ದೇಹದಲ್ಲಿ ರಕ್ತವನ್ನು ಶುದ್ಧೀಕರಿಸುವ ಆಹಾರಗಳು ಯಾವುವು ಗೊತ್ತೇ

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ನಮ್ಮ ಇಡೀ ದೇಹವೇ ರಕ್ತದಿಂದ ಸೃಷ್ಟಿ ಆಗಿದೆ. ದೇಹದ ಯಾವುದಾದರೂ ಅಂಗವೂ ಹಾನಿಯಾದರೆ ತಕ್ಷಣವೇ ರಕ್ತ ಬರುತ್ತದೆ. ದೇಹದಲ್ಲಿ ರಕ್ತ ಶುದ್ಧವಾಗಿದ್ದರೆ ಮನುಷ್ಯನು ಆರೋಗ್ಯವಾಗಿ ಇರುತ್ತಾರೆ. ಅದೇ ರಕ್ತವೂ ವಿಷವಾಗಿ ಪರಿವರ್ತಿವಾದರೆ ಅನೇಕ ಅನಾರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅವುಗಳೆಂದರೆ ಅಲರ್ಜಿ ತುರಿಕೆ ಚರ್ಮದ ಸಮಸ್ಯೆಗಳು ಆಯಾಸ ಸುಸ್ತು ನಿರಂತರ ತಲೆನೋವು ಮುಖದಲ್ಲಿ ಮೊಡವೆಗಳು ಕಪ್ಪು ಕಲೆಗಳು. ಇದಕ್ಕೆಲ್ಲ ಕಾರಣ ದೇಹದಲ್ಲಿ ರಕ್ತವೂ ಹಾಳಾಗಿದ್ದರೆ ಈ ಸಮಸ್ಯೆಗಳು ಉದ್ಭವಿಸುತ್ತವೆ. ಹೌದು ಮುಖ್ಯವಾಗಿ ಹೇಳಬೇಕೆಂದರೆ ಮುಖದಲ್ಲಿ ಮೊಡವೆಗಳು ಕೂಡ ಆಗಲು ರಕ್ತದ ಅಶುದ್ಧತೆ ಕಾರಣವಾಗಿರುತ್ತದೆ. ಆದರೆ ಅದನ್ನು ಅರಿತುಕೊಳ್ಳದೆ ಯುವಜನತೆಯ ವೈದ್ಯರ ಹತ್ತಿರ ಹಣದ ಸುರಿಮಳೆ ಮಾಡುತ್ತದೆ. ಹೌದು ರಕ್ತದ ಶುದ್ಧೀಕರಣಕ್ಕೇ ಮಾರುಕಟ್ಟೆಯಲ್ಲಿ ಅನೇಕ ಟಾನಿಕ್ ಗಳು ಬಂದಿವೆ. ಆದರೆ ಇವುಗಳು ಕೆಲವು ತಿಂಗಳುಗಳವರೆಗೆ ಮಾತ್ರ ಬರುತ್ತವೆ. ಹಾಗೆಯೇ ಇವುಗಳು ರಕ್ತವನ್ನು ಶುದ್ದಿ ಮಾಡಲೂ ಸಹಾಯ ಮಾಡಿದರು ಕೂಡ ನೀವು ಆಹಾರದ ಮೇಲೆ ತುಂಬಾನೇ ಕಾಳಜಿ ವಹಿಸಬೇಕಾಗುತ್ತದೆ.

