ಇದನ್ನು ತೆಗೆದುಕೊಂಡರೆ ಸಾಕು ಎಷ್ಟೇ ವರ್ಷದ ಮಲಬದ್ಧತೆ ಇದ್ದರು ಒಂದು ಸೆಕೆಂಡ್ ನಲ್ಲಿ ಮಾಯವಾಗುತ್ತದೆ

ಆರೋಗ್ಯ

ಸೋರೆಕಾಯಿ ಬಳ್ಳಿಯಲ್ಲಿ ಬಿಡುವ ಒಂದು ತರಕಾರಿ, ಇದು ಅಧಿಕ ನೀರಿನಂಶ ಒಳಗೊಂಡಿರುತ್ತದೆ ಹಾಗೆಯೇ ಸೋರೆಕಾಯಿಯಲ್ಲಿ ಅತ್ಯಂತ ಔಷದೀಯ ಗುಣಗಳನ್ನು ನಾವು ನೋಡಬಹುದು. ಈ ತರಕಾರಿಯನ್ನು ಹಿಂದಿನ ಕಾಲದಲ್ಲಿ ಸೀಮಿತ ಅವದಿಯಲ್ಲಿ ಅಥವಾ ಕಾಲದಲ್ಲಿ ಮಾತ್ರ ಬೆಳೆಯಲಾಗುತ್ತಿತ್ತು ಆದರೆ ಈಗ ಎಲ್ಲಾ ಕಾಲದಲ್ಲಿಯೂ ಬೆಳೆಯುತ್ತಾರೆ. ಮಲಬದ್ಧತೆಯ ಸಮಸ್ಯೆ ನಿವಾರಣೆಯಾಗಬೇಕೆಂದರೆ ಒಂದೇ ಬಾರಿ ಮಲ ಮೊತ್ತ ಜಾಡಿಸಿಕೊಂಡು ಒರಗಡೆ ಬರಬೇಕೆಂದರೆ ನಮ್ಮ ಆಹಾರ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿಯೊಬ್ಬರಿಗೂ ಮಲಬದ್ಧತೆಯ ಸಮಸ್ಯೆ ಆಗಬಾರದು ಎಂಬ ಕೋರಿಕೆ ಇರುತ್ತದೆ ಆದರೆ ನೂರು ಜನರಲ್ಲಿ ಅರವತ್ತು ಜನರಿಗೆ ಮಲಬದ್ಧತೆ ಸಮಸ್ಯೆ ಕಾಣಿಸುತ್ತದೆ. ಮಲದಲ್ಲಿ ರಕ್ತ ಬೀಳುವುದು, ನೋವು, ಉರಿ, ಈ ರೀತಿಯ ಲಕ್ಷಣಗಳು ತುಂಬಾ ಜನರಲ್ಲಿ ಕಾಣಿಸುತ್ತವೆ. ಇದನ್ನು ದೀರ್ಘಕಾಲದವರೆಗೆ ನಿರ್ಲಕ್ಷ ಮಾಡಿದರೆ ಪೈಲ್ಸ್ ನಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಆದ್ದರಿಂದ ನಾವು ತಿನ್ನುವ ಆಹಾರದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳುವುದರಿಂದ ಮಲಬದ್ಧತೆ ಸಮಸ್ಯೆ ಕಡಿಮೆಯಾಗುವುದರ ಜೊತೆಗೆ ಗ್ಯಾಸ್, ಎಸಿಡಿಟಿ, ಯಂತಹ ಸಮಸ್ಯೆಯಿಂದ ದೂರವಿರಬಹುದು. ಇದಕ್ಕೋಸ್ಕರ ನಾವು ತೆಗೆದುಕೊಳ್ಳುವ ಆಹಾರದ ಬಗ್ಗೆ ಈಗ ತಿಳಿದುಕೊಳ್ಳೋಣ.

