ದಿನ ಎರಡು ಗೋಡಂಬಿ ತಿನ್ನುವುದರಿಂದ ಏನು ಆಗುತ್ತೆ

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ಡ್ರೈಫ್ರೂಟ್ಸ್ ಅಂದರೆ ಬಾಯಲ್ಲಿ ನೀರು ಬರುತ್ತದೆ. ಈ ಶಬ್ದ ಕೇಳಿದರೆ ತಕ್ಷಣವೇ ನೆನಪಿಗೆ ಬರುವುದು ಬಾದಾಮಿ, ಗೋಡಂಬಿ, ವಾಲ್ ನಟ್ಸ್, ಕಾಜು ಪಿಸ್ತಾ ಎಲ್ಲವೂ. ಆದರೆ ಇವುಗಳಲ್ಲಿ ಬಾದಾಮಿ ಎಲ್ಲ ಸಮಯದಲ್ಲಿ ಸಿಗುತ್ತದೆ. ಹಾಗೂ ಇದು ತುಂಬಾನೇ ದುಬಾರಿಯಾಗಿ ಕೂಡ ಆಗಿದೆ. ಮತ್ತು ಜನರು ಎಲ್ಲ ಸಮಯದಲ್ಲಿ ಖರೀದಿ ಮಾಡುವ ಒಣಫಲ ಇದಾಗಿದೆ. ಈ ಗೋಡಂಬಿಯು ಜಗತ್ತಿನ ಎಲ್ಲ ಆಹಾರಗಳಲ್ಲಿ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಹೀಗಾಗಿ ಚಿಕ್ಕವರಿನಿಂದ ಹಿಡಿದು ದೊಡ್ಡವರು ಯಾರು ಬೇಕಾದರೂ ಕೂಡ ಇದನ್ನು ಸೇವಿಸಬಹುದು. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಇದರಲ್ಲಿ ಖನಿಜಗಳು ಲವಣಗಳು ಪೊಟ್ಯಾಶಿಯಂ ಕ್ಯಾಲಷಿಯಂ ಅಧಿಕವಾಗಿರುತ್ತದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಗೋಡಂಭಿ ತಿನ್ನುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಸಿ ಕೊಡುತ್ತೇವೆ. ನೀವು ಗಟ್ಟಿ ಮುಟ್ಟಾಗಿ ದಷ್ಟ ಪುಷ್ಟವಾಗಿ ಇರಬೇಕು ಅಂದರೆ ನಿಮ್ಮ ಸ್ನಾಯುಗಳು ಗಟ್ಟಿಯಾಗಿ ಇರಬೇಕು ಅಂದರೆ ನಿತ್ಯವೂ ಗೋಡಂಬಿ ತಿನ್ನಿ. ಇದರಲ್ಲಿ ಇರುವ ಪೊಟ್ಯಾಶಿಯಂ ಮ್ಯಾಗ್ನಿಶಿಯಂ ಇರುವ ಕಾರಣ ಇದು ಮಾಂಸ ಖಂಡಗಳು ಸರಿಯಾಗಿ ಕೆಲಸವನ್ನು ಮಾಡುವಂತೆ ನೋಡಿಕೊಳ್ಳುತ್ತದ್ದ. ಇನ್ನೂ ಗೋಡಂಬಿಯಲ್ಲಿ ವಿಟಮಿನ್ ಕೆ ಇರುವುದರಿಂದ ಇದು ಮೂಳೆಗಳಿಗೆ ಸಂಭಂದಿಸಿದ ಎಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ.

ವಾತಾವರಣದಲ್ಲಿ ಎಷ್ಟೇ ಮಾಲಿನ್ಯವಿದ್ದರು ಕೂಡ ಈ ಗೋಡಂಬಿ ಸೇವನೆ ಇಂದ ಕಣ್ಣಿಗೆ ಯಾವುದೇ ಸೋಂಕು ಬರದಂತೆ ನೋಡಿಕೊಳ್ಳುತ್ತದೆ. ಇದು ರೇಟಿನಾ ಎಂಬ ರಚನಾತ್ಮಕ ಪದರವನ್ನು ಸೃಷ್ಟಿ ಮಾಡುವುದರ ಜೊತೆಗೆ ಇದರಿಂದ ಹಾನಿಕಾರಣ ವಿಕಿರಣಗಳು ಕಣ್ಣಿಗೆ ತಾಕದಂತೆ ನೋಡಿಕೊಳ್ಳುತ್ತದೆ. ಗೋಡಂಬಿ ರಕ್ತದೊತ್ತಡವನ್ನು ನಿಯಂತ್ರದಲ್ಲಿಡಲು ಸಹಕಾರಿಯಾಗಿದೆ. ಏಕೆಂದರೆ ಇದರಲ್ಲಿ ಇರುವ ಸೋಡಿಯಂ ಮತ್ತು ಪೊಟ್ಯಾಷಿಯಂ ಅಂಶವನ್ನೂ ಅಧಿಕವಾಗಿ ಒಳಗೊಂಡಿದೆ. ಈ ಕಾರಣದಿಂದ ಗೋಡಂಬಿ ಬೀಜಗಳು ರಕ್ತದೊತ್ತಡ ನಿಯಂತ್ರಣ ಇಡಲು ಸಹಾಯವಾಗುತ್ತದೆ. ದೇಹದಲ್ಲಿ ಸೋಡಿಯಂ ಅಂಶವು ಅಧಿಕವಾಗಿದ್ದರೆ ದೇಹವು ನೀರನ್ನು ಅಧಿಕವಾಗಿ ಹಿಡಿದಿಟ್ಟು ಕೊಳ್ಳುತ್ತದೆ. ಇದು ಶರೀರದ ರಕ್ತದ ಗಾತ್ರವನ್ನು ಉಂಟು ಮಾಡುತ್ತದೆ. ಹಾಗೂ ರಕ್ತದೊತ್ತಡವನ್ನು ನಿಯಂತ್ರನ ಮಾಡುತ್ತದೆ. ಈ ಗೋಡಂಬಿ ಬೀಜಗಳು ಆರೋಗ್ಯಕರ ಪೋಷಕಾಂಶಗಳಿಂದ ಕೂಡಿರುವ ಕಾರಣ ಇದು ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದರಲ್ಲಿ ಕೊಲೆಸ್ಟ್ರಾಲ್ ಮಟ್ಟವು ಕಡಿಮೆ ಇರುತ್ತದೆ. ಇನ್ನು ಕೆಲಸವನ್ನು ಮಾಡಿ ತುಂಬಾನೆ ಸುಸ್ತು ಆಯಾಸ ನಿಶ್ಶಕ್ತಿಯಿಂದ ಹಾಗೂ ಖಿನ್ನೆತೆ ಇಂದ ನರಳಾಡುತ್ತಿದ್ದರೆ ಅಂಥವರು ಗೋಡಂಬಿ ತಿನ್ನಿ ಇದು ಅವರಿಗೆ ಉತ್ತಮವಾಗಿ ಕೆಲಸವನ್ನು ಮಾಡುತ್ತದೆ. ಗೋಡಂಬಿಯಲ್ಲಿ ಅಮೈನೋ ಆಮ್ಲಗಳು ಇರುವುದರಿಂದ ಇದು ನಮ್ಮ ವರ್ತನೆಯನ್ನು ಹದದಲ್ಲಿ ಇಡುತ್ತದೆ.

ಹಾಗೂ ಒಳ್ಳೆಯ ನಿದ್ದೆ ಬರುತ್ತದೆ ಜೊತೆಗೆ ಒತ್ತಡ ಖಿನ್ನತೆಯನ್ನು ದೂರ ಮಾಡುತ್ತದೆ. ಗೋಡಂಬಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಆದರೆ ಕೆಲವರಿಗೆ ಇದರಿಂದ ಅಡ್ಡ ಪರಿಣಾಮಗಳು ಕೂಡ ಬೀರಬಹುದು. ನಿಮಗೆ ಇದು ಆಗಿ ಬರಲಿಲ್ಲವೆಂದರೆ ಸೇವನೆಯಲ್ಲಿ ಕಡಿಮೆ ಮಾಡಿ. ಇದು ಎಲ್ಲರಿಗೂ ಇಷ್ಟವಾಗುತ್ತದೆ ಆದರೆ ಕೆಲವರಿಗೆ ಮಾತ್ರ ಇದು ಆಗಿ ಬರುವುದಿಲ್ಲ ಅಂಥವರು ಕಡಿಮೆ ಮಟ್ಟದಲ್ಲಿ ಸೇವನೆ ಮಾಡಿರಿ. ಹೊಟ್ಟೆಗೆ ಸಂಭಂದ ಪಟ್ಟ ಸಮಸ್ಯೆಗಳು ಇದ್ದರೆ ಗೋಡಂಬಿ ಬೀಜಗಳನ್ನು ಮಿತವಾಗಿ ಬಳಕೆ ಮಾಡಿ. ಇಲ್ಲವಾದರೆ ಮಲಬದ್ಧತೆ ಸಮಸ್ಯೆಗಳು ಕಾಡುತ್ತವೆ. ತೂಕವನ್ನು ಕಡಿಮೆ ಮಾಡಿಕೊಳ್ಳುವುವರು ಕೂಡ ಇದನ್ನು ಕಡಿಮೆ ತಿನ್ನಬೇಕು ಏಕೆಂದರೆ ಇದರಲ್ಲಿ ಅಧಿಕವಾದ ಕ್ಯಾಲೋರಿ ಇರುವುದರಿಂದ ಇದು ತೂಕವನ್ನು ದುಪ್ಪಟ್ಟು ಮಾಡುತ್ತದೇ. ಜೊತೆಗೆ ಇದರ ಸೇವನೆಯಿಂದ ಅಲರ್ಜಿ ವಾಕರಿಕೆ ತುರಿಕೆ ಕೂಡ ಉಂಟಾಗುತ್ತದೆ. ತಲೆನೋವು ಇದ್ದವರು ಕೂಡ ಗೋಡಂಬಿಯನ್ನು ತಿನ್ನದೆ ಇರುವುದು ಉತ್ತಮ. ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಶುಭದಿನ.

Leave a Reply

Your email address will not be published. Required fields are marked *