ಎಳನೀರಿನಲ್ಲಿ ಇದನ್ನು ಬೆರೆಸಿ ಕುಡಿದರೆ ಸಾಕು ಕಿಡ್ನಿಯಲ್ಲಿ ಇರುವ ಕಲ್ಲು ಕರಗಿ ಹೋಗುತ್ತವೆ

ಆರೋಗ್ಯ

ಕಿಡ್ನಿಯಲ್ಲಿ ಕಲ್ಲಿನಿಂದ ಬಳಲುತ್ತಿರುವವರು ಪೂರ್ವಕಾಲದಲ್ಲಿ ಯಾವುದೇ ರೀತಿಯ ಔಷಧಿ ಉಪಯೋಗ ಮಾಡದೆ ಅವುಗಳನ್ನು ಕಡಿಮೆ ಮಾಡಿಕೊಳ್ಳುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ಆಪರೇಶನ್ ಮಾಡಿಸಬೇಕಾಗುತ್ತದೆ ಆದರೆ ಮತ್ತೆ ಕಿಡ್ನಿಯಲ್ಲಿ ಕಲ್ಲು ಬರುವುದನ್ನು ತಡೆಯಲು ಆಗುವುದಿಲ್ಲ. ಆದರೆ ಈಗ ನಾವು ಹೇಳುವ ಸಹಜ ಪದಾರ್ಥಗಳನ್ನು ತೆಗೆದುಕೊಳ್ಳುವುದರಿಂದ ಕಿಡ್ನಿಯಲ್ಲಿ ಇರುವ ಕಲ್ಲು ಕರಗಿಸಿ ಮತ್ತು ಶಾಶ್ವತವಾಗಿ ಕಲ್ಲು ಬರದಹಾಗೆ ತಡೆಯಬಹುದು ಇದಕ್ಕೆ ಪ್ರಮುಖ ಆಯುರ್ವೇದ ತಜ್ಞರು ಹೇಳುವ ಕೆಲವು ಸಲಹೆಗಳ ಬಗ್ಗೆ ತಿಳಿದುಕೊಳ್ಳೋಣ. ಕಾಡು ಬಸಳೆ ಸೊಪ್ಪಿನ ಬಗ್ಗೆ ಈ ಮುಖ್ಯ ಕಾಲದಲ್ಲಿ ಹೆಚ್ಚಾಗಿ ಕೇಳುತ್ತಿದ್ದೇವೆ. ಕಾಡು ಬಸಳೆ ಸೊಪ್ಪಿನ ಎಲೆಯನ್ನು ತೆಗೆದುಕೊಂಡು ಚೆನ್ನಾಗಿ ಕುಟ್ಟಿ ಅದರಿಂದ ಬಂದ ರಸವನ್ನು ಐವತ್ತು ಗ್ರಾಂ ನಸ್ಟು ತೆಗೆದುಕೊಂಡು ಇದರಲ್ಲಿ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ತೆಗೆದುಕೊಳ್ಳುವುದರಿಂದ ಕಿಡ್ನಿಯಲ್ಲಿ ಇರುವ ಕಲ್ಲನ್ನು ಕರಗಿಸಿಕೊಳ್ಳಬಹುದು. ಹಾಗೆಯೇ ಗೊರಕ್ಷಗಂಜ ( Aerval lanata ) ಏಲೆಕೂಡ ಕಿಡ್ನಿಯಲ್ಲಿನ ಕಲ್ಲನು ತೆಗೆದುಹಾಕುವಲ್ಲಿ ಅದ್ಬುತವಾಗಿ ಕೆಲಸ ಮಾಡುತ್ತದೆ ಈ ಗಿಡವನ್ನು ಬೇರು ಸಹ ತೆಗೆದುಕೊಂಡು ಚೆನ್ನಾಗಿ ತೊಳೆದು ಸಣ್ಣ ಸಣ್ಣ ಪೀಸ್ ಮಾಡಿ.

ಒಂದು ಲೀಟರ್ ನೀರಿನಲ್ಲಿ ಹಾಕಿ ಪಾವು ಲೀಟರ್ ನೀರು ಆಗುವವರೆಗೂ ಚೆನ್ನಾಗಿ ಕುದಿಸಿ ಈ ನೀರನ್ನು ಕುಡಿಯುವುದರಿಂದ ಕಿಡ್ನಿಯಲ್ಲಿ ಇರುವ ಕಲ್ಲು ಕರಗಿ ಹೋಗುತ್ತವೆ. ಹಾಗೆಯೇ ಬಾಳೆದಿಂಡಿನ ಒಳಗೆ ಇರುವ ಬಿಳಿಯ ಬಾಗದ ಕಾಂಡದ ಬಗ್ಗೆ ನಾವು ಕೇಳಿರುತ್ತೇವೆ ಇದರಿಂದ ನಾನ ರೀತಿಯ ಅಡುಗೆ ಪದಾರ್ಥಗಳು ತಯಾರು ಮಾಡುತ್ತಾರೆ ಈ ಬಾಳೆದಿಂಡಿನ ಸಾಂಬಾರ್ ಮಾಡಿಕೊಂಡು ತಿನ್ನುವುದರಿಂದ ಕಿಡ್ನಿಯ ಕಾಯಿಲೆ ಬರದ ಹಾಗೆ ಕಲ್ಲುಗಳನ್ನು ಕೂಡ ಕರಗಿಸಿಕೊಳ್ಳಬಹುದು. ಈ ಬಾಳೆದಿಂಡನ್ನು ಕುಟ್ಟಿ ಇದರ ರಸವನ್ನು ತೆಗೆದುಕೊಂಡು ಪ್ರತಿದಿನ ಕಾಲಿ ಒಟ್ಟೆಯಲ್ಲಿ ಕುಡಿಯುವುದರಿಂದ ನಾವು ತುಂಬಾ ಪ್ರಯೋಜನೆಗಳನ್ನು ಪಡೆದುಕೊಳ್ಳಬಹುದು. ಹಾಗೆಯೇ ನೆಗ್ಗಿಲು ಮುಳ್ಳಿನ ಸೊಪ್ಪನ್ನು ತೆಗೆದುಕೊಂಡು ಸಣ್ಣದಾಗಿ ಪೀಸ್ ಮಾಡಿ ಅದನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಈ ಕಷಾಯವನ್ನು ತೆಗೆದುಕೊಳ್ಳುವುದರಿಂದ ಕಿಡ್ನಿಯಲ್ಲಿ ಇರುವ ಕಲ್ಲನ್ನು ಪೂರ್ತಿಯಾಗಿ ತೆಗೆದುಹಾಕಿಕೊಳ್ಳಬಹುದು. ಆದರೆ ತುಂಬಾ ಜನರಿಗೆ ಇವು ಸಿಗದೆ ಇರಬಹುದು ಆದರೆ ಇವು ಆಯುರ್ವೇದದ ಅಂಗಡಿಯಲ್ಲಿ ಸಿಗುವ ಪೆಟ್ಟುಪ್ಪು ಎಂದು ಕರೆಯುವ ಆಯುರ್ವೇದದ ಪದಾರ್ಥವನ್ನು ತೆಗೆದುಕೊಳ್ಳಬೇಕು. ಹಾಗೆಯೇ ಬಿಳಿಬಣ್ಣದ ಕಲ್ಲುಸಕ್ಕರೆಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಪುಡಿಮಾಡಿಕೊಳ್ಳಬೇಕು ಇದರ ಜೊತೆಗೆ ಅಲೋವೆರಾ ರಸವನ್ನು ತೆಗೆದುಕೊಂಡು ಅದರಲ್ಲಿ ಹಾಕಿ ಕುಟ್ಟಿ ಈ ಮಿಶ್ರಣವನ್ನು ಒಂದು ಮಣ್ಣಿನ ಪಾತ್ರೆಯಲ್ಲಿ ಹಾಕಿ ಆ ಪಾತ್ರೆಯನ್ನು ಒಲೆಯ ಮೇಲಿಟ್ಟು ಅದು ಚೆನ್ನಾಗಿ ಪುಡಿ ಆಗುವವರೆಗೂ ಬಿಸಿ ಮಾಡಿಕೊಳ್ಳಬೇಕು.

ಈಗೆ ಮಾಡಿಕೊಂಡ ಮಿಶ್ರಣವನ್ನು ಒಂದು ತೆಂಗಿನಕಾಯಿ ಅಥವಾ ಎಳನೀರಿನಲ್ಲಿ ಎರಡು ಗ್ರಾಂ ಪುಡಿಯನ್ನು ಹಾಕಿಕೊಂಡು ಪ್ರತಿದಿನ ತೆಗೆದುಕೊಳ್ಳುವುದರಿಂದ ಕಿಡ್ನಿಯಲ್ಲಿ ಕಲ್ಲು ಎಸ್ಟೇ ದೊಡ್ಡ ಗಾತ್ರವಿದ್ದರು ಕರಗಿಹೋಗುತ್ತವೆ. ಕಲ್ಲಿನ ಗಾತ್ರ ದೊಡ್ಡದಾಗಿ ಇದ್ದರೆ ಇಪ್ಪತ್ತೊಂದು ದಿನ ಸಣ್ಣದಾಗಿ ಇದ್ದರೆ ಏಳು ದಿನಗಳು ಮಾತ್ರ ಈ ಔಷಧಿಯನ್ನು ಬಳಕೆ ಮಾಡಬೇಕು. ಇದರ ಜೊತೆಗೆ ನೀರನ್ನು ಹೆಚ್ಚಾಗಿ ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಬೇಕು ಹಾಗೆಯೇ ಬಾಳೆದಿಂಡಿನ ಆಹಾರವನ್ನು ಕನಿಷ್ಟ ವಾರದಲ್ಲಿ ಒಂದು ದಿನವಾದರೂ ತೆಗೆದುಕೊಳ್ಳಬೇಕು. ಕಾಡು ಬಸಳೆ ಸೊಪ್ಪನ್ನು ತೆಗೆದುಕೊಂಡು ಸಣ್ಣದಾಗಿ ಪೀಸ್ ಮಾಡಿ ಅದರ ಜೊತೆಗೆ ಮೂರು ಮೆಣಸು, ಮೂರು ಬೆಳ್ಳುಳ್ಳಿ ಎಸಳು ಸೇರಿಸಿ ಚೆನ್ನಾಗಿ ಕುಟ್ಟಿ ಅದರ ರಸವನ್ನು ಐವತ್ತು ಗ್ರಾಂ ನಸ್ಟು ತೆಗೆದುಕೊಂಡು ಮುಂಜಾನೆ ಕಾಲಿ ಒಟ್ಟೆಯಲ್ಲಿ ಕುಡಿಯಬೇಕು ಈಗೆ ಪ್ರತಿದಿನ ಮಾಡುವುದರಿಂದ ಕನಿಷ್ಟ ಇಪ್ಪತ್ತೊಂದು ದಿನಗಳ ಒಳಗೆ ಕಿಡ್ನಿಯಲ್ಲಿ ಇರುವ ಕಲ್ಲು ಕರಗಿ ಹೋಗುತ್ತದೆ.

Leave a Reply

Your email address will not be published. Required fields are marked *