ಇದನ್ನು ಸೇವನೆ ಮಾಡಿ ಎಂದಿಗೂ ನಿಮಗೆ ಹಾರ್ಟ್ ಅಟ್ಯಾಕ್ ಮತ್ತು ರಕ್ತನಾಳಗಳಲ್ಲಿ ಬ್ಲೋಕೆಜ್ ಆಗುವುದಿಲ್ಲ

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ ತರಕಾರಿ ಹಣ್ಣುಗಳಲ್ಲಿ ಮಾತ್ರ ಪೋಷಕಾಂಶಗಳು ಇರುವುದಿಲ್ಲ. ದ್ವಿದಳ ಧಾನ್ಯಗಳಲ್ಲಿ ಅನೇಕ ರೀತಿಯ ಪೌಷ್ಟಿಕತೆ ಅಡಗಿದೆ ಅನ್ನುವ ಮಾತನ್ನು ಮರೆಯಬಾರದು ಗೆಳೆಯರೇ. ಪ್ರತಿಯೊಬ್ಬರ ಮನೆಯಲ್ಲಿ ಈ ದ್ವಿದಳ ಧಾನ್ಯಗಳು ಇದ್ದೇ ಇರುತ್ತದೆ. ಅದರಲ್ಲೂ ರಾಗಿ ಬಹಳ ಮಹತ್ವದ ಪಾತ್ರವನ್ನು ವಹಿಸುತ್ತದೆ. ರಾಗಿಯನ್ನು ಚಿಕ್ಕವರಿದ್ದಾಗ ತಿಂದಾಗ ಅದರ ಬೆಲೆಯೂ ದೊಡ್ಡವರಾದ ಮೇಲೆ ತಿಳಿಯುತ್ತದೆ. ನಮ್ಮ ಹಿರಿಯರು ರೊಟ್ಟಿ ಜೋಳಕ್ಕಿಂತ ರಾಗಿಯನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದರು. ಅದಕ್ಕಾಗಿ ಅವರು ತುಂಬಾನೇ ಗಟ್ಟಿ ಮುಟ್ಟಾಗಿ ಇರುತ್ತಿದ್ದರು ಹಾಗಾಗಿ ಊಟದಲ್ಲಿ ನಾವು ರಾಗಿಯನ್ನು ಹೆಚ್ಚಾಗಿ ಬಳಕೆ ಮಾಡಬೇಕು. ಮುಖ್ಯವಾಗಿ ಇದನ್ನು ಚಿಕ್ಕ ಮಕ್ಕಳಿಗೆ ಕೊಡುತ್ತಾರೆ ಕಾರಣ ಮಕ್ಕಳು ಆರೋಗ್ಯವಾಗಿ ಬೆಳೆಯಬೇಕು ಅಂತ. ಹೌದು ಇದು ಚಿಕ್ಕ ಮಕ್ಕಳ ಬೆಳವಣಿಗೆಗೆ ತುಂಬಾನೇ ಒಳ್ಳೆಯದು. ರಾಗಿಯನ್ನು ಹಲವಾರು ಬಗೆಯಲ್ಲಿ ಮಾಡಿ ಸೇವನೆ ಮಾಡಬಹುದು. ರಾಗಿ ದೋಸೆ ಮಾಡಬಹುದು ರಾಗಿ ಇಡ್ಲಿ ರಾಗಿ ಅಂಬಲಿ ರಾಗಿ ಗೊಜ್ಜು ಅನೇಕ ರೀತಿಯ ಪದಾರ್ಥಗಳನ್ನು ಮಾಡಿ ಸೇವನೆ ಮಾಡಬಹುದು ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ರಾಗಿ ಪಾಯಸವನ್ನು ಯಾವ ರೀತಿ ಮಾಡಬೇಕು ಅಂತ ತಿಳಿಸಿ ಕೊಡುತ್ತೇವೆ ಬನ್ನಿ.

ರಾಗಿ ಸೇವನೆ ಮಾಡುವುದರಿಂದ ದೇಹದಲ್ಲಿ ರಕ್ತನಾಳಗಳ ಬ್ಲೋಕೇಜ್ ತಡೆಯುತ್ತದೆ. ಮೂಳೆಗಳು ಗಟ್ಟಿಯಾಗುತ್ತವೆ. ಮಧುಮೇಹ ರೋಗವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇನ್ನೂ ರಕ್ತನಾಳಗಳಲ್ಲಿ ತೊಂದರೆ ಇದ್ದರೆ ಹೊಡೆದಾಕುತ್ತದೆ. ಮತ್ತು ದೇಹದಲ್ಲಿ ಶೇಖರಣೆ ಆದ ಬೇಡವಾದ ಕೊಬ್ಬನ್ನು ಕರಗಿಸುತ್ತದೆ. ಮತ್ತು ರಾಗಿ ಸೇವನೆಯು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಇದು ಹೃದಯಾಘಾತ ಆಗುವುದನ್ನು ತಪ್ಪಿಸುತ್ತದೆ. ಮತ್ತು ತಾಯಿಯ ಎದೆಹಾಲು ಹೆಚ್ಚಿಸಲು ರಾಗಿ ತುಂಬಾನೇ ಸಹಾಯ ಮಾಡುತ್ತದೆ. ಮಲಬದ್ಧತೆ ನಿವಾರಣೆಗೆ ಸಹಾಯ ಮಾಡುತ್ತದೆ. ಕ್ಯಾನ್ಸರ್ ತಡೆಯುತ್ತದೆ. ಇಷ್ಟೆಲ್ಲಾ ಆರೋಗ್ಯಕರ ಗುಣಗಳನ್ನು ಹೊಂದಿರುವ ರಾಗಿಯನ್ನು ತಪ್ಪದೇ ಬಳಕೆ ಮಾಡಿ. ಇದನ್ನು ಬಳಕೆ ಮಾಡುವುದರಿಂದ ದೇಹಕ್ಕೆ ಲಾಭವೇ ಹೊರತು ಹಾನಿ ಇಲ್ಲ ಗೆಳೆಯರೇ. ರಾಗಿಯಲ್ಲಿ ಕ್ಯಾಲ್ಷಿಯಂ ವಿಟಮಿನ್ ಗಳು ಇರುವ ಕಾರಣ ಇದು ಮೂಳೆಗಳನ್ನು ದಷ್ಟ ಪುಷ್ಟ ಮಾಡುತ್ತದೆ. ಇದು ಹಾರ್ಮೋನ್ ಗಳನ್ನು ಸಮತೋಲನ ಮಾಡುತ್ತದೆ. ಜೀರ್ಣಶಕ್ತಿಗೆ ಹೆಚ್ಚು ಸಹಾಯ ಮಾಡುತ್ತದೆ ಮತ್ತು ಇದು ಮಧುಮೇಹಿಗಳಿಗೆ ಇದು ಹೇಳಿ ಮಾಡಿಸಿದ ಸೂಪರ್ ಫುಡ್ ಅಂತ ಹೇಳಬಹುದು.