ದೇಹದಲ್ಲಿರುವ ಕಲ್ಮಶಗಳನ್ನು ಲಿವರ್ ಹೊರಗೆ ಹಾಕುವ ಕೆಲಸವನ್ನು ಮಾಡುತ್ತದೆ. ಒಂದು ವೇಳೆ ಇವುಗಳು ಸರಿಯಾಗಿ ಕಾರ್ಯವನ್ನು ನಿರ್ವಹಿಸದೆ ಇದ್ದರೆ ದೇಹದಲ್ಲಿ ರಕ್ತವೂ ಕೆಟ್ಟು ಚರ್ಮದ ಸಮಸ್ಯೆಗಳು ಕಾಡುತ್ತವೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಮೂತ್ರ ಪಿಂಡ ಹಾಗೂ ಲಿವರ್ ಚೆನ್ನಾಗಿ ಕೆಲಸವನ್ನು ಮಾಡಲು ಹಾಗೂ ದೇಹದಲ್ಲಿ ರಕ್ತವೂ ಶುದ್ದವಾಗಿರಲು ಕೆಲವು ಆಹಾರಗಳ ಪಟ್ಟಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಮೊದಲಿಗೆ ಹೂಕೋಸು. ಇದನ್ನು ಬ್ರೋಕಲಿನ್ ಅಂತ ಕೂಡ ಕರೆಯುತ್ತಾರೆ. ಇದು ರಕ್ತವನ್ನು ಶುದ್ಧೀಕರಿಸುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.
ಇದರಲ್ಲಿ ಆಂಟಿ ಆಕ್ಸಿಡೆಂಟ್ ಗಳು ಇದ್ದು ರಕ್ತದಲ್ಲಿ ಸೇರಿರುವ ಕಲ್ಮಶಗಳನ್ನು ಹೊರಹಾಕಿ ರಕ್ತವನ್ನು ಶುದ್ಧೀಕರಿಸುತ್ತದೆ. ಎರಡನೆಯದು ಹಾಗಲಕಾಯಿ. ಹೌದು, ರುಚಿಯಲ್ಲಿ ಇದು ಕಹಿಯಾಗಿ ಇದ್ದರೂ ಕೂಡ ಆರೋಗ್ಯಕ್ಕೆ ಇದು ತುಂಬಾನೇ ಒಳ್ಳೆಯದು. ಅಷ್ಟೇ ಅಲ್ಲದೇ ಇದು ರಕ್ತವನ್ನು ಶುದ್ಧೀಕರಿಸುವುದರಲ್ಲಿ ಪ್ರಮುಖವಾದ ಆಹಾರವೂ ಕೂಡ ಆಗಿದೆ.

ಇದರಲ್ಲಿ ಪ್ರೊಟೀನ್ ವಿಟಮಿನ್ ಗಳು ಖನಿಜಗಳು ಲವಣಗಳು ಕ್ಯಾಲ್ಷಿಯಂ ಪೊಟ್ಯಾಶಿಯಂ ಕೆರೋಟಿನ್ ಅಂಶವು ದೇಹದಲ್ಲಿ ಶೇಖರಣೆ ಆದ ಕೆಟ್ಟ ಕೊಬ್ಬು ಕರಗಿಸುತ್ತದೆ. ಕಹಿಬೇವು. ಹೌದು ಇದನ್ನು ವರ್ಷದಲ್ಲಿ ನಾವು ಯುಗಾದಿ ಹಬ್ಬದಲ್ಲಿ ಅಪರೂಪಕ್ಕೆ ಸೇವನೆ ಮಾಡುತ್ತೇವೆ ಆದರೆ ನಿಮಗೆ ಗೊತ್ತೇ ಕಹಿ ಬೇವು ಆರೋಗ್ಯಕ್ಕೆ ಎಷ್ಟೊಂದು ಒಳ್ಳೆಯದು ಎಂದು. ಇದ ಬಹಳ ಜನಪ್ರಿಯ ಮತ್ತು ನೈಸರ್ಗಿಕ ಉಪಾಯ ಆಗಿದೆ. ಇದರ ಎಲೆಗಳನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಇದರಿಂದ ರಕ್ತದಲ್ಲಿರುವ ವಿಷವನ್ನು ಹೊರಹಾಕಿ. ರಕ್ತವನ್ನು ಶುದ್ಧೀಕರಿಸುತ್ತದೆ. ಬೆಳ್ಳುಳ್ಳಿ ಉತ್ತಮ ಶುದ್ಧೀಕರಣ ಗುಣವನ್ನು ಹೊಂದಿದೆ. ಆದ್ದರಿಂದ ಊಟದಲ್ಲಿ ಅಥವಾ ಅಡುಗೆ ಮಾಡುವಾಗ ಬೆಳ್ಳುಳ್ಳಿ ಉಪಯೋಗವನ್ನು ಮಾಡಿ. ರಕ್ತದಲ್ಲಿರುವ ಕೊಬ್ಬನ್ನು ಕೂಡ ಕರಗಿಸುತ್ತದೆ. ಇನ್ನೂ ಹಣ್ಣುಗಳಲ್ಲಿ ಹೇಳುವುದಾದರೆ ಖರ್ಬೋಜ, ಕಿತ್ತಳೆ ಸ್ಟ್ರಾಬೆರಿ ಅನಾನಸ್ ದಾಳಿಂಬೆ ದ್ರಾಕ್ಷಿ ವಿಟಮಿನ್ ಸಿ ಅಂಶವಿರುವ ಎಲ್ಲ ಹಣ್ಣುಗಳು ರಕ್ತವನ್ನು ಶುದ್ಧೀಕರಿಸುತ್ತದೆ.

Leave a Reply

Your email address will not be published. Required fields are marked *