ನಮಸ್ತೇ ಪ್ರಿಯ ಓದುಗರೇ, ಹಲ್ಲು ನೋವು ಬಂದರೆ ಸಾಕಪ್ಪಾ ಸಾಕು ಅನ್ನಿಸುತ್ತದೆ. ಹಲ್ಲು ನೋವು ಬರುವುದಕ್ಕಿಂತ ಬೇರೆ ಯಾವುದಾದರೂ ನೋವು ಬಂದರೆ ಸಾಕು ಅಂತ ಅನ್ನಿಸಿ ಬಿಡುತ್ತದೆ ಹಲ್ಲು ನೋವು ಬಂದರೆ ಮಲಗುವುದಕ್ಕೂ ಕೂಡ ಆಗುವುದಿಲ್ಲ. ತುಂಬಾನೇ ನೋವಾಗುತ್ತಿರುತ್ತದೆ. ಈ ಹಲ್ಲು ನೋವು ಸಾಮಾನ್ಯವಾಗಿ ಹಲ್ಲುಗಳಲ್ಲಿ ಕ್ಯಾಲ್ಷಿಯಂ ಕೊರತೆ ಇಂದ ಆಗುತ್ತದೆ. ಹಾಗೂ ನೀವು ಹಲ್ಲುಗಳನ್ನು ಸರಿಯಾಗಿ ಸ್ವಚ್ಛ ಗೊಳಿಸದೆ ಇದ್ದಾಗ ಕೂಡ ಈ ಹಲ್ಲು ನೋವು ಶುರು ಆಗುತ್ತದೆ. ಹೀಗೆ ಹಲ್ಲು ನೋವು ಬಂದಾಗ ನಾವು ತಕ್ಷಣವೇ ವೈದ್ಯರ ಬಳಿ ಹೋಗುತ್ತೇವೆ. ಅದರ ಬದಲಾಗಿ ನೀವು ಮನೆಯಲ್ಲಿ ಕೆಲವು ಪರಿಹಾರ ಅಥವಾ ಮನೆಮದ್ದುಗಳನ್ನು ಮಾಡಿಕೊಳ್ಳಬಹುದು. ಹಾಗಾದ್ರೆ ಬನ್ನಿ ಆ ಮನೆಮದ್ದು ಯಾವುದು ಅಂತ ತಿಳಿಯೋಣ. ತುಂಬಾನೇ ಸರಳವಾದ ಸುಲಭವಾದ ಮನೆಮದ್ದು ಇದಾಗಿದೆ. ನೀವು ಮನೆಯಲ್ಲಿರುವ ಸಾಮಗ್ರಿಗಳನ್ನು ಉಪಯೋಗಿಸಿ ಮಾಡಿಕೊಳ್ಳಬಹುದಾದ ಮನೆಮದ್ದು ಇದಾಗಿದೆ. ಹಾಗಾದರೆ ಬನ್ನಿ ಶುರು ಮಾಡೋಣ.
ಮೊದಲಿಗೆ ಈ ಮನೆಮದ್ದು ತಯಾರಿಸಲು ಬೇಕಾಗುವ ಸಾಮಗ್ರಿಗಳು ಯಾವುವು ಅಂತ ತಿಳಿಯೋಣ. ಎರಡು ಚಮಚ ರಾಗಿ, ಕಾಲು ಭಾಗ ಓಂ ಕಾಳು, ಅರ್ಧ ಚಮಚ ಜೀರಿಗೆ ಪುಡಿ, ಸ್ವಲ್ಪ ಶುಂಠಿ, ಸ್ವಲ್ಪ ಕಲ್ಲುಪ್ಪು ಬೇಕಾಗುತ್ತದೆ. ಇನ್ನೂ ಇದನ್ನು ಮಾಡುವ ವಿಧಾನದ ಬಗ್ಗೆ ಹೇಳುವುದಾದರೆ, ಮೊದಲಿಗೆ ಒಂದು ಪಾತ್ರೆಯಲ್ಲಿ ರಾಗಿಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಕಪ್ಪಗೆ ಆಗುವವರೆಗೂ ಹುರಿದುಕೊಳ್ಳಿ. ಆಮೇಲೆ ಜೀರಿಗೆ ಮತ್ತು ಓಂ ಕಾಳು ಹಾಕಿ ಸ್ವಲ್ಪ ಬೆಚ್ಚಗೆ ಮಾಡಿಕೊಳ್ಳಿ. ಇವುಗಳು ರಾಗಿಯಲ್ಲಿ ಹಾಕಿ ಮಿಕ್ಸ್ ಮಾಡಿ ಸ್ವಲ್ಪ ತಣ್ಣಗೆ ಆಗಲು ಬಿಡಿ. ತದ ನಂತರ ಒಂದು ಕುಟ್ಟನಿಗೆ ಸಹಾಯದಿಂದ ಈ ಮೂರು ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಕಟ್ಟಿಕೊಳ್ಳಿ. ಸ್ವಲ್ಪ ಕುಟ್ಟಿದ ನಂತರ ಕಲ್ಲುಪ್ಪು ಮತ್ತು ಶುಂಠಿಯನ್ನು ಹಾಕಿಕೊಳ್ಳಬೇಕು. ಅಥವಾ ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಬಹುದು. ತದ ನಂತರ ಇದನ್ನು ಒಂದು ಬಟ್ಟಲಿಗೆ ಹಾಕಿಕೊಳ್ಳಬೇಕು. ಈಗ ಈ ಮನೆಮದ್ದು ಸಿದ್ಧವಾಗಿದೆ. ಇದನ್ನು ನೀವು ಹೇಗೆ ಉಪಯೋಗಿಸಬೇಕು ಅಂದರೆ ನಿಮ್ಮ ಬೆರಳಿನಿಂದ ಅಥವಾ ಬ್ರಷ್ ಮೂಲಕ ಹಲ್ಲುಜ್ಜ ಬೇಕು.
ಹೀಗೆ ವಾರದಲ್ಲಿ ಎರಡು ಬಾರಿ ಮಾಡಿದರು ಕೂಡ ಉತ್ತಮ. ಇದರಿಂದ ಹಲ್ಲು ನೋವು ಕ್ರಮೇಣ ಉಪಶಮನ ಆಗುತ್ತದೆ ಜೊತೆ ಜೊತೆಗೆ ನಿಮ್ಮ ಹಲ್ಲುಗಳು ಹಳದಿ ಬಣ್ಣದಲ್ಲಿ ಕಾಣುತ್ತಿದ್ದರೆ ಅದು ಕೂಡ ನಿವಾರಣೆ ಆಗುತ್ತದೆ. ಈ ಮನೆಮದ್ದುನಲ್ಲಿ ಉಪಯೋಗಿಸಿರುವ ಕಲ್ಲುಪ್ಪು ಹಲ್ಲು ನೋವಿಗೆ ತುಂಬಾನೇ ಸಹಾಯ ಮಾಡುತ್ತದೆ ಹೌದು ಉಪ್ಪು ಹಲ್ಲು ನೋವಿಗೆ ಹೇಳಿ ಮಾಡಿಸಿದ ಸೂಪರ್ ಮನೆಮದ್ದು ಆಗಿದೆ.ಹಾಗೂ ಒಣಶುಂಠಿ ಮತ್ತು ಓಂ ಕಾಳು ಪುಡಿ ಜೀರಿಗೆ ಪುಡಿ ಹಲ್ಲುಗಳು ಹುಳುಕು ಆಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ಮತ್ತು ಹಲ್ಲುಗಳು ಒಸಡುಗಳು ಬಲಗೊಳ್ಳುತ್ತವೆ. ಒಟ್ಟಾರೆ ಹೇಳುವುದಾದರೆ ಹಲ್ಲಿನ ಯಾವುದೇ ಸಮಸ್ಯೆಗಳು ಬರುವುದಿಲ್ಲ. ಈ ಮನೆಮದ್ದು ತಯಾರಿಸಲು ನೀವು ಮಾರ್ಕೆಟ್ ನಿಂದ ತರುವ ಅಗತ್ಯವಿಲ್ಲ. ಎಲ್ಲವೂ ಮನೆಯಲ್ಲಿ ದೊರೆಯುವ ಸಾಮಗ್ರಿಗಳು ಇವಾಗಿವೆ. ನಿಜಕ್ಕೂ ಪ್ರತಿ ನೋವಿಗೆ ಅಡುಗೆ ಮನೆಯಲ್ಲಿದೇ ಮನೆಮದ್ದು ಇದೆ ಗೆಳೆಯರೇ. ಶುಭದಿನ.