ನಮಸ್ತೇ ಪ್ರಿಯ ಓದುಗರೇ, ಈ ಹಣ್ಣಿನ ಬಗ್ಗೆ ಹೇಳುತ್ತಾ ಹೋದರೆ ನಮಗೆ ನಮ್ಮ ಬಾಲ್ಯದ ನೆನಪು ಬರುತ್ತದೆ. ಏಕೆಂದರೆ ಚಿಕ್ಕವರು ಇರುವಾಗ ಈ ಹಣ್ಣು ತಿನ್ನಲು ರುಚಿಯಲ್ಲಿ ಹುಳಿ ಇದ್ದ ಕಾರಣ ಇದರಲ್ಲಿ ಬೆಲ್ಲವನ್ನು ಹಾಕಿಕೊಂಡು ಸವಿಯುತ್ತಿದ್ದೇವು. ಸಾಮಾನ್ಯವಾಗಿ ಇದು ಹಳ್ಳಿಯ ಜನರಿಗೆ ಚಿರಪರಿಚಿತವಾದ ಹಣ್ಣು ಆಗಿದೆ. ಅಷ್ಟೇ ಅಲ್ಲದೇ ಇದು ಬೇಸಿಗೆ ಕಾಲದಲ್ಲಿ ತುಂಬಾನೇ ವಿರಳವಾಗಿ ದೊರೆಯುತ್ತದೆ. ನಗರದ ಜನರಿಗೆ ಇದರ ಪರಿಚಯವೇ ಇರುವುದಿಲ್ಲ ಹಾಗೂ ಮಾರುಕಟ್ಟೆಗೆ ಈ ಹಣ್ಣು ಬರುವುದು ಕೂಡ ಇತ್ತೀಚಿಗೆ ಕಡಿಮೆ ಆಗಿದೆ ಅಂತ ಹೇಳಬಹುದು. ಆ ಹಣ್ಣು ಯಾವುದು ಅಂದರೆ ಬೇಲದ ಹಣ್ಣು. ಇದನ್ನು ವುಡ್ ಆ್ಯಪಲ್ ಅಂತ ಕರೆಯುತ್ತಾರೆ. ಈ ಹಣ್ಣಿನ ಮೂಲ ತವರು ಮನೆ ನಮ್ಮ ಭಾರತ ದೇಶ ಇದು ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ತುಂಬಾನೇ ವಿರಳವಾಗಿ ದೊರೆಯುತ್ತದೆ. ಈ ಹಣ್ಣಿನ ಹೊರ ಭಾಗವೂ ತುಂಬಾನೇ ಗಟ್ಟಿಯಾಗಿರುತ್ತದೆ.
ಹಾಗೂ ಇದರ ಒಳಗಿನ ಭಾಗ ತುಂಬಾನೇ ಮೆತ್ತಗೆ ಇರುತ್ತದೆ ಆದರೆ ರುಚಿಯಲ್ಲಿ ಮಾತ್ರ ಸ್ವಲ್ಪವೂ ಸಿಹಿಯಾಗಿ ಇರುವುದಿಲ್ಲ. ಒಗರು ಒಗರು ಆಗಿ ಇರುತ್ತದೆ. ಅದಕ್ಕಾಗಿ ಇದರಲ್ಲಿ ಬೆಲ್ಲವನ್ನು ಸೇರಿಸಿ ತಿನ್ನುವುದು ಉಂಟು. ಜೀರ್ಣ ಕ್ರಿಯೆ ಸರಿಯಾಗಿ ಆಗದೇ ಇದ್ದಾಗ ಈ ಹಣ್ಣಿನ ಸೇವನೆ ಸೂಕ್ತವಾಗಿದೆ. ಇನ್ನೂ ಬಿಕ್ಕಳಿಕೆ ಸಮಸ್ಯೆ ಇರುವವರು ಅಥವಾ ಕೆಲವರಿಗೆ ಇಷ್ಟು ಬಿಕ್ಕಳಿಕೆ ಶುರು ಆಗಿರುತ್ತದೆ ನೀರು ಕುಡಿದರೂ ನಿಲ್ಲುವುದಿಲ್ಲ ಅಂಥವರು ಈ ಹಣ್ಣಿನ ರಸ ಮತ್ತು ನೆಲ್ಲಿಕಾಯಿ ರಸವನ್ನು ಬೆರೆಸಿ ದಿನವೂ ಎರಡು ಚಮಚ ಕುಡಿದರೆ ಬಿಕ್ಕಳಿಕೆ ಸಮಸ್ಯೆ ನಿಲ್ಲಿಸುತ್ತದೆ. ಅಷ್ಟೇ ಅಲ್ಲದೇ ಬೇಲದ ಹಣ್ಣಿನಲ್ಲಿ ವಿಟಮಿನ್ ಸಿ ಇರುವುದರಿಂದ ಇದು ಮೆದುಳಿನ ಸಾಮರ್ಥ್ಯ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಚಿಕ್ಕ ಮಕ್ಕಳ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೇಸಿಗೆ ಕಾಲದಲ್ಲಿ ಕಾಡುವ ಅತಿಯಾದ ದೇಹದ ಉಷ್ಣತೆ ಅನೇಕ ರೀತಿಯ ಸಮಸ್ಯೆಗಳಿಗೆ ಕಾರಣಗುತ್ತದೆ ಅಂಥಹ ಸಮಯದಲ್ಲಿ ಈ ಬೇಲದ ಹಣ್ಣಿನ ಪಾನಕವನ್ನು ಕುಡಿಯಬೇಕು. ಇದು ದೇಹದ ಉಷ್ಣತೆ ಕಡಿಮೆ ಮಾಡಿಸುತ್ತದೆ. ಜೊತೆಗೆ ಬಾಯಿಯ ದುರ್ಗಂಧವನ್ನು ಹೋಗಲಾಡಿಸುತ್ತದೆ.
ಮಲಬದ್ಧತೆ ಹಾಗೂ ಅತಿಸಾರವನ್ನು ತಡೆಯುತ್ತದೆ. ಹಾಗೂ ಹೊಟ್ಟೆಯ ಅಲ್ಸರ್ ಸಮಸ್ಯೆಯನ್ನು ಕೂಡ ತಡೆಯುತ್ತದೆ. ವಿಟಮಿನ್ ಸಿ ಕೊರತೆ ಆಗದಂತೆ ಎಚ್ಚರಿಕೆ ವಹಿಸುತ್ತದೆ ಈ ಬೇಲದ ಹಣ್ಣು. ನಿಮ್ಮ ಎದೆಯಲ್ಲಿ ಕಫದ ಸಮಸ್ಯೆ ಅಧಿಕವಾಗಿದ್ದರೆ ಈ ಹಣ್ಣಿನಲ್ಲಿ ಸ್ವಲ್ಪ ಕಲ್ಲುಪ್ಪು ಹಾಕಿ ಸೇವನೆ ಮಾಡುವುದರಿಂದ ಕಫದ ಸಮಸ್ಯೆ ಮಂಗ ಮಾಯ ಆಗುತ್ತದೆ. ಹಾಗೂ ನಿತ್ಯವೂ ಇದರ ಪಾನಕ ಕುಡಿಯುವುದರಿಂದ ಉಲ್ಲಾಸದಾಯಕ ಆಗಿ ಇರಬಹುದು. ಹಾಗೂ ದೇಹಕ್ಕೆ ದುಪ್ಪಟ್ಟು ಶಕ್ತಿಯನ್ನು ಒದಗಿಸಿ ಸದಾ ಕಾಲ ಲವಲವಿಕೆ ಇಂದ ಇರುವಂತೆ ನೋಡಿಕೊಳ್ಳುತ್ತದೆ ಈ ಬೇಲದ ಹಣ್ಣು. ಬೇಸಿಗೆ ಕಾಲದಲ್ಲಿ ಸ್ವಲ್ಪ ಕೆಲಸವನ್ನು ಮಾಡಿದರು ಕೂಡ ಸುಸ್ತು ಆಯಾಸ ಆಗುತ್ತದೆ. ಹೀಗಾಗಿ ಸುಸ್ತು ನಿಶ್ಯಕ್ತಿ ಆಯಾಸ ಹೋಗಲಾಡಿಸಲು ಬೇಲದ ಹಣ್ಣಿನ ರಸವನ್ನು ಕುಡಿಯಿರಿ. ಇದರಿಂದ ಸುಸ್ತು ದೂರವಾಗುತ್ತದೆ. ಹೌದು ಈ ಹಣ್ಣಿನಿಂದ ಬಹಳ ಪ್ರಯೋಜನವಿದೆ. ಆದರೆ ಇದು ಮಾರುಕಟ್ಟೆಯಲ್ಲಿ ದೊರೆಯುವುದು ಅಪರೂಪ ಆದರೆ ಇದು ಸಿಕ್ಕರೆ ಬಿಡಬೇಡಿ. ಖಂಡಿತವಾಗಿ ಸೇವನೆ ಮಾಡಿ. ನಿಜಕ್ಕೂ ಇದು ಆರೋಗ್ಯಕ್ಕೆ ಹಾಗೂ ಎಲ್ಲ ಬಗೆಯ ಕಾಯಿಲೆಗಳಿಗೆ ರಾಮಬಾಣ ಅಂತ ಹೇಳಬಹುದು. ಶುಭದಿನ