ನಿದ್ರೆಯಲ್ಲಿ ತುಂಬಾ ಜನರಿಗೆ ಮಾಂಸಖಂಡಗಳು ಇಡಿದುಕೊಳ್ಳುವುದು, ಸ್ನಾಯುತುಸೇಳೆತ ಆಗುತ್ತಿರುತ್ತದೆ. ಅಂತಹ ಸಮಯದಲ್ಲಿ ವಿಪರೀತವಾದ ನೋವು ಆಗುತ್ತದೆ ಈಗಿರುವಾಗ ಆ ಸಮಯದಲ್ಲಿ ನಾವು ಯಾವ ರೀತಿಯ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಬೇಕು, ಇದು ಯಾವ ವಯಸ್ಸಿನವರಿಗೂ ಸಹ ಬರಬಹುದು ಇದು ಮುಖ್ಯವಾಗಿ ಕಾಲು ಬಾಗದಲ್ಲಿ ಬರುತ್ತದೆ ಅಂದರೆ ಕಾಲಿನ ಇಂಬಾಗದಲ್ಲಿ ಹೆಚ್ಚಾಗಿ ಈ ಸಮಸ್ಯೆ ಕಾಣಿಸುತ್ತದೆ. ಮಾಂಸಖಂಡ ಇಡಿದುಕೊಂಡಾಗ ತಣ್ಣೀರಿನ ಬಟ್ಟೆ ಕಟ್ಟುವುದು, ಇಲ್ಲಾ ಬಿಸಿ ನೀರಿನಿಂದ ಕಾವು ಕೊಡುವುದು, ಇಲ್ಲಾ ಬಿಸಿ ನೀರಿನ ಷವರ್ನಲ್ಲಿ ನೆನೆಯುವುದು, ಇಲ್ಲಾ ಪಾದಗಳನ್ನು ಸ್ವಲ್ಪ ಮೇಲೆ ಕೆಳಗೆ ಮಾಡುವುದರಿಂದ ಸ್ವಲ್ಪ ಉಪಶಮನ ಸಿಗುತ್ತದೆ. ಪೂರ್ವ ಕಾಲದವರು ಎಸ್ಟೇ ದೂರವಿದ್ದರೂ ನಡೆದೇ ಹೋಗುತ್ತಿದ್ದರು ಆದರೆ ಈಗ ಒಂದು ಕಿಲೋ ಮೀಟರ್ ಕೂಡ ನಡೆಯುವುದಕ್ಕೆ ಕಷ್ಟವಾಗುತ್ತದೆ. ಹೆಚ್ಚು ದೂರ ನಡೆಯುವುದರಿಂದ ಕಾಲು ನೋವು, ಪಾದ ಊತ ಬರುವುದು, ಮಾಂಸಖಂಡಗಳ ನೋವು ಕಾಣಿಸಿಕೊಳ್ಳುತ್ತದೆ. ಮಾಂಸಖಂಡಗಳ ನೋವು ಎಂದು ಅಜಾಗ್ರತೆಯಿಂದ ಇರುವುದೇ ಆದರೆ ಪರಿಸ್ಥಿತಿ ತುಂಬಾ ಕ್ಲಿಷ್ಟಕರವಾಗುತ್ತದೆ.
ಮಾಂಸಖಂಡಗಳ ನೋವು ಬಂದಿದೆ ಎಂದರೆ ನೋವು ಇದ್ದಷ್ಟು ಸಮಯ ಅದನ್ನು ತಡೆದುಕೊಳ್ಳಲು ತುಂಬಾ ಕಷ್ಟವಾಗುತ್ತದೆ ಮಾಂಸಖಂಡಗಳು ಇಡಿದುಕೊಳ್ಳಲು ಮುಕ್ಯ ಕಾರಣವೆಂದರೆ ರಕ್ತನಾಳಗಳಲ್ಲಿ ಕೊಬ್ಬು ಸೇರಿಕೊಳ್ಳುವುದು, ಜಿಮ್ ನ ಅಭ್ಯಾಸ ಇಲ್ಲದೆ ಇರುವವರು ಜಿಮ್ ಮಾಡುವುದು, ಬೇಸಿಗೆ ಕಾಲದಲ್ಲಿ ಎಕ್ಸಸೈಜ್ ಮಾಡುವುದರಿಂದ ಡಿಹೈಡ್ರೆಟ್ ಆಗುವುದು, ಇದರಿಂದ ವಿಪರೀತವಾದ ಕಾಲು ನೋವು ಕಾಣಿಸಿಕೊಳ್ಳುತ್ತದೆ. ದೇಹದಲ್ಲಿ ಲವಣ, ಕ್ಯಾಲ್ಷಿಯಂ, ಐರನ್, ಮ್ಯಾಗ್ನಿಷಿಯಂ, ಸೋಡಿಯಂ, ಇವುಗಳು ಕಡಿಮೆಯಾಗುವುದರಿಂದ ಮಾಂಸಖಂಡಗಳು ಇಡಿದುಕೊಳ್ಳುತ್ತದೆ. ಈ ಮಾಂಸಖಂಡ ಇಡಿದುಕೊಂಡ ಬಾಗದಲ್ಲಿ ಗಟ್ಟಿಯಾಗಿ ಕಲ್ಲಿನ ಹಾಗೆ ಆಗುತ್ತದೆ ಇದು ಬರುವುದಕ್ಕೆ ಮುಕ್ಯ ಕಾರಣ ಕಾಲಿಗೆ ರಕ್ತ ಪರಿಚಲನೆ ಆಗದೆ ಇರುವುದು, ಸ್ಮೋಕ್ ಮಾಡುವುದು. ಇಂತಹ ಸಮಯದಲ್ಲಿ ನೋವಿನೀಂದ ಅಲುಗಾಡಿಸಲು ಆಗದೇ ಇರುವುದು ಈ ಸಮಸ್ಯೆ ಕಡಿಮೆಯಾಗಬೇಕು ಎಂದರೆ ಲವಣಗಳು ಹೆಚ್ಚಾಗಿ ಇರುವಂತಹ ಆಹಾರವನ್ನು ತೆಗೆದುಕೊಳ್ಳಬೇಕು. ಬಾಳೆಹಣ್ಣು, ಕಿವಿಹಣ್ಣು, ಪಪ್ಪಾಯ, ಕರ್ಭೂಜಾ, ಕುಂಬಳಕಾಯಿ, ಗೆಣಸು, ಆಲೂಗಡ್ಡೆ, ಕಲ್ಲಂಗಡಿ, ಇವುಗಳಲ್ಲಿ ಹೆಚ್ಚಿನ ಲವಣಗಳು ಇರುತ್ತವೆ. ಇವುಗಳನ್ನು ತೆಗೆದುಕೊಳ್ಳುವುದರಿಂದ ಮಾಂಸಖಂಡ ಇಡಿದುಕೊಳ್ಳುವುದು ಸ್ವಲ್ಪ ಕಡಿಮೆಯಾಗುತ್ತದೆ ಈ ಆಹಾರ ತೆಗೆದುಕೊಂಡ ನಂತರ ಕಡಿಮೆಯಾಗದೇ ಹೋದರೆ ತಜ್ಞರ ಸಲೆಯನ್ನು ತೆಗೆದುಕೊಳ್ಳುವುದು ಒಳ್ಳೆಯದು.
ಈ ಸಮಸ್ಯೆಯನ್ನು ತಿಳಿದುಕೊಳ್ಳಲು ಬೇಕಾದಂತಹ ಕೆಲವು ಪರೀಕ್ಷೆಗಳನ್ನು ಮಾಡಿಸಿಕೊಳ್ಳುವ ಅವಶ್ಯಕತೆ ಇರುತ್ತದೆ. ಇದಕ್ಕೋಸ್ಕರ ಕೆಟ್ಟ ರಕ್ತವನ್ನು ತೆಗೆದುಕೊಂಡು ಹೋಗುವ ರಕ್ತನಾಳಗಳು, ಹೊಳ್ಳೆಯ ರಕ್ತವನ್ನು ತೆಗೆದುಕೊಂಡು ಹೋಗುವ ರಕ್ತನಾಳಗಳನ್ನು ಪರೀಕ್ಷೆ ಮಾಡಿಸಬೇಕು. ರಕ್ತನಾಳಗಳಲ್ಲಿ ಕೊಬ್ಬು ಸೇರಿಕೊಂಡು ಅಡೆತಡೆಗಳು ಏರ್ಪಡಾದರೆ ಕೊಬ್ಬು ಕರಗುವುದಕ್ಕೆ ತಜ್ಞರ ಸಲಹೆ ಮೇರೆಗೆ ವೈದ್ಯೆ ಮಾಡಿಸಿಕೊಳ್ಳಬೇಕು. ಹಾಗೆಯೇ MRI ಕೂಡ ಮಾಡಿಸಬೇಕಾಗುತ್ತದೆ. ಇದರಿಂದ ದೇಹದಲ್ಲಿ ಇರುವ ರಕ್ತನಾಳಗಳಲ್ಲಿ ಏನಾದರೂ ಸಮಸ್ಯೆ ಇದ್ದರೆ ಹಾಗೆ ಮಾಂಸಖಂಡ ಇಡಿಯುವುದಕ್ಕೆ ಯಾವುದಾದರೂ ಸಮಸ್ಯೆಗಳಿದ್ದರೆ ಈ ಸಮಸ್ಯೆ ಕಡಿಮೆಯಾಗುವುದಕ್ಕೆ ಟ್ರೀಟ್ಮೆಂಟ್ ತೆಗೆದುಕೊಳ್ಳಬೇಕು. ಹಾಗೆಯೇ ಮಾಂಸಖಂಡಗಳು ಇಡಿದುಕೊಂಡಾಗ ಕಾಲು ಅಂದರೆ ಪಾದವನ್ನು ಮೇಲೆ ಕೆಳಗೆ ಅಲುಗಾಡಿಸುವುದರಿಂದ ಸ್ವಲ್ಪ ಉಪಶಮನ ಸಿಗುತ್ತದೆ. ಹಾಗೆಯೇ ಮಾಂಸಖಂಡ ಇಡಿದುಕೊಂಡಾಗ ನೋವು ಇರುವ ಜಾಗದಲ್ಲಿ ನಿದಾನವಾಗಿ ಮಸಾಜ್ ಮಾಡುವುದರಿಂದ ಕೂಡ ಸ್ವಲ್ಪ ವಿಶ್ರಾಂತಿ ದೊರೆಯುತ್ತದೆ. ಈ ಸಲಹೆ ಪಾಲಿಸುವುದರಿಂದ ರಕ್ತ ನಾಳಗಳಲ್ಲಿ ಕೊಬ್ಬು ಕರಗಿ ರಕ್ತಪರಿಚಲನೆ ಸರಾಗವಾಗಿ ಮಂಸಸಖಂಡ ಇಡಿದುಕೊಳ್ಳುವುದು ಕಡಿಮೆಯಾಗುತ್ತದೆ.