ಕ್ಯಾರೆಟ್ ಪರಂಗಿ ಹಣ್ಣು ಬೆಳ್ಳುಳ್ಳಿ ಅರಿಶನದಿಂದ ಜಂತು ಹುಳುಗಳನ್ನು ನಾಶ ಪಡಿಸಬಹುದು

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ಮೊದಲಿನ ಕಾಲದಲ್ಲಿ ಜಂತು ಹುಳಗಳು ಕೇವಲ ಮಕ್ಕಳಲ್ಲಿ ಕಾಡುವ ಸಮಸ್ಯೆಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳಿರಲಿ ಅಥವಾ ದೊಡ್ಡವರಿರಲಿ ಜಂತುಗಳು ಸರ್ವೇ ಸಾಮಾನ್ಯವಾಗಿದೆ. ಸಾಮಾನ್ಯವಾಗಿ ಜಂತು ಹುಳಗಳು ಆದರೆ ದೇಹದಲ್ಲಿ ರಕ್ತ ಹೀನತೆ ಸಮಸ್ಯೆ ಕಂಡು ಬರುತ್ತದೆ. ಆಹಾರದಲ್ಲಿ ರುಚಿಯನ್ನು ಪತ್ತೆ ಹಚ್ಚಲು ಆಗುವುದಿಲ್ಲ ದೇಹದ ತೂಕವು ಕೂಡ ಹೆಚ್ಚುತ್ತದೆ, ಅಥವಾ ಕಡಿಮೆ ಕೂಡ ಆಗಬಹುದು. ದೇಹದಲ್ಲಿ ಸುಸ್ತು ನಿಶ್ಯಕ್ತಿ ಆಯಾಸ ಸತತವಾಗಿ ಕಾಡುವುದು ಹಾಗೂ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚುವುದು. ಹೀಗೆ ನೂರೆಂಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ಇದಕ್ಕೆ ಪರಿಹಾರವಾದರು ಏನು? ಕೇವಲ ಔಷಧಗಳ ಮೊರೆ ಹೋಗಬೇಕೆಂದ್ದೇನು ಇಲ್ಲ ಗೆಳೆಯರೇ. ಮನೆಯಲ್ಲಿ ನೀವು ಮನೆಮದ್ದುಗಳನ್ನು ತಯಾರಿಸಿ ಜಂತು ಹುಳಗಳಿಂದ ಪಾರಾಗಬಹುದು. ಈ ಜಂತು ಹುಳುಗಳು ಅಂದರೆ ಏನು ಗೊತ್ತೇ? ಹೊಟ್ಟೆಯಲ್ಲಿ ಸಿಹಿಯಾದ ಅಂಶ ಅಧಿಕವಾದರೆ ಈ ಜಂತು ಹುಳುಗಳು ಕಾಣಿಸಿಕೊಳ್ಳುತ್ತದೆ. ತದ ನಂತರ ಕಲುಷಿತವಾದ ಪ್ರದೇಶದಲ್ಲಿ ವಾಸಿಸುವ ಜನರಲ್ಲಿ ಅವರ ಹೊಟ್ಟೆಯ ಹಾಗೂ ಕರುಳಿನ ಭಾಗದಲ್ಲಿ ಇಂತಹ ಜಂತು ಹುಳುಗಳು ಕಂಡು ಬರುತ್ತವೆ ಅಂತ ವೈದ್ಯರು ತಿಳಿಸಿದ್ದಾರೆ.

ಹೌದು ಚಿಕ್ಕ ಮಕ್ಕಳಲ್ಲಿ ಜಂತು ಹುಳುಗಳು ಆದರೆ ಅವರಿಗೆ ಜಂತು ಹುಳುಗಳ ಔಷಧವನ್ನು ನೀಡುತ್ತೇವೆ. ಆದರೆ ದೊಡ್ಡವರಿಗೆ ಜಂತು ಹುಳುಗಳ ಔಷಧವೂ ಅಷ್ಟೊಂದು ಬಲವಾಗಿ ಪರಿಣಾಮ ಬೀರುವುದಿಲ್ಲ. ನಮ್ಮ ಹೊಟ್ಟೆಯಲ್ಲಿ ಜಂತು ಹುಳುಗಳು ಆದರೆ ನಾವು ಸೇವಿಸುವ ಆಹಾರವನ್ನು ಅವುಗಳು ಸೇವಿಸಿ ಆಹಾರದಲ್ಲಿರುವ ಎಲ್ಲ ಪೋಷಕಾಂಶಗಳನ್ನು ಚೆನ್ನಾಗಿ ಹೀರಿಕೊಂಡು ಹೊಟ್ಟೆಯೊಳಗೆ ಜೀವಿಸುತ್ತವೆ. ಹೊರಗಡೆಯಿಂದ ಮನುಷ್ಯನ ಶಕ್ತಿ ನಷ್ಟವಾಗುತ್ತಾ ಹೋಗುತ್ತವೆ. ಇನ್ನೂ ನಿಮಗೆ ಹೊಟ್ಟೆ ಉಬ್ಬರ ,ಹೊಟ್ಟೆ ನೋವು ವಾಂತಿ ಕೆಮ್ಮು ಗ್ಯಾಸ್ಟ್ರಿಕ್ ಸಮಸ್ಯೆಗಳು ಕಾಣಿಸುತ್ತಿದ್ದರೆ ಖಂಡಿತವಾಗಿ ನಿಮ್ಮ ಕರುಳಿನಲ್ಲಿ ಜಂತು ಹುಳುಗಳು ಆಗಿವೆ ಅಂತ ಅನುಮಾನ ವ್ಯಕ್ತ ಪಡಿಸಬಹುದು. ಅಷ್ಟೇ ಅಲ್ಲದೇ ಮುಖ್ಯವಾಗಿ ಹೊಟ್ಟೆಯಲ್ಲಿ ಕರುಳಿನಲ್ಲಿ ಜಂತು ಹುಳಗಳು ಆಗುವುದಕ್ಕೆ ಮೂಲ ಕಾರಣ ಹಣ್ಣು ಹಂಪಲುಗಳನ್ನು ಚೆನ್ನಾಗಿ ತೊಳೆಯದೆ ಸೇವನೆ ಮಾಡುವುದು. ಹೌದು ಇದರಿಂದ ಜಂತು ಹುಳುಗಳು ಹೊಟ್ಟೆಯಲ್ಲಿ ಉತ್ಪತ್ತಿ ಆಗುತ್ತವೆ. ಇನ್ನೂ ಈ ಜಂತು ಹುಳುಗಳನ್ನು ಹೇಗೆ ಹೊರಗೆ ಹಾಕಬಹುದು ಅಂತ ಹೇಳುವುದಾದರೆ, ಮೊದಲಿಗೆ ಕ್ಯಾರೆಟ್ ತುರಿಯನ್ನು ಚೆನ್ನಾಗಿ ಸೇವನೆ ಮಾಡಿರಿ. ಹಾಗೂ ಕೊಬ್ಬರಿ ತುರಿಯನ್ನು ಚೆನ್ನಾಗಿ ತಿನ್ನಿ.

ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯ ಒಂದೆರಡು ಎಸಳುಗಳನ್ನು ಸೇವನೆ ಮಾಡುವುದರಿಂದ ಜಂತು ಹುಳುಗಳ ಸಮಸ್ಯೆಯಿಂದ ಅತ್ಯಂತ ಬೇಗನೆ ಮುಕ್ತಿ ಪಡೆಯಬಹುದು.ಇನ್ನೂ ಅರಿಶಿನದಲ್ಲಿ ಕರ್ಕ್ಯುಮಿನ್ ಎಂಬ ಅಂಶ ಇರುವ ಕಾರಣ ಇದು ಆಂಟಿ ಸೆಪ್ಟಿಕ್ ಮತ್ತು ಆಂಟಿ ಮೈಕ್ರೋಬಿಯಲ್ ಗುಣ ಲಕ್ಷಣಗಳನ್ನು ಹೊಂದಿದೆ. ಒಂದು ಗ್ಲಾಸ್ ಮಜ್ಜಿಗೆಗೆ 1 ಟೇಬಲ್ ಚಮಚ ಅರಿಶಿನ ಹಾಕಿ ಮಧ್ಯಾಹ್ನದ ಸಮಯದಲ್ಲಿ ಊಟ ಮಾಡಿದ ನಂತರ ಕುಡಿಯುವುದರಿಂದ ಹೊಟ್ಟೆಯಲ್ಲಿರುವ ಜಂತು ಹುಳುಗಳು ನಾಶವಾಗುತ್ತವೆ. ಮತ್ತು ನಿತ್ಯವೂ ಪರಂಗಿ ಅನ್ನು ಸೇವನೆ ಮಾಡುತ್ತಾ ಬಂದರೆ ಅಥವಾ ಅದರ ರಸವನ್ನು ಹಾಲಿನಲ್ಲಿ ಹಾಕಿ ಜೇನುತುಪ್ಪವನ್ನು ಬೆರೆಸಿ ಕುಡಿಯುವುದರಿಂದ ಜಂತು ಹುಳುಗಳು ನಾಶವಾಗುತ್ತವೆ. ಕೊನೆಯದಾಗಿ ಹೇಳಬೇಕೆಂದರೆ ಉಗುರುಗಳನ್ನು ಕಚ್ಚುವುದನ್ನು ನಿಲ್ಲಿಸಬೇಕು. ಯಾರಿಗೆ ಉಗುರುಗಳನ್ನು ಹಚ್ಚುವ ಹವ್ಯಾಸ ಇರುತ್ತದೆಯೋ ಅವರಿಗೆ ಜಂತು ಹುಳುಗಳ ಕಾಟ ತಪ್ಪಿದ್ದಲ್ಲ. ಆದ್ದರಿಂದ ಈ ಜಟವನ್ನು ಬಿಡಿ. ಹಾಗೂ ಹಣ್ಣು ಹಂಪಲುಗಳನ್ನು ಚೆನ್ನಾಗಿ ತೊಳೆದು ಸೇವನೆ ಮಾಡಿ.ಶುಭದಿನ.

Leave a Reply

Your email address will not be published. Required fields are marked *