ನಮಸ್ತೇ ಪ್ರಿಯ ಓದುಗರೇ, ನಾವು ಸುಂದರವಾಗಿ ಕಾಣಲು ಹಲವಾರು ಬಗೆಯ ಸೌಂದರ್ಯ ವರ್ಧಕಗಳನ್ನು ಬಳಕೆ ಮಾಡುತ್ತೇವೆ. ಹಾಗೂ ದೇಹದ ಸುರಕ್ಷತೆಗೆ ನಿತ್ಯವೂ ಸ್ನಾನವನ್ನು ಮಾಡುತ್ತೇವೆ ಅಲ್ವಾ ಗೆಳೆಯರೇ, ನಿತ್ಯದ ಜೀವನಕ್ಕೆ ನೀರು ಕುಡಿಯುವುದು ತುಂಬಾನೇ ಅಗತ್ಯವಾಗಿರುತ್ತದೆ. ಅದೇ ನೀರಿನ ಪ್ರಮಾಣವು ದೇಹದಲ್ಲಿ ಕಡಿಮೆ ಆದರೆ ಮತ್ತು ದೇಹದ ಕೆಲವು ಅಂಗಗಳು ಅಂದರೆ ಗುಪ್ತಾಂಗಗಳು ಸ್ವಚ್ಛವಾಗಿಲ್ಲದಿದ್ದರೆ ಇಂತಹ ಸಮಸ್ಯೆಗಳು ಕಾಡುವುದು ಸರ್ವೇ ಸಾಮಾನ್ಯ. ಮೂತ್ರದಲ್ಲಿ ಸೋಂಕು ಆದಾಗ ಸಹಿಸಲಾರದಷ್ಟು ನೋವು ಆಗುತ್ತದೆ. ಪದೇ ಪದೇ ಮೂತ್ರ ವಿಸರ್ಜನೆ ಆಗುತ್ತದೆ. ಹಾಗೆಯೇ ಇದಕ್ಕೆ ಪದೇ ಪದೇ ಹೋಗಲು ಕೂಡ ಬಲು ಕಷ್ಟವಾಗುತ್ತದೆ. ಮತ್ತು ಸುಮಾರು ಬಾರಿ ಮೂತ್ರ ವಿಸರ್ಜನೆಗೆ ಹೋದರು ಕೂಡ ಕಿರಿ ಕಿರಿ ಅನ್ನಿಸುತ್ತದೆ. ಈ ಸಮಸ್ಯೆಯಿಂದ ಯಾವಾಗ ಮುಕ್ತಿಯನ್ನು ಪಡೆಯುತ್ತೇವೆ ಅಂತ ದೇವರಲ್ಲಿ ಗೋಳಾಡುತ್ತೆವೆ. ಹೌದು ಮೂತ್ರದಲ್ಲಿ ಉರಿ ಬಂತು ಅಂದರೆ ಮೂತ್ರವು ಮಾಡಲು ಬಲು ಕಷ್ಟವಾಗುತ್ತದೆ. ಇಂಥಹ ಸಮಸ್ಯೆಗಳನ್ನು ನಾವು ಕೆಲವೊಂದು ಸಲಹೆಗಳ ಮೂಲಕ ಹಾಗೂ ಅವುಗಳನ್ನು ಪಾಲನೆ ಮಾಡುವ ಮೂಲಕ ಉರಿ ಮೂತ್ರದ ಸಮಸ್ಯೆಯನ್ನು ಹೋಗಲಾಡಿಸಿಕೊಳ್ಳಬಹುದು. ನಿತ್ಯವೂ ನೀರನ್ನು ಹೆಚ್ಚಾಗಿ ಕುಡಿಯಿರಿ. ನೀರು ಅಧಿಕವಾಗಿ ಕುಡಿಯುವುದರಿಂದ ಮೂತ್ರವು ಸೋಂಕಿಗೆ ಕಾರಣವಾದ ಬ್ಯಾಕ್ಟಿರಿಯಾ ಅನ್ನು ಹೊರ ಹಾಕುತ್ತದೆ ಮತ್ತು ಕಿಡ್ನಿಯನ್ನು ಕೂಡ ಸುರಕ್ಷಿತವಾಗಿ ಮಾಡುತ್ತದೆ.
ಇನ್ನೂ ನಮ್ಮ ದೇಹದಲ್ಲಿ ಬ್ಯಾಕ್ಟಿರಿಯಾಗಳ ಬೆಳವಣಿಗೆಗೆ ಕಡಿವಾಣ ಹಾಕಲು ಮೊಸರು ತುಂಬಾನೇ ಸಹಾಯ ಮಾಡುತ್ತದೆ. ಮೊಸರು ಸೇವನೆ ಮಾಡುವುದರಿಂದ ಉರಿ ಮೂತ್ರದ ಸಮಸ್ಯೆ ದೂರವಾಗುತ್ತದೆ. ಮತ್ತು, ಹುರುಳಿ ಕಾಳಿನ ಪಲ್ಯ ಅಥವಾ ಹಾಗೇಯೇ ನೆನೆಸಿ ತಿನ್ನುವುದರಿಂದ ಈ ಸಮಸ್ಯೆಯನ್ನು ಹೋಗಲಾಡಿಸಬಹುದು. ಅಷ್ಟೇ ಅಲ್ಲದೇ ಅಕ್ಕಿಯ ಗಂಜಿ ನೀರು ಕುಡಿಯುವುದರಿಂದ ಕೂಡ ಉರಿ ಮೂತ್ರ ಸಮಸ್ಯೆ ಪರಿಹಾರ ಆಗುತ್ತದೆ. ಹಾಗೂ ಧನಿಯಾ ಕಾಳುಗಳನ್ನು ಅಂದರೆ ಕೊತ್ತಂಬರಿ ಕಾಳುಗಳನ್ನು ಚೆನ್ನಾಗಿ ರಾತ್ರಿವಿಡೀ ನೆನೆಸಿ ಮರುದಿನ ಕುಡಿಯುವುದರಿಂದ ಮೂತ್ರ ಉರಿ ನಿವಾರಣೆ ಆಗುತ್ತದೆ.
