ಈ ಒಂದು ಸಲಹೆಯಿಂದ ಸಾಕು ನಿಮ್ಮ ಹಿಮ್ಮಡಿ ಒಡೆದಿರುವುದು ಶಾಶ್ವತವಾಗಿ ಮಾಯವಾಗುತ್ತದೆ

ಆರೋಗ್ಯ

ಚಳಿಗಾಲದಲ್ಲಿ ಸಾಮಾನ್ಯವಾಗಿ ತುಂಬಾ ಜನ ಹಿಮ್ಮಡಿ ಒಡೆಯುವ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಈಗಿರುವಾಗ ನಾವು ಮುಖ ಹಾಗೂ ದೇಹದ ಇತರೆ ಬಾಗಗಳ ಮೇಲೆ ತೆಗೆದುಕೊಂಡ ಶ್ರದ್ಧೆ ಪಾದಗಳ ಅಂದರೆ ಹಿಮ್ಮಡಿಯ ಮೇಲೆ ನಮ್ಮಲ್ಲಿ ತುಂಬಾ ಜನ ತೆಗೆದುಕೊಳ್ಳುವುದಿಲ್ಲ. ಇದರಿಂದ ಕೆಲವೊಬ್ಬರಲ್ಲಿ ಹಿಮ್ಮಡಿ ಒಡೆದು ಹೊಡಾಡಲು ಆಗದೆ ಇರುವುದು, ನೋವು, ತುರಿಕೆ, ಮತ್ತು ಅಸಹ್ಯವಾಗಿ ಕಾಣಿಸುವುದು ಆಗುತ್ತದೆ. ನಾವು ಕೆಲವೊಮ್ಮೆ ನಮಗೆ ಸಾಕಾಗುವಷ್ಟು ನೀರು ಕುಡಿಯದೆ ಇರುವುದು ಇದರಿಂದ ನಮ್ಮ ದೇಹ ಒಣಗಿದಂಥಾಗುತ್ತದೆ. ಹಾಗೆಯೇ ಪಾದಗಳ ಮೇಲೆ ಸೇರಿಕೊಂಡ ಮೃತ ಕಣಗಳನ್ನು ಸರಿಯಾಗಿ ಶುಭ್ರ ಮಾಡದೆ ಇರುವುದರಿಂದ ಹಿಮ್ಮಡಿ ಓಡೆಯುವುದಕ್ಕೆ ಮುಕ್ಯ ಕಾರಣವಾಗುತ್ತದೆ. ಹೆಚ್ಚಾದ ತೂಕ, ಎತ್ತರ ಚಪ್ಪಲಿಯನ್ನು ಹೆಚ್ಚಾಗಿ ಬಳಕೆ ಮಾಡುವುದರಿಂದ ರಕ್ತ ಪರಿಚಲನೆ ಸರಿಯಾಗಿ ಆಗದೆ ಇರುವುದು, ಕೆಲವೊಂದು ಸಲ ಪೋಷಕ ಆಹಾರ ದೋಷದಿಂದ ಕೂಡ ಪಾದಗಳು ಓಡೆಯುವುದಕ್ಕೆ ಕಾರಣವಾಗಬಹುದು.

ಕೆಲವೊಬ್ಬರಿಗೆ ತುಂಬಾ ಆಳವಾಗಿ ಒಡೆದು ನೋವು ಗಂಭೀರವಾಗಿ ಇರುತ್ತದೆ ಎಲ್ಲರಲ್ಲೂ ಈ ಸಮಸ್ಯೆ ಇದ್ದರೂ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಇಂತಹ ಸಮಯದಲ್ಲಿ ಯಾವ ರೀತಿಯ ಜಾಗೃತಿಯನ್ನು ತೆಗೆದುಕೊಳ್ಳಬೇಕು ಎಂಬುವುದನ್ನು ತಿಳಿದುಕೊಳ್ಳೋಣ. ಆಗಾಗ ಉಗುರು ಬೆಚ್ಚಗಿನ ನೀರಿಗೆ ನಿಂಬೆರಸವನ್ನು ಇಂಡಿ ಆ ನೀರಿನಲ್ಲಿ ಪಾದಗಳನ್ನು ನೆನೆಸಿಟ್ಟು ಹತ್ತು ನಿಮಿಷದ ನಂತರ ನೀರಿನಿಂದ ಪಾದವನ್ನು ಒರಗಡೆ ತೆಗೆದು ಚೆನ್ನಾಗಿ ಉಜ್ಜುವುದರಿಂದ ಮೃತ ಕಣಗಳು ತೆಗೆದುಹಾಕಿ ಪಾದ ಒಡೆಯುವುದು ಕಡಿಮೆಯಾಗುತ್ತದೆ. ಕೊಬ್ಬರಿ ಎಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಉಗುರು ಬೆಚ್ಚಗೆ ಬಿಸಿಮಾಡಿ ಅದರಲ್ಲಿ ಒಂದು ಚಮಚದಷ್ಟು ಮೇಣದ ಬತ್ತಿಯ ಪುಡಿಯನ್ನು ಹಾಕಿ ಚೆನ್ನಾಗಿ ಬೆರೆಸಿ ಅದು ಬಿಸಿ ಇರುವಾಗಲೇ ಪಾದಗಳಿಗೆ ಹಚ್ಚಿ ಎರಡು ನಿಮಿಷದವರೆಗೂ ಮಸಾಜ್ ಮಾಡಬೇಕು ಇದರಿಂದ ರಕ್ತ ಪರಿಚಲನೆ ಹಾಗಿ ಪಾದ ಓದೆದಿರುವುದು ಕಡಿಮೆಯಾಗುತ್ತದೆ. ಹಕ್ಕಿ ಇಟ್ಟಿಗೆ ಆಪಲ್ ಸಿಡಾರ್ ವೆನಿಗರ್, ಮತ್ತು ಜೇನುತುಪ್ಪ ಬೆರಸಿ ಈ ಮಿಶ್ರಣವನ್ನು ಪಾದಗಳಿಗೆ ಹಚ್ಚಿ ನಿದಾನವಾಗಿ ಮಸಾಜ್ ಮಾಡಿ ಹತ್ತು ನಿಮಿಷದ ನಂತರ ತೊಳೆದು ತದನಂತರ ಎಣ್ಣೆ ಇಲ್ಲಾ ಪುಟ್ ಮಾಯಿಶ್ಚರೈಜರ್ ಹಚ್ಚುವುದರಿಂದ ಪಾದಗಳು ಮೃದುವಾಗಿ ಬದಲಾಗುತ್ತವೆ.

ರಾತ್ರಿ ಮಲಗುವ ಮೊದಲು ಪೆಟ್ರೋಲಿಯಂ ಜೆಲ್ ಹಚ್ಚಿ ಸಾಕ್ಸ್ ಹಾಕಿಕೊಂಡು ಮಲಗುವುದರಿಂದ ಕೂಡ ತುಂಬಾ ಒಳ್ಳೆಯ ಪಾಳಿತಾಂಶ ಸಿಗುತ್ತದೆ. ಒಂದು ಮೇಣದ ಬತ್ತಿಯನ್ನು ತೆಗೆದುಕೊಂಡು ಅದರ ಮೇಲಿನ ಬಾಗವನ್ನು ಒಂದು ಚಮಚ ಆಗುವಷ್ಟು ತುರಿದು ಅದರಲ್ಲಿ ಎರಡು ಚಮಚ ಸಾಸಿವೆ ಎಣ್ಣೆಯನ್ನು ಹಾಕಿ ಈ ಮಿಶ್ರಣವನ್ನು ಡಬಲ್ ಬಾಯಿಲ್ ಪದ್ಧತಿಯಲ್ಲಿ ಅಂದರೆ ಒಂದು ಬೋಲಿನಲ್ಲಿ ಬಿಸಿನೀರು ಇಟ್ಟು ಮತ್ತೊಂದು ಬೋಲಿನಲ್ಲಿ ಈ ಮಿಶ್ರಣ ಇರುವುದನ್ನು ಬಿಸಿ ನೀರಿನಲ್ಲಿ ಇಟ್ಟು ಅದು ಕರಗಿದ ನಂತರ ಈ ಎಣ್ಣೆಯನ್ನು ಪಾದಗಳಿಗೆ ಹಚ್ಚಬೇಕು. ಈ ಮಿಶ್ರಣವನ್ನು ಚನ್ನಾಗಿ ಬೇರೆಸುವುದರಿಂದ ಒಳ್ಳೆಯ ಕ್ರೀಮ್ ರೀತಿಯಾಗಿ ತಯಾರಾಗುತ್ತದೆ ಇದನ್ನು ಪಾದಗಳು ಶುಭ್ರವಾಗಿ ತೊಳೆದ ನಂತರ ಈ ಎಣ್ಣೆಯನ್ನು ಹಚ್ಚಬೇಕು . ಈ ಎಣ್ಣೆಯನ್ನು ಹಚ್ಚಬೇಕಾದರೆ ನಿದಾನವಾಗಿ ಹತ್ತು ನಿಮಿಷದವರೆಗೆ ಮಸಾಜ್ ಮಾಡುವುದರಿಂದ ಪಾದಗಳು ಒಡೆಯುವುದು ಕಡಿಮೆಯಾಗುತ್ತದೆ ಕನಿಷ್ಟ ಹತ್ತು ದಿನಗವರೆಗು ಈ ಮಿಶ್ರಣವನ್ನು ನಿಮ್ಮ ಪಾದಗಳಿಗೆ ಹಚ್ಚಿ ಸಾಕ್ಸ್ ಹಾಕಿಕೊಳ್ಳುವುದರಿಂದ ಪಾದ ಒಡೆಯುವುದು ಕಡಿಮೆಯಾಗುತ್ತದೆ.

Leave a Reply

Your email address will not be published. Required fields are marked *