ಆಗತಾನೇ ಬಳ್ಳಿಯಿಂದ ಕಿತ್ತು ತಂದಿರುವ ಸೋರೆಕಾಯಿಯನ್ನು ತೆಗೆದುಕೊಳ್ಳಬೇಕು ಅದು ಸ್ವಲ್ಪನೂ ಬಾಡಿರಬಾರದು. ಅದನ್ನು ಗಿಚ್ಚಿದರೆ ಹಾಲು ಬರುವಂತಿರಬೇಕು ಅಂತಹ ಸೋರೆಕಾಯಿ, ಹೀರೇಕಾಯಿ, ಸೌತೆಕಾಯಿಯನ್ನು ಸಿಪ್ಪೆಯನ್ನು ತೆಗೆಯದ ಹಾಗೆ ಹುಳಿ ಅಥವಾ ಸಾಂಬಾರ್, ಪಲ್ಯ ಮಾಡಿಕೊಂಡು ತಿನ್ನಬೇಕು. ಇವುಗಳ ಸಿಪ್ಪೆಯಲ್ಲಿ ಫೈಬರ್ ಸಮೃದ್ಧಿಯಾಗಿ ಇರುತ್ತದೆ ಇದು ಮಲ ಗಟ್ಟಿಯಾಗದ ಹಾಗೆ ತಡೆದು ಸುಲಭವಾಗಿ ಆಗುವುದಕ್ಕೆ ಸಹಾಯ ಮಾಡುತ್ತದೆ. ಆದ್ದರಿಂದ ಸೋರೆಕಾಯಿ, ಹೀರೇಕಾಯಿ, ಸೌತೆಕಾಯಿಯಲ್ಲಿ ಇರುವ ಚರ್ಮ ಮತ್ತು ಬೀಜವನ್ನು ತೆಗೆಯದ ಹಾಗೆ ಅಡುಗೆ ಮಾಡಿಕೊಂಡು ತಿನ್ನಬೇಕು. ನಾವು ತಿನ್ನುವಂತಹ ಆಹಾರದಲ್ಲಿ ಜೀರ್ಣಕ್ರಿಯೆ ಅಂಶ ಇರಬೇಕು ಮತ್ತು ಫೈಬರ್ ಹೆಚ್ಚಾಗಿ ಇರುವಂತಹ ಆಹಾರ ತೆಗೆದುಕೊಳ್ಳಬೇಕು ಹಾಗೆಯೇ ಫೈಬರ್ ಹೆಚ್ಚಾಗಿ ಇರುವ ಆಹಾರದಲ್ಲಿ ಕೆಲವೊಂದು ಹಣ್ಣುಗಳು ಕೂಡ ಕಂಡು ಬರುತ್ತವೆ ಅವುಗಳನ್ನು ಸಹ ತೆಗೆದುಕೊಳ್ಳಬೇಕು. ಪ್ರತಿದಿನ ಬೆಳಗ್ಗೆ ಸೋರೆಕಾಯಿಯ ರಸಕ್ಕೆ ಸ್ವಲ್ಪ ಜೀರಿಗೆ ಪುಡಿಯನ್ನು ಮತ್ತು ಉಪ್ಪು ಬೆರೆಸಿ ಸೇವಿಸಿದರೆ ದೇಹಕ್ಕೆ ಅತ್ಯುತ್ತಮ ಶಕ್ತಿಯನ್ನು ನೀಡುವುದಲ್ಲದೆ ಕೆಲವು ಆರೋಗ್ಯ ಸಮಸ್ಯೆಯಿಂದ ದೂರವಿರಬಹುದು. ಹೊಟ್ಟೆಗೆ ಸಂಬಂದಿಸಿದ ಅನೇಕ ರೋಗಗಳಿಗೆ ಸೋರೆಕಾಯಿ ರಾಮಬಾಣ ನಿತ್ಯವೂ ಸೋರೆಕಾಯಿ ರಸವನ್ನು ಸೇವಿಸುವುದರಿಂದ ಅಜೀರ್ಣ ಸಮಸ್ಯೆ ಹೋಗಲಾಡಿಸಿ ಮಲಬದ್ಧತೆಯ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.

ಸೋರೆಕಾಯಿ ದೇಹದ ಆರೋಗ್ಯ ಹೆಚ್ಚಿಸುವುದಷ್ಟೆ ಅಲ್ಲದೆ ತೂಕ ಕಡಿಮೆ ಮಾಡಲು ತುಂಬಾ ಪರಿಣಾಮಕಾರಿಯಾಗಿದೆ. ಸೋರೆಕಾಯಿಯಲ್ಲಿ ನಾರಿನಂಶ ಅಧಿಕವಾಗಿ ಇರುವುದರಿಂದ ಹೊಟ್ಟೆ ತುಂಬುವುದು ಮತ್ತು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಸೋರೆಕಾಯಿಯನ್ನು ಬೇಯಿಸಿ ಜ್ಯೂಸ್ ಮಾಡಿ ಕುಡಿದರೆ ದೇಹ ತಂಪಾಗುತ್ತದೆ ಹಾಗೆಯೇ ಉರಿಮೂತ್ರ ಸಮಸ್ಯೆ ಇರುವವರು ಸೋರೆಕಾಯಿ ಜ್ಯೂಸ್ ಗೆ ಸ್ವಲ್ಪ ನಿಂಬೆರಸ ಸೇರಿಸಿ ದಿನಕ್ಕೆ ಒಂದುಬಾರಿ ಕುಡಿದರೆ ತುಂಬಾ ಒಳ್ಳೆಯದು. ಮಧುಮೇಹಿಗಳು ಈ ಜ್ಯೂಸ್ ಕುಡಿಯುವುದು ತುಂಬಾ ಒಳ್ಳೆಯದು ಅಜೀರ್ಣ ಸಮಸ್ಯೆ ಮತ್ತು ಮಲಬದ್ಧತೆಯ ಸಮಸ್ಯೆ ಹೋಗಲಾಡಿಸಬೇಕು ಎಂದರೆ ಕೆಲವೊಮ್ಮೆ ಸೋರೆಕಾಯಿಯ ಸೂಪ್ ಕುಡಿದರೆ ಸಾಕು ನಿಮ್ಮ ಸಮಸ್ಯೆಗಳು ಪರಿಹಾರವಾಗುತ್ತವೆ

Leave a Reply

Your email address will not be published. Required fields are marked *