ನಮಸ್ತೇ ಪ್ರಿಯ ಓದುಗರೇ, ನಮ್ಮ ಸರ್ಕಾರದಿಂದ ಯಾವುದೇ ಒಂದು ಯೋಜನೆಗಳ ಸೌಲಭ್ಯಗಳನ್ನು ಪಡೆಯಬೇಕೆಂದರೆ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಪ್ಯಾನ್ ಕಾರ್ಡ್ ಇನ್ನಿತರ ದಾಖಲೆಗಳನ್ನು ಕಡ್ಡಾಯವಾಗಿ ಬೇಡುತ್ತಾರೆ. ಹಾಗೂ ದೇಶದಲ್ಲಿ ಕೆಲವು ಸೌಲಭ್ಯಗಳನ್ನು ಪಡೆಯಲು ಪಡಿತರ ಚೀಟಿ ಕಡ್ಡಾಯವಾಗಿ ಬೇಕಾಗುತ್ತದೆ. ಒಂದು ವೇಳೆ ನಿಮ್ಮ ಬಳಿ ಪಡಿತರ ಚೀಟಿ ಇಲ್ಲವೆಂದರೆ ನೀವು ಯಾವುದೇ ಸೌಲಭ್ಯಗಳನ್ನು ಪಡೆಯಲು ಅರ್ಹತೆಯನ್ನು ಪಡೆದು ಕೊಳ್ಳುವುದಿಲ್ಲ ಅನ್ನುವ ಸಂಗತಿ ತಿಳಿದಿರಲಿ. ಅದಕ್ಕಾಗಿ ಈ ಬಿಪಿಎಲ್ ಪಡಿತರ ಚೀಟಿಯನ್ನು ಹೇಗೆ ಪಡೆಯುವುದು? ಇದಕ್ಕೆ ಏನು ಮಾಡಬೇಕು. ಯಾವ ರೀತಿ ವಿಧಾನಗಳನ್ನು ಬಳಕೆ ಮಾಡುವುದರಿಂದ ಪಡಿತರ ಚೀಟಿಯನ್ನು ಅತಿ ಬೇಗನೆ ಪಡೆಯಬಹುದು. ಎಂಬುದರ ಬಗ್ಗೆ ಇಂದಿನ ಲೇಖನದಲ್ಲಿ ನಿಮಗೆ ನಾವು ತಿಳಿಸಿ ಕೊಡುತ್ತೇವೆ ಬನ್ನಿ. ಒಂದು ವೇಳೆ ನೀವು ನಿಮ್ಮ ಪಡಿತರ ಚೀಟಿ ಕಳೆದು ಹೋಗಿದ್ದರೆ ಹೊಸದಾಗಿ ಮಾಡಲು ಬಯಸುವವರು ಆಗಿದ್ದರೆ ನಮ್ಮ ಈ ಲೇಖನವನ್ನು ಕೊನೆಯವರೆಗೂ ಓದಿ.
ಮೊದಲಿಗೆ ಪಡಿತರ ಚೀಟಿಯನ್ನು ಮಾಡಿಸಿಕೊಳ್ಳುವುದಕ್ಕೆ ನಿಮ್ಮ ಸಮೀಪದಲ್ಲಿ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸುವಾಗ ಈ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು ಅವುಗಳೆಂದರೆ ಆಧಾರ ಕಾರ್ಡ್ ಅದುವೇ ನಿಮ್ಮ ಮೊಬೈಲ್ ನಂಬರ್ ಆಧಾರ ಕಾರ್ಡ್ ಗೆ ಲಿಂಕ್ ಆಗಿರಬೇಕು ಮತ್ತು ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ತೆಗೆದುಕೊಂಡು ಹೋಗಬೇಕು.ಇವುಗಳ ಜೊತೆಗೆ ಹೊಸ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಸಿಎಸ್ಸಿ ಕೇಂದ್ರ ಅಥವಾ ನೆಮ್ಮದಿ ಕೇಂದ್ರ ಅಥವಾ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಸ್ಥಳದಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಮತ್ತು ಮನೆಯ ಮುಖ್ಯಸ್ಥರಾದ ಮಹಿಳೆಯರನ್ನು ಮನೆಯ ಹಿರಿಯ ಮಹಿಳೆಯನ್ನಾಗಿ ಆಯ್ಕೆ ಮಾಡಬೇಕು. ಇದು ತುಂಬಾನೇ ಮುಖ್ಯವಾಗಿದೆ. ಅರ್ಜಿಯನ್ನು ಸಲ್ಲಿಸಿದ ಬಳಿಕ ಸ್ವೀಕೃತಿ ಪತ್ರವನ್ನು ತೆಗೆದುಕೊಳ್ಳಬೇಕು. ತದ ನಂತರ ಅದನ್ನು ನಿಮ್ಮ ತಾಲೂಕಿನ ಆಹಾರ ಇಲಾಖೆಗೆ ಸಲ್ಲಿಸಬೇಕು ಅವರು ಚೆಕ್ ಲಿಸ್ಟ್ ಅನ್ನು ನೀಡುತ್ತಾರೆ. ಈ ಚೆಕ್ ಲಿಸ್ಟ್ ಅನ್ನು ತೆಗೆದುಕೊಂಡು ನೀವು ನಿಮ್ಮ ಮನೆಯ ಸುತ್ತ ಮುತ್ತಲಿನ ಇರುವ ಬಿಪಿಎಲ್ ಪಡಿತರ ಚೀಟಿ ಕೇಂದ್ರಕ್ಕೆ ಹೋಗಿ ಮೂರು ಕುಟುಂಬದವರ ಹೆಸರು ಮತ್ತು ಸಹಿಯನ್ನು ಚೆಕ್ ಲಿಸ್ಟ್ ಮೇಲೆ ಮಾಡಿಸಬೇಕು.
ಇವರೆಲ್ಲರ ಸಹಿ ಆದ ಮೇಲೆ ಪಡಿತರ ಚೀಟಿಯನ್ನು ಮಾಡಿಸುವ ಮುಖ್ಯಸ್ಥನ ಸಹಿ ಬೇಕಾಗುತ್ತದೆ ಅವರು ಕೂಡ ಈ ಚೆಕ್ ಲಿಸ್ಟ್ ಮೇಲೆ ಸಹಿ ಮಾಡುತ್ತಾರೆ. ಇದಾದ ಬಳಿಕ ನೀವು ಈ ಚೆಕ್ ಲಿಸ್ಟ್ ಅನ್ನು ತೆಗೆದುಕೊಂಡು ಬಿಪಿಎಲ್ ಕಾರ್ಡ್ ಹೊಂದಿರುವವರ ಆಧಾರ ಕಾರ್ಡ್ ಅನ್ನು ಮತ್ತು ಒಬ್ಬರ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ತೆಗೆದುಕೊಂಡು ನಿಮ್ಮ ಊರಿನ ಗ್ರಾಮ ಲೆಕ್ಕಿಗರನ್ನು ಭೇಟಿ ಮಾಡಬೇಕು. ಅಲ್ಲಿರುವ ಈ ಗ್ರಾಮ ಲೆಕ್ಕಿಗರು ಎಲ್ಲವನ್ನು ಪರೀಕ್ಷಿಸಿಸಿ ಚೆಕ್ ಲೀಸ್ಟ್ ಮೇಲೆ ಸಹಿ ಮಾಡಿ ಇವರಿಗೆ ಇಷ್ಟು ಜಮೀನು ಇದೆ ಬಿಪಿಎಲ್ ಪಡಿತರ ಚೀಟಿಯನ್ನು ಪಡೆಯಲು ಎಲ್ಲ ಬಗೆಯ ಯೋಗ್ಯತೆ ಮತ್ತು ಅರ್ಹತೆಯನ್ನು ಹೊಂದಿದ್ದಾರೆ ಎಂದು ಅದರ ಮೇಲೆ ಬರೆಯುತ್ತಾರೆ. ಈ ಎಲ್ಲ ಪ್ರಕ್ರಿಯೆಯು ನಡೆದ ನಂತರ ನೀವು ಈ ಎಲ್ಲ ದಾಖಲೆಗಳ ಜೊತೆಗೆ ನಿಮ್ಮ ತಾಲೂಕಿನ ಆಹಾರ ಇಲಾಖೆಗೆ ಸಲ್ಲಿಸಬೇಕು. ಆಮೇಲೆ ಇವರು ದಾಖಲೆಗಳನ್ನು ಪರಿಶೀಲಣೆ ಮಾಡಿ ನಿಮಗೆ ಪಡಿತರ ಚೀಟಿಯನ್ನು ನೀಡುತ್ತಾರೆ. ಹೀಗೆ ಮಾಡುವುದರಿಂದ ಇಷ್ಟೊಂದು ಹಂತಗಳನ್ನು ಅನುಸರಣೆ ಮಾಡುವುದರ ಮೂಲಕ ನೀವು ಸುಲಭವಾಗಿ ಪಡಿತರ ಚೀಟಿಯನ್ನು ಪಡೆಯಬಹುದು ಇಲ್ಲವಾದರೆ ನಿಮಗೆ ತುಂಬಾನೆ ಕಷ್ಟವಾಗುತ್ತದೆ. ಆದ್ದರಿಂದ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ಚಿರಪರಿಚಿತರಿಗೆ ಹಂಚಿಕೊಳ್ಳಿ. ಶುಭದಿನ.