ಮನೆ ಕಟ್ಟುವಾಗ ಈ ವಿಷಯವನ್ನು ತಿಳಿದು ಕೊಂಡರೆ ಮನೆಯ ಗೋಡೆ ಬಿರುಕು ಬಿಡುವುದಿಲ್ಲ ಹಾಗೂ ಬಣ್ಣ ಮಾಸಿ ಹೋಗುವುದಿಲ್ಲ

ಉಪಯುಕ್ತ ಮಾಹಿತಿ

ನಮಸ್ತೇ ಪ್ರಿಯ ಓದುಗರೇ, ಸಾಮಾನ್ಯವಾಗಿ ಮನೆ ಕಟ್ಟುವಾಗ ಎಲ್ಲರೂ ಇಟ್ಟಿಗೆಯನ್ನು ಬಳಕೆ ಮಾಡುತ್ತಾರೆ ಅದರಲ್ಲೂ ನಾಲ್ಕು ಇಂಚಿನ ಇಟ್ಟಿಗೆಯನ್ನು ಮನೆಯೊಳಗಿನ ಪಾರ್ಟಿಶನ್ ಮಾಡುವುದಕ್ಕೆ ಬಳಸುತ್ತಾರೆ. ಆದರೆ ಹೊರಗಡೆ ಆರು ಮತ್ತು ಒಂಬತ್ತುಇಂಚಿನ ಇಟ್ಟಿಗೆಯನ್ನೂ ಬಳಕೆ ಮಾಡುತ್ತಾರೆ. ನಾಲ್ಕು ಇಂಚಿನ ಇಟ್ಟಿಗೆಯಲ್ಲಿ ಕಡಿಮೆ ಶಕ್ತಿ ಇದ್ದು ಮಳೆ ಬಂದಾಗ ತೇವಾಂಶವನ್ನು ಒಳಗಡೆಯಿಂದ ಬಿಟ್ಟುಕೊಳ್ಳುತ್ತದೆ. ಹೊರಗಡೆ ಆರು ಮತ್ತು ಒಂಬತ್ತು ಇಂಚಿನ ಇಟ್ಟಿಗೆಯನ್ನು ಬಳಕೆ ಮಾಡುವ ಬದಲು ಮಾಡುವ ರೀತಿಯಲ್ಲಿ ಸರಿಯಾಗಿ ಮಾಡಿದರೆ ಹೊರಗಡೆ ಕೂಡ ನಾಲ್ಕು ಇಂಚಿನ ಇಟ್ಟಿಗೆಯನ್ನು ಉಪಯೋಗಿಸಬಹುದು. ಸಾಮಾನ್ಯವಾಗಿ ಇಟ್ಟಿಗೆಯನ್ನು ಬಳಕೆ ಮಾಡುವುದರಲ್ಲಿ ಚಾಣಾಕ್ಷತೆ ಇರಬೇಕು. ಕೆಲವರು ಬಳಸುವ ಇಟ್ಟಿಗೆಯಿಂದ ಹಚ್ಚಿದ ಬಣ್ಣ ಮಾಸಿ ಹೋಗುತ್ತದೆ. ಬಿರುಕುಗಳು ಬಿಡುತ್ತವೆ. ಗೋಡೆಯ ಅಂದವೇ ಹಾಳಾಗುತ್ತದೆ. ಇದರಿಂದ ಮನೆಯೂ ಸುಂದರವಾಗಿ ಕಾಣುವುದಿಲ್ಲ. ಮುಖ್ಯವಾಗಿ ನಾವು ಮನೆಯನ್ನು ಕಟ್ಟಬೇಕಾದರೆ ಒಳಗಡೆ ಹೊರಗಡೆ ಎಷ್ಟು ಇಂಚಿನ ಇಟ್ಟಿಗೆಯನ್ನು ಬಳಕೆ ಮಾಡಿದರೆ ಹಣವೂ ಉಳಿತಾಯವಾಗುತ್ತದೆ ಹಾಗೂ ಮನೆಯೂ ಅಂದವಾಗಿ ಮತ್ತು ಗೋಡೆಯು ಸುಂದರವಾಗಿ ಕಾಣುತ್ತದೆ ಅಂತ ನಾವು ಸ್ಮಾರ್ಟ್ ಆಗಿ ತಲೆಯನ್ನು ಓಡಿಸಿ ಕೆಲಸವನ್ನು ಮಾಡಬೇಕು.

ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ನಾಲ್ಕು ಇಂಚಿನ ಇಟ್ಟಿಗೆಯನ್ನು ಬಳಕೆ ಮಾಡಿಕೊಂಡು ಸದೃಢವಾದ ಗೋಡೆಯನ್ನು ಹೇಗೆ ಕಟ್ಟುವುದು ಅಂತ ತಿಳಿಸಿಕೊಡುತ್ತೇವೆ ಬನ್ನಿ. ಕೆಲವು ಜನರು ಹಣವನ್ನು ಉಳಿತಾಯ ಮಾಡುವುದಕ್ಕಾಗಿ ನಾಲ್ಕರಿಂದ ಐದು ರೂಪಾಯಿ ಬೆಲೆ ಇರುವ ಇಟ್ಟಿಗೆಯನ್ನು ಖರೀದಿ ಮಾಡುತ್ತಾರೆ. ಇನ್ನೂ ಕೆಲವರು ಏಳರಿಂದ ಎಂಟು ರೂಪಾಯಿಗೆ ಬೆಲೆ ಬಾಳುವ ಇಟ್ಟಿಗೆಯನ್ನು ಖರೀದಿ ಮಾಡುತ್ತಾರೆ. ಆದರೆ ನಾವು ಯಾವಾಗ್ಲೂ ಯೋಚನೆ ಮಾಡಬೇಕು. ಮನೆ ಕಟ್ಟುವುದು ಒಂದೇ ಒಂದು ಬಾರಿ ಹಣ ಖರ್ಚಾದರೂ ಪರವಾಗಿಲ್ಲ ಒಳ್ಳೆಯ ಗುಣ ಮಟ್ಟದ ಇಟ್ಟಿಗೆಗಳನ್ನು ಬಳಕೆ ಮಾಡಬೇಕು ಅದರಲ್ಲೂ ಸಿಮೆಂಟ್ ನಿಂದ ತಯಾರಿಸಿದ 27-28 ರೂಪಾಯಿ ಇರುವ ಒಳ್ಳೆಯ ಉತ್ತಮ ಗುಣ ಮಟ್ಟದ ಇಟ್ಟಿಗೆಯನ್ನು ಖರೀದಿ ಮಾಡಬೇಕು. ಇವುಗಳಿಂದ ನಾವು ಗಟ್ಟಿಮುಟ್ಟಾದ ಗೋಡೆಯನ್ನು ಕಟ್ಟಬಹುದು. ಎರಡನೆಯದು ಇಟ್ಟಿಗೆಗಳನ್ನು ಬಳಕೆ ಮಾಡುವ ಮುನ್ನ ಅವುಗಳನ್ನು ಚೆನ್ನಾಗಿ ನೀರಿನಲ್ಲಿ ನೆನೆಸಿಡಬೇಕು. ತೇವವಾದ ಇಟ್ಟಿಗೆಗಳು ಸಿಮೆಂಟ್ ಮೇಲೆ ಇಟ್ಟಾಗ ಸರಿಯಾಗಿ ಗಟ್ಟಿಯಾಗಿ ಕುಳಿತುಕೊಳ್ಳುತ್ತವೆ. ಹಾಗೂ ಇದಕ್ಕೆ ಕ್ಯೂರಿಂಗ್ ಕೂಡ ಕಡಿಮೆ ಮಾಡಬಹುದು. ಹೀಗಾಗಿ ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆಗಳು ಬರುವುದಿಲ್ಲ. ಒಣ ಇಟ್ಟಿಗೆ ಬಳಕೆ ಮಾಡುವುದರಿಂದ ಸಿಮೆಂಟ್ ನಲ್ಲಿ ಇರುವ ನೀರಿನ ಅಂಶವನ್ನು ಹೀರಿಕೊಳ್ಳುತ್ತದೆ. ಆಗ ಸಿಮೆಂಟ್ ಗಟ್ಟಿಯಾಗುತ್ತದೆ. ಇದರಿಂದ ಗೋಡೆಯಲ್ಲಿ ಸೀಳು ಕಾಣುತ್ತದೆ.

