ ಎಲೆಗಳನ್ನು ಚೆನ್ನಾಗಿ ರುಬ್ಬಿ ಮೊಡವೆಗಳು ಇರುವ ಜಾಗದಲ್ಲಿ ಹಚ್ಚಿಕೊಳ್ಳಿ. ಇದರಿಂದ ಮೊಡವೆಗಳು ಮಂಗಮಾಯವಾಗುತ್ತವೆ. ಹಾಗೂ ಅಲ್ಸರ್ ಸಮಸ್ಯೆ ಇದ್ದರೆ ಇದರ ಪೇಸ್ಟ್ ಮಾಡಿ ಹಚ್ಚಿಕೊಳ್ಳಿ. ಇದರಿಂದ ಹುಣ್ಣುಗಳು ನಿವಾರಣೆ ಆಗುತ್ತದೆ. ಈ ಹಣ್ಣಿಲ್ಲಿರುವ ಪೊಟ್ಯಾಶಿಯಂ ಮತ್ತು ಸೋಡಿಯಮ್ ಅಂಶವು ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿ ಆಗಿದೆ. ನಿಯಮಿತವಾಗಿ ಪೇರಳೆ ಹಣ್ಣು ತಿನ್ನುವುದರಿಂದ ತ್ವಚೆಯ ಎಲ್ಲ ಸಮಸ್ಯೆಗಳು ದೂರವಾಗುತ್ತದೆ. ಈ ಸೀಬೆ ಹಣ್ಣಿನ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ ಶುಭದಿನ.