ಕಿಡ್ನಿ ಕಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ನೆಗ್ಗಿಲ ಮುಳ್ಳಿನ ಗಿಡ

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ನಾವು ನಿಮಗೆ ಮೂತ್ರಕೋಶದಲ್ಲಿ ಆಗಿರುವ ಕಲ್ಲುಗಳನ್ನು ಹೋಗಲಾಡಿಸಲು ತಿಳಿಸುವ ಒಂದು ಸೂಪರ್ ಮನೆಮದ್ದು ಅಥವಾ ಈ ಸಸ್ಯದ ಮೂಲಿಕೆಯಿಂದ ಕಿಡ್ನಿ ಸಮಸ್ಯೆಯಿಂದ ಹೇಗೆ ಪಾರಾಗಬಹುದು ಅಂತ ತಿಳಿಸಿ ಕೊಡುತ್ತೇವೆ ಬನ್ನಿ. ಕಿಡ್ನಿ ಸ್ಟೋನ್ ಗೆ ಉತ್ತಮವಾದ ಗಿಡ ಮೂಲಿಕೆ ಅಂದರೆ ಅದುವೇ ನೆಗ್ಗಿಲು ಗಿಡ. ಈ ಸಸ್ಯವು ಪಾಳು ಹೊಲ ಮುಂತಾದ ಸ್ಥಳಗಳಲ್ಲಿ ಬೆಳೆಯುತ್ತದೆ. ಇದು ಹೆಚ್ಚಾಗಿ ಮುಳ್ಳುಗಳಿಂದ ಕೂಡಿರುವ ಸಸ್ಯವಾಗಿದೆ. ಕಾಂಡ ಮತ್ತು ಎಲೆಗಳ ಮೇಲೆಲ್ಲ ಒತ್ತಾಗಿ ರೋಮಗಳು ಬೆಳೆದುಕೊಂಡಿವೆ. ಈ ಸಸ್ಯವನ್ನು ಇನ್ನಿತರ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ನೆಗ್ಗಿಲು ಗಿಡವು ಏಕವಾರ್ಷಿಕ ಸಸ್ಯವಾಗಿದ್ದು, ಮಳೆಗಾಲದಲ್ಲಿ ಮಾತ್ರ ಕಾಣಸಿಗುವ ಸಸ್ಯವಾಗಿದೇ. ಇದರ ಕಾಯಿ ಎರಡು ಎಲೆಯ ಗೊಂಚ್ಚಲಿಗೆ ಒಂದರಂತೆ ಇರುತ್ತದೆ ಕಾಯಿಗಳು ನಕ್ಷತ್ರದ ಆಕಾರವನ್ನು ಹೋಲುತ್ತದೆ. ಸಣ್ಣ ನೆಗ್ಗಿಳಿನ ಎಲೆಗಳು ಕಡಲೆ ಗಿಡದ ಎಲೆಗಳನ್ನು ಹೋಲುತ್ತೆ, ಆನೆ ನೆಗ್ಗಿಲು ದೊಡ್ಡದಾದ ಕಾಯಿ, ಉದ್ದ ಹಾಗು ಕಠೋರ ಮುಳ್ಳಿನಿಂದ ಕೂಡಿದ್ದು, ಎಲೆಗಳು ಅಗಲವಾಗಿದ್ದು, ಪಾಲಕ್ ಸೊಪ್ಪಿನ ಎಲೆಗಳನ್ನು ಹೋಲುತ್ತೆ.

ಸಣ್ಣ ನೆಗ್ಗಿಲಿನ ಹೂವುಗಳು ಹಳದಿ ಬಣ್ಣದಿಂದ ಕೂಡಿರುತ್ತವೆ. ಎರಡೂ ಗಿಡದ ಕಾಯಿಗಳು ವಕ್ರಾರವಾಗಿ, ಚೂಪಾದ ಮುಳ್ಳುಗಳಿಂದ ಕೂಡಿರುತ್ತದೆ. ಈ ಗಿಡದ ಪ್ರತಿಯೊಂದು ಭಾಗಕ್ಕೂ ಔಷಧಿ ಮಹತ್ತ್ವ ಉಂಟು. ಆಯುರ್ವೇದ ಪದ್ಧತಿಯ ಔಷಧಿಗಳಲ್ಲಿ ಎಲೆ, ಬೇರು, ಹಣ್ಣುಗಳ ಉಪಯೋಗ ಪ್ರತಿಪಾದಿತವಾಗಿದೆ. ಈ ಸಸ್ಯದ ಪ್ರತಿಯೊಂದು ಭಾಗವಾದ ಹೂವು ಹಣ್ಣುಗಳು ಕಾಯಿಗಳು ಕಂಡ ಬೇರು ಎಲ್ಲವೂ ಔಷಧವಾಗಿ ಬಳಕೆ ಮಾಡುತ್ತಾರೆ. ಹೀಗಾಗಿ ಇದರ ಹಣ್ಣು ಶಮನಕಾರಕ, ಮೂತ್ರಸ್ರಾವ ಉತ್ತೇಜಕ, ಕಾಮೋತ್ತೇಜಕ, ಹಾಗೂ ಮೂತ್ರನಾಳಗಳಲ್ಲಿ ಉಂಟಾಗುವ ಕಲ್ಲುಗಳನ್ನು ಕರಗಿಸುತ್ತದೆ. ಎಲೆಗಳು ಬಲವೃದ್ಧಿಕಾರಕ, ರಕ್ತವನ್ನು ಹೆಚ್ಚಿಸುತ್ತವೆ. ಗಿಡವನ್ನು ನೆನೆಹಾಕಿದ ನೀರನ್ನು ಮುಕ್ಕಳಿಸಿದರೆ ಬಾಯಲ್ಲಿನ ಒಸಡಿನ ಹುಣ್ಣುಗಳು ಗುಣವಾಗುತ್ತವೆ. ಹಾಗಾದರೆ ಇದನ್ನು ಮೂತ್ರಕೋಶದ ಸಮಸ್ಯೆಗೆ ಯಾವ ರೀತಿ ಬಳಕೆ ಮಾಡಬೇಕು ಅಂತ ತಿಳಿಯೋಣ ಬನ್ನಿ. ಮೊದಲಿಗೆ ಈ ಸಸ್ಯದ ಹಣ್ಣು ಮತ್ತು ಸೊಪ್ಪು ಎರಡನ್ನು ತೆಗೆದುಕೊಳ್ಳಬೇಕು.

