ನಮಸ್ತೇ ಪ್ರಿಯ ಓದುಗರೇ, ಕರ್ಪೂರವನ್ನು ನಾವು ಪೂಜೆಗೆ ಬಳಸುತ್ತೇವೆ. ಆದರೆ ಇದು ಪೂಜೆಗೆ ಮಾತ್ರ ಸೀಮಿತವಲ್ಲದೇ ಆರೋಗ್ಯಕ್ಕೂ ಒಳ್ಳೆಯದು. ಅದರಲ್ಲೂ ತಲೆ ಕೂದಲಿಗೆ ತ್ವಚೆಯ ಆರೋಗ್ಯವನ್ನು ಒಳಗೊಂಡಂತೆ ಅನೇಕ ರೀತಿಯ ಪ್ರಯೋಜನವನ್ನು ಪಡೆಯಬಹುದು ಸಿನಮೋಮನ್ ಕ್ಯಾಂಫೋರ್ ಎಂದು ಕೂಡ ಕರ್ಪೂರವನ್ನು ಕರೆಯುತ್ತಾರೆ. ಏಕೆಂದರೆ ಇದು ಒಂದು ಜಾತಿಯ ಸಸ್ಯವಾಗಿದ್ದು ಇದನ್ನು ಈ ಸಸ್ಯದ ತೊಗಟೆಯಿಂದ ತಯಾರಿಸುತ್ತಾರೆ. ನಾವು ಪ್ರೌಢ ಶಾಲೆಯಲ್ಲಿ ಇದ್ದಾಗ ಉತ್ಪತನ ಕ್ರಿಯೆಗೆ ಉದಾಹರಣೆ ಆಗಿ ನೀಡುತ್ತಿದ್ದರು. ಕಾರಣ ಇದನ್ನು ಕರಗಿಸಿದಾಗ ಅದು ದ್ರವ ರೂಪ ಪಡೆಯದೇ ನೇರವಾಗಿ ಅನಿಲ ರೂಪಕ್ಕೆ ಪರಿವರ್ತಿತವಾಗುತ್ತಿತ್ತು. ಹೀಗಾಗಿ ಇದು ಸೂಸುವ ಪರಿಮಳ ವಾತಾವರಣದಲ್ಲಿ ಹಿತ ಮಾಡುತ್ತದೆ. ಕರ್ಪೂರದ ವಾಸನೆ ಎಲ್ಲರಿಗೂ ತುಂಬಾನೇ ಇಷ್ಟವಾಗುತ್ತದೆ. ಹೌದು ಕರ್ಪೂರವನ್ನು ಪೂಜೆಗೆ ಮಾತ್ರವಲ್ಲದೆ ಆರೋಗ್ಯ ಮತ್ತು ಇನ್ನಿತರ ಆರೋಗ್ಯ ವರ್ಧಕ ಕಾರ್ಯಗಳಿಗೂ ಬಳಸಬಹುದು ಅಂತ ಯಾರಿಗೂ ತಿಳಿದೇ ಇಲ್ಲ ಗೆಳೆಯರೇ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಕರ್ಪೂರ ಪೂಜೆಗೆ ಮಾತ್ರವಲ್ಲದೆ ಆರೋಗ್ಯಕ್ಕೂ ಕೂಡ ಒಳ್ಳೆಯದು ಅಂತ ತಿಳಿಯೋಣ. ಮೊದಲನೆಯದು ನೀರಿನಲ್ಲಿ ಕರ್ಪೂರವನ್ನು ಹಾಕಿ ಇರುವೆಗಳು ಇರುವ ಜಾಗದಲ್ಲಿ ಹಾಕಿದರೆ ಇರುವೆಗಳು ಓಡಿ ಹೋಗುತ್ತವೆ.
