ನಮಸ್ತೇ ಪ್ರಿಯ ಓದುಗರೇ, ಚಿನ್ನದ ಆಭರಣಗಳು ಅಥವಾ ವಸ್ತುಗಳು ಅಂದರೆ ಎಲ್ಲರಿಗೂ ಬಲು ಪ್ರೀತಿ. ಅದರಲ್ಲೂ ಮಹಿಳೆಯರಿಗಂತಲೇ ಈ ಚಿನ್ನವನ್ನು ದೇವರು ಸೃಷ್ಟಿ ಮಾಡಿದ್ದಾನೆ ಅನ್ನಿಸುತ್ತದೆ. ಚಿನ್ನವನ್ನು ಎಲ್ಲರೂ ಹಾಕಿಕೊಂಡರೆ ಚೆನ್ನಾಗಿ ಕಾಣುತ್ತಾರೆ ಆದರೆ ಕೆಲವರಿಗೆ ಚಿನ್ನವು ಶುಭವನ್ನು ತಂದು ಕೊಟ್ಟರೆ ಇನ್ನೂ ಕೆಲವರಿಗೆ ಲಾಭದ ಬದಲು ನಷ್ಟವಾಗುತ್ತದೆ. ಈ ಮಾತು ಕೇಳಿ ನಿಮಗೆ ಅಚ್ಚರಿ ಅನ್ನಿಸಬಹುದು. ಆದರೆ ಇದನ್ನು ನೀವು ಓದಿಕೊಂಡರೆ ಖಂಡಿತವಾಗಿ ಅರ್ಥವಾಗುತ್ತದೆ. ಹಾಗಾದ್ರೆ ಬನ್ನಿ ಆ ವಿಷಯವಾದರೂ ಏನು ಅಂತ ಇಂದಿನ ಲೇಖನದಲ್ಲಿ ತಿಳಿಯೋಣ ಬನ್ನಿ. ಚಿನ್ನ ಅದೃಷ್ಟದ ಲೋಹ. ಇದು ಸಂತೋಷ ಹಾಗೂ ಸಮೃದ್ಧಿಯ ಸಂಕೇತವಾಗಿದೆ. ಚಿನ್ನವನ್ನು ಅನೇಕ ಅಂಶಗಳನ್ನು ಸೇರಿಕೊಂಡು ಮಾಡಿರುತ್ತಾರೆ. ಹೀಗಾಗಿ ವಿಜ್ಞಾನಿಗಳು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಅಂತ ಹೇಳಿದ್ದಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಚಿನ್ನವನ್ನು ಧರಿಸುವುದರಿಂದ ಅದೃಷ್ಟ ಒಲಿದು ಬರುವುದರ ಜೊತೆಗೆ ಗ್ರಹಗಳ ಎಲ್ಲ ದೋಷವೂ ದೂರವಾಗುತ್ತದೆ ಅಂತ ನಂಬಲಾಗಿದೆ.
ಅಷ್ಟೇ ಅಲ್ಲದೇ ವ್ಯಕ್ತಿಯ ಏಕಾಗ್ರತೆ ಕೂಡ ಹೆಚ್ಚುತ್ತದೆ. ಹೃದ್ರೋಗದ ಎಲ್ಲ ಸಮಸ್ಯೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ಚಿನ್ನವನ್ನು ಸ್ವರ್ಣ ಭಸ್ಮವನ್ನು ಔಷಧೀಯ ಲೋಹದಿಂದ ಮಾಡಿರುತ್ತಾರೆ. ಚಿನ್ನವನ್ನು ಧರಿಸುವುದರಿಂದ ಎಲ್ಲರಿಗೂ ಲಾಭ ಉಂಟಾಗುವುದಿಲ್ಲ. ಹಾಗೂ ಚಿನ್ನವನ್ನು ಧರಿಸಬೇಕಾದರೆ ಅನೇಕ ವಿಷಯಗಳನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಹಾಗಾದ್ರೆ ಬನ್ನಿ ಇಂದಿನ ಲೇಖನದಲ್ಲಿ ಚಿನ್ನವನ್ನು ಯಾರು ಧರಿಸಬಾರದು ಅಂತ ಹಾಗೂ ಯಾವ ದಿನದಂದು ಧರಿಸಬೇಕು ಅಂತ ತಿಳಿಸಿ ಕೊಡುತ್ತೇವೆ ಬನ್ನಿ ಮೇಲೆ ಹೇಳಿದ ಹಾಗೆ ಚಿನ್ನ ಎಲ್ಲರಿಗೂ ಆಗಿ ಬರುವುದಿಲ್ಲ. ಅದನ್ನು ಹಾಕಿಕೊಳ್ಳುವ ಮುನ್ನ ನಾವು ಕೆಲವೊಂದು ಎಚ್ಚರಿಕೆ ಕ್ರಮಗಳನ್ನು ವಹಿಸಬೇಕು. ಮೊದಲಿಗೆ ಅತಿ ಕೋಪವುಳ್ಳ ವ್ಯಕ್ತಿಗಳು ವಾಚಾಳಿಯಾಗಿರುವ ಜನರು ಬಂಗಾರವನ್ನು ಧರಿಸಬಾರದು. ಇನ್ನೂ ತುಲಾ ರಾಶಿ ಮತ್ತು ಮಕರ ರಾಶಿಯವರೂ ಚಿನ್ನವನ್ನು ಕಡಿಮೆ ಪ್ರಮಾಣದಲ್ಲಿ ಧರಿಸುವುದು ಒಳಿತು. ಹಾಗೂ ವೃಷಭ, ಮಿಥುನ, ಕನ್ಯಾ ಮತ್ತು ಕುಂಭ ರಾಶಿಯವರು ಕೂಡ ಬಂಗಾರದ ಆಭರಣ ಧರಿಸುವುದು ಒಳ್ಳೆಯದಲ್ಲ. ಹೌದು ಈ ರಾಶಿಯವರು ಚಿನ್ನವನ್ನು ಧರಿಸುವುದರಿಂದ ನಷ್ಟವಾಗುತ್ತದೆ. ಆದ್ದರಿಂದ ತೀವ್ರ ಕಡಿಮೆ ಚಿನ್ನ ಒಡವೆಗಳನ್ನು ಧರಿಸಿ.
