RTO ಗೆ ನೀವು ಹೋಗದೆ ಸುಲಭವಾಗಿ ನೀವು ಡ್ರೈವಿಂಗ್ ಲೈಸೆನ್ಸ್ ಪಡೆಯಬಹುದು. ಅದು ಹೇಗೆ ಅಂತೀರಾ

ಉಪಯುಕ್ತ ಮಾಹಿತಿ

ನಮಸ್ತೇ ಪ್ರಿಯ ಸ್ನೇಹಿತರೆ, ನಾವು ವಾಹನ ಚಾಲಕರು ಆಗಿದ್ದರೆ ಡ್ರೈವಿಂಗ್ ಲೈಸೆನ್ಸ್ ಕಡ್ಡಾಯವಾಗಿ ಬೇಕು ಅಂತ ನಮ್ಮ ಕರ್ನಾಟಕ ಸರ್ಕಾರ ನಿಯಮವನ್ನು ಮಾಡಿದೆ. ಹೌದು ಮುಂಚೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿದಾಗ ಅದು ದಾಖಲೆಗಳನ್ನು ಪರಿಶೀಲನೆ ಮಾಡಲು ಕಚೇರಿಗೆ ಹೋಗಬೇಕಾಗುತ್ತಿತ್ತು. ಆದರೆ ಈಗ ಪ್ರತಿಯೊಂದು ಕೂಡ ಆನ್ಲೈನ್ ಮುಖಾಂತರವೇ ನೀವು ನಿಮ್ಮ ಎಲ್ಲ ಕೆಲಸಗಳನ್ನೂ ಮಾಡಿಕೊಳ್ಳಬಹುದು. ಇನ್ನೂ ಮುಖ್ಯವಾಗಿ ಹೇಳಬೇಕೆಂದರೆ, ನೀವು ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕು ಅಂದರೆ RTO ಹೋಗಿ ಡ್ರೈವಿಂಗ್ ಲೈಸೆನ್ಸ್ ಹೋಗಿ ಪಡೆಯಬೇಕೆಂದು ಏನು ಇಲ್ಲ ಗೆಳೆಯರೇ, ಇದರ ಅರ್ಥ, ಅಲ್ಲಿಗೆ ಹೋಗಲೇ ಬಾರದು ಅಂತ ಅಲ್ಲ ಸ್ನೇಹಿತರೇ ಬದಲಾಗಿ ನೀವು RTO ಹೋಗಿ ಅಲ್ಲಿ ಅರ್ಜಿಯನ್ನು ಹಾಕಿ. ನಂತರ ಪ್ಲಾಟ್ ಸಿಕ್ಕಿದ ದಿನ ನೀವು ಎಕ್ಸಾಮ್ ಅನ್ನು ಬರೆಯಬೇಕು. ಈ ಪರೀಕ್ಷೆಯಲ್ಲಿ ಪಾಸ್ ಆದ ನಂತರ ನಿಮಗೆ LLR ಅಂದರೆ ಲರ್ನರ್ ಲೈಸೆನ್ಸ್ ರಿಜಿಸ್ಟ್ರೇಶನ್ ನೀಡುತ್ತಾರೆ. ಈ ಲೈಸೆನ್ಸ್ ಸಿಕ್ಕಿದ ಮೇಲೆ ನೀವು ನಿಮ್ಮ ವಾಹನದ ಮೇಲೆ L ಬೋರ್ಡ್ ಎಂದು ಹಾಕಿಕೊಂಡು ಡ್ರೈವಿಂಗ್ ಅನ್ನು ಸುಲಭವಾಗಿ ಕಲಿಯಬಹುದು. ಹೀಗೆ ನೀವು ಆರು ತಿಂಗಳವರೆಗೆ ಡ್ರೈವಿಂಗ್ ಕಲಿಯಬೇಕು.