ಇವುಗಳನ್ನು ಚೆನ್ನಾಗಿ ಜಜ್ಜಿ ಪೇಸ್ಟ್ ಮಾಡಿ ಇದರಲ್ಲಿ ಬೆಲ್ಲವನ್ನು ಸೇರಿಸಿ ನಿತ್ಯವೂ ಹದಿನೈದು ದಿನಗಳ ಕಾಲ ಸತತವಾಗಿ ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಕುಡಿಯಿರಿ. ಇದರಿಂದ ಮೂತ್ರ ಕೋಶದ ಕಲ್ಲಿನ ಸಮಸ್ಯೆಯು ನಿವಾರಣೆ ಆಗುತ್ತದೆ. ಮತ್ತು ನರದೌರ್ಬಲ್ಯ ಇರುವಂತಹ ಪುರುಷರು ಈ ಒಂದು ನೆಗ್ಗಿಲು ಗಿಡದ ಚೂರ್ಣವನ್ನು ಮೂರು ತಿಂಗಳವರೆಗೂ ಉಪಯೋಗ ಮಾಡಿದರೆ ಈ ಒಂದು ಸಮಸ್ಯೆಯಿಂದ ಪರಿಹಾರ ಸಿಗುತ್ತದೆ. ಮತ್ತು ಸ್ತ್ರೀ ಪುರುಷರಲ್ಲಿ ಗುಪ್ತಚರ ಆಸಕ್ತಿಯನ್ನು ಹೆಚ್ಚಿಸುತ್ತದೆ. ಇನ್ನೂ ಈ ಹಣ್ಣು ತಿನ್ನುವುದರಿಂದ ದೇಹದಲ್ಲಿ ಶಕ್ತಿ ಮತ್ತು ರಕ್ತವನ್ನು ಹೆಚ್ಚಿಸುತ್ತದೆ ಹಾಗೂ ಕಾಮ ಉತ್ತೇಜನಕವಾಗಿ ಕೆಲಸವನ್ನು ಮಾಡುತ್ತದೆ. ಈ ಸೊಪ್ಪನ್ನು ತಂದು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಎದ್ದು ತಕ್ಷಣ ಬಾಯೀ ಮುಕ್ಕಳಿಸುವುದರಿಂದ ಬಾಯಿಯ ವಾಸನೆ ಬಾಯಿಯ ಹುಣ್ಣುಗಳು ಒಸಡುಗಳು ಒಡೆದು ಹೋದರೆ ಕಡಿಮೆ ಮಾಡುತ್ತದೆ. ದೇಹದ ನರಮಂಡಲಕ್ಕೆ ಶಕ್ತಿ ತುಂಬುತ್ತೆ. ಅಂತರಗತ ನೋವನ್ನು ನಿವಾರಣೆ ಮಾಡುತ್ತೆ. ಇದು ವಯಾಗ್ರಗಿಂತ ಪರಿಣಾಮಕಾರಿ ಔಷಧ ಹಾಗು ಇದರ ಸೇವನೆಯಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ. ಹೌದು ನೆಗ್ಗಿಲು ಗಿಡವು ಇನ್ನು ಹಲವಾರು ಬಗೆಯ ಆರೋಗ್ಯಕರ ಲಕ್ಷಣಗಳನ್ನು ಹೊಂದಿದೆ. ಆದರೂ ಕೂಡ ನೀವು ವೈದ್ಯರ ಸಲಹೆಯನ್ನು ಪಡೆದುಕೊಂಡು ಬಳಕೆ ಮಾಡುವುದು ಸೂಕ್ತ. ಹಾಗಾದರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ

Leave a Reply

Your email address will not be published. Required fields are marked *