ನಮಸ್ತೇ ಪ್ರಿಯ ಓದುಗರೇ, ಸಾಮಾನ್ಯವಾಗಿ ನಾವು ಹಬ್ಬ ಹರಿದಿನಗಳಲ್ಲಿ ಸುಂದರವಾಗಿ ಕಾಣಲು ಒಡವೆಗಳನ್ನು ಆಭರಣಗಳನ್ನು ಹಾಕಿಕೊಳ್ಳುತ್ತೇವೆ. ಇವುಗಳು ನಮ್ಮನ್ನು ಮತ್ತಷ್ಟು ಸುಂದರವಾಗಿ ಕಾಣುವಂತೆ ಮಾಡುತ್ತವೆ. ಅಷ್ಟೇ ಅಲ್ಲದೇ ಇವುಗಳನ್ನು ಧರಿಸುವುದರಿಂದ ನಮ್ಮ ಆರೋಗ್ಯಕ್ಕು ಕೂಡ ಒಳ್ಳೆಯದು ಅಂತ ಹೇಳಲಾಗಿದೆ. ಉದಾಹರಣೆಗೆ ಕಿವಿ ಒಲೆ ಮೂಗುತಿ ಕೈ ಬಳೆ ಮುಂತಾದವು. ವೇದ ಶಾಸ್ತ್ರದ ಪ್ರಕಾರ, ಇವುಗಳನ್ನು ಹಾಕಿಕೊಳ್ಳುವುದರಿಂದ ಧನಾತ್ಮಕವಾಗಿ ಪರಿಣಾಮ ಬೀರುತ್ತದೆ. ಮತ್ತು ನಾವು ಆರೋಗ್ಯವಾಗಿ ಕೂಡ ಇರಬಹುದು. ಮಹಿಳೆಯರು ಮೂಗುತಿ ಹಾಕಿಕೊಳ್ಳುತ್ತಾರೆ. ಅವರು ಚಿಕ್ಕವರು ಇದ್ದಾಗಲೇ ಅವರಿಗೆ ಮೂಗೂತಿ ಹಾಕಿಸುತ್ತಾರೆ. ಹಾಗೂ ಪುರುಷರು ಕಿವಿಯಲ್ಲಿ ಒಲೆ ಹಾಕುತ್ತಾರೆ. ಇದು ಅವರು ಫ್ಯಾಶನ್ ಅಂತ ಹಾಕಿಕೊಂಡರು ಇದರಲ್ಲಿ ಆರೋಗ್ಯ ಅಡಗಿದೆ ಅಂತ ಅವರಿಗೆ ಗೊತ್ತೇ ಇರುವುದಿಲ್ಲ. ಹೌದು ಮೊದಲಿನ ಕಾಲದ ಜನರು ಅಷ್ಟೇ ಅಲ್ಲದೇ ಈಗಲೂ ಕೂಡ ಮನೆಯ ಸದಸ್ಯರು ಚಿಕ್ಕ ಮಕ್ಕಳಿಗೆ ಮೂರು ತಿಂಗಳಿನಿಂದ ಐದು ತಿಂಗಳವರೆಗಿನ ಎಲ್ಲ ಮಕ್ಕಳಿಗೆ ಕಿವಿ ಒಲೆ ಚುಚ್ಚುತ್ತಾರೆ. ಅದು ಗಂಡು ಮಗುವಿರಲಿ, ಹೆಣ್ಣು ಮಗುವಿರಲಿ. ಆದರೆ ಗಂಡು ಮಗು ಬೆಳೆದಂತೆ ಅವುಗಳ ಕಿವಿಯಲ್ಲಿರುವ ಒಲೆಯನ್ನು ತೆಗೆದು ಹಾಕುತ್ತಿದ್ದರು.
