ನಮಸ್ತೇ ಪ್ರಿಯ ಓದುಗರೇ, ನಮ್ಮ ಗ್ರಾಮೀಣ ಪ್ರದೇಶಗಳ ಬೆಳವಣಿಗೆ ಹಾಗೂ ಜನರ ಸರ್ವತೊಮುಖ ಅಭಿವೃದ್ಧಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯು ಸಹಕಾರಿ ಆಗಿದೆ. ಗ್ರಾಮೀಣ ಪಂಚಾಯತಿ ಅಡಿಯಲ್ಲಿ ಬರುವ ಪ್ರತಿ ರೈತರಿಗೆ ಅದು ಬಿಪಿಎಲ್ ಕಾರ್ಡ್ ಎಪಿಎಲ್ ಕಾರ್ಡ್ ಹೊಂದಿರುವ ಎಲ್ಲ ಸಣ್ಣ ಪುಟ್ಟ ರೈತ ಬಾಂಧವ್ಯರಿಗೆ ಸರ್ಕಾರ ವೂ ಮಹತ್ವದ ಸಿಹಿ ಸುದ್ದಿ ಯೊಂದನ್ನು ನೀಡಿದೆ. ಅದು ಏನು ಅಂತೀರಾ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಅದರ ಬಗ್ಗೆ ಸಂಪೂರ್ಣವಾಗಿ ವಿವರವಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಬನ್ನಿ. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಅನೇಕ ಅನುದಾನವನ್ನು ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಮಾಡಿ ಕೊಡಲಾಗಿದೆ. ಹಾಗಾದರೆ ಈ ಉದ್ಯೋಗ ಖಾತರಿ ಯೋಜನೆಯಡಿ ಎಷ್ಟು ಅನುದಾನವನ್ನು ಮಂಜೂರು ಮಾಡಲಾಗಿದೆ. ಯಾವ ರೀತಿ ಯೋಜನೆಗಳಿಗೆ ಬಿಡುಗಡೆ ಮಾಡುತ್ತಾರೆ. ಇದರಿಂದ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಹೇಗೆ ಅನುಕೂಲವಾಗುತ್ತದೆ ಅಂತ ನಾವು ನಿಮಗೆ ತಿಳಿಸಿ ಕೊಡುತ್ತೇವೆ ಬನ್ನಿ.
ರೈತರಿಗೆ ಬಿಪಿಎಲ್ ಕಾರ್ಡ್ ಎಪಿಎಲ್ ಕಾರ್ಡ್ ಹೊಂದಿದ್ದಾರೆ ಎಲ್ಲಿಲ್ಲದ ಪ್ರಯೋಜನಗಳು ದೊರೆಯುತ್ತವೆ. ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಗ್ರಾಮೀಣ ಪಂಚಾಯತಿ ಅಡಿಯಲ್ಲಿ ಬರುವ ಹಾಗೂ ಈ ಎರಡು ಕಾರ್ಡುಗಳನ್ನು ಹೊಂದಿರುವ ರೈತರಿಗೆ ಕೇಂದ್ರ ಸರ್ಕಾರವು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅನುದಾನವನ್ನು ನೀಡುತ್ತಿದೆ. ದನದ ಕೊಟ್ಟಿಗೆಯನ್ನು ನಿರ್ಮಾಣ ಮಾಡಲು ಕೇಂದ್ರ ಸರ್ಕಾರ 32000 ಸಾವಿರ ರೂಪಾಯಿ ನೀಡಲಾಗುತ್ತಿದೆ. ಹಾಗೂ ಅಷ್ಟೇ ಅಲ್ಲದೇ ಕೊಳವೆ ಬಾವಿಗಳನ್ನು ನಿರ್ಮಿಸಲು 20000 ಸಾವಿರ ರೂಪಾಯಿ ಧನ ಸಹಾಯ ಮಾಡುತ್ತಿದೆ ಕೇಂದ್ರ ಸರ್ಕಾರವೂ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಸಹಾಯ ಮಾಡುತ್ತದೆ. ಇನ್ನೂ ಕೃಷಿ ಭೂಮಿಯನ್ನು ಸಮತಟ್ಟು ಮಾಡಲು ಒಂದು ಎಕರೆ ಜಮೀನಿಗೆ ಹದಿಮೂರು ಸಾವಿರ ರೂಪಾಯಿಗಳನ್ನು ನೀಡುತ್ತಿದೆ. ಇಂಗು ಗುಂಡಿ ನಿರ್ಮಾಣ ಮಾಡಲು ಮಾದರಿ ಒಂದಕ್ಕೆ ಐದು ಸಾವಿರ ರೂಪಾಯಿ ಮತ್ತು ಮಾದರಿ ಎರಡಕ್ಕೆ ಮೂವತ್ತಮೂರು ಸಾವಿರ ರೂಪಾಯಿ ಹಣವನ್ನು ಇಂಗು ಗುಂಡಿ ನಿರ್ಮಾಣ ಕ್ಕಾಗಿ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ನೀಡಲಾಗುತ್ತಿದೆ. ಹಾಗೂ ಬಾವಿಯನ್ನು ಕೊರೆಸಲು 28 ಲಕ್ಷ ರೂಪಾಯಿ ಧನ ಸಹಾಯ ಕೂಡ ಮಾಡುತ್ತಿದೆ. ಅಷ್ಟೇ ಅಲ್ಲದೇ ಬದು ನಿರ್ಮಾಣ ಕಾಂಪೋಸ್ಟ್ ಗುಂಡಿ ಕೆರೆ ನಿರ್ಮಾಣ ಹಿಪ್ಪುನೇರಳೆ ತೋಟದ ನಿರ್ವಹಣೆ ಸಸಿ ನೆಡುವುದು ಶೌಚಾಲಯ ನಿರ್ಮಾಣ ಅಡಿಕೆ ತೋಟ ನಿರ್ವಹಣೆ ತೆಂಗು ಗೇರು ಕರಿಮೆಣಸು ಬಾಳೆ ಮುಂತಾದವುಗಳಿಗೆ ಈ ಯೋಜನೆಯಡಿ ಅನುದಾನವನ್ನು ನೀಡಲಾಗುತ್ತಿದೆ.
ಮತ್ತು ವಸತಿ ಫಲಾನುಭವಿಗಳಿಗೆ ಒಂದು ಮನೆಗೆ 24750 ರೂಪಾಯಿ ಅನುದಾನ ನೀಡುತ್ತಿದೆ. ಸಣ್ಣ ಮತ್ತು ಅತೀ ಸಣ್ಣ ರೈತರು ಎಪಿಎಲ್ ಕಾರ್ಡ್ ಬಿಪಿಎಲ್ ಕಾರ್ಡ್ ಹೊಂದಿರುವವರು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಅನೇಕ ಪ್ರಯೋಜನಗಳನ್ನು ಪಡೆಯಲು ಈ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅಷ್ಟೇ ಅಲ್ಲದೇ ಇದು ಎಲ್ಲ ರೈತ ಮಿತ್ರರೀಗೆ ಸಂತಸದ ವಿಷಯ ಆಗಿದೆ. ಇಂತಹ ಹಲವಾರು ಯೋಜನೆಗಳು ರೈತರಿಗೆ ಮತ್ತಷ್ಟು ಒಳ್ಳೆಯ ಒಳ್ಳೆಯ ಕೆಲಸಗಳನ್ನು ಮಾಡಲು ಪ್ರೋತ್ಸಾಹ ಮಾಡಿದಂತಾಗುತ್ತದೆ. ಇದರಿಂದ ಸರ್ಕಾರಕ್ಕೆ ಕೂಡ ಲಾಭ ದೊರೆಯುತ್ತದೆ. ಹಾಗೂ ರೈತರಿಗೂ ಸಹಾಯ ಮಾಡಿದಂತಾಗುತ್ತದೆ. ಆದ್ದರಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಈ ಎಲ್ಲಾ ಕಾರ್ಯಗಳಿಗೆ ಕೇಂದ್ರ ಸರ್ಕಾರವು ಅನುದಾನವನ್ನು ನೀಡುತ್ತಿರುವ ಎಲ್ಲ ಲಾಭಗಳನ್ನು ಪ್ರತಿ ರೈತರು ಪಡೆದುಕೊಳ್ಳಿ.