ನಿಮಗೆ ಕೈ ಕಾಲುಗಳಲ್ಲಿ ಜೋಮು ಹಿಡಿಯುತ್ತದೆ ಅಥವಾ ಇರುವೆ ಕಚ್ಚಿದ ಹಾಗೆ ಆಗುತ್ತಾ ಇದ್ದರೆ ಈ ವಿಧಾನವನ್ನು ಅನುಸರಿಸಿ

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ವಯಸ್ಸಾದ ಮೇಲೆ ಕುಳಿತುಕೊಂಡರೆ ಅಥವಾ ತುಂಬಾ ಹೊತ್ತು ನಿಂತು ಕೊಂಡರೆ ಕೈ ಕಾಲುಗಳಲ್ಲಿ ಜೋಮು ಹಿಡಿಯುತ್ತದೆಯೇ? ಹಾಗೂ ಇರುವೆ ಕಚ್ಚಿದ ಹಾಗೆ ಅನುಭವ ಆಗುತ್ತಿದೆಯೇ? ಹಾಗಾದ್ರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಒಂದು ಅದ್ಭುತವಾದ ಮನೆಮದ್ದು ತಿಳಿಸಿ ಕೊಡುತ್ತೇವೆ. ತುಂಬಾ ಹೊತ್ತು ಒಂದೇ ಸ್ಥಳದಲ್ಲಿ ಕುಳಿತುಕೊಂಡಾಗ ಕೈಕಾಲುಗಳಲ್ಲಿ ಜೋಮು ಹಿಡಿಯುತ್ತದೆ. ಆ ಜಾಗದಲ್ಲಿ ಅರಿವು ಕೂಡ ಇರುವುದಿಲ್ಲ.ಇನ್ನೂ ಅತಿಯಾಗಿ ಕೆಲಸವನ್ನು ಮಾಡಿದರು ಕೂಡ ಕೈಕಾಲುಗಳಲ್ಲಿ ಜೋಮು ಹಿಡಿಯುತ್ತದೆ. ಸುಂದು ಹಿಡಿದ ಹಾಗೆ ಆಗುತ್ತದೆ. ಇದಕ್ಕೆಲ್ಲಾ ಯಾವ ರೀತಿಯಾಗಿ ಪರಿಹಾರವನ್ನು ಕಂಡುಕೊಳ್ಳಬಹುದು ಅಂತ ತಿಳಿಯೋಣ. ನಮ್ಮ ದೇಹವು ಮೂರು ಅಂಶಗಳಿಂದ ಕೂಡಿದೆ. ಅವುಗಳೇ ವಾತ ಪಿತ್ತ ಕಫ ಅಂತ. ಇವುಗಳಲ್ಲಿ ಒಂದರಲ್ಲಿ ಯಾವುದಾದರೂ ಹೆಚ್ಚು ಕಡಿಮೆ ಆದರೂ ಕೂಡ ತೊಂದರೆಗಳು ಆಗುತ್ತವೆ. ದೇಹದಲ್ಲಿ ವಾಯು ಹೆಚ್ಚಾದಾಗ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ. ಹೀಗಾಗಿ ರಕ್ತ ಸಂಚಾರ ಆಗುವ ಜಾಗದಲ್ಲಿ ವಾಯು ಸೇರಿಕೊಂಡಾಗ ಕಾಲುಗಳಲ್ಲಿ ಜೋಮು ಹಿಡಿಯುವುದು ಮತ್ತು ಇರುವೆ ಕಚ್ಚಿದ ಹಾಗೆ ಆಗುತ್ತದೆ.

ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಈ ಕಡಲೆ ಕಾಳುಗಳನ್ನು ನಟ್ಸ್ ಗಳನ್ನೂ ಅತಿಯಾಗಿ ಸೇವನೆ ಮಾಡಬೇಡಿ. ಇವುಗಳನ್ನು ನೀವು ಅತಿಯಾಗಿ ಸೇವನೆ ಮಾಡಿದರೆ ವಾತ ದೇಹದಲ್ಲಿ ಹೆಚ್ಚಾಗಿ ಈ ರೀತಿ ಸಮಸ್ಯೆ ಆಗುತ್ತದೆ. ಹಾಗೂ ಇದು ನೆತ್ತಿಯ ಭಾಗಕ್ಕೆ ಹೋಗುತ್ತದೆ ಹೃದಯವು ಇರುವೆ ಕಚ್ಚಿದ ಹಾಗೆ ಆಗುತ್ತದೆ. ಎದೆಯುರಿಯುತ್ತದೆ. ಇವೆಲ್ಲವೂ ವಾತದ ಪರಿಣಾಮ ಆಗಿರುತ್ತದೆ ಮನೆಯಲ್ಲಿ ಬಳಕೆ ಮಾಡುವ ಎಸಿ ಮತ್ತು ಫ್ಯಾನ್ ಗಳ ಮೂಲಕವೂ ಕೂಡ ದೇಹದಲ್ಲಿ ರಂಧಗಳ ಮೂಲಕ ವಾಯು ಸೇರುತ್ತದೆ. ಇದು ದೊಡ್ಡದಾದ ಸಮಸ್ಯೆ ಆದರೂ ಕೂಡ ಇದನ್ನು ನಿರ್ಲಕ್ಷ್ಯ ಮಾಡಿದರೆ ಗಂಭೀರವಾದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ಬನ್ನಿ ಯಾವುದೇ ಮಾತ್ರೆ ಗಳು ಇಲ್ಲದೆ ಇದನ್ನು ಹೇಗೆ ಗುಣಪಡಿಸಿ ಕೊಳ್ಳಬಹುದು ಅಂತ ತಿಳಿಯೋಣ. ಮೊದಲಿಗೆ ನಿಮ್ಮ ಕಾಲುಗಳನ್ನು ಮುಂದೆ ಮಾಡಿ ಒಂದು ಕೆಚ್ ಪೆನ್ ನಿಂಡ ನಿಮ್ಮ ಅಷ್ಟು ಬೆರಳಿಗೆ ಮಾರ್ಕ್ ಮಾಡಿಕೊಳ್ಳಬೇಕು. ತದ ನಂತರ ಒಂದು ಸೀಸದ ಕಡ್ಡಿಯಿಂದ ಮಾರ್ಕ್ ಮಾಡಿರೋ ಬೆರಳಿನ ಮಧ್ಯದಲ್ಲಿ ಮೂರು ಬಾರಿ ಒತ್ತಬೇಕು. ನಿಧಾನವಾಗಿ ಒತ್ತಬೇಡಿ ಸ್ವಲ್ಪ ಭಾರ ತಾಕುವ ಹಾಗೆ ಮೂರು ಬಾರಿ ಒತ್ತಬೇಕು. ಈ ರೀತಿಯಾಗಿ ದಿನದಲ್ಲಿ ಮೂರು ಬಾರಿ ಮಾಡಬೇಕು. ಇಲ್ಲವಾದರೆ ಬಟ್ಟೆ ಒಣಗಿಸ ಲು ಬಳಕೆ ಮಾಡುವ ಕ್ಲಿಪ್ ಬಳಕೆ ಮಾಡಬಹುದು ಇನ್ನೂ ಈ ರೀತಿ ಕೈಗಳಲ್ಲಿ ಜೋಮು ಹಿಡಿದರೆ ಹೀಗೆ ಮಾಡಬೇಕು. ಕೆಲವರಿಗೆ ಸ್ವಲ್ಪ ಕೆಲಸವನ್ನು ಮಾಡಿದರು ಕೂಡ ಜೋಮು ಹಿಡಿಯುತ್ತದೆ. ಕೈಗಳಲ್ಲಿ ಕೂಡ ಈ ವಿಧಾನವನ್ನು ಅನುಸರಿಸಬೇಕು.

ಕೈ ಬೆರಳಿನ ಮಧ್ಯದಲ್ಲಿ ಈ ರೀತಿ ಮೂರು ಬಾರಿ ಒತ್ತಬೇಕು. ಗಟ್ಟಿಯಾಗಿ ಪ್ರೆಶರ್ ಕೊಡಬೇಕು. ಈ ರೀತಿಯಾಗಿ ನೀವು ಖಾಲಿ ಕುಳಿತುಕೊಂಡಾಗ ಮಾಡಬಹುದು. ಟಿವಿ ನೋಡುತ್ತಾ ಮಾಡಬಹುದು. ಇದರಿಂದ ದೇಹದಲ್ಲಿ ರಕ್ತವು ಸರಿಯಾಗಿ ಸಂಚಾರ ಆಗುತ್ತದೆ. ಹಾಗೂ ದೇಹದಲ್ಲಿ ವಾಯು ಹೋಗದಂತೆ ತಡೆಯುತ್ತದೆ. ದೇಹದಲ್ಲಿ ವಾತ ಅಥವಾ ವಾಯು ಸೇರಿಕೊಳ್ಳಲು ಸಾಧ್ಯವಾಗದೆ ಇದ್ದರೆ ಕೈ ಕಾಲುಗಳಲ್ಲಿ ಜೋಮು ಹಿಡಿಯುವುದಿಲ್ಲ. ಸುಂದ ಕೂಡ ಬರುವುದಿಲ್ಲ. ಆದ್ದರಿಂದ ಇದು ತುಂಬಾನೇ ಸುಲಭವಾದ ತಂತ್ರ ಇದಾಗಿದೆ. ನೀವು ಇದನ್ನು ಎಲ್ಲಿ ಬೇಕಾದರೂ ಮಾಡಬಹುದು. ಈ ಸುಲಭವಾದ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಶುಭದಿನ.

Leave a Reply

Your email address will not be published. Required fields are marked *