ದೇಹದಲ್ಲಿ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಜೊತೆಗೆ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಈ ರಾಗಿ. ರಕ್ತ ಹೀನತೆ ಸಮಸ್ಯೆಯನ್ನು ಹೋಗಲಾಡಿಸಲು ಸಹಕಾರಿಯಾಗಿದೆ. ಮೊದಲಿಗೆ ಒಂದು ಪಾತ್ರೆಯಲ್ಲಿ ರಾಗಿಯನ್ನು ಚೆನ್ನಾಗಿ ತೊಳೆದು ರಾತ್ರಿ ಪೂರ್ತಿ ನೇನೆಸಿಡಬೇಕು. ಮರುದಿನ ಅದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ನಂತರ ಒಂದು ಕಾಟನ್ ಬಟ್ಟೆಯಲ್ಲಿ ಅದನ್ನು ಶೋಧಿಸಿಕೊಳ್ಳಿ. ಅದರ ಹಾಲನ್ನು ತೆಗೆದುಕೊಳ್ಳಿ. ಮೊದಲಿನ ಕಾಲದಲ್ಲಿ ಮನೆಗೆ ಹೋದರೆ ರಾಗಿ ಅಂಬಲಿ ಕೊಡುತ್ತಿದ್ದರು ಇದು ದೇಹಕ್ಕೆ ತಂಪು ಎಂದು. ಹೌದು ಇದು ನಿಜಕ್ಕೂ ಆರೋಗ್ಯಕ್ಕೆ ತಂಪು. ಉಷ್ಣ ದೇಹವುಳ್ಳವರಿಗೆ ಇದು ತುಂಬಾನೇ ಒಳ್ಳೆಯದು. ಇದು ಆರೋಗ್ಯವನ್ನು ವೃದ್ಧಿಸುತ್ತದೆ. ದೇಹಕ್ಕೆ ಶಕ್ತಿ ಬರುತ್ತದೆ. ಈ ರಾಗಿ ಹಾಲು ಕುಡಿಯುವುದರಿಂದ. ನಂತರ ಒಂದು ಪಾತ್ರೆಯಲ್ಲಿ ಸ್ವಲ್ಪ ತುಪ್ಪವನ್ನು ಹಾಕಿ ಅದಕ್ಕೆ ಎರಡು ಲವಂಗ ಹಾಕಿ ಹುರಿದು ಕೊಳ್ಳಿ. ಸ್ವಲ್ಪ ಚಕ್ಕೆ ಮತ್ತು ಏಲಕ್ಕಿ ಪುಡಿ ಹಾಕಿಕೊಳ್ಳಿ. ತದ ನಂತರ ಈ ರಾಗಿ ಹಾಲನ್ನು ಹಾಕಿ ಕುದಿಸಿಕೊಳ್ಳಿ. ಇದು ಸ್ವಲ್ಪ ಸಮಯ ನಂತರ ಗಟ್ಟಿಯಾಗುತ್ತದೆ. ಆಮೇಲೆ ಇದಕ್ಕೆ ಒಂದು ಲೋಟ ಹಾಲು ಹಾಕಿ ಸ್ವಲ್ಪ ಬೆಲ್ಲವನ್ನು ಸೇರಿಸಿ ಕುದಿಸಬೇಕು. ನಂತರ ಇದನ್ನು ಸೇವನೆ ಮಾಡಬೇಕು. ಇದನ್ನು ಎಲ್ಲವೂ ಚಿಕ್ಕವರಿನಿಂದ ಹಿಡಿದು ದೊಡ್ಡವರಿಗೂ ಕುಡಿಯಬಹುದು. ಈ ರಾಗಿ ಹಾಲಿನಲ್ಲಿ ಇರುವ ಪೋಷಕಾಂಶಗಳು ದೇಹಕ್ಕೆ ಶಕ್ತಿಯನ್ನು ಹೆಚ್ಚಿಸುತ್ತದೆ. ಸುಸ್ತು ನಿಶ್ಯಕ್ತಿ ಎಲ್ಲವೂ ಕಡಿಮೆ ಆಗುತ್ತದೆ.

Leave a Reply

Your email address will not be published. Required fields are marked *