ಆಮೇಲೆ ಆರು ತಿಂಗಳ ನಂತರ RTO ಗೆ ಹೋಗಿ ಡ್ರೈವಿಂಗ್ ಟೆಸ್ಟ್ ಕೊಡಬೇಕು ಅದರಲ್ಲಿ ಪಾಸ್ ಆಗಬೇಕು. ಪಾಸ್ ಅದ ಮೇಲೆ ನಿಮಗೆ ಅವರು ಡ್ರೈವಿಂಗ್ ಲೈಸೆನ್ಸ್ ಕೊಡುತ್ತಾರೆ. ಆದರೆ ಇಷ್ಟೊಂದು ಕಷ್ಟವನ್ನು ಪಡಬೇಕಾದ ಅಗತ್ಯವಿಲ್ಲ ಗೆಳೆಯರೇ, ರಸ್ತೆ ಸಾರಿಗೆ ಸಚಿವಾಲಯ ಒಂದು ಹೊಸದಾದ ನಿಮಯವನ್ನು ಜಾರಿಗೆ ತಂದಿದೆ. ಅದುವೇ RTM ರೋಡ್ ಟ್ರಾನ್ಫರ್ಟ್ ಮಿನಿಸ್ಟ್ರಿ. ಕೆಲವು ಬಾರಿ ಡ್ರೈವಿಂಗ್ ಲೈಸೆನ್ಸ್ ಅನ್ನು ಸ್ಕೂಲ್ ಗಳಿಗೆ ಅನುಮತಿಯನ್ನು ನೀಡುತ್ತದೆ. ಇನ್ನೂ ಕೆಲವು ಬಾರಿ ಸರ್ಕಾರವು ಡ್ರೈವಿಂಗ್ ಲೈಸೆನ್ಸ್ ಗೆ ಮಾನ್ಯತೆಯನ್ನು ಕೊಡುವುದಿಲ್ಲ ಅದಕ್ಕೂ ಕೆಲವೊಂದು ಕ್ರೈಟೀರಿಯ ಪೂರೈಸಬೇಕಾಗುತ್ತದೆ. ಅಂದರೆ ಆ ಡ್ರೈವಿಂಗ್ ಸ್ಕೂಲ್ ಅಲ್ಲಿ ಸರಿಯಾದ ಜಾಗ ಡ್ರೈವಿಂಗ್ ಟೆಸ್ಟ್ ಮಾಡುವಂತ ಟ್ರ್ಯಾಕ್ ಚೆನ್ನಾಗಿರಬೇಕು ಮತ್ತೆ ಸರಿಯಾದ ಬಯೊಮೀಟ್ರಿಕ್ ವ್ಯವಸ್ಥೆ ಇರಬೇಕು ಅಂತಹ ಡ್ರೈವಿಂಗ್ ಸ್ಕೂಲ್ ಗಳಿಗೆ ಮಾತ್ರ ಸರ್ಕಾರ ಮಾನ್ಯತೆ ಕೊಡುತ್ತೆ. ಈ ವ್ಯವಸ್ಥೆಗಳು ಎಲ್ಲವೂ ಇದ್ದರೆ ಮಾತ್ರ ಸರ್ಕಾರ ಅನುಮತಿಯನ್ನು ಒದಗಿಸುತ್ತದೆ. ಡ್ರೈವಿಂಗ್ ಸ್ಕೂಲ್ ನಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇರುವ ಎಲ್ಲ ಅಭ್ಯಾಸವೂ ಇರುತ್ತದೆ. ಅಲ್ಲಿ ನಿಮಗೆ ಟ್ರೈನಿಂಗ್ ಎಲ್ಲವೂ ಕೊಟ್ಟು ನಿಮಗೆ ಒಂದು ಪಾಸ್ ಎಂದು ಸರ್ಟಿಫಿಕೇಟ್ ನೀಡುತ್ತದೆ. ಅದು ಆಟೋಮ್ಯಾಟಿಕ್ ಮೋಟಾರ್ ವೆಹಿಕಲ್ ಆಫೀಸರ್ ಗೆ ಹೋಗುತ್ತದೆ. ಅವರು ಎಲ್ಲವೂ ಪರೀಶೀಲನೆ ಮಾಡಿ ನಿಮಗೆ ಡ್ರೈವಿಂಗ್ ಲೈಸೆನ್ಸ್ ನೀಡುತ್ತಾರೆ.

ಹೆಚ್ಚಾಗಿ ಸ್ಕೂಲ್ ಕಾಲೇಜ್ ವಿಧ್ಯಾರ್ಥಿನಿ ಯಾರನ್ನೂ ಕರೆತರಲು ದೊಡ್ಡದಾದ ಬಸ್ ಗಳು ಬೇಕಾಗುತ್ತವೆ. ಯಾರೆಲ್ಲ ಈ ರೀತಿಯಾಗಿ ಡ್ರೈವಿಂಗ್ ಸ್ಕೂಲ್ ಗೆ ಹೋಗಿ ಅಲ್ಲಿ ಚೆನ್ನಾಗಿ ಟ್ರೈನಿಂಗ್ ತೆಗೆದುಕೊಂಡು ಡ್ರೈವಿಂಗ್ ಲೈಸೆನ್ಸ್ ಪಡೆಯಲು ಬಯಸುತ್ತಾರೆ ಯೋ ಅಂಥವರಿಗೆ ನೀವು ಈ ಮಾಹಿತಿ ಹಾಗೂ ಎಲ್ಲ ವಿಷಯವು ಅನ್ವಯ ಆಗುತ್ತದೆ. ಈ ಕಾನೂನು ಜುಲೈ ನಿಂದಾ ಕಾರ್ಯಾಚರಣೆ ಗೆ ಬರಲಿದೆ ಹೀಗಾಗಿ ಮಾನ್ಯತೆ ಹಾಗೂ ಸಾಮರ್ಥ್ಯ ಇರುವವರು ಸರ್ಕಾರದ ಮಾನ್ಯತೆಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ. ಈ ರೀತಿಯಾಗಿ ಕೆಲಸದಲ್ಲಿ ಆಸಕ್ತಿ ಇರುವವರು ಈ ಕಾನೂನು ಅಡಿಯಲ್ಲಿ ನೀವು ಅರ್ಜಿಯನ್ನು ಸಲ್ಲಿಸಹುದು. ನಿಮಗೆ ಈ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ.

Leave a Reply

Your email address will not be published. Required fields are marked *