ನಮಸ್ತೇ ಪ್ರಿಯ ಓದುಗರೇ, ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲಿ ಕಾಡುವ ಸರ್ವೇ ಸಾಮಾನ್ಯ ಸಮಸ್ಯೆ ಏನೆಂದರೆ ಅದುವೇ ಮಂಡಿ ನೋವು. ಈ ಮಂಡಿ ನೋವು ಅನ್ನುವುದು ಮೊದಲಿನ ಕಾಲದಲ್ಲಿ ಹಿರಿಯರಿಗೆ ವಯಸ್ಸಾದ ಮೇಲೆ ಬರುತ್ತಿತ್ತು. ಆದರೆ ಈಗಿನ ಕಾಲದಲ್ಲಿ ಯುವಕರಲ್ಲಿ ಕಾಡುವ ಸಮಸ್ಯೆಗಳಲ್ಲಿ ಈ ಮಂಡಿ ನೋವು ಒಂದಾಗಿದೆ. ಹಾಗಾಗಿ ನಾವು ಕಾಯಿಲೆಗಳು ಬರದಂತೆ ಎಚ್ಚರಿಕೆ ವಹಿಸಬೇಕು. ಹಾಗೂ ಈ ಮಂಡಿ ನೋವು ಯಾಕೆ ಬರುತ್ತದೆ. ಇದು ಬರಲು ಕಾರಣಗಳು ಏನು ಹಾಗೂ ಇದು ಬರದಂತೆ ಯಾವ ರೀತಿಯಾಗಿ ತಡೆಯಬೇಕು ಮತ್ತು ಯಾವ ರೀತಿಯ ಉತ್ತಮವಾದ ಆಹಾರವನ್ನು ಸೇವಿಸಬೇಕು ಅನ್ನುವ ಸಂಪೂರ್ಣ ಮಾಹಿತಿಯನ್ನು ಇಂದಿನ ಲೇಖನದಲ್ಲಿ ತಿಳಿಸಿ ಕೊಡುತ್ತೇವೆ ಬನ್ನಿ. ಮೊದಲಿಗೆ ಈ ಮಂಡಿ ನೋವು ಬರಲು ಕಾರಣಗಳೆಂದರೆ ಮಧ್ಯಪಾನ ಧೂಮಪಾನ ಸೋಮಾರಿತನ ಅಧಿಕ ಒತ್ತಡ ದ ಜೀವನ ಆಲಸ್ಯತನ ಹಾಗೂ ಅತಿಯಾದ ಉಪ್ಪು ಸೇವನೆ ಮಾಡುವುದು ಮತ್ತು ಮಂಡಿಗೆ ನೋವು ಬಿದ್ದಿದ್ದರೆ ಈ ನೋವು ಕಾಣಿಸಿಕೊಳ್ಳುತ್ತದೆ ಹಾಗಾದರೆ ಈ ನೋವಿಗೆ ಏನು ಪರಿಹಾರವೇ ಇಲ್ಲವೇ? ಇದರಿಂದ ಸಾಯುವವರೆಗೂ ಇದೆ ರೀತಿಯಾಗಿ ನೋವು ಅನುಭವಿಸಬೇಕೆ ಅಂತ ಬಾಧೆ ಪಡಬೇಡಿ ಖಂಡಿತವಾಗಿ ಇದಕ್ಕೆ ಪರಿಹಾರವಿದೆ ಗೆಳೆಯರೇ.
ಈ ಮಂಡಿ ನೋವು ಕಾಡುತ್ತಿದ್ದರೆ ಹಾಗೂ ಮುಂದೆ ಜೀವನದಲ್ಲಿ ಬರಬಾರದು ಅಂದರೆ ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣೆ ತೆಗೆದುಕೊಂಡು ಸ್ವಲ್ಪ ಬಿಸಿ ಮಾಡಿ ಅದನ್ನು ಮಂಡಿಗೆ ಹಚ್ಚಿ. ಮಸಾಜ್ ಮಾಡಿ ಇದರಿಂದ ನೋವು ನಿವಾರಣೆ ಆಗುತ್ತದೇ. ಹಾಗೂ ರಕ್ತ ಸಂಚಾರ ಸರಿಯಾಗಿ ಆಗುತ್ತದೆ. ಮತ್ತು ಮಂಡಿ ನೋವು ಇದ್ದವರು ಸ್ನಾನಕ್ಕೆ ಹೋಗುವ ಮುನ್ನ ಈ ಎಣ್ಣೆಯಿಂದ ನಿಮ್ಮ ಮಂಡಿ ನೋವಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ನಂತರ ಇದರ ಮೇಲೆ ಬಿಸಿ ನೀರು ಹಾಕಿಕೊಳ್ಳಿ. ಇದರಿಂದ ಮಂಡಿ ನೋವು ನಿವಾರಣೆ ಆಗುತ್ತದೆ. ಇನ್ನು ಮಂಡಿ ನೋವು ಇಲ್ಲದೇ ಇರುವವವರು ಹಾಗೂ ಮುಂದೆ ನಿಮಗೆ ಮಂಡಿ ನೋವು ಕಾಣಿಸಬಾರದು ಅಂದರೆ ವಾರದಲ್ಲಿ ಈ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಿ. ಇನ್ನೂ ನಮ್ಮ ದೇಹವು ದಷ್ಟಪುಷ್ಟವಾಗಿ ಗಟ್ಟಿಯಾಗಿ ನಮ್ಮ ಸ್ನಾಯುಗಳು ಮೂಳೆಗಳು ಬಲವಾಗಿ ಇರಬೇಕು ಅಂದರೆ ದೇಹಕ್ಕೆ ವಿಟಮಿನ್ ಡಿ ಅವಶ್ಯಕತೆ ಇರುತ್ತದೆ. ಈ ಕೊರತೆ ಯಾರಿಗೆ ಇರುವುದಿಲ್ಲ ಅಂಥವರಿಗೆ ಮಂಡಿ ನೋವು ಕಾಣಿಸಿಕೊಳ್ಳುವುದಿಲ್ಲ.
ಈ ವಿಟಮಿನ್ ಡಿ ಎಂಬ ಅಂಶವು ನಮಗೆ ಸೂರ್ಯನ ಕಿರಣಗಳಿಂದ ಸಿಗುತ್ತದೆ. ಆದ್ದರಿಂದ ಬೆಳೆಗ್ಗೆ ಎದ್ದು ತಕ್ಷಣವೇ ಹತ್ತರಿಂದ ಹದಿನೈದು ನಿಮಿಷಗಳವರೆಗೆ ನಿಮ್ಮ ಮೈಯನ್ನು ಸೂರ್ಯನ ಕಿರಣಗಳ ಮುಂದೆ ಒಡ್ಡಿ ಇದರಿಂದ ಸೂರ್ಯನ ಕಿರಣಗಳು ಉಚಿತವಾಗಿ ಸಿಗುತ್ತದೆ. ಜೊತೆಗೆ ವಿಟಮಿನ್ ಡಿ ಅಂಶವಿರುವ ಆಹಾರವಾದ ಬಾದಾಮಿ ಮೀನು ಹಾಲು ಮೊಸರು ಕಾಳುಗಳು ವಾಲ್ ನಟ್ಸ್ ಅಗಸೆ ಬೀಜ ಇವುಗಳು ಮೂಳೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ದೇಹಕ್ಕೆ ವಿಟಮಿನ್ ಡಿ ಮಾತ್ರವಲ್ಲದೇ ವಿಟಮಿನ್ ಸಿ ಯ ಅವಶ್ಯಕತೆ ಕೂಡ ಇರುತ್ತದೆ. ಕಾರ್ಟಿಲೇಜ್ ಎಂಬ ಮೂಳೆ ಪದರದ ಭಾಗವು ಕೋಲಾಜಿನ್ ಎಂಬ ಅಂಶವು ಪುಷ್ಟಿ ನೀಡುತ್ತದೆ ಇದು ವಿಟಮಿನ್ ಡಿ ನಲ್ಲಿ ಸಿಗುತ್ತದೆ. ಇದು ಮೂಳೆಗಳನ್ನು ಗಟ್ಟಿ ಮಾಡುತ್ತದೆ ಮತ್ತು ಮೂಳೆಗಳ ಸವೇತವನ್ನು ತಡೆಯುತ್ತದೆ.ವಿಟಮಿನ್ ಸಿ ಅಂಶವಿರುವ ಆಹಾರಗಳು ಅಂದರೆ ಕಿತ್ತಳೆ ಮೊಸಂಬಿ ಅನಾನಸ್ ನಿಂಬೆ ಮೊಳಕೆ ಕಾಳುಗಳು ಇತ್ಯಾದಿ. ಇನ್ನೂ ಅರಿಶಿನ ಹಾಲು ಕುಡಿಯುವುದರಿಂದ ಮತ್ತು ಅರಿಷಿನವನ್ನು ನೀರಿನಲ್ಲಿ ಹಾಕಿ ಪೇಸ್ಟ್ ಮಾಡಿ ಮಂಡಿ ನೋವು ಇರುವ ಜಾಗದಲ್ಲಿ ಹಚ್ಚಿ ಹತ್ತು ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದರಿಂದ ಮಂಡಿ ನೋವು ನಿವಾರಣೆ ಆಗುತ್ತದೆ. ಶುಭದಿನ.