ಹೌದು ಆದರೆ ಗಂಡು ಮಕ್ಕಳು ಈಗಿನ ಫ್ಯಾಷನ್ ಹಾಗೂ ಟ್ರೆಂಡ್ ಗೆ ತುಂಬಾನೇ ಹೊಂದಿಕೊಂಡಿದ್ದಾರೆ. ಹೀಗಾಗಿ ಅವರು ಕೂಡ ಹುಡುಗಿಯರಂತೆ ಕಿವಿಯಲ್ಲಿ ಒಲೆ ಹಾಕಲು ಶುರು ಮಾಡಿದ್ದಾರೆ. ಅವರನ್ನು ನೋಡಿ ಜನರು ನಗುತ್ತಿದ್ದರು ಹೀಯಾಳಿಸುತ್ತಿದ್ದರೂ. ಆದರೆ ಅವರು ಕಿವಿಯಲ್ಲಿ ಒಲೆ ಹಾಕುವುದರಿಂದ ಯಾವುದೇ ರೀತಿಯಲ್ಲಿ ಹಾನಿಯಾಗುವ ಬದಲು ಲಾಭವೇ ಹೆಚ್ಚು. ಅದು ಹೇಗೆ ಅಂತೀರಾ. ಹಾಗಾದ್ರೆ ಬನ್ನಿ ಇಂದಿನ ಲೇಖನದಲ್ಲಿ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ನಮ್ಮ ಹಿರಿಯರು ಹಾಗೂ ಮೊದಲಿನ ಕಾಲದ ಜನರು ಏನೇ ಪದ್ಧತಿಯನ್ನು ಮಾಡಿದರು ಹಬ್ಬಗಳನ್ನು ಮಾಡಿದ್ದರು ಅಥವಾ ಮನೆಮದ್ದುಗಳನ್ನು ಮಾಡಿದರು ಕೂಡ ಅದು ನಮ್ಮ ಒಳಿತಿಗಾಗಿ ಅಂತ ನಾವು ಭಾವಿಸಬೇಕು. ಅದರಿಂದ ನಮಗೆ ಯಾವುದೇ ರೀತಿಯ ಅಪಾಯ ಹಾನಿ ತೊಂದರೆಗಳು ಬರುವುದಿಲ್ಲ.
ಮಕ್ಕಳು ಕಿವಿಯಲ್ಲಿ ಒಲೆ ಧರಿಸುವುದರಿಂದ ಮಕ್ಕಳ ಮೆದುಳಿನ ಬೆಳವಣಿಗೆ ಹಾಗೂ ಬುದ್ದಿ ಶಕ್ತಿ ಚೆನ್ನಾಗಿ ಬೆಳೆಯುತ್ತದೆ ಎಂದು ಕಿವಿ ಒಲೆ ಹಾಕಿಸುತ್ತಾರೆ. ಅಷ್ಟೇ ಅಲ್ಲದೇ ಮಕ್ಕಳಿಗೆ ಕಿವಿ ಒಲೆ ಚುಚ್ಚುವ ಬಲವಾದ ಕಾರಣ ಅಂದರೆ ಅದು ಕಿವಿಯು ಕಣ್ಣಿಗೆ ನೇರವಾದ ಸಂಪರ್ಕವನ್ನು ಹೊಂದಿರುತ್ತದೆ. ಇದೇ ಒಂದು ಕಾರಣಕ್ಕಾಗಿ ಮಕ್ಕಳ ಕಣ್ಣಿನ ದೃಷ್ಟಿ ಸಾಮರ್ಥ್ಯ ಹೆಚ್ಚಿಸುವುದಕ್ಕೆ ಮಕ್ಕಳ ಕಿವಿ ಚುಚ್ಚಿತ್ತಿದ್ದರು. ಹಾಗೂ ಕಣ್ಣಿನ ಯಾವುದೇ ಸಮಸ್ಯೆಗಳು ಮುಂದೆ ದೊಡ್ಡವರು ಆದ ಮೇಲೆ ಬರಬಾರದು ಅಂತ ಹುಟ್ಟಿದ ಮೂರು ತಿಂಗಳ ಮಗುವಿಗೆ ಕಿವಿ ಒಲೆ ಹಾಕಿಸುತ್ತಿದ್ದರು. ಪುರುಷರು ಕಿವಿ ಒಲೆ ಧರಿಸುವುದರಿಂದ ರಕ್ತ ಸಂಚಾರ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ. ಹೀಗಾಗಿ ದೇಹದಲ್ಲಿ ರಕ್ತ ಸಂಚಾರ ಸರಿಯಾಗಾದರೆ ನಮಗೆ ಯಾವುದೇ ಅನಾರೋಗ್ಯದ ಸಮಸ್ಯೆಗಳು ಬರುವುದಿಲ್ಲ. ಇನ್ನೂ ಪುರುಷರು ಕಿವಿ ಒಲೆ ಧರಿಸುವುದರಿಂದ ವೀ-ರ್ಯಾಣು ಸಂಖ್ಯೆ ಹೆಚ್ಚಾಗುತ್ತದೆ ಅಂತ ದೃಢವಾಗಿ ನಂಬಲಾಗಿದೆ. ಹಾಗೂ ಪುರುಷರು ಕಿವಿ ಒಲೆ ಧರಿಸುವುದರಿಂದ ಅವರ ಜ್ಞಾಪಕ ಶಕ್ತಿ ಕೂಡ ಹೆಚ್ಚುತ್ತದೆ. ಶುಭದಿನ.