ಮನೆಯ ಮುಂದೆ ಈ ಗಿಡಗಳನ್ನು ಬೆಳೆಸಿ ನೋಡಿ ಸಾಕು ಸೊಳ್ಳೆಗಳು ಹತ್ತಿರ ಕೂಡ ಬರುವುದಿಲ್ಲ

ಉಪಯುಕ್ತ ಮಾಹಿತಿ

ನಮಸ್ತೇ ಪ್ರಿಯ ಓದುಗರೇ ನಮ್ಮ ಸುತ್ತ ಮುತ್ತಲಿನ ವಾತಾವರಣ ಅಥವಾ ಪರಿಸರವು ಚೆನ್ನಾಗಿದ್ದರೆ ನಾವು ಕೂಡ ಚೆನ್ನಾಗಿ ಇರುತ್ತೇವೆ. ಹಾಗೂ ನಮ್ಮ ಆರೋಗ್ಯವು ಕೂಡ ಚೆನ್ನಾಗಿ ಇರುತ್ತದೆ. ಇಲ್ಲವಾದರೆ ವಾತಾವರಣವು ಚೆನ್ನಾಗಿಲ್ಲದೆ ಹೋದಲ್ಲಿ ನಮ್ಮ ಆರೋಗ್ಯವು ಕೆಡುವುದಲ್ಲದೆ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಸುತ್ತಲಿನ ಪರಿಸರವು ಚೆನ್ನಾಗಿದ್ದರೆ ಜೀವ ಜಂತುಗಳು ಸೊಳ್ಳೆಗಳು ಕೀಟಗಳು ಸೂಕ್ಷ್ಮ ಜೀವಿಗಳು ಕೂಡ ಬರುವುದಿಲ್ಲ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೇ ಯಾವ ಗಿಡಗಳನ್ನು ನೆಡುವುದರಿಂದ ಕೀಟಗಳು ಸೊಳ್ಳೆಗಳು ಹತ್ತಿರ ಸುಳಿಯುವುದಿಲ್ಲ ಅಂತ ಗಿಡಗಳ ಪಟ್ಟಿಯನ್ನು ತಿಳಿದು ಕೊಳ್ಳೋಣ ಬನ್ನಿ. ಮೊದಲಿಗೆ ಈರುಳ್ಳಿ ಮತ್ತು ಬೆಳ್ಳುಳ್ಳಿ. ಈ ಸಸ್ಯವನ್ನು ಬೆಳೆಯುವುದರಿಂದ ಸೊಳ್ಳೆಗಳ ಕಾಟ ಇರುವುದಿಲ್ಲ. ಏಕೆಂದರೆ ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಬಲವಾದ ಗಾಢವಾದ ವಾಸನೆ ಇರುವುದರಿಂದ ಇದು ಸೊಳ್ಳೆಗಳು ಮತ್ತು ಇತರೆ ಕೀಟಗಳನ್ನು ದೂರ ಮಾಡುತ್ತದೆ. ಇಲ್ಲವಾದರೆ ನಿಮಗೆ ಈ ಸಸ್ಯಗಳನ್ನು ಬೆಳೆಸಲು ಜಾಗ ಇಲ್ಲದೇ ಹೋದಲ್ಲಿ ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನು ಚಿಕ್ಕ ಭಾಗ ಕತ್ತರಿಸಿ ಮನೆಯ ಮುಂದೆ ಇಡಬೇಕು, ಇದರಿಂದ ಸೊಳ್ಳೆಗಳು ಕೀಟಗಳು ಮನೆಯ ಹತ್ತಿರ ಸುಳಿಯುವುದಿಲ್ಲ.

