ಎಣ್ಣೆ ಹೊಡೆಯುವುದು ಆರೋಗ್ಯಕ್ಕೆ ಒಳ್ಳೆಯದಾ? ಅಥವಾ ಕೆಟ್ಟದ್ದು? ಇಲ್ಲಿದ ಅದರ ರಹಸ್ಯ ನೀವು ತಿಳಿದುಕೊಳ್ಳುವುದು ಉತ್ತಮ

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ಮಧ್ಯಪಾನ ಮೊದಲಿನ ಕಾಲದಿಂದಲೂ ರೂಢಿಯಲ್ಲಿದ್ದ ಕೆಟ್ಟ ಚಟವಾಗಿದೆ. ಹೌದು ಹಿರಿಯರು ಒಂದು ಮಾತು ಹೇಳುತ್ತಾರೆ. ಕಳ್ಳತನ ಮಾಡಿ ಜೈಲೂ ಸೇರುವುದು ಒಂದೇ ಹಾಗೂ ಮಧ್ಯಪಾನ ಮಾಡಿ ಸ್ಮಶಾನ ಸೇರುವುದು ಒಂದೇ ಎಂದು. ಈ ಮಧ್ಯಪಾನ ಕಾಲಾಂತರದಲ್ಲಿ ವಿವಿಧ ರೀತಿಯಲ್ಲಿ ದೊರೆಯುತ್ತದೆ. ಈ ಮಧ್ಯಪಾನದ ವಿಷಯದಲ್ಲಿ ಪ್ರತಿಯೊಬ್ಬರಿಗೂ ಬೇರೆ ಬೇರೆ ಅಭಿಪ್ರಾಯಗಳು ಇವೆ ಈಗಿನ ಕಾಲದ ಯುವಜನತೆ ಅಷ್ಟೇ ಅಲ್ಲದೇ ವಯಸ್ಸಾದವರು ಕೂಡ ಈ ಮಧ್ಯಪಾನಕ್ಕೆ ದಾಸರಾಗಿದ್ದರೆ ಅಂತ ಹೇಳಿದರೆ ತಪ್ಪಾಗಲಾರದು.ತಮ್ಮ ಜೀವನವನ್ನು ತಾವೇ ಕೈಯಾರೆ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಒಂದು ಅಧ್ಯಯನದ ಪ್ರಕಾರ 2.5 ಮಿಲಿಯನ್ ಸಾವುಗಳು ಈ ಮಧ್ಯಪಾನ ಸೇವನೆ ಇಂದಾಗುತ್ತದೆ ಅಂತ ವಿಶ್ವಸಂಸ್ಥೆ ತಿಳಿಸಿದೆ. ಇದನ್ನು ಕಡಿಮೆ ಮಾಡಲು ಅನೇಕ ರೀತಿಯ ಸಮಾರಂಭಗಳನ್ನು ಹಮ್ಮಿಕೊಳ್ಳಲಾಗಿದೆ. ಹೌದು ಈ ವಿಷಯವಾಗಿ ಇಡೀ ಜಗತ್ತಿಗೆ ಅರಿವು ಮೂಡಿಸುವುದು ತುಂಬಾನೇ ಮುಖ್ಯವಾಗಿರುತ್ತದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಮಧ್ಯಪಾನವನ್ನು ನೀವು ತುಂಬಾ ವರ್ಷಗಳಿಂದ ಮಾಡುತ್ತಾ ಬಂದರೆ ಏನೆಲ್ಲ ಅನಾರೋಗ್ಯದ ಸಮಸ್ಯೆಗಳು ಉದ್ಭವಿಸುತ್ತವೆ ಅಂತ ತಿಳಿಯೋಣ.

