ಬೆಟ್ಟದ ನೆಲ್ಲಿಕಾಯಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ನೂರೆಂಟು ಲಾಭಗಳು

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ಬೆಟ್ಟದ ನೆಲ್ಲೆಕಾಯಿ ಗುಡ್ಡದ ನೆಲ್ಲೆಕಾಯಿ ಅಂತ ಕರೆಸಿಕೊಳ್ಳುವ ಈ ಕಾಯಿಯು ಬಹಳ ಪ್ರಭಲವಾದ ನೈಸರ್ಗಿಕವಾದ ಔಷಧಗಳಲ್ಲಿ ಒಂದಾಗಿದೆ. ಅಷ್ಟೇ ಅಲ್ಲದೇ ಇದು ಹಲವಾರು ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಈ ನೆಲ್ಲೆಕಾಯಿಯು ರಸಾಯನ ಆಯುರ್ವೇದದ ಪದ್ದತಿಯಲ್ಲಿ ಸ್ಥಾನವನ್ನು ಪಡೆದಿದೆ. ರಸಾಯನ ಅಂಶ ಅಂದರೆ ಇದು ಆಯುರ್ವೇದದ ಅಂಶಗಳನ್ನು ಒಳಗೊಂಡಿರುತ್ತದೆ.ಆಯಸ್ಸು ವರ್ಧನೆಯಲ್ಲಿ ಮತ್ತು ಶಕ್ತಿ ವರ್ಧನೆಯಲ್ಲಿ ಅತ್ಯಂತ ಪ್ರಭಾವಶಾಲಿ ಆಗಿ ಕೆಲಸವನ್ನು ನಿರ್ವಹಿಸುತ್ತದೆ. ಈ ನೆಲ್ಲಿಕಾಯಿ ತಿನ್ನಲು ರುಚಿಯಾಗಿ ಇರುವುದಲ್ಲದೇ ಆರೋಗ್ಯಕ್ಕೆ ಹೇಳಿ ಮಾಡಿಸಿರುವ ಕಾಯಿಯಾಗಿದೆ ಅಂತ ಹೇಳಿದರೆ ತಪ್ಪಾಗಲಾರದು. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನೆಲ್ಲಿಕಾಯಿ ತಿನ್ನುವುದರಿಂದ ಆಗುವ ನೂರೆಂಟು ಲಾಭಗಳನ್ನು ಇಂದು ನಾವು ನಿಮಗೆ ತಿಳಿಸಿ ಕೊಡುತ್ತೇವೆ ಬನ್ನಿ. ಮೊದಲನೆಯದಾಗಿ ನೆಲ್ಲಿಕಾಯಿ ಸೇವನೆ ಮಾಡುವುದರಿಂದ ಅಥವಾ ಅದರ ರಸವನ್ನು ಕುಡಿಯುವುದರಿಂದ ನಮ್ಮ ಕಣ್ಣಿನ ಆರೋಗ್ಯವು ಸುಧಾರಿಸುತ್ತದೆ. ಹಾಗೂ ಇದರಲ್ಲಿರುವ ವಿಟಮಿನ್ ಸಿ ಅಂಶವು ಕಣ್ಣಿನ ಸ್ನಾಯುಗಳನ್ನು ದಷ್ಟ ಪುಷ್ಟವಾಗಿ ಇರುವಂತೆ ನೋಡಿಕೊಳ್ಳುತ್ತದೇ. ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ. ಹಾಗೂ ಕಣ್ಣಿಗೆ ಸಂಭಂದ ಪಟ್ಟ ಯಾವುದೇ ಕಾಯಿಲೆಗಳಿದ್ದರೆ ಆವುಗಳನ್ನು ಗುಣಪಡಿಸುತ್ತದೆ.

ಅಷ್ಟೇ ಅಲ್ಲದೆ ಈಗಿನ ಯುವಜನತೆಯಲ್ಲಿ ಕಾಡುವ ಸಾಮಾನ್ಯವಾದ ಸಮಸ್ಯೆ ಅಂದರೆ ಅದು ಕೂದಲು ಉದುರುವುದು. ಹೌದು ಈ ಸಮಸ್ಯೆಯಂತೂ ಸರ್ವೇ ಸಾಮಾನ್ಯ ಆಗಿ ಹೋಗಿ ಬಿಟ್ಟಿದೆ. ಈಗಿನ ಆಧುನಿಕ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಮತ್ತು ಕೆಲಸದ ಒತ್ತಡವು ಇದಕ್ಕೆ ಕಾರಣವಾಗಿದೆ. ಹಾಗೂ ಈ ಎಲ್ಲ ಸಮಸ್ಯೆಗಳಿಂದ ದೇಹವು ನಿಶ್ಯಕ್ತಿ ಸುಸ್ತು ಇಂದ ಕೂಡಿರುತ್ತದೆ. ಹೀಗಾಗಿ ಕೂದಲಿನ ಸಂಪೂರ್ಣವಾದ ಆರೈಕೆಯನ್ನು ಮಾಡಲು ಆಗುವುದಿಲ್ಲ. ಹೀಗಾಗಿ ಒಮ್ಮೆ ಕೂದಲು ಹಾಳಾದರೆ ಅದನ್ನು ಮತ್ತೆ ಅದರ ನೈಜ ಸ್ಥಿತಿಗೆ ತರಲು ಸಾಧ್ಯವಾಗುವುದಿಲ್ಲ. ಕೂದಲು ನೈಸರ್ಗಿಕವಾಗಿ ಬೆಳೆಯಲು ನೆಲ್ಲಿಕಾಯಿ ಸಾಂಪ್ರದಾಯಕ ಪರಿಹಾರ ಆಗಿದೆ. ಕೂದಲು ಉದುರುವುದಕ್ಕೆ ಕಾರಣ ಅದರಲ್ಲಿ ಪೋಷಕಾಂಶಗಳ ಕೊರತೆ. ಆದರೆ ಈ ನೆಲ್ಲಿಕಾಯಿಯಲ್ಲಿ ಕೂದಲಿಗೆ ಜೀವ ತುಂಬುವ ಜೀವಕೋಶಗಳನ್ನು ಒಳಗೊಂಡಿದೆ. ನಿಯಮಿತವಾಗಿ ನೆಲ್ಲಿಕಾಯಿ ಸೇವನೆ ಮಾಡುವುದರಿಂದ ಧನಾತ್ಮಕವಾಗಿ ಕೂಡ ಕೂದಲು ಸುಂದರವಾಗಿ ಉದ್ದವಾಗಿ ದಟ್ಟವಾಗಿ ಕಾಂತಿಯುಕ್ತವಾಗಿ ಬೆಳೆಯುತ್ತವೆ. ಕೂದಲು ಉದುರುವುದು ಕೂಡ ತಡೆಗಟ್ಟುತ್ತದೆ.

ಇನ್ನು ಸಕ್ಕರೆ ಕಾಯಿಲೆ ಇದ್ದವರು ಕೂಡ ಬೆಟ್ಟದ ನೆಲ್ಲೆಕಾಯಿ ಜ್ಯುಸ್ ಉತ್ತಮ. ಈ ನೆಲ್ಲಿಕಾಯಿ ಜ್ಯುಸ್ ಕುಡಿಯುವುದರಿಂದ, ಸಕ್ಕರೆ ಕಾಯಿಲೇ ಕಡಿಮೆ ಆಗುತ್ತದೆ ಮತ್ತು ಇನ್ಸುಲಿನ್ ಮಟ್ಟವು ಸರಿಯಾಗಿರಿಸಲು ಸಹಾಯ ಮಾಡುತ್ತದೆ. ಈ ನೆಲ್ಲಿಕಾಯಿ ತಿನ್ನುವುದರಿಂದ ದೇಹದಲ್ಲಿ ಶಕ್ತಿ ಹೆಚ್ಚುತ್ತದೆ ಮತ್ತು ಸ್ನಾಯುಗಳು ಬಲಗೊಳ್ಳುತ್ತವೆ. ಮತ್ತು ಹೃದಯದ ಯಾವುದೇ ಸಮಸ್ಯೆಗಳು ಬರದಂತೆ ತಡೆಯುತ್ತದೆ. ನಿಮಗೆ ಗೊತ್ತೇ? ಮುಖದಲ್ಲಿ ಮೊಡವೆಗಳು ಮೂಡಲು ಕಾರಣವೇನು ಅಂತ ಗೆಳೆಯರೇ. ಹೌದು ಇದಕ್ಕೆ ಮುಖ್ಯ ಕಾರಣ ರಕ್ತದಲ್ಲಿ ಅಶುದ್ಧತೆ. ಹೌದು ರಕ್ತವು ಶುದ್ಧವಾಗಿಲ್ಲ ಅಂದರೆ ಮುಖದಲ್ಲಿ ಮೊಡವೆಗಳು ಮೂಡುತ್ತವೆ. ಇದಕ್ಕೆ ನೀವು ಬೆಟ್ಟದ ನೆಲ್ಲಿಕಾಯಿ ತಂದು ಅದರ ರಸವನ್ನು ಹಿಂಡಿ ಅದರಲ್ಲಿ ಜೇನುತುಪ್ಪವನ್ನು ಬೆರೆಸಿ ಕುಡಿಯುವುದರಿಂದ ರಕ್ತವು ಶುದ್ದಿಯಾಗುತ್ತದೆ. ಹಾಗೂ ಮೊಡವೆಗಳು ಕಡಿಮೆ ಆಗುತ್ತವೆ ಮತ್ತು ಮುಖವು ಕಾಂತಿಯಾಗಿ ಕಾಣುತ್ತದೆ. ಈ ನೆಲ್ಲಿಕಾಯಿ ಜ್ಯುಸ್ ಕುಡಿಯುವುದರಿಂದ ದೇಹದಲ್ಲಿ ಶೇಖರಣೆ ಆಗಿರುವ ಅಧಿಕವಾದ ಕೊಬ್ಬು ಕರಗುತ್ತದೆ. ಇದರಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಇನ್ನು ಪೈಲ್ಸ್ ಸಮಸ್ಯೆ ಇರುವವರಿಗೆ, ಮಲಬದ್ಧತೆ ಸಮಸ್ಯೆ ಕಂಡು ಬರುವುದು ಸಹಜವಾಗಿದೆ.ಇಂಥವರು ಈ ನೆಲ್ಲಿಕಾಯಿ ಜ್ಯುಸ್ ಕುಡಿಯುವುದರಿಂದ ಈ ಸಮಸ್ಯೆಯಿಂದ ಪಾರಾಗಬಹುದು. ನೋಡಿದ್ರಲಾ ಬೆಟ್ಟದ ನೆಲ್ಲಿಕಾಯಿ ಅದ್ಭುತವಾದ ಆರೋಗ್ಯಕರ ಗುಣಗಳನ್ನು. ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಶುಭದಿನ.

Leave a Reply

Your email address will not be published. Required fields are marked *