ಇನ್ನೂ ಗುರು ಗ್ರಹ ದೋಷ ಇರುವವರು ಎಂದಿಗೂ ಚಿನ್ನದ ಆಭರಣಗಳು ಧರಿಸಕೂಡದು. ಹೌದು ಚಿನ್ನದ ಬಣ್ಣವೂ ಹಳದಿ ಆಗಿರುತ್ತದೆ. ಅದನ್ನು ಗುರು ಗ್ರಹಕ್ಕೆ ಹೋಲಿಕೆ ಮಾಡಲಾಗುತ್ತದೆ. ಆದ್ದರಿಂದ ಗ್ರಹ ದೋಷ ಇರುವವರು ಎಂದಿಗೂ ಚಿನ್ನದ ಆಭರಣಗಳನ್ನು ಹಾಕಿಕೊಳ್ಳಬೇಡಿ. ಸೊಂಟಕ್ಕೆ ಚಿನ್ನದ ಆಭರಣಗಳನ್ನು ಹಾಕಬೇಡಿ. ಇದು ಜೀರ್ಣಕ್ರಿಯೆಗೆ ಪರಿಣಾಮವನ್ನು ಬೀರುತ್ತದೆ.ಇನ್ನೂ ಮುಖ್ಯವಾಗಿ ಗರ್ಭಿಣಿಯರು ವೃದ್ಧರು ಚಿನ್ನವನ್ನು ಧರಿಸಬಾರದು. ಹಾಗೂ ಅಧಿಕ ತೂಕ ಹೊಂದಿರುವವರು ಮತ್ತು ದೊಡ್ಡ ಹೊಟ್ಟೆ ಹೊಂದಿರುವವರು ಚಿನ್ನವನ್ನು ಹಾಕಿಕೊಳ್ಳಬಾರದು. ಇನ್ನೂ ಸಾಮಾನ್ಯವಾಗಿ ಕೆಲವು ಜನರ ಅಭ್ಯಾಸ ಇದಾಗಿರುತ್ತದೆ ಅವರು ತಮ್ಮ ಚಿನ್ನದ ಆಭರಣಗಳನ್ನು ರಾತ್ರಿ ಮಲಗುವ ವೇಳೆಗೆ ತೆಗೆದು ತಲೆಯ ಕೆಳಗೆ ಇಟ್ಟುಕೊಂಡು ಮಲಗುತ್ತಾರೆ. ಆದರೆ ನಿಮಗೆ ಗೊತ್ತೇ ಇದರಿಂದ ನಿದ್ದೆಗೆ ಬಹಳ ಸಮಸ್ಯೆಯಾಗುತ್ತದೆ.
ಮುಖ್ಯವಾಗಿ ಹೇಳಬೇಕು ಅಂದರೆ ಚಿನ್ನವನ್ನು ಕಾಲಿಗೆ ಹಾಕಿಕೊಳ್ಳಬಾರದು. ಇದು ನಿಮಗೆ ದುರಾದೃಷ್ಟವನ್ನು ತಂದು ಕೊಡುತ್ತದೆ ಅಷ್ಟೇ ಅಲ್ಲದೇ ಚಿನ್ನ ತಾಯಿ ಲಕ್ಷ್ಮೀದೇವಿ ಸಂಕೇತವಾಗಿದೆ. ಚಿನ್ನವನ್ನು ಕಾಲಿಗೆ ಹಾಕಿಕೊಂಡರೆ ತಾಯಿಗೆ ಅವಮಾನ ಮಾಡಿದ ಹಾಗೆ ಆಗುತ್ತದೆ ಆದ್ದರಿಂದ ಚಿನ್ನವನ್ನು ಸೊಂಟದ ಕೆಳ ಭಾಗದಲ್ಲಿ ಧರಿಸಬಾರದು. ಈ ವಿಷಯಗಳನ್ನು ನೀವು ನೆನಪಿಟ್ಟುಕೊಂಡು ಚಿನ್ನವನ್ನು ಹಾಕಿಕೊಳ್ಳಿ.ಇನ್ನೂ ಚಿನ್ನವನ್ನು ಈ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭಾನುವಾರ, ಬುಧವಾರ, ಗುರುವಾರ, ಶುಕ್ರವಾರದಂದು ಚಿನ್ನವನ್ನು ಧರಿಸಬೇಕು. ಮಂಗಳಕರ ಸಮಯದಲ್ಲಿಯೇ ಚಿನ್ನವನ್ನು ಧರಿಸಬೇಕು. ಈ ಅದ್ಭುತವಾದ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ.