ಮನೆಯಲ್ಲಿ ಮುತ್ತೈದೆಯರು ಈ ತಪ್ಪುಗಳನ್ನು ಮಾಡಲೇ ಬೇಡಿ. ಇಲ್ಲವಾದರೆ ಕಷ್ಟ ಅನ್ನುವುದು ನಿಮ್ಮನ್ನು ಬೆನ್ನು ಬಿಡದೇ ಕಾಡುತ್ತದೆ

ಜ್ಯೋತಿಷ್ಯ ಧಾರ್ಮಿಕ

ನಮಸ್ತೇ ಪ್ರಿಯ ಓದುಗರೇ, ಪ್ರತಿಯೊಬ್ಬರ ಮನೆಯಲ್ಲಿ ಆಚಾರಗಳು ವಿಚಾರಗಳು ಸಂಪ್ರದಾಯ ಪದ್ಧತಿ ಅಂತ ಇದ್ದೇ ಇರುತ್ತದೆ. ಅವುಗಳನ್ನು ಮೀರಿ ನಾವು ನಡೆದರೆ ಅಥವಾ ಅವುಗಳ ವಿರುದ್ಧ ನಾವು ಹೋದರೆ ನಮಗೆ ತೊಂದರೆಗಳು ಸಮಸ್ಯೆಗಳು ಕಟ್ಟಿಟ್ಟ ಬುತ್ತಿ ಅಂತ ಹೇಳಬಹುದು. ಅದಕ್ಕಾಗಿ ನಮ್ಮ ಹಿರಿಯರು ಕೆಲವು ಆಚಾರ ವಿಚಾರಗಳನ್ನು ಸಂಪ್ರದಾಯ ಹಾಗೂ ಪದ್ಧತಿಯನ್ನು ಮಾಡಿಕೊಂಡು ಬಂದಿದ್ದಾರೆ. ಜೀವನದಲ್ಲಿ ಕಷ್ಟಗಳು ಪದೇ ಪದೇ ಬರಲು ನಾವು ಮಾಡುವ ಕೆಲವು ತಪ್ಪುಗಳಿಂದ ಹೊರತು ನಮ್ಮ ಆಲೋಚನೆಗಳಿಂದ ಅಲ್ಲ ಗೆಳೆಯರೇ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಮುತ್ತೈದೆಯರು ಮನೆಯಲ್ಲಿ ಯಾವೆಲ್ಲ ತಪ್ಪುಗಳನ್ನು ಮಾಡಬಾರದು ಅಂತ ತಿಳಿಸಿ ಕೊಡುತ್ತೇವೆ ಬನ್ನಿ. ಮನೆಯಲ್ಲಿ ಹೆಣ್ಣು ಮಗು ಜನಿಸಿದರೆ ತಾಯಿ ಲಕ್ಷ್ಮೀದೇವಿ ಮನೆಗೆ ಬಂದಿದ್ದಾಳೆ ಅಂತ ಹಿರಿಯರು ಹೇಳುತ್ತಾರೆ ಹೌದು ಹೆಣ್ಣು ಮಕ್ಕಳನ್ನು ತಾಯಿ ಲಕ್ಷ್ಮೀದೇವಿ ಸ್ವರೂಪ ಅಂತ ಹೇಳಲಾಗುತ್ತದೆ. ಮನೆಯಲ್ಲಿ ಹೆಣ್ಣು ಮಕ್ಕಳು ಯಾವಾಗಲೂ ನಗುತ್ತಾ ಸುಖವಾಗಿ ಲವಲವಿಕೆ ಇಂದ ಆನಂದವಾಗಿ ಮನೆಯಲ್ಲಿ ಓಡಾಡುತ್ತಾ ಇರಬೇಕು. ಇದರಿಂದ ತಾಯಿ ಲಕ್ಷ್ಮೀದೇವಿ ಮನೆಗೆ ಪ್ರವೇಶ ಮಾಡುತ್ತಾಳೆ.

ಇಲ್ಲದಿದ್ದರೆ ಮನೆಯಲ್ಲಿ ಅಳು ಮುಂಜಿ ಮುಖವನ್ನು ಮಾಡಿಕೊಂಡು ಪದೇ ಪದೇ ಕಣ್ಣೀರು ಹಾಕುತ್ತಾ ಮನೆಯಲ್ಲಿ ಕೆಟ್ಟ ಕೆಟ್ಟ ಅವಾಚ್ಯ ಶಬ್ದಗಳನ್ನು ಉಪಯೋಗಿಸುತ್ತಾ ದೊಡ್ಡವರಿಗೆ ಗೌರವ ಕೊಡದೇ ಅವಮಾನ ಮಾಡುತ್ತಿದ್ದರೆ ತಾಯಿ ಲಕ್ಷ್ಮೀದೇವಿ ಎಂದಿಗೂ ಒಲಿಯುವುದಿಲ್ಲ ಆಕೆಯ ಕೃಪಾ ಕಟಾಕ್ಷ ನಿಮಗೆ ಎಂದಿಗೂ ದಕ್ಕುವುದಿಲ್ಲ. ಹೀಗಾಗಿ ಮುತ್ತೈದೆಯರು ಎಂದಿಗೂ ಇಂತಹ ತಪ್ಪುಗಳನ್ನು ಮಾಡಬೇಡಿ. ಮೊದಲಿಗೆ ಯಾವುದೇ ದಿನವಾಗಲಿ ಸಂಜೆ ವೇಳೆಗೆ ಬಟ್ಟೆಯನ್ನು ಒಗೆಯಬಾರದು. ಏಕೆಂದರೆ ತಾಯಿ ಲಕ್ಷ್ಮೀದೇವಿ ಮನೆಗೆ ಬರುವ ಸಮಯ ಸಂಜೆ ವೇಳೆ ಆಗಿರುವ ಕಾರಣ ಎಂದಿಗೂ ಸಂಜೆಗೆ ಸೂರ್ಯಾಸ್ತ ಆದ ಮೇಲೆ ಬಟ್ಟೆಯನ್ನು ಒಗೆಯಬಾರದು. ಇನ್ನೂ ಎರಡನೆಯದು ಉಗುರುಗಳನ್ನು ಹೆಚ್ಚಾಗಿ ಉದ್ದವಾಗಿ ಮಹಿಳೆಯರು ಬೆಳೆಸಬಾರದು. ಬದಲಾಗಿ ಅವುಗಳನ್ನು ಕತ್ತರಿಸಬೇಕು. ಈಗಿನ ಕಾಲದ ಯುವಕ ಯುವತಿಯರು ಹೆಚ್ಚಾಗಿ ಉಗುರುಗಳನ್ನು ಫ್ಯಾಷನ್ ಗಾಗಿ ಉದ್ದವಾಗಿ ಬಿಡುತ್ತಾರೆ. ಆದರೆ ಹೀಗೆ ಮಾಡುವುದು ಒಳಿತು ಅಲ್ಲ. ಅಷ್ಟೇ ಅಲ್ಲದೇ ಇದರಿಂದ ನಿಮ್ಮಲ್ಲಿ ಕೋಪ ತಾಪ ಹೆಚ್ಚುತ್ತದೆ. ದಾರಿದ್ರ್ಯ ಲಕ್ಷ್ಮಿ ಮನೆಯೊಳಗೆ ಆಗಮನ ಆಗುತ್ತದೆ ಇದರಿಂದ ಹಣದ ಕೊರತೆ ಪ್ರಾರಂಭವಾಗುತ್ತದೆ.

ಜೊತೆಗೆ ಆವಾಗಾವಾಗ ಉಗುರು ಕಚ್ಚುವ ಅಭ್ಯಾಸವಿದ್ದರೆ ಅದನ್ನು ಕೂಡ ಇವತ್ತೇ ಬಿಟ್ಟು ಬಿಡಿ. ಇನ್ನೂ ಮೂರನೆಯದು ಮನೆಯಲ್ಲಿ ಹೆಚ್ಚಾಗಿ ನಿದ್ರೆ ಮಾಡುವ ಹೆಣ್ಣು ಮಕ್ಕಳು ಇದ್ದರೇ ಮನೆಯಲ್ಲಿ ತಾಯಿ ಲಕ್ಷ್ಮೀದೇವಿ ನೆಲೆಸುವುದಿಲ್ಲ. ದಾರಿದ್ರ್ಯ ಲಕ್ಷ್ಮಿ ಮನೆಯೊಳಗೆ ತಾಂಡವ ಆಗುತ್ತಾಳೆ ಯಾವುದೇ ಕೆಲಸಗಳು ಯಶಸ್ಸು ಕಾಣುವುದಿಲ್ಲ. ಇನ್ನೂ ಮನೆಯಲ್ಲಿ ಪದೇ ಪದೇ ಹೆಣ್ಣು ಮಕ್ಕಳು ಕೂಡ ಮನೆಗೆ ಶ್ರೇಯಸ್ಸು ಅಲ್ಲ. ಮಂಗಳವಾರ ಹಾಗೂ ಶುಕ್ರವಾರ ಹೆಣ್ಣು ಮಕ್ಕಳು ಕಣ್ಣೀರು ಹಾಕಬಾರದು. ಅವರು ಎಷ್ಟೇ ಕಷ್ಟ ಬಂದರು ಕೂಡ ಲವಲವಿಕೆ ಇಂದ ಮನೆಯಲ್ಲಿ ನಗುತ್ತಾ ಇರಬೇಕು. ಇನ್ನೂ ದೇವರಿಗೆ ಪ್ಲ್ಯಾಸ್ಟಿಕ್ ಹೂವುಗಳನ್ನು ಅರ್ಪಣೆ ಮಾಡಬಾರದು. ಇದು ಮುಖ್ಯವಾಗಿ ತಿಳಿದುಕೊಳ್ಳುವ ಸಂಗತಿ. ಇನ್ನೂ ನಿಮ್ಮ ಮನೆಯ ಅಂಗಳ ಸದಾ ಕಾಲ ರಂಗೋಲಿಯಿಂದ ತುಂಬಿರಲಿ.

ರಂಗೋಲಿ ಇಂದಲೇ ನೀವು ತಾಯಿ ಲಕ್ಷ್ಮೀದೇವಿ ಯನ್ನು ಬರಮಾಡಿ ಕೊಳ್ಳಬೇಕು. ನಿತ್ಯವೂ ಅಂಗಳದಲ್ಲಿ ರಂಗೋಲಿ ಹಾಕದೆ ಇದ್ದರೆ ತಾಯಿ ಲಕ್ಷ್ಮೀದೇವಿ ಆಗಮನ ಆಗುವುದಿಲ್ಲ. ಇದರಿಂದ ನಿಮಗೆ ಕಷ್ಟಗಳು ಎದುರಾಗಬಹುದು. ಇನ್ನೂ ಪ್ರತಿ ಮುತ್ತೈದೆಯರು ತುಳಸಿ ಪೂಜೆಯನ್ನು ಮಾಡಬೇಕು. ಇದು ಅವರ ಗಂಡನ ಯಶಸ್ಸು ಆಯಸ್ಸು ಎರಡಕ್ಕೂ ಶ್ರೇಯಸ್ಸು ತಂದು ಕೊಡುತ್ತದೆ. ಇನ್ನೂ ಕೆಲವರು ಕೂದಲು ಕಟ್ಟದೆ ಅವುಗಳನ್ನು ಒಣಗಿಸದೆ ಹಾಗೆಯೇ ಬಿಟ್ಟು ದೇವರಿಗೆ ಪೂಜೆಯನ್ನು ಮಾಡುತ್ತಾರೆ. ಇದು ಶುಭವಲ್ಲ. ಅದರಲ್ಲಿ ಸ್ನಾನ ಮಾಡಿ ತಲೆಗೆ ಟಾವೆಲ್ ಕಟ್ಟಿಕೊಂಡು ಕೆಲವರು ಪೂಜೆ ಮಾಡುತ್ತಾರೆ. ಆದರೆ ಒದ್ದೆ ತಲೆಯಿಂದ ಎಂದಿಗೂ ಪೂಜೆ ಮಾಡಬಾರದು ಆದ್ದರಿಂದ ಪ್ರತಿ ಮುತ್ತೈದೆಯೂ ಸ್ನಾನವನ್ನು ಮಾಡಿದ ಬಳಿಕ ಕೂದಲನ್ನು ಸರಿಯಾಗಿ ಒಣಗಿಸಿ ಅಥವಾ ಅವುಗಳನ್ನು ಕಟ್ಟಿಕೊಂಡು ದೇವರಿಗೆ ನಮಸ್ಕಾರ ಮಾಡಬೇಕು. ಶುಭದಿನ.

Leave a Reply

Your email address will not be published. Required fields are marked *