ಅತಿಯಾದರೆ ಅಮೃತವೂ ವಿಷವೇ ಅಂತೆಯೇ ಅತಿಯಾದ ಜೀರಿಗೆ ಗರ್ಭಪಾತಕ್ಕೆ ಕಾರಣವಾಗಬಹುದು ಇಲ್ಲಿದೆ ಮಾಹಿತಿ

ಆರೋಗ್ಯ

ನಮಸ್ತೇ ಪ್ರಿಯ ಸ್ನೇಹಿತರೆ, ಮನುಷ್ಯನಿಗೆ ಆರೋಗ್ಯ ಅನ್ನುವುದು ತುಂಬಾನೇ ಮುಖ್ಯವಾಗಿರುತ್ತದೆ. ಹೌದು ಒಮ್ಮೆ ಆರೋಗ್ಯದಲ್ಲಿ ಏರು ಪೇರು ಆದರೆ ಜೀವನದಲ್ಲಿ ಮುಂದೆ ಬರುವ ದಿನಗಳನ್ನು ನಾವು ಅನಾರೋಗ್ಯದಿಂದ ಕಳೆಯಬೇಕಾಗುತ್ತದೆ. ಮನುಷ್ಯನಿಗೆ ಕಾಡುವ ಎಲ್ಲ ದೊಡ್ಡ ರೋಗಗಳಿಗಿಂತ ಅಜೀರ್ಣತೆ ಅನ್ನುವುದು ಒಂದು ದೊಡ್ಡ ಶತ್ರುವೇ ಅಂತ ಹೇಳಬಹುದು. ಈಗಿನ ಆಧುನಿಕ ಜೀವನ ಶೈಲಿಯಿಂದಾಗಿ ಮನುಷ್ಯನು ತನ್ನ ಅಜೀರ್ಣತೆ ಸಮಸ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅಜೀರ್ಣತೆ ಸಮಸ್ಯೆಯಿಂದ ಹೊಟ್ಟೆ ಉಬ್ಬರ ಹೊಟ್ಟೆ ನೋವು ಕೆಟ್ಟ ವಾಸನೆಯ ಹುಳಿತೇಗು ವಾಕರಿಕೆ ಇಂಥಹ ಸಮಸ್ಯೆಯು ಶುರು ಆಗಲು ಪ್ರಾರಂಭ ಆಗುತ್ತದೆ. ನಿಮಗೆ ಗೊತ್ತೇ ಅಜೀರ್ಣತೆ ಸಮಸ್ಯೆ ಅನ್ನುವುದು 150 ರೋಗಗಳಿಗೆ ಮಾರ್ಗವಾಗುತ್ತದೆ ಅಂತ ವೈದ್ಯರು ಹೇಳಿದ್ದಾರೆ. ಈ ಸಮಸ್ಯೆ ಉಂಟಾದಾಗ ಪ್ರತಿ ಬಾರಿಯೂ ವೈದ್ಯರು ಸೂಚಿಸಿರುವ ಮಾತ್ರೆಗಳನ್ನು ತೆಗೆದು ಕೊಳ್ಳಲು ಆಗುವುದಿಲ್ಲ. ಇದು ಸ್ವಲ್ಪ ಸಮಯದವರೆಗೆ ಮಾತ್ರ ವಿಶ್ರಾಂತಿ ನೀಡಿದರು ಕೂಡ ಶಾಶ್ವತವಾಗಿ ಪರಿಹಾರ ಸಿಗುವುದಿಲ್ಲ. ಇನ್ನೂ ಈ ಅಜೀರ್ಣತೆ ಸಮಸ್ಯೆ ಉಂಟಾದಾಗ ನಮಗೆ ಮೊದಲಿಗೆ ನೆನಪಿಗೆ ಬರುವುದು ನಮ್ಮ ಅಡುಗೆ ಮನೆಯಲ್ಲಿ ಪ್ರತಿ ಅಡುಗೆಯನ್ನು ಮಾಡಲು ಬಳಕೆ ಮಾಡುವ ಜೀರಿಗೆ.

ಈ ಜೀರಿಗೆ ಕೇವಲ ಅಡುಗೆಗೆ ಮಾತ್ರವಲ್ಲದೆ ನಮ್ಮ ಆರೋಗ್ಯಕ್ಕೂ ತುಂಬಾ ಒಳ್ಳೆಯದು ಅಜೀರ್ಣತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗೆ ಈ ಜೀರಿಗೆ ಹೇಳಿ ಮಾಡಿಸಿದ ಸೂಪರ್ ಮನೆಮದ್ದು ಆಗಿದೆ. ಆದರೆ ಕೆಲವರು ಏನು ಮಾಡುತ್ತಾರೆ ಅಂದರೆ ಗ್ಯಾಸ್ಟ್ರಿಕ್ ಮತ್ತು ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸಲು ಅತಿಯಾಗಿ ಜೀರಿಗೆಯನ್ನು ಸೇವಿಸಲು ಪ್ರಾರಂಭಿಸುತ್ತಾರೆ. ನಮ್ಮ ಹಿರಿಯರು ಒಂದಾನೊಂದು ಕಾಲದಲ್ಲಿ ಹೇಳುತ್ತಿದ್ದರು ಅತಿಯಾದರೆ ಅಮೃತವೂ ವಿಷವೇ ಎಂದು. ಹೌದು ಅತಿಯಾಗಿ ಜೀರಿಗೆ ಸೇವಿಸಿದರೆ ಮತ್ತೊಂದು ಸಮಸ್ಯೆಯು ಉದ್ಭವ ಆಗುತ್ತದೆ. ಅಂಥಹ ಸಮಸ್ಯೆಗಳು ಯಾವುವು ಅಂತ ಇಂದಿನ ಲೇಖನದಲ್ಲಿ ತಿಳಿಯೋಣ ಬನ್ನಿ. ಮೊದಲನೆಯದು, ಜೀರಿಗೆ ನಿಮ್ಮ ಜಠರನಾಳದಲ್ಲಿ ಎದೆ ಉರಿ ಶುರು ಮಾಡಬಹುದು. ಜೀರಿಗೆಯು ಉರಿಕಾರಕ ಅಂಶವನ್ನು ಹೊಂದಿದೆ. ಇದರ ರಸವು ದೇಹದೊಳಗೆ ಸೇರಿ ಜಠರಕ್ಕೆ ತಲುಪಿದಾಗ ಅಲ್ಲಿ ಉರಿ ಶುರು ಆಗುತ್ತದೆ. ಆದ್ದರಿಂದ ಜೀರಿಗೆಯನ್ನು ಕಡಿಮೆ ಪ್ರಮಾಣದಲ್ಲಿ ಉಪಯೋಗಿಸಬೇಕು. ಇನ್ನೂ ಜೀರಿಗೆಯಲ್ಲಿ ಎದೆ ಉರಿ, ಹೊಟ್ಟೆಯಲ್ಲಿನ ಅಮ್ಲಿಯತೆಯನ್ನು ಕಡಿಮೆ ಮಾಡುತ್ತದೆ. ಅಷ್ಟೊಂದು ಅದ್ಭುತವಾದ ಶಕ್ತಿಯನ್ನು ಹೊಂದಿದೆ. ಆದರೆ ಇದು ಅತಿಯಾದರೆ ಎದೆಯಲ್ಲಿ ಉರಿ ಶುರು ಆಗುತ್ತದೆ. ಆದ್ದರಿಂದ ಜೀರಿಗೆಯನ್ನು ಕಡಿಮೆ ಸೇವನೆ ಮಾಡುವುದು ಒಳ್ಳೆಯದು.

ಇನ್ನೂ ಲಿವರ್ ಹಾಳು ಮಾಡುವ ಗುಣವನ್ನು ಹೊಂದಿದೆ. ಜೀರಿಗೆಯ ಕಡಿಮೆ ಪ್ರಮಾಣದ ಎಣ್ಣೆಯ ಕೊರೆತೆಯ ಗುಣವನ್ನು ಹೊಂದಿದ್ದು ಇದು ಲಿವರ್ ಗೆ ಡ್ಯಾಮೇಜ್ ಮಾಡುವ ಗುಣವನ್ನು ಹೊಂದಿದೆ. ಹೀಗಾಗಿ ವೈದ್ಯರ ಸಲಹೆಯನ್ನು ಪಡೆದುಕೊಂಡೆ ಜೀರಿಗೆಯನ್ನು ಸೇವನೆ ಮಾಡಬೇಕು. ಇದರಿಂದ ಜೀರಿಗೆಯಿಂದಾಗುವ ತೊಂದರೆ ತಪ್ಪಿಸಬಹುದು. ಅತಿಯಾದ ಜೀರಿಗೆ ಸೇವನೆ ಇಂದ ಹೊಟ್ಟೆಯಲ್ಲಿ ಆಮ್ಲೀಯತೆ ಹೆಚ್ಚು ಉತ್ಪತ್ತಿ ಆಗುತ್ತದೆ ಇದರ ಜೊತೆಗೆ ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಂಡು ಜಠರದಲ್ಲಿ ಉರಿಯುತ್ತದೆ. ಇದರಿಂದ ಹೊಟ್ಟೆ ಕೂಡ ಉಬ್ಬುತ್ತದೆ. ಆದ್ದರಿಂದ ಜೀರಿಗೆಯನ್ನು ಕಡಿಮೆ ಪ್ರಮಾಣದಲ್ಲಿ ಉಪಯೋಗಿಸಬೇಕು. ಇನ್ನೂ ಜೀರಿಗೆ ಗರ್ಭಪಾತಕ್ಕೇ ಕಾರಣವಾಗಬಹುದು. ಹೌದು ಜೀರಿಗೆ ಕಾಳು ಗರ್ಭವಸ್ಥೆಯಲ್ಲಿ ಅಸಹಜವಾದ ಪರಿಣಾಮವನ್ನು ಉಂಟು ಮಾಡುತ್ತದೆ. ಅತಿಯಾದ ಸೇವನೆ ಇಂದ ಗರ್ಭಪಾತ ಆಗಬಹುದು.ಇಲ್ಲವಾದರೆ ಹೆರಿಗೆ ಆಗುವ ಮುನ್ನವೇ ಹೆರಿಗೆ ಆಗುವುದಕ್ಕೆ ಪ್ರೇರೇಪಣೆ ಮಾಡಬಹುದು.ಆದ್ದರಿಂದ ಜೀರಿಗೆಯನ್ನು ಮಿತವಾಗಿ ಬಳಕೆ ಮಾಡಬೇಕು. ನೋಡಿದ್ರಲಾ ಜೀರಿಗೆ ಅತಿಯಾದರೆ ಆಗುವ ಅಡ್ಡ ಪರಿಣಾಮಗಳನ್ನೂ ಹಾಗಾದರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ.

Leave a Reply

Your email address will not be published. Required fields are marked *