ರಕ್ತದಾನ ಮಾಡುವ ಮುನ್ನ ಎಲ್ಲರಿಗು ಗೊತ್ತಿರಬೇಕು ವಿಚಾರವಿದು

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ರಕ್ತದಾನ ಅನ್ನದಾನ ನೇತ್ರದಾನ ಮಹಾದಾನ ಅಂತ ಹೇಳಲಾಗುತ್ತದೆ. ಅನ್ನದಾನವನ್ನು ಬಹಳ ಶ್ರೇಷ್ಟವಾದ ದಾನವೆಂದು ಕರೆಯುತ್ತೇವೆ. ದೇವರು ನಮ್ಮ ಆಸೆಗಳನ್ನು ಕನಸುಗಳನ್ನು ಈಡೆರಿಸಿದಾಗ ಕೆಲವರು ಊರಿನ ಜನರಿಗೆಲ್ಲರಿಗೂ ಅನ್ನದಾನ ಮಾಡುತ್ತಾರೆ. ಮತ್ತು ಸತ್ತ ಮೇಲೆ ನೇತ್ರದಾನವನ್ನು ಮಾಡುತ್ತಾರೆ ಇನ್ನೂ ಕೆಲವರು ಕಷ್ಟದಲ್ಲಿ ಅನಾರೋಗ್ಯದ ಸಮಸ್ಯೆಯಲ್ಲಿ ರಕ್ತದಾನ ಮಾಡುತ್ತಾರೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ, ನಾವು ನಿಮಗೆ ಯಾರು ರಕ್ತದಾನ ಮಾಡಬೇಕು ಹಾಗೂ ಯಾರು ರಕ್ತದಾನ ಮಾಡಬಾರದು ಅಂತ ವಿವರವಾಗಿ ತಿಳಿಸಿಕೊಡುತ್ತೇವೆ ಬನ್ನಿ. ನಮ್ಮ ಸಂಶೋಧನೆ ಎಷ್ಟೊಂದು ದೊಡ್ಡ ಅದ್ಭುತವಾದ ಸಂಶೋಧನೆಯನ್ನು ಮಾಡಿದೆ ಅಂದರೆ ಅದಕ್ಕೊಂದು ಸಲಾಂ ಹೇಳಬೇಕು. ಹೌದು ಅದುವೇ ಒಬ್ಬ ವ್ಯಕ್ತಿಯ ಜೀವವನ್ನು ಉಳಿಸಲು ಆ ವ್ಯಕ್ತಿಗೆ ರಕ್ತವನ್ನು ದಾನವಾಗಿ ನೀಡುವುದು. ಒಬ್ಬ ವ್ಯಕ್ತಿ ತನ್ನ ಸ್ವ ಇಚ್ಛೆಯಿಂದ ಅಥವಾ ಸ್ವ ಪ್ರೇರಣೆಯಿಂದ ಒಬ್ಬನಿಗೆ ರಕ್ತದಾನ ಮಾಡಬಹುದು. ಅದರಲ್ಲಿ ಯಾವುದೇ ಅಪೇಕ್ಷೆ ಹಾಗೂ ಆಕಾಂಕ್ಷೆಗಳು ಇಲ್ಲದೆ ರಕ್ತವನ್ನು ನೀಡುವುದಕ್ಕೆ ರಕ್ತದಾನ ಎಂದು ಕರೆಯುತ್ತಾರೆ.

ರಕ್ತದಾನ ಮಾಡುವುದು ಸುರಕ್ಷಿತವಾದರೂ, ಸೂಜಿ ಚುಚ್ಚುವಾಗ ಅಥವಾ ಆಯಾಸವಾದಾಗ ಕೆಲವರಿಗೆ ನೋವಾಗುವ ಅನುಭವವಾಗಬಹುದು ರಕ್ತದಾನ ಮಾಡುವ ಅನೇಕ ಜನರಲ್ಲಿ ಹಲವಾರು ಬಗೆಯ ಗೊಂದಲಗಳಿವೆ ಇದೆ ಒಂದು ಕಾರಣಕ್ಕಾಗಿ ಅವರು ರಕ್ತದಾನ ಮಾಡಲು ಹಿಂದೆ ಸರಿಯುತ್ತಾರೆ.ಒಬ್ಬ ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ರಕ್ತವೂ 5.5 ರಿಂದ 6 ಲೀಟರ್ ರಕ್ತವಿರುತ್ತದೆ. ಈ ಆರೋಗ್ಯವಂತ ವ್ಯಕ್ತಿಯ ದೇಹದಿಂದ 350 ಎಂಎಲ್ ಮಾತ್ರ ರಕ್ತವನ್ನು ಪಡೆದುಕೊಂಡರೆ ಯಾವುದೇ ಹಾನಿ ಆಗುವುದಿಲ್ಲ. ನಿಮಗೆ ಗೊತ್ತೇ ರಕ್ತದಾನ ಮಾಡುವುದರಿಂದ ಹೃದ್ರೋಗದ ಸಮಸ್ಯೆಗಳು ಎಂದಿಗೂ ಬರುವುದಿಲ್ಲ.
ದೇಹದಲ್ಲಿ ಕೆಟ್ಟ ರಕ್ತ ಕಣಗಳು ಉತ್ಪತ್ತಿ ಆಗುವುದಿಲ್ಲ. ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ. ಹಾಗೂ ಚರ್ಮದ ಎಲ್ಲ ಸಮಸ್ಯೆಗಳನ್ನೂ ದೂರ ಮಾಡುತ್ತದೆ ಹಾಗೂ ಕ್ಯಾನ್ಸರ್ ಕೂಡ ಬರದಂತೆ ತಡೆಯುತ್ತದೆ. ನಿಜಕ್ಕೂ ನಿಮಗೆ ಅಚ್ಚರಿ ಅನ್ನಿಸಬಹುದು ಇದು ನಿಜವೇ. ಏಕೆಂದರೆ ದೇಹದಲ್ಲಿ ರಕ್ತವನ್ನು ದಾನ ಮಾಡುವುದರಿಂದ ದೇಹದಲ್ಲಿ ಬೇರೆ ರಕ್ತವೂ ಉತ್ಪತ್ತಿ ಆಗುತ್ತದೆ ಅಂದರೆ ಹೊಸದಾದ ರಕ್ತವೂ ಉತ್ಪತ್ತಿ ಆಗುವ ಕಾರಣ ಮುಖ್ಯವಾಗಿ ನಿಮಗೆ ಮೊಡವೆಗಳು ಚರ್ಮದ ಸಮಸ್ಯೆಗಳು ಎಂದಿಗೂ ಬರುವುದಿಲ್ಲ.

ಅಲರ್ಜಿ ಕೂಡ ಆಗುವುದಿಲ್ಲ. ಹೌದು ದೇಹದಲ್ಲಿ ನೆಗೆಟಿವ್ ಎನರ್ಜಿಯನ್ನು ತೆಗೆದು ಹಾಕಲು ಇದು ತುಂಬಾನೇ ಸಹಾಯ ಮಾಡುತ್ತದೆ. ಇನ್ನೂ 15-60 ವರ್ಷದ ಎಲ್ಲ ಆರೋಗ್ಯಕರ ವ್ಯಕ್ತಿಗಳು ರಕ್ತದಾನವನ್ನು ಸುಲಭವಾಗಿ ಮಾಡಬಹುದು. ಇದರಲ್ಲಿ ಗಂಡಸರು ಹಾಗೂ ಹೆಂಗಸರು ಎಂದು ಭೇಧ ಭಾವ ಇಲ್ಲ ಗೆಳೆಯರೇ. ಗಂಡಸರು ಮೂರು ತಿಂಗಳಿಗೆ ರಕ್ತದಾನ ಮಾಡಿದರೆ ಹೆಂಗಸರು ಆರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ದಾನಿಯ ದೇಹದಲ್ಲಿ ರಕ್ತವೂ 12.5 ಗಿಂತ ಹೆಚ್ಚಾಗಿ ಇರಬೇಕು. ಮತ್ತು ವ್ಯಕ್ತಿಯ ತೂಕವು 45 ಕೆಜಿಗಿಂತಲೂ ಜಾಸ್ತಿಯಾಗಿರಬೇಕು. ಇನ್ನೂ ರಕ್ತದಾನ ಯಾರು ಮಾಡಬಾರದು ಅಂದರೆ ಅದು ಹೃದ್ರೋಗದ ಸಮಸ್ಯೆ ಇರುವವರು ಮಾತ್ರೆಯನ್ನು ತೆಗೆದುಕೊಳ್ಳುವವರು ಗರ್ಭಿಣಿಯರು ಮುಖ್ಯವಾಗಿ 18 ವರ್ಷ ಕೆಳಪಟ್ಟ ಯಾವುದೇ ವ್ಯಕ್ತಿ ರಕ್ತದಾನ ಮಾಡಬಾರದು. ಋತುಚಕ್ರದಲ್ಲಿ ಇರುವ ಮಹಿಳೆ ರಕ್ತದಾನ ಮಾಡಬಾರದು. ಮತ್ತು ಮಗುವಿಗೆ ಹಾಲುಣಿಸುವ ತಾಯಂದಿರು ಕೂಡ ಎಂದಿಗೂ ರಕ್ತದಾನ ಮಾಡಬಾರದು. ಮಲೇರಿಯಾ ರೋಗಕ್ಕೆ ತುತ್ತಾದಾವರು ಕೂಡ ಮೂರು ತಿಂಗಳು ಗುಣಮುಖ ಆದ ಮೇಲೆ ಖಂಡಿತವಾಗಿ ರಕ್ತವನ್ನು ಮಾಡಬಹುದು ಆದರೆ ಅದಕ್ಕಿಂತ ಮುಂಚಿತವಾಗಿ ಮಾಡಬಾರದು. ಕಾಮಾಲೆ ಹಾಗೂ ಗುಪ್ತಚರ ಸಮಸ್ಯೆಗಳು ಇರುವವರು ಕೂಡ ರಕ್ತದಾನ ಮಾಡಬಾರದು. ರಕ್ತದಾನ ಮಾಡಿದ ವ್ಯಕ್ತಿ ಹೆಚ್ಚು ಸಮಯ ವಿಶ್ರಾಂತಿ ಮಾಡಬೇಕು ಆ ದಿನ ಅಧಿಕವಾಗಿ ಹೆಚ್ಚು ಹೆಚ್ಚು ನೀರು ಕುಡಿಯಬೇಕು. ಅದಕ್ಕಾಗಿ ರಕ್ತ ದಾನ ಮಾಡುವುದರಿಂದ ಯಾವುದೇ ಹಾನಿ ಆಗುವುದಿಲ್ಲ ಜೊತೆಗೆ ನಿಮ್ಮ ಆರೋಗ್ಯವೂ ವೃದ್ಧಿ ಆಗುತ್ತದೆ ಜೊತೆಗೆ ಇನ್ನೊಬ್ಬರ ಪ್ರಾಣವು ಕೂಡ ಉಳಿಯುತ್ತದೆ.

Leave a Reply

Your email address will not be published. Required fields are marked *