ಇನ್ನೂ ಎರಡನೆಯದು ನಿಂಬೆ ಗಿಡ, ಎಲ್ಲ ಗಿಡಗಳಲ್ಲಿ ಅದ್ಭುತವಾದ ವಾಸನೆ ಯನ್ನು ಹೊಂದಿರುವ ಗಿಡಗಳಲ್ಲಿ ಒಂದಾಗಿದೇ ಈ ನಿಂಬೆ ಗಿಡ. ಇದು ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಮತ್ತು ಸೊಳ್ಳೆಗಳನ್ನು ತಡೆಯುತ್ತದೇ. ಮನೆಯ ಮುಂದೆ ನಿಂಬೆ ಗಿಡವು ಇದ್ದರೆ ಸೊಳ್ಳೆಗಳ ಕಾಟ ಇರುವುದಿಲ್ಲ. ಮನೆಯ ಹಾಲ್ ನಲ್ಲಿ ಅಥವಾ ಮನೆಯಲ್ಲಿ ಸೊಳ್ಳೆಗಳು ಜಾಸ್ತಿ ಬಂದು ಸೇರಿದ್ದರೆ ಒಂದು ನಿಂಬೆ ಹಣ್ಣು ಕತ್ತರಿಸಿ ಎರಡು ಹೋಳುಗಳನ್ನು ಮಾಡಿ ಅದಕ್ಕೆ ಲವಂಗವನ್ನು ಚುಚ್ಚಿ ಸೊಳ್ಳೆಗಳು ಇರುವ ಜಾಗದಲ್ಲಿ ಇಡೀ. ಇದರಿಂದ ಸೊಳ್ಳೆಗಳು ಓಡಿ ಹೋಗುತ್ತವೆ. ಇನ್ನೂ ತುಳಸಿ ಗಿಡ. ಮನೆಯ ಮುಂದೆ ತುಳಸಿ ಗಿಡ ಇದ್ದರೆ ಸೊಳ್ಳೆಗಳ ಕಾಟ ಇರುವುದಿಲ್ಲ. ತುಳಸಿ ಆರೋಗ್ಯಕ್ಕೆ ಒಳ್ಳೆಯದು. ಇದು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಹಾಗೂ ಹಲವಾರು ಕಾಯಿಲೆಗಳನ್ನು ಹೋಗಲಾಡಿಸುವ ಶಕ್ತಿಯನ್ನು ಹೊಂದಿದೆ. ಹಾಗೂ ಸೊಳ್ಳೆಗಳನ್ನು ಓಡಿಸಲು ಇದು ರಾಮಬಾಣ ಇದ್ದಂತೆ. ಈ ತುಳಸಿ ಗಿಡದ ಹೂವುಗಳನ್ನು ಕಂಡು ಸೊಳ್ಳೆಗಳು ಓಡಿ ಹೋಗುತ್ತವೆ. ಸೊಳ್ಳೆಗಳನ್ನು ದೂರವಿರಿಸಲು, ರೋಜಮರಿ ಸಸ್ಯವು ನೈಸರ್ಗಿಕ ನಿವಾರಕ ಆಗಿದೆ.

ಹಾಗೂ ನಮ್ಮ ಅಡುಗೆ ಮನೆಯಲ್ಲಿ ಮತ್ತು ಮಸಾಲೆ ಪದಾರ್ಥಗಳಲ್ಲಿ ಪ್ರಸಿದ್ಧಿಯನ್ನು ಪಡೆದಿರುವ ಲವಂಗ ಕೂಡ ಒಂದಾಗಿದೆ. ಇದು ಅತಿಯಾದ ಘಮಘಮಿಸುವ ವಾಸನೆಯನ್ನು ಹೊಂದಿದೆ. ಮನೆಯ ಮುಂದೆ ಒಂದೇ ಒಂದು ಲವಂಗದ ಗಿದವನ್ನುನೀವು ಬೆಳೆಸಿದರೆ ಸಾಕು ಈ ಗಿಡದ ಹೂವಿನಿಂದ ಬರುವ ವಾಸನೆಯಿಂದ ಸೊಳ್ಳೆಗಳು ಹತ್ತಿರ ಕೂಡ ಬರುವುದಿಲ್ಲ. ಇನ್ನೂ ಪುದೀನಾ ಸಸ್ಯ. ಇದು ಕೂಡ ಒಂದು ಅದ್ಭುತವಾದ ಉಪಶಮನ ಕಾರಿ ನಿವಾರಕ ಆಗಿದೆ. ಇದು ಬೇಗನೆ ಬೆಳೆಯುವ ಕಾರಣ ಇದನ್ನು ಪಾಲನೆ ಪೋಷಣೆ ಮಾಡುವುದು ತುಂಬಾನೆ ಅಗತ್ಯವಿದೆ. ಹಾಗೂ ಅಧಿಕವಾದ ಕಾಳಜಿಯನ್ನು ವಹಿಸಬೇಕಾಗುತ್ತದೆ. ಆದರೆ ಈ ಸಸ್ಯದ ವಾಸನೆಯಿಂದ ಸೊಳ್ಳೆಗಳು ನಿಜಕ್ಕೂ ಓಡಿ ಹೋಗುತ್ತವೆ. ಆದ್ದರಿಂದ ಇಂಥಹ ಬಗೆಯ ಸಸ್ಯಗಳನ್ನು ಬೆಳೆಸುವುದರಿಂದ ಸೊಳ್ಳೆಗಳಿಂದ ಕೀಟಗಳಿಂದ ಕ್ರಿಮಿಗಳಿಂದ ದೂರವಿರಬಹುದು. ಹಾಗೂ ನಮ್ಮ ಪರಿಸರವು ಇದರಿಂದ ಸುಂದರವಾಗಿ ಸುರಕ್ಷಿತವಾಗಿ ಕಾಣುತ್ತದೆ. ನೋಡಿದ್ರಲಾ ಸಸ್ಯಗಳ ಪಟ್ಟಿಯನ್ನು ಹಾಗಾದರೆ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಶುಭದಿನ.

Leave a Reply

Your email address will not be published. Required fields are marked *