ಮೊದಲಿಗೆ ಮೂಳೆಗಳು ಬಲಹೀನಗೊಳ್ಳುತ್ತವೆ. ಅತಿಯಾದ ಮಧ್ಯಪಾನ ಸೇವನೆ ಇಂದ ಮೂಳೆಗಳಲ್ಲಿ ಕೊಲಾಜಿನ್ ಮತ್ತು ಪ್ರೊಟೀನ್ ಅಂಶಗಳು ಕುಂಠಿತಗೊಳ್ಳುತ್ತವೇ. ಹೀಗಾಗಿ ಅವುಗಳು ಮುರಿತಕ್ಕೆ ಒಳಗಾಗುತ್ತವೆ. ಇದರಿಂದ ಕೀಳು ನೋವು ಮಂಡಿ ನೋವು ಎಲ್ಲ ಬಗೆಯ ಕಾಯಿಲೆಗಳು ಕಾಣಿಸಿಕೊಳ್ಳುತ್ತದೆ. ಎಲುಬಿನಲ್ಲಿ ಶಕ್ತಿ ಇಲ್ಲದಂತಾಗುತ್ತದೇ ಹಾಗೂ ಎಲುಬು ನಷ್ಟವಾಗುತ್ತಾ ಬರುತ್ತದೆ. ಇನ್ನೂ ಸತತವಾಗಿ ಮಧ್ಯಪಾನ ಯಾರು ಮಾಡುತ್ತಾರೆ ಅವರ ಪಿತ್ತಕೋಶ ಕೊಳೆಯುತ್ತದೆ. ಇದರಿಂದ ಅಜೀರ್ಣತೆ ವಿಟಮಿನ್ ಗಳ ಕೊರತೆ ಕೂಡ ಉಂಟಾಗುತ್ತದೆ. ಮುಖ್ಯವಾಗಿ ಹೇಳಬೇಕೆಂದರೆ ಅತಿಯಾದ ಮಧ್ಯಪಾನ ಮಾಡುವುದರಿಂದ ಲಿವರ್ ಹಾಳಾಗುತ್ತದೆ. ಲಿವರ್ ಹಾಳಾದರೆ ದೇಹದ ಎಲ್ಲಾ ಕ್ರಿಯೆಗಳು ಕುಂಠಿತ ಆಗುತ್ತಾ ಬರುತ್ತದೆ ಹೀಗಾಗಿ ವ್ಯಕ್ತಿಯು ತೀವ್ರವಾದ ಗಂಭೀರ ಸ್ಥಿತಿಗೆ ತುತ್ತಾಗುತ್ತಾರೆ. ಇನ್ನೂ ಸತತವಾಗಿ ಮಧ್ಯಪಾನ ಮಾಡುತ್ತಾ ಬರುವವರಿಗೆ ಹೃದಯಕ್ಕೆ ಸಂಭಂದ ಪಟ್ಟ ಕಾಯಿಲೆಗಳು ಹೆಚ್ಚು ಬರುತ್ತವೆ. ಹಾಗೂ ಕಣ್ಣಿನ ಆರೋಗ್ಯಕ್ಕೇ ಕೂಡ ಹಾನಿಯುಂಟು ಮಾಡುತ್ತದೆ ಹಾಗೂ ಕಣ್ಣಿನ ಮಾಂಸ ಖಂಡಗಳನ್ನು ನಾಶ ಮಾಡುತ್ತದೆ ಈ ಮಧ್ಯಪಾನ. ಅತಿಯಾದ ಮಧ್ಯಪಾನ ನರ ದೌರ್ಬಲ್ಯಕ್ಕೆ ಕಾರಣವಾಗುತ್ತದೆ. ಹಾಗೂ ಕೈ ಕಾಲುಗಳಲ್ಲಿ ಮರಗಟ್ಟುವಿಕೆ ಹಾಗೂ ನೆನಪಿನ ಶಕ್ತಿಯು ಕೂಡ ಕಡಿಮೆ ಆಗುತ್ತಾ ಬರುತ್ತದೆ.

ಹಾಗೂ ಪಿತ್ತ ಸ್ತನ ಕ್ಯಾನ್ಸರ್ ರೀತಿಯ ರೋಗಗಳು ದೇಹವನ್ನು ಬಂದು ಸೇರುವ ಸಾಧ್ಯತೆಗಳು ಹೆಚ್ಚು ಇರುತ್ತದೆ. ಇನ್ನೂ ನೀವು ನೋಡಿರಬಹುದು ಗರ್ಭಿಣಿಯರು ಕೂಡ ಮಧ್ಯಪಾನ ಮಾಡುತ್ತಾರೆ ಆದರೆ ಇದು ಒಳ್ಳೆಯದಲ್ಲ. ಇದು ಮಗುವಿನ ಮೇಲೆ ದುಷ್ಪರಿಣಾಮ ಬೀರುತ್ತದೆ ಅಲ್ಲದೇ ಮಗುವಿನ ಬೆಳೆವಣಿಗೆ ಕುಂಠಿತವಾಗುತ್ತದೆ. ಹೀಗಾಗಿ ಗರ್ಭಿಣಿ ಮಹಿಳೆಯರು ಮಧ್ಯಪಾನ ಮಾಡಬಾರದು. ಮಧ್ಯಪಾನ ಮಾಡುವುದು ನರಕದ ಚಿಂತೆ ಮಾಡಿದ ಹಾಗೆ ಅಂತ ಕಾಳಿದಾಸ ವರ್ಣನೆ ಮಾಡಿದ್ದಾರೆ ಹೌದು ಇದರ ಸೇವನೆ ಮೊದಲಿನ ಕಾಲದಿಂದಲೂ ಖಂಡಿಸುತ್ತಾ ಬಂದಿದ್ದಾರೆ ನಮ್ಮ ಹಿರಿಯರು. ಇದರಿಂದ ಕುಟುಂಬಗಳು ಬೀದಿ ಪಾಲು ಆಗಿದ್ದಾರೆ ಹಾಗೂ ಇದು ಸಮಾಜಕ್ಕೆ ಹಾನಿಯನ್ನು ಉಂಟು ಮಾಡುತ್ತದೆ ಹೊರತು ಒಳ್ಳೆಯದನ್ನು ಮಾಡುವುದಿಲ್ಲ ಆದ್ದರಿಂದ ಮಧ್ಯಪಾನ ಮಾಡುವುದರಿಂದ ದೂರವಿರಿ ಸ್ನೇಹಿತರೆ.

Leave a Reply

Your email address will not be published. Required fields are marked *