ಗಸಗಸೆ ಮತ್ತು ಏಲಕ್ಕಿಯನ್ನು ಮೊಸರಿನಲ್ಲಿ ನೆನಸಿ ತಿನ್ನುವುದರಿಂದ ಮೂತ್ರ ಉರಿ ಕಡಿಮೆ ಆಗುತ್ತದೆ. ಇನ್ನು ಮೆಂತ್ಯೆ ಕಾಳಿನ ಕಷಾಯವನ್ನು ಮಾಡಿ ಕುಡಿಯುವುದರಿಂದ ಕೂಡ ಉರಿ ಮೂತ್ರ ಸಮಸ್ಯೆಯು ದೂರ ಆಗುತ್ತದೆ. ಮುಖ್ಯವಾದ ವಿಷಯ ಏನೆಂದರೆ ಉರಿ ಮೂತ್ರ ಸಮಸ್ಯೆ ಇದ್ದರೆ ವಿಟಮಿನ್ ಸಿ ಅಂಶವಿರುವ ಆಹಾರವನ್ನು ಸೇವಿಸಬೇಕು. ವಿಟಮಿನ್ ಆಹಾರಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಬ್ಯಾಕ್ಟಿರಿಯಾ ವಿರುದ್ಧ ಹೋರಾಡಿ ವೈರಸ್ ಮತ್ತು ಬ್ಯಾಕ್ಟಿರಿಯಾ ಅನ್ನು ಹೊಡೆದೋಡಿಸುತ್ತದೆ.
ವಿಟಮಿನ್ ಸಿ ಅಂಶವಿರುವ ಆಹಾರವನ್ನು ತಿನ್ನುವುದರಿಂದ ಬ್ಯಾಕ್ಟಿರಿಯಾಗಳ ಅಭಿವೃದ್ಧಿ ಆಗುವುದಿಲ್ಲ. ವಿಟಮಿನ್ ಸಿ ಅಂಶವಿರುವ ಹಣ್ಣುಗಳು ಅಂದರೆ ಕಿತ್ತಳೆ, ಮೂಸಂಬಿ ನಿಂಬೆ ಅನಾನಸ್ ಸ್ಟ್ರಾಬೆರಿ, ಮುಂತಾದವುಗಳು ವಿಟಮಿನ್ ಸಿ ಅಂಶವನ್ನು ಹೊಂದಿವೆ. ಹೌದು ಇನ್ನೂ ಉರಿ ಮೂತ್ರದ ಸಮಸ್ಯೆಗೆ ಎಳೆನೀರು ಅತ್ತ್ಯುತ್ತಮ ಪಾನೀಯ ಅಂತ ಹೇಳಬಹುದು. ಉರಿ ಮೂತ್ರದ ಸಮಸ್ಯೆಯಿಂದ ಬಳಲುತ್ತಿದ್ದರೆ ಎಳೆನೀರು ಬೆಳಿಗ್ಗೆ ಎದ್ದು ತಕ್ಷಣ ಕುಡಿಯಿರಿ ಅರ್ಧ ಗಂಟೆಯವರೆಗೆ ಏನು ಸೇವನೆ ಮಾಡಬೇಡಿ. ಒಂದು ಗಂಟೆಯಾದ ಬಳಿಕ ಮೂತ್ರ ವಿಸರ್ಜನೆ ಆಗುತ್ತದೆ. ಇದರಿಂದ ಕೆಟ್ಟ ಬ್ಯಾಕ್ಟಿರಿಯಾಗಳು ಮೂತ್ರದ ಮೂಲಕ ಹೊರಗೆ ಹೋಗುತ್ತವೆ. ಹಾಗೂ ಹಿಂದಿನಿಂಗಿಂತ ಕಡಿಮೆ ಉರಿ ಆಗುತ್ತದೆ ಕ್ರಮೇಣ ಉಪಶಮನ ಆಗುತ್ತಾ ಬರುತ್ತದೆ. ಎಲ್ಲ ಸಲಹೆಗಳಿಗಿಂತ ಎಳೆನೀರು ಕುಡಿಯುವುದು ಈ ಉರಿಮೂತ್ರದ ಸಮಸ್ಯೆಗೆ ಸೂಕ್ತವಾದ ಸುಲಭವಾದ ಸರಳವಾದ ಸಲಹೆಯಾಗಿದೆ. ಶುಭದಿನ.