ಪಪ್ಪಾಯಿ ಬೀಜಗಳ ಸತ್ಯ ತಿಳಿದರೆ ನೀವು ಕಸಕ್ಕೆ ಎಂದಿಗೂ ಬಿಸಾಡುವುದಿಲ್ಲ. ಇಲ್ಲಿದೆ ಅದರ ಸತ್ಯ

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ಹಣ್ಣುಗಳಲ್ಲಿ ಪ್ರತಿಯೊಂದು ಹಣ್ಣು ಕೂಡ ಆರೋಗ್ಯಕ್ಕೆ ಒಳ್ಳೆಯದು. ಸಾಮಾನ್ಯವಾಗಿ ನಾವು ಏನು ಮಾಡುತ್ತೇವೆ ಅಂದರೆ ಹಣ್ಣುಗಳನ್ನು ತಿನ್ನುತ್ತೇವೆ ಆದರೆ ಅವುಗಳಲ್ಲಿ ಇರುವ ಬೀಜವನ್ನು ಕಸದ ತೊಟ್ಟಿಯಲ್ಲಿ ಬಿಸಾಡುತ್ತೆವೆ. ಹೌದು ಆದರೆ ನಿಮಗೆ ಗೊತ್ತೇ ಹಣ್ಣುಗಳು ಎಷ್ಟು ಆರೋಗ್ಯಕ್ಕೆ ಲಾಭದಾಯಕ ತಂದು ಕೊಡುತ್ತದೆಯೋ ಅಷ್ಟೇ ಅವುಗಳಲ್ಲಿ ಅಡಗಿರುವ ಬೀಜಗಳು ಕೂಡ. ಅಂಥಹ ಹಣ್ಣುಗಳಲ್ಲಿ ಒಂದಾಗಿರುವ ಪಪ್ಪಾಯಿ ಹಣ್ಣು. ಈ ಹಣ್ಣನ್ನು ನೀವು ಕತ್ತರಿಸಿದರೆ ನಿಮಗೆ ಕಪ್ಪು ಬಣ್ಣದ ಗೊಂಚಲು ರೀತಿಯಲ್ಲಿ ಬೀಜಗಳೆ ಬೀಜಗಳು ತುಂಬಿ ಕೊಂಡಿರುತ್ತದೆ. ನೋಡಲು ಅಂತೂ ತುಂಬಾನೇ ಸುಂದರವಾಗಿ ಕಾಣುತ್ತದೆ. ಹೌದು ಪಪ್ಪಾಯಿ ಹಣ್ಣು ಮಾತ್ರವಲ್ಲದೆ ಇದರಲ್ಲಿ ಇರುವ ಬೀಜಗಳು ಕೂಡ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಪಪ್ಪಾಯಿ ಬೀಜಗಳನ್ನು ತಿನ್ನುವುದರಿಂದ ಯಾವೆಲ್ಲ ಕಾಯಿಲೆಗಳನ್ನು ಹೊಡೆದೋಡಿಸುತ್ತದೆ ಅಂತ ವಿವರವಾಗಿ ನಾವು ತಿಳಿಯೋಣ ಬನ್ನಿ.

ಸಾಮಾನ್ಯವಾಗಿ ಬೆಳೆದಿರುವ ಪಪ್ಪಾಯಿ ಹಣ್ಣಿನಲ್ಲಿ ಅಧಿಕವಾಗಿ ಬೀಜಗಳು ಇರುವುದಿಲ್ಲ. ಆದರೆ ನಾಟಿ ಪಪ್ಪಾಯಿ ಯಲ್ಲಿ ಬಹಳಷ್ಟು ಬೀಜಗಳಿಂದ ತುಂಬಿರುತ್ತದೆ. ಪಪ್ಪಾಯಿ ಬೀಜಗಳನ್ನು ತಿನ್ನುವುದರಿಂದ ಚರ್ಮ ವ್ಯಾಧಿ ಎಲ್ಲ ಸಮಸ್ಯೆಗಳನ್ನೂ ದೂರ ಮಾಡುತ್ತದೆ. ಚರ್ಮದಲ್ಲಿ ತುರಿಕೆ ಕಪ್ಪು ಕಲೆಗಳು ಚರ್ಮದಲ್ಲಿ ಕೆಂಪು ಕೆಂಪು ಗುಳ್ಳೆಗಳು ಆದರೆ ಈ ಬೀಜಗಳ ಪೇಸ್ಟ್ ಅನ್ನು ಹಚ್ಚಿರಿ. ಇದರಿಂದ ಸಂಪೂರ್ಣವಾಗಿ ಗುಣಮುಖವಾಗುತ್ತದೆ. ಸಾಮಾನ್ಯವಾಗಿ ಇದನ್ನು ಹೇಗೆ ಬಳಕೆ ಮಾಡಬೇಕು ಅನ್ನುವುದು ನಿಮಗೆ ಚಿಂತೆ ಆಗುತ್ತಿರಬೇಕೂ ಅಲ್ವಾ ಅದಕ್ಕಾಗಿ ನೀವು ಈ ಪಪ್ಪಾಯಿ ಬೀಜಗಳನ್ನು ನೀವು ಚೆನ್ನಾಗಿ ಒಣಗಿಸಿ ಪುಡಿ ಮಾಡಿ ನಂತರ ಉಪಯೋಗ ಮಾಡಬೇಕು. ಆಂಟಿ ಏಜಿಂಗ್ ಗುಣಗಳನ್ನು ಹೊಂದಿರುವ ಈ ಪಪ್ಪಾಯಿ ಬೀಜಗಳು ಚರ್ಮಕ್ಕೆ ತುಂಬಾನೇ ಒಳ್ಳೆಯದು. ಪಪ್ಪಾಯಿ ಬೀಜದ ಪುಡಿಯನ್ನು ನೀವು ಕೇವಲ ನೀರಿನಲ್ಲಿ ಹಾಕಿ ಕುಡಿಯುವುದರಿಂದ ತೂಕವನ್ನು ಕೂಡ ಇಳಿಸಿಕೊಳ್ಳಬಹುದು. ಅಷ್ಟೇ ಅಲ್ಲದೇ ಇದು ಮೂಳೆಗಳನ್ನು ತುಂಬಾನೇ ಬಲಪಡಿಸುತ್ತದೆ. ಮೂಳೆಗಳಿಂದ ಉಂಟಾಗುವ ಯಾವುದೇ ಕಾಯಿಲೆಗಳು ಇದ್ದರೂ ಅದು ಬರುವ ಮುನ್ನವೇ ತಡೆಯುವ ಶಕ್ತಿಯನ್ನು ಈ ಪಪ್ಪಾಯಿ ಬೀಜಗಳು ಹೊಂದಿದೆ.

ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ. ಹಾಗೂ ಹೃದಯದ ಆರೋಗ್ಯಕ್ಕೆ ಹೇಳಿ ಮಾಡಿಸಿದ ಸೂಪರ್ ಫ್ರೂಟ್ ಅಂತ ಹೇಳಬಹುದು. ಅಧಿಕ ರಕ್ತದೊತ್ತಡ ವನ್ನು ತಡೆಯುತ್ತದೆ ಹಾಗೂ ದೇಹದಲ್ಲಿ ರಕ್ತವೂ ಸರಿಯಾಗಿ ಸಂಚಾರ ಆಗುವಂತೆ ಮಾಡುತ್ತದೆ ಈ ಪಪ್ಪಾಯಿ ಬೀಜಗಳು. ಹೃದಯದ ಆರೋಗ್ಯಕ್ಕೆ ಪಪ್ಪಾಯಿ ಬೀಜಗಳನ್ನು ಉಪಯೋಗಿಸಿ. ಸಾಮಾನ್ಯವಾಗಿ ಚಿಕ್ಕ ಮಕ್ಕಳಲ್ಲಿ ಅಧಿಕವಾಗಿ ಹೊಟ್ಟೆ ಹುಳು ಅಥವಾ ಜಂತು ಹುಳು ಅನ್ನುವ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಹೌದು ಈ ಸಮಸ್ಯೆಯನ್ನು ನಾವು ಚಿಕ್ಕದು ಅಂತ ಅಂದುಕೊಂಡರೂ ಕೂಡ ತುಂಬಾನೇ ನೋವನ್ನು ನೀಡುತ್ತದೆ. ಹೌದು ಇದರಿಂದ ಮಕ್ಕಳ ಆರೋಗ್ಯ ತುಂಬಾನೇ ಹದಗೆಡುತ್ತದೆ. ಹಾಗಾಗಿ ಈ ಪಪ್ಪಾಯಿ ಬೀಜಗಳ ಉಪಯೋಗದಿಂದ ನೀವು ಸುಲಭವಾಗಿ ಜಂತು ಹುಳಗಳ ಸಮಸ್ಯೆಯಿಂದ ಪಾರಾಗಬಹುದು. ಹೌದು ಪ್ರತಿಯೊಂದು ಹಣ್ಣುಗಳಲ್ಲಿ ಗೊತ್ತಿಲ್ಲದ ವಿಶೇಷವಾದ ಗುಣ ಹೊಂದಿರುತ್ತವೆ. ಅದರಲ್ಲಿ ಈ ಪಪ್ಪಾಯಿ ಹಣ್ಣಿನ ಬೀಜಗಳು. ಆರೋಗ್ಯಕ್ಕೆ ಒಳ್ಳೆಯದೆಂದರೆ ಕಹಿಯಾದರೂ ಕೂಡ ತಿನ್ನಬೇಕು. ಮಾಹಿತಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಶುಭದಿನ.

Leave a Reply

Your email address will not be published. Required fields are marked *