ನಮಸ್ತೇ ಪ್ರಿಯ ಓದುಗರೇ, ನಮ್ಮ ಆಧುನಿಕ ಜೀವನ ಶೈಲಿಯಿಂದಾಗಿ ಮನುಷ್ಯನು ಆರೋಗ್ಯವಾಗಿ ಇರುವುದಲ್ಲದೆ ಮತ್ತಷ್ಟು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾನೆ. ಹೌದು ಅದರಲ್ಲಿ ಈ ಪಿತ್ತದ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ ಗೆಳೆಯರೇ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಒಂದು ಸರಳವಾದ ಮನೆಮದ್ದು ತಿಳಿಸಿ ಕೊಡುತ್ತೇವೆ ಬನ್ನಿ. ಮೊದಲಿಗೆ ಎದೆಯಲ್ಲಿ ಪಿತ್ತ ಹೆಚ್ಚಾಗಲು ಕಾರಣಗಳನ್ನು ಹೇಳುವುದಾದರೆ ಅತಿಯಾದ ಮಸಾಲೆ ಪದಾರ್ಥಗಳನ್ನು ತಿನ್ನುವುದರಿಂದ ಎಣ್ಣೆಯುಕ್ತ ಪದಾರ್ಥಗಳು ಹಾಗೂ ಕರಿದ ತಿಂಡಿಗಳನ್ನು ತಿನ್ನುವುದರಿಂದ ಮತ್ತು ರಾತ್ರಿ ಹೊತ್ತು ಚೆನ್ನಾಗಿ ನಿದ್ದೆ ಮಾಡದೆ ಇದ್ದಲ್ಲಿ ಈ ಪಿತ್ತದ ಸಮಸ್ಯೆ ಕಾಡುತ್ತದೆ. ಇನ್ನೂ ಇದರ ಗುಣಲಕ್ಷಣಗಳು ಅಂದರೆ ಬಾಯಿಗೆ ಯಾವುದೇ ರೀತಿಯ ರುಚಿ ಹತ್ತುವುದಿಲ್ಲ ಹಾಗೂ ಬೆಳಿಗ್ಗೆ ಬೆಳಿಗ್ಗೆ ಹುಳಿತೇಗು ಬರುತ್ತದೆ. ಕೆಟ್ಟ ವಾಸನೆ ಬರುತ್ತದೆ. ಹಾಗೂ ಏನು ಆಹಾರ ತಿಂದರೂ ಕೂಡ ಗಂಟಲಿನಲ್ಲಿ ಉರಿಯಿತ್ತಿರುತ್ತದೆ. ಅತಿಯಾದ ವಾಕರಿಕೆ ಆಗುತ್ತದೆ ಹೊಟ್ಟೆ ಉರಿಯುತ್ತದೆ. ಹೊಟ್ಟೆಯಲ್ಲಿ ಆಹಾರ ಜೀರ್ಣವಾಗದೇ ವಾಂತಿಯಾಗುತ್ತದೆ ತಲೆನೋವು ತಲೆ ಸುತ್ತುವಿಕೆ ವಾಂತಿ ಆಗದೇ ಇದ್ದರೂ ವಾಂತಿ ಆಗುವ ಹಾಗೆ ಭಾಸ ಆಗುತ್ತದೆ. ಹೀಗೆ ಪಿತ್ತವು ಹೆಚ್ಚಾದರೆ ಈ ಬಗೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಹೌದು ಪಿತ್ತ ಜಾಸ್ತಿ ಆಗಬಾರದು. ಹಾಗಾದರೆ ಬನ್ನಿ ಮನೆಮದ್ದು ಯಾವ ರೀತಿಯಾಗಿ ಶುರು ಮಾಡೋಣ ಮತ್ತು ಬೇಕಾಗುವ ಸಾಮಾಗ್ರಿಗಳು ಯಾವುವು ಅಂತ ತಿಳಿಯೋಣ. ಮೊದಲಿಗೆ ಧನಿಯಾ ಅಥವಾ ಕೊತ್ತಂಬರಿ ಬೀಜಗಳು. ಇದನ್ನು ನೀವು ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು. ತದ ನಂತರ ಒಂದು ಪಾತ್ರೆಯನ್ನು ಕಾಯಲು ಇಡಬೇಕು ಅದರಲ್ಲಿ ಎರಡು ಲೋಟ ನೀರು ಹಾಕಿ ಕುದಿಸಿಕೊಳ್ಳಿ. ನೀರು ಸ್ವಲ್ಪ ಬಿಸಿಯಾದ ಮೇಲೆ ನೀವು ಅದರಲ್ಲಿ ಒಂದು ಲೋಟ ಕೊತ್ತಂಬರಿ ಪುಡಿ ಅಥವಾ ಧನಿಯಾ ಪುಡಿ ಹಾಕಿ ಚೆನ್ನಾಗಿ ಕಲಕಿ. ಎರಡು ಲೋಟ ನೀರು ಒಂದು ಲೋಟ ಆಗುವವರೆಗೂ ಚೆನ್ನಾಗಿ ಕುದಿಸಿ ಕೊಳ್ಳಿ. ಧನಿಯಾ ಪುಡಿ ಯಲ್ಲಿ ಇರುವ ಎಲ್ಲ ಜೀವಸತ್ವಗಳು ಹಾಗೂ ಅಂಶಗಳು ನೀರಿನಲ್ಲಿ ಬಿಡುವ ಹಾಗೆ ಕುದಿಸಿ ಕೊಳ್ಳಿ. ಬಳಿಕ ಅದನ್ನು ಚೆನ್ನಾಗಿ ಸೋಸಿಕೊಳ್ಳಿ. ತದ ನಂತರ ಉಗುರು ಬೆಚ್ಚಗೆ ಇರುವ ಇದನ್ನು ಕುಡಿಯಬೇಕು. ಇದರಿಂದ ಪಿತ್ತ ನಿವಾರಣೆ ಆಗುತ್ತವೆ.
ಇನ್ನೂ ಈ ಮನೇಮದ್ದು ಮಾಡಲು ನಿಮಗೆ ಸಮಯವಿಲ್ಲ ವಾದರೆ ರಾತ್ರಿ ಹೊತ್ತು ಮಲಗುವ ಮುನ್ನ ಬಿಸಿ ನೀರಿನಲ್ಲಿ ಈ ಕೊತ್ತಂಬರಿ ಬೀಜಗಳನ್ನು ಚೆನ್ನಾಗಿ ರಾತ್ರಿವಿಡಿ ನೆನೆಸಿಡಿ. ಮರುದಿನ ಬೆಳಿಗ್ಗೆ ಎದ್ದು ತಕ್ಷಣ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಈ ರೀತಿಯಾಗಿ ಸತತವಾಗಿ ಒಂದು ತಿಂಗಳು ಮಾಡುವುದರಿಂದ ನಿಮಗೆ ಪಿತ್ತ ನಿಯಂತ್ರಣಕ್ಕೆ ಬರುತ್ತದೆ. ಈ ಮನೆಮದ್ದು ತಯಾರಿಸಲು ಬಹಳ ಸಮಯ ಹಾಗೂ ವಸ್ತುಗಳ ಅವಶ್ಯಕತೆ ಇಲ್ಲ ಗೆಳೆಯರೇ, ಹೌದು ಕೇವಲ ಕೊತ್ತಂಬರಿ ಬೀಜಗಳ ಸಹಾಯದಿಂದ ನೀವು ಪಿತ್ತ ನಿವಾರಣೆ ಮಾಡಿಕೊಳ್ಳಬಹುದು. ಈ ಆರೋಗ್ಯಕರ ಉಪಯುಕ್ತ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ.