ನಮಸ್ತೇ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ನಾವು ನಿಮಗೆ ಯಾವ ಆಹಾರ ಪದಾರ್ಥಗಳನ್ನು ಸೇವನೆ ಮಾಡಿದರೆ ಯಂಗ್ ಅಂಡ್ ಏನರ್ಜಿಟಿಕ್ ಆಗಿ ಕಾಣುತ್ತೀರಿ ಅನ್ನುವ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಬನ್ನಿ. ನಿಮಗೆ ಗೊತ್ತಿರುವ ಹಾಗೆ ಹಿಂದಿನ ಕಾಲದಲ್ಲಿ ವಯಸ್ಸಾದ ಮೇಲೆ ಜನರಲ್ಲಿ ರೋಗಗಳು ಕಾಯಿಲೆಗಳು ನೋವುಗಳು ಬರುತ್ತಿದ್ದವು ಆದರೆ ಈಗಿನ ಆಧುನಿಕ ಕಾಲದಲ್ಲಿ ವಯಸ್ಸು ಮೂವತ್ತು ದಾಟಿರುವುದಿಲ್ಲ ಆಗಲೇ ರೋಗಗಳು ರುಜಿನಗಳು ಕಾಯಿಲೆಗಳು ಬಂದು ಸೇರುತ್ತದೆ. ಇದು ಆಧುನಿಕ ಯುಗದಲ್ಲಿ ಸರ್ವೇ ಸಾಮಾನ್ಯ ಆಗಿದೆ. ಇದಕ್ಕೆ ಮುಖ್ಯ ಕಾರಣವನ್ನು ಹುಡುಕುತ್ತಾ ಹೋದರೆ ಅನಿಯಮತವಾದ ಆಹಾರ ಮತ್ತು ಅಪೌಷ್ಟಿಕತೆಯುಳ್ಳ ಆಹಾರ ಅಂತ ಹೇಳಿದರೆ ತಪ್ಪಾಗಲಾರದು. ಇದರಿಂದ ನಾವು ಗಮನಿಸಿಬಹುದು ಚಿಕ್ಕವರಿನಿಂದ ಹಿಡಿದು ದೊಡ್ಡವರವರೆಗೂ ಯಾವುದೇ ಕೆಲಸದಲ್ಲಿ ಶಕ್ತಿ ಸಾಮರ್ಥ್ಯ ಇಲ್ಲದಾಗಿದೆ. ಆಸಕ್ತಿ ಅಂತೂ ಅಪೇಕ್ಷೇ ಮಾಡುವ ಹಾಗಿಲ್ಲ ಗೆಳೆಯರೇ ಹಾಗೆ ಆಗಿದೆ. ಇದಕ್ಕೆ ಕಾರಣ ಆಲಸ್ಯ ಅಥವಾ ಸೋಮಾರಿತನ. ಮತ್ತು ದೇಹದಲ್ಲಿ ಪೌಷ್ಟಿಕಾಂಶಗಳ ಕೊರತೆ. ಯಾರಿಗು ಕೂಡ ಆಸೆ ಇರುವುದಿಲ್ಲ ನಾವು ಕುರೂಪಿಯಾಗಿ ಕಾಣಬೇಕು ಅಂತ. ಎಲ್ಲರೂ ತಾವು ಸುಂದರವಾಗಿ ಕಾಣಬೇಕು ಮತ್ತು ಸುಂದರವಾದ ಮೈಕಟ್ಟು ಹೊಂದಿರುವ ಹ್ಯಾಂಡ್ ಸಮ್ ಹುಡುಗ ಮತ್ತು ಬ್ಯೂಟಿಫುಲ್ ಹುಡುಗಿಯಾಗಿ ಕಾಣಬೇಕು ಅಂತ ಬಯಸುತ್ತಾರೆ.
ಇದು ಪ್ರತಿಯೊಬ್ಬರಲ್ಲಿಯೂ ಇರುವ ಸಾಮಾನ್ಯ ಆಸೆ ಆಗಿದೆ. ಹಾಗಾದರೆ ಇದಕ್ಕೆ ಏನು ಮಾಡಬೇಕು. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಯಾವ ರೀತಿಯ ಆಹಾರವನ್ನು ಸೇವನೆ ಮಾಡಿದರೆ ಪೌಷ್ಟಿಕಾಂಶ ಹೆಚ್ಚುತ್ತದೆ. ಅಂತ ತಿಳಿದುಕೊಳ್ಳೋಣ. ನಾವು ತಿಳಿಸುವ ಈ ಮಾಹಿತಿಯನ್ನು ನೀವು ಚಾಚೂ ತಪ್ಪದೇ ಪಾಲಿಸಿದರೆ ನಿಮಗೆ ಯಾವುದೇ ರೋಗಗಳು ಇರಲಿ ಕಾಯಿಲೆಗಳು ಇರಲಿ ಖಂಡಿತವಾಗಿ ಕಡಿಮೆ ಆಗುತ್ತವೆ. ಮತ್ತು ಇದರಿಂದ ನೀವು ಆರೋಗ್ಯವಾಗಿ ಕೂಡ ಇರಬಹುದು.ಮೊದಲಿಗೆ ಬೇಕಾದ ಪದಾರ್ಥ ಅಂದರೆ ಕಡಲೆ ಕಾಳು. ಈ ಕಡಲೆ ಕಾಳು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಸಿಗುತ್ತದೆ. ಇಲ್ಲವಾದರೆ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತದೆ. ಈ ಕಡಲೆ ಕಾಳಿನಲ್ಲಿ ಐರನ್ ಜಿಂಕ್ ಕಾಫರ್ ಮ್ಯಾಗ್ನಿಶಿಯಂ ಕ್ಯಾಲ್ಷಿಯಂ ಮತ್ತು ಖನಿಜಗಳು ಲವಣಗಳು ಅತಿ ಹೆಚ್ಚಾದ ಪ್ರೋಟೀನ್ ಗಳು ಈ ಕಡಲೆ ಕಾಳಿನಲ್ಲಿ ಅಡಗಿವೆ. ಇನ್ನು ಎರಡನೆಯ ಬಾದಾಮಿ ಬೀಜಗಳು. ನಿತ್ಯವೂ ನೀವು ಬಾದಾಮಿ ಬೀಜಗಳನ್ನು ಸೇವಿಸುತ್ತಾ ಬಂದರೆ ನಿಮ್ಮ ದೇಹಕ್ಕೆ ಅಗತ್ಯವಾದ ಪ್ರೊಟೀನ್ ಲಭಿಸುತ್ತದೆ.
ಇದರಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಗಳು, ಕರಗುವ ನಾರುಗಳು ಮ್ಯಾಂಗನೀಸ್ ಒಮೆಗಾ3 ಕೊಬ್ಬಿನಾಮ್ಲಗಳು ಮತ್ತು ಪ್ರೊಟೀನ್ ಕೂಡ ಇದೆ. ಮೂರನೆಯದು ಒಣದ್ರಾಕ್ಷಿ. ಈ ಒಣದ್ರಾಕ್ಷಿಯಲ್ಲಿ ಅಧಿಕ ಪ್ರಮಾಣದಲ್ಲಿ ಕಬ್ಬಿನಾಂಶ ಅಡಗಿದೆ. ಇದು ನಮ್ಮ ದೇಹದ ಆರೋಗ್ಯಕ್ಕೆ ಉತ್ತಮ. ನಿತ್ಯವೂ ಇದನ್ನು ಸೇವಿಸಿದರೇ ದೇಹದಲ್ಲಿ ರಕ್ತವು ಉತ್ಪತ್ತಿ ಆಗುತ್ತದೆ. ಒಣದ್ರಾಕ್ಷಿಯನ್ನು ನಿತ್ಯವೂ ಸೇವನೆ ಮಾಡುವುದರಿಂದ ನಮ್ಮ ತೂಕವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಈ ಮೂರು ಪದಾರ್ಥಗಳು ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಮತ್ತು ಇದರಲ್ಲಿ ಯಾವ ರೀತಿಯ ಅಂಶಗಳು ಅಡಗಿವೆ ಅಂತ ನೀವು ತಿಳಿದುಕೊಂಡಿದ್ದೀರಿ ಗೆಳೆಯರೇ. ಹಾಗಾದ್ರೆ ಇದನ್ನು ಯಾವ ರೀತಿಯಾಗಿ ಸೇವನೆ ಮಾಡಬೇಕು ಅಂದರೆ ಮೊದಲಿಗೆ ಒಂದು ಲೋಟದಲ್ಲಿ ನೀರು ತೆಗೆದುಕೊಳ್ಳಿ ಅದಕ್ಕೆ 10 ಒಣದ್ರಾಕ್ಷಿ ಮತ್ತು 4 ಬಾದಾಮಿ ಬೀಜಗಳು ಮತ್ತು ಒಂದು ಚಮಚದಷ್ಟು ಕಡಲೆ ಬೀಜಗಳನ್ನು ಹಾಕಿ ರಾತ್ರಿವಿಡಿ ನೆನೆಸಿಡಿ. ಮರುದಿನ ಬೆಳಿಗ್ಗೆ ಎದ್ದು ತಕ್ಷಣ ಉಪಹಾರ ಮಾಡುವ ಮುನ್ನವೇ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಹೌದು ಇದು ನಿಮನ್ನು ಚಿರ ಯುವಕರಂತೆ ಕಾಣಲು ಸಹಾಯ ಮಾಡುತ್ತದೆ. ಇದನ್ನು ಮಿಸ್ ಮಾಡದೇ ನಿತ್ಯವೂ ಸೇವಿಸಿ. ಶುಭದಿನ.