ಹೀಗಾಗಿ ನೀವು ಯಾವುದೇ ಇಟ್ಟಿಗೆಯನ್ನು ಬಳಕೆ ಮಾಡಿದರು ಕೂಡ ಅವುಗಳನ್ನು ತೇವ ಮಾಡಿ ಉಪಯೋಗಿಸಿ. ಇನ್ನೂ ಮಧ್ಯ ಮಧ್ಯ ತುಂಡಾಗಿರುವ ಇಟ್ಟಿಗೆಗಳನ್ನು ಬಳಕೆ ಮಾಡಬಾರದು. ನಾಲ್ಕು ಇಂಚಿನ ಇಟ್ಟಿಗೆಗಳು ಮೊದಲೇ ದುರ್ಬಲ ಆಗಿರುತ್ತವೆ. ಹಾಗಾಗಿ ಮಧ್ಯದಲ್ಲಿ ತುಂಡಾಗಿರುವ ಇಟ್ಟಿಗೆಗಳನ್ನು ಉಪಯೋಗಿಸಬಾರದು. ಸಿಮೆಂಟ್ ಇಟ್ಟುಗೆಯಲ್ಲಿ ಬಳಸಿದರೂ ಕೂಡ ಮಣ್ಣಿನ ಇಟ್ಟಿಗೆಯಲ್ಲಿ ಬಳಕೆ ಮಾಡಬಾರದು. ಇನ್ನೂ ಮಣ್ಣಿನ ಇಟ್ಟಿಗೆ ಬಳಕೆ ಮಾಡುವ ವೇಳೆಯಲ್ಲಿ 1:3 ಅನುಪಾತದಲ್ಲಿ ಸಿಮೆಂಟ್ ಮತ್ತು ಮರಳನ್ನು ತೆಗೆದುಕೊಳ್ಳಬೇಕು. ಇದರಿಂದ ಉತ್ತಮವಾದ ಗೋಡೆಯನ್ನು ಕಟ್ಟಬಹುದು. ನಾಲ್ಕು ಇಂಚಿನ ಇಟ್ಟಿಗೆಯನ್ನು ಬಳಸಿ ಗೋಡೆಯನ್ನು ನಿರ್ಮಿಸುವಾಗ ಸಿಮೆಂಟ್ ಮಿಶ್ರಣವನ್ನು ಅರ್ಧ ಗಂಟೆಯೊಳಗೆ ಖಾಲಿ ಮಾಡಬೇಕು. ಏಕೆಂದರೆ ಸಿಮೆಂಟ್ ಗಟ್ಟಿಯಾಗುತ್ತದೆ.

ನಾಲ್ಕು ಇಂಚಿನ ಇಟ್ಟಿಗೆ ಮೇಲೆ ಮಾರ್ಕಿಂಗ್ ಇರುತ್ತದೆ. ಈ ಮಾರ್ಕಿಂಗ್ ಮೇಲೆ ಬರುವಂತೆ ನೀವು ನೋಡಿಕೊಳ್ಳಬೇಕು. ಇದರಿಂದ ಬೋಡಿಂಗ್ ಸರಿಯಾಗಿ ಬರುತ್ತದೆ ಗೋಡೆಯು ಗಟ್ಟಿಯಾಗುತ್ತದೆ. ಒಂದು ದಿನಕ್ಕೆ ಮೂರು ಅಡಿ ಒಂದು ಮೀಟರ್ನವರೆಗೆ ಮಾತ್ರ ಕಟ್ಟಬೇಕು. ಅದರ ಮೇಲೆ ಕಾಂಕ್ರೀಟ್ ಹಾಕಬೇಕು. ಮರುದಿನ ಕೆಲಸವನ್ನು ಮುಂದುವರಿಸಬೇಕು.ಜೊತೆಗೆ ನಾಲ್ಕು ಇಂಚಿನ ಇಟ್ಟಿಗೆ ಬಳಸಿ ಕಟ್ಟುವ ಗೋಡೆಗಳಿಗೆ ಏಳರಿಂದ ಹತ್ತು ದಿನಗಳವರೆಗೆ ಕ್ಯೂರಿಂಗ್ ಮಾಡಲೇಬೇಕು ಬಿಸಿಲು ಹೆಚ್ಚಿದ್ದಾಗ ದಿನದಲ್ಲಿ ಎರಡರಿಂದ ಮೂರು ಸಾರಿ ಕ್ಯೂರಿಂಗ್ ಮಾಡಲೇಬೇಕು. ಇಟ್ಟಿಗೆಯನ್ನು ನಿಲ್ಲಿಸುವಾಗ ಬಾಗಿಲು ಕಿಟಕಿಗಳನ್ನು ಮಾಡಿಕೊಳ್ಳುವುದು ಉತ್ತಮ.

Leave a Reply

Your email address will not be published. Required fields are marked *