ನಮಸ್ತೇ ಪ್ರಿಯ ಓದುಗರೇ, ಜೀವಾಮೃತ ಅಂದರೇನು? ಈ ಜೀವಾಮೃತ ಹೇಗೆ ತಯಾರಿಸಬೇಕು ಹಾಗೂ ಇದನ್ನು ಬೆಳೆಗಳಿಗೆ ಹಾಕಿದರೆ ಯಾವ ರೀತಿ ಲಾಭಗಳು ಆಗುತ್ತವೆ ಅಂತ ತಿಳಿಯೋಣ ಬನ್ನಿ. ಜೀವಾಮೃತ ಅನ್ನುವುದು ಒಂದು ಗೊಬ್ಬರ ಅಲ್ಲ ಗೆಳೆಯರೇ. ಈ ತಪ್ಪು ಕಲ್ಪನೆಯನ್ನು ನೀವು ತಲೆಯಿಂದ ತೆಗೆದು ಹಾಕಿರಿ. ಇದು ಸೂಕ್ಷ್ಮಾಣು ಜೀವಿಗಳಿಗೆ ನೀವು ನೀಡುವ ಆಹಾರ ಅಂತ ಹೇಳಬಹುದು. ಅಂದರೆ ಸೂಕ್ಷ್ಮ ಜೀವಿಗಳ ಅಭಿವೃದ್ದಿಯನ್ನು ಈ ಜೀವಾಮೃತ ಮಾಡುತ್ತದೆ. ಜೀವಾಮೃತದಲ್ಲಿ ಕೋಟಿಗಟ್ಟಲೇ ಸೂಕ್ಷ್ಮಾಣು ಜೀವಿಗಳು ಇರುತ್ತದೆ. ಈ ಜೀವಾಮೃತವನ್ನು ನೀವು ಭೂಮಿಗೆ ಹಾಕಿದರೆ ಎಲ್ಲ ಸೂಕ್ಷ್ಮಾಣು ಜೀವಿಗಳು ಭೂಮಿಯೊಳಗೆ ಸೇರುತ್ತದೆ. ಹೀಗಾಗಿ ಇವುಗಳು ಭೂಮಿಯ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೇ ಎರೆಹುಳುಗಳು ಹೆಚ್ಚುತ್ತವೆ ಮಣ್ಣು ಸಡಿಲಗೊಂಡು ಬೆಳೆಗಳು ಚೆನ್ನಾಗಿ ಬೆಳೆಯುತ್ತವೆ. ಮಣ್ಣು ಎಲ್ಲ ಪೋಷಕಾಂಶಗಳನ್ನು ಹೀರಿಕೊಂಡು ನಿಮಗೆ ಸಮೃದ್ಧವಾದ ಫಲವತ್ತತೆಯನ್ನು ನೀಡುತ್ತದೆ. ಒಳ್ಳೆಯ ಫಸಲು ನಿಮ್ಮದಾಗುತ್ತದೆ. ಹಾಗಾದರೆ ಇದನ್ನು ಹೇಗೆ ಸಿದ್ಧಪಡಿಸುವುದು ಅಂತ ತಿಳಿಯೋಣ ಇದಕ್ಕೆ ಬೇಕಾಗುವ ಪರಿಕರಗಳು ಅಂದರೆ, ಒಂದು ಡ್ರಂ, ಜವಾರಿ ಆಕಳಿನ ಒಂದು ಬುಟ್ಟಿ ಸಗಣಿ.
ಹತ್ತು ಕೆಜಿ ಗಂಜಲು ಅಂದರೆ ಹಸುವಿನ ಮೂತ್ರ ಬೇಕಾಗುತ್ತದೆ. ಎರಡು ಕೆಜಿ ಕಪ್ಪು ಬೆಲ್ಲ ತೆಗೆದುಕೊಳ್ಳಿ. ಇದು ರಸಾಯನ ಯುಕ್ತ ಬೆಲ್ಲ ಇರುತ್ತದೆ. ಅದನ್ನು ತೆಗೆದುಕೊಳ್ಳಿ. ಹಾಗೂ ಎರಡು ಕೆಜಿ ದ್ವಿದಳ ಧಾನ್ಯ ಹಿಟ್ಟು. ಉದಾಹರಣೆ ಹೆಸರು ಕಾಳು ತೊಗರಿ, ಶೇಂಗಾ ಮೆಕ್ಕೆಜೋಳ ಇನ್ನಿತರ ದ್ವಿದಳ ಧಾನ್ಯಗಳ ಹಿಟ್ಟು ಬೇಕಾಗುತ್ತದೆ. ಇನ್ನೂ ಯಾವ ಭೂಮಿಯಲ್ಲಿ ಇದನ್ನು ಹಾಕಲು ಬಯಸುತ್ತೀರಿ ಅಲ್ಲಿಯ ಬೇಲಿಯ ಕೆಳಗಡೆ ಇರುವ ಅಥವಾ ಗಿಡದ ಕೆಳಗಡೆ ಇರುವ ಮಣ್ಣು ತೆಗೆದುಕೊಂಡು ಸ್ವಲ್ಪ ಹಾಕಬೇಕು. ಈ ಎಲ್ಲ ಉಪಕರಣಗಳನ್ನು ಚೆನ್ನಾಗಿ ಕಲಸಿ ಒಂದು ಡ್ರಂ ನಲ್ಲಿ ಹಾಕಬೇಕು. ತದ ನಂತರ ಅದನ್ನು ಒಂದು ಕಟ್ಟಿಗೆಯ ಸಹಾಯದಿಂದ ಎಡದಿಂದ ಬಲಕ್ಕೆ ತಿರುಗಿಸಬೇಕು. ಎಡದಿಂದ ಬಲಕ್ಕೆ ಏಕೆಂದ್ರೆ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಹೆಚ್ಚಾಗುತ್ತದೆ. ಇಲ್ಲವಾದರೆ ವಿರುದ್ಧವಾದ ದಿಕ್ಕಿನಲ್ಲಿ ನೀವು ತಿರುಗಿಸಿದರೆ ಸೂಕ್ಷ್ಮಾಣು ಜೀವಿಗಳು ಸಾಯುತ್ತವೆ. ಹೀಗೆಯೇ ದಿನಕ್ಕೆ ಮೂರು ಬಾರಿ ಐದು ದಿನಗಳ ವರೆಗೆ ಚೆನ್ನಾಗಿ ಕಲಿಸಬೇಕೂ. ತದ ನಂತರ ಅದನ್ನು ಬಿಸಿಲಿನಲ್ಲಿ ಇಡಬಾರದು ಒಂದು ನೆರಳಿನಲ್ಲಿ ಚೆನ್ನಾಗಿ ಮುಚ್ಚಿ ಐದು ದಿನಗಳವರೆಗೆ ಇಡಬೇಕು.
ತದ ನಂತರ 5-7 ದಿನಗಳೊಳಗೆ ಈ ಜೀವಾಮೃತ ವಾನ್ನಿ ನೀವು ಭೂಮಿಗೆ ಹಾಕಬೇಕು. ಏಳು ದಿನಗಳು ಮೀರಿದರೆ ಸೂಕ್ಷ್ಮಾಣು ಜೀವಿಗಳು ಸಾಯುವ ಸಂಭವ ಹೆಚ್ಚಾಗುತ್ತದೆ. ಆದ್ದರಿಂದ ಏಳು ದಿನಗಳು ಮುಂಚಿತವಾಗಿ ಸಾಧ್ಯವಾದರೆ ಐದು ದಿನವಾದ ಬಳಿಕ ಈ ಜೀವಾಮೃತವನ್ನು ನೀವು ಭೂಮಿಗೆ ಸಿಂಪಡಣೆ ಮಾಡಬೇಕು. ಇಷ್ಟೇ ಈ ಜೀವಾಮೃತ ದ ಜೀವಾಳದ ರಹಸ್ಯ. ಇದು ತುಂಬಾನೇ ಕಡಿಮೆ ಖರ್ಚಿನಲ್ಲಿ ಮಾಡುವ ಹಾಗೂ ಆದಾಯವನ್ನು ಗಳಿಸುವ ಹಾಗೂ ಉತ್ತಮವಾದ ಫಸಲು ಪಡೆಯುವ ಅದ್ಭುತವಾದ ವಿಧಾನವಾಗಿದೆ. ನೀವು ಕೂಡ ಉತ್ತಮವಾದ ಫಸಲು ಬರಲು ಈ ರೀತಿ ಜೀವಾಮೃತ ಮಾಡಿ ಬಳಕೆ ಮಾಡಿ. ಮಾಹಿತಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಶುಭದಿನ.