ರೈತ ಮಕ್ಕಳಿಗೆ 11000 ರೂಪಾಯಿ ವರೆಗೆ ವಿಧ್ಯಾರ್ಥಿ ವೇತನ

ಉಪಯುಕ್ತ ಮಾಹಿತಿ

ನಮಸ್ತೇ ಪ್ರಿಯ ಓದುಗರೇ, ಕರ್ನಾಟಕ ರಾಜ್ಯ ಸರ್ಕಾರವೂ ಕರ್ನಾಟಕ ರೈತ ಬಾಂಧವರ ಮಕ್ಕಳಿಗೆ ಸ್ಕಾಲರ್ ಷಿಪ್ ಸಿಗಲಿದೆ. ಹತ್ತನೆಯ ತರಗತಿ ಮುಗಿದ ನಂತರ ಅವರ ಮುಂದಿನ ಅಭ್ಯಾಸಕ್ಕಾಗಿ ಈ ಒಂದು ಕಾರ್ಯಾಚರಣೆಯನ್ನು ಸರ್ಕಾರವೂ ಜಾರಿಗೆ ಗೊಳಿಸಿದೆ. ಯಾವುದೇ ಪಿಯುಸಿ, ಡಿಗ್ರೀ ಇಂಜಿನಿಯರಿಂಗ್ ಎಂ.ಬೀ. ಎ ಎಲ್ಲ ರೀತಿಯ ಉನ್ನತ ಮಟ್ಟದ ಶಿಕ್ಷಣ ಪಡೆಯಲು ಸರ್ಕಾರವೂ ವಿಧ್ಯಾರ್ಥಿ ವೇತನ ನೀಡುತ್ತಿದ್ದೆ. ಹಾಗಾದರೆ ಎಷ್ಟು ಸ್ಕಾಲರ್ ಶಿಪ್ ನೀಡುತ್ತಾರೆ ಅಂತ ತಿಳಿಯೋಣ. ಪದವಿಯ ಮುಂಚೆ ಪಿ.ಯು.ಸಿ ವಿಧ್ಯಾರ್ಥಿಗಳಿಗೆ ರೂಪಾಯಿ 2500 ಹುಡುಗರಿಗೆ ಹಾಗೂ ಹುಡುಗಿಯರಿಗೆ 3000ರೂಪಾಯಿ.
ಬಿ.ಎಸ್,ಸಿ. ಬಿ. ಕಾಮ್ ಓದುವ ವಿಧ್ಯಾರ್ಥಿಗಳಿಗೆ ಹುಡುಗರಿಗೆ 5000 ರೂಪಾಯಿ. ಹಾಗೂ ಹುಡುಗರಿಗೆ 5500 ನೀಡುತ್ತಾರೆ. ಇನ್ನೂ LLB ಹಾಗೂ ಪ್ಯಾರಾ ಮೆಡಿಕಲ್ ನರ್ಸಿಂಗ್ ವಿದ್ಯಾರ್ಥಿನಿಯರಿಗೆ ರೂಪಾಯಿ 7500 ಹಾಗೂ ಮಹಿಳೆಯರಿಗೆ 8000ರೂಪಾಯಿ. ಇನ್ನೂ ಎಂ. ಬಿ. ಬಿ ಎಸ್ ಮತ್ತು ಬಿ. ಇ ಓದುವ ವಿಧ್ಯಾರ್ಥಿಗಳಿಗೆ ಹುಡುಗರಿಗೆ 10000ರೂಪಾಯಿ ಹಾಗೂ 11000 ರೂಪಾಯಿ ಹುಡುಗಿಯರಿಗೆ ನೀಡುತ್ತಾರೆ.

ಇನ್ನೂ ಇದನ್ನು ಯಾವ ರೀತಿ ಅಪ್ಲೈ ಮಾಡಬೇಕು ಇದನ್ನು ಅಪ್ಲೈ ಮಾಡಲು ಯಾವೆಲ್ಲ ಡಾಕ್ಯುಮೆಂಟ್ ಬೇಕಾಗುತ್ತದೆ ಅಂತ ತಿಳಿಯೋಣ ಬನ್ನಿ. ಮೊದಲಿಗೆ ವಿಧ್ಯಾರ್ಥಿ ಹಾಗೂ ಪೋಷಕರ ಆಧಾರ ಕಾರ್ಡ್ ಮತ್ತು ಮೊಬೈಲ್ ನಂಬರ್ ಬೇಕಾಗುತ್ತದೆ. ಜೊತೆಗೆ ಇಮೇಲ್ ಐಡಿ ಕೂಡ ನೀವು ನೀಡಬೇಕಾಗುತ್ತದೆ. ತದ ನಂತರ ಜಾತಿ ಆದಾಯ ಪ್ರಮಾಣ ಪತ್ರ ಬೇಕಾಗುತ್ತದೆ. ನಂತರ ಕಾಲೇಜ್ ರಿಜಿಸ್ಟ್ರೇಷನ್ ನಂಬರ್ ಬೇಕಾಗುತ್ತದೆ. ಮತ್ತು ಫ್ರೂಟ್ಸ್ ಸಂಖ್ಯೆ ಬೇಕಾಗುತ್ತದೆ ಅಂದರೆ ನಿಮ್ಮ ಪೋಷಕರು ರೈತರು ಆಗಿದ್ದರೆ ಈ ಒಂದು ಸಂಖ್ಯೆ ಸಹಾಯ ಮಾಡುತ್ತದೆ. ಇದನ್ನು ನೀವು ಸ್ವಂತವಾಗಿ ಕ್ರಿಯೇಟ್ ಮಾಡಿಕೊಳ್ಳಬಹುದು. ಗೂಗಲ್ ಗೆ ಹೋಗಿ ಅಲ್ಲಿ ಫ್ರೂಟ್ ಸಂಖ್ಯೆ ಅಂತ ಟೈಪ್ ಮಾಡಬೇಕು ನಂತರ ನಿಮಗೆ ಒಂದು ಪೇಜ್ ಸಿಗುತ್ತದೆ. ಅಲ್ಲಿ ರಿಜಿಸ್ಟ್ರೇಷನ್ ಅನ್ನುವ ಲಿಂಕ್ ಸಿಗುತ್ತದೆ ಅದರ ಮೇಲೆ ನೀವೂ ಕ್ಲಿಕ್ ಮಾಡಬೇಕು.ಅಲ್ಲಿ ನಿಮ್ಮ ಆಧಾರ ಕಾರ್ಡ್ ನಂಬರ್ ಹಾಕಬೇಕು. ಆಧಾರ್ ಕಾರ್ಡ್ ನಲ್ಲಿ ಇರುವ ಹಾಗೆ ನಿಮ್ಮ ಹೆಸರು ಟೈಪ್ ಮಾಡಬೇಕು ತದ ನಂತರ ನಿಮ್ಮ ಮೊಬೈಲ್ ನಂಬರ್ ಗೆ ಒಂದು ಒಟಿಪಿ ಬರುತ್ತದೆ ಇದರಿಂದ ನೀವು ಫ್ರೂಟ್ ಸಂಖ್ಯೆ ಪಡೆಯಬಹುದು. ನಂತರ ಅಂಗವಿಕಲ ಸರ್ಟಿಫಿಕೇಟ್ ಬೇಕಾಗುತ್ತದೆ.ರಾಷ್ಟ್ರೀಯ ಅಲ್ಪ ಸಂಖ್ಯಾತ ವಿಧ್ಯಾರ್ಥಿ ವೇತನ ಸರ್ಟಿಫಿಕೇಟ್ ಬೇಕಾಗುತ್ತದೆ.

ನೀವು ಇದನ್ನು ಕೂಡ ನ್ಯಾಯಷನಲ್ ಸ್ಕಾಲರ್ಶಿಪ್ ಪೋರ್ಟಲ್ ಹೋಗಿ ಲಾಗಿನ್ ಅಥವಾ ನ್ಯೂ ರಿಜಿಸ್ಟ್ರೇಷನ್ ಮೇಲೆ ಕ್ಲಿಕ್ ಮಾಡಿ ಇದಾದ ಬಳಿಕ ನಿಮಗೆ ಒಂದು ರೆಜಿಸ್ಟ್ರೇಶನ್ ಐಡಿ ಸಿಗುತ್ತದೆ ಅದನ್ನು ಬರೆದಿಟ್ಟುಕೊಂಡು ನೀವು ಮುಂದುವರೆಸಬಹುದು. ಇನ್ನೂ ಇದನ್ನು ಹೇಗೆ ಅಪ್ಲೈ ಮಾಡುವುದು ಅಂದರೆ ನಿಮ್ಮ ಮನೆಯಲ್ಲಿ ಇರುವ ಲ್ಯಾಪ್ಟಾಪ್ ನಲ್ಲಿ ಗೂಗಲ್ ಗೆ ಹೋಗಿ ಎಸ್.ಎಸ್.ಪೀ. ಪೋಸ್ಟ್ ಮೆಟ್ರಿಕ್. ಅನ್ನುವ ಲಿಂಕ್ ಅನ್ನು ಟೈಪ್ ಮಾಡಬೇಕು. ಅಲ್ಲಿ ನೀವು ಕ್ಲಿಕ್ ಮಾಡಿದ ನಂತರ ನಿಮಗೆ ಎಸ್.ಎಸ್.ಪೀ ಈ ರೀತಿಯ ಒಂದು ವೆಬ್ ಸೈಟ್ ಕಾಣುತ್ತದೆ. ಆಗ ನೀವು ಅಲ್ಲಿ ಹೋಗಿ ಕ್ಲಿಕ್ ಮಾಡಿದರೆ ನಿಮ್ಗೆ ರಾಜ್ಯ ವಿಧ್ಯಾರ್ಥಿ ವೇತನ ತಂತ್ರಾಂಶ ಅನ್ನುವ ಪೇಜ್ ಸಿಗುತ್ತದೆ. ಅಲ್ಲಿ ಕೇಳಿರುವ ಮಾಹಿತಿಯ ಹಾಗೆ ತುಂಬಬೇಕು. ಇದಾದ ಬಳಿಕ ಲಾಗಿನ್ ಮಾಡಿ ನೀವು ಅರ್ಜಿಯನ್ನು ಹಾಕಬಹುದು.

Leave a Reply

Your email address will not be published. Required fields are marked *