ಒಂದು ತುಂಡು ಕರ್ಪೂರವನ್ನು ಹಾಸಿಗೆ ಕೆಳಗಡೆ ಇಟ್ಟು ರಾತ್ರಿ ಪೂರ್ತಿ ಬಿಟ್ಟರೆ ಮಂಚದ ಕೆಳಗಡೆ ಇರುವ ಎಲ್ಲ ಹುಳುಗಳು ಸತ್ತು ಹೋಗುತ್ತವೆ. ಇನ್ನೂ ಮನೆಯಲ್ಲಿ ಮಾಡಿರುವ ಕರ್ಪೂರದ ಎಣ್ಣೆಯನ್ನು ಗರ್ಭಧಾರಣೆ ಸಮಯದಲ್ಲಿ ಆಗುವ ನೋವನ್ನು ತಡೆಯಲು ಬಳಕೆ ಮಾಡಬಹುದು. ಅದಕ್ಕೆ ಕೊಬ್ಬರಿ ಎಣ್ಣೆ ಮತ್ತು ಸಾಸಿವೆ ಎಣ್ಣೆಯಲ್ಲಿ ಕರ್ಪೂರವನ್ನು ಹಾಕಿ ಬಿಸಿ ಮಾಡಿ ಕೈ ಕಾಲುಗಳ ಮೇಲೆ ಹಾಕುವುದರಿಂದ ವಿಶ್ರಾಂತಿ ದೊರೆಯುತ್ತದೆ. ಮತ್ತು ಬಾದಾಮಿ ಎಣ್ಣೆ,ಕೊಬ್ಬರಿ ಎಣ್ಣೆ, ಆಲಿವ್ ಆಯಿಲ್ ನಲ್ಲಿ ಕರ್ಪೂರವನ್ನು ಹಾಕಿ ಬಿಸಿ ಮಾಡಿ ನಿಮ್ಮ ಪೂರ್ತಿ ದೇಹವನ್ನು ಚೆನ್ನಾಗಿ ಮಸಾಜ್ ಮಾಡಿಕೊಳ್ಳುವುದರಿಂದ ನಿಮ್ಮ ತ್ವಚೆಯು ಕಾಂತಿಯುತವಾಗುತ್ತದೆ. ಹಾಗೂ ಸಾಸಿವೆ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ಸ್ವಲ್ಪ ಕರ್ಪೂರವನ್ನು ಹಾಕಿ ಮಗುವಿನ ಎದೆಯ ಮೇಲೆ ಸ್ವಲ್ಪ ನಿಧಾನವಾಗಿ ಉಜ್ಜಿದರೆ ಎದೆಯಲ್ಲಿ ಕಫವಾಗಿದ್ದರೆ ಅದು ನಿವಾರಣೆ ಆಗುತ್ತದೆ.
ಕೊಬ್ಬರಿ ಎಣ್ಣೆಯಲ್ಲಿ ಕರ್ಪೂರವನ್ನು ಹಾಕಿ ಬಿಸಿ ಮಾಡಿ ಕೂದಲಿಗೆ ಚೆನ್ನಾಗಿ ಮಸಾಜ್ ಮಾಡುವುದರಿಂದ ಕೂದಲು ಉದುರುವುದಿಲ್ಲ. ಸಣ್ಣ ಪ್ರಮಾಣದಲ್ಲಿ ಕರ್ಪೂರವನ್ನು ನೀರಿನಲ್ಲಿ ಬೆರೆಸಿ ಅಲರ್ಜಿ ಸಮಸ್ಯೆಯನ್ನು ಹೋಗಲಾಡಿಸಬಹುದು. ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಚರ್ಮದ ಎಲ್ಲ ಬಗೆಯ ಕಾಯಿಲೆಗಳು ವಾಸಿಯಾಗುತ್ತವೆ. ಹಾಗೂ ಕರ್ಪೂರದ ವಾಸನೆ ವಾತಾವರಣದಲ್ಲಿ ಇರುವ ಎಲ್ಲ ಬ್ಯಾಕ್ಟೀರಿಯಾ ಕ್ರಿಮಿ ಕೀಟಗಳನ್ನು ನಾಶ ಮಾಡುತ್ತದೆ. ಅಷ್ಟೇ ಅಲ್ಲದೇ ಕರ್ಪೂರದ ಸುಗಂಧ ದ್ರವ್ಯದಿಂದ ಮಾನಸಿಕ ಒತ್ತಡ ಮನಸ್ಸಿನ ಖಿನ್ನತೆ ದುಗುಡುತನ ಒತ್ತಡ ಅಸ್ತಮಾ ಕಾಯಿಲೆ ಇನ್ನಿತರ ಎಲ್ಲ ಬಗೆಯ ಕಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ ಈ ಕರ್ಪೂರ. ಯಾವುದೋ ಕಾರಣಕ್ಕೆ ದೇಹದ ಭಾಗದಲ್ಲಿ ಬಾವು ಮತ್ತು ಉರಿಯೂತ ಕಾಣಿಸಿಕೊಂಡಿದ್ದರೆ ಇದರ ಉರಿಯನ್ನು ಶಮನಗೊಳಿಸಲು ಕರ್ಪೂರವನ್ನು ಬಳಸಬಹುದು. ಸಂಧಿವಾತ ಜನರಿಗೆ ಕರ್ಪೂರದ ವಾಸನೆ ರಾಮಬಾಣ. ಕರ್ಪೂರವನ್ನು ಎಣ್ಣೆಯಲ್ಲಿ ಹಾಕಿ ನೋವು ಇರುವ ಕಾಲುಗಳಿಗೆ ಸಂಧಿಗಳಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿಕೊಂಡರೆ ಗುಣಮುಖವಾಗುತ್ತದೆ.ವಿಕ್ಸ್ ವೇಪೋರಬ್, ಝಂಡು ಬಾಮ್ ಮೊದಲಾದ ಸಾಮಾನ್ಯ ನೋವು ನಿವಾರಕ ಮತ್ತು ಶೀತ ನಿವಾರಕ ಔಷಧಿಗಳಲ್ಲಿ ಕರ್ಪೂರವನ್ನು ಈ ಗುಣಕ್ಕಾಗಿ ಬಳಸಲಾಗುತ್ತದೆ. ಕರ್ಪೂರದ ಆರೋಗ್ಯಕರ ಪ್ರಯೋಜನಗಳು ನಿಮಗೆ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಶುಭದಿನ.