ಅರುಂಧತಿ ನಕ್ಷತ್ರ ಅಂದರೆ ಯಾರು, ಯಾಕೆ ಇದಕ್ಕೆ ಇಷ್ಟೊಂದು ಪ್ರಾಮುಖ್ಯತೆಯನ್ನು ನೀಡಲಾಗಿದೆ. ಇಲ್ಲಿದೆ ರೋಚಕರ ಕಥೆ

ಜ್ಯೋತಿಷ್ಯ ಧಾರ್ಮಿಕ

ನಮಸ್ತೇ ಪ್ರಿಯ ಓದುಗರೇ, ನಮ್ಮ ಹಿಂದೂ ಸಂಪ್ರದಾಯದಲ್ಲಿ ಅರುಂಧತಿ ನಕ್ಷತ್ರ ಅನ್ನುವುದನ್ನು ಪ್ರತಿಯೊಬ್ಬರೂ ಕೇಳಿಯೇ ಇರುತ್ತಾರೆ, ಅದರಲ್ಲೂ ಮದುವೆ ಆದ ನವದಂಪತಿಗಳು ಅಂತೂ ಈ ಅರುಂಧತಿ ನಕ್ಷತ್ರದ ಬಗ್ಗೆ ಗೊತ್ತೇ ಇರುತ್ತದೆ. ಆಕಾಶದಲ್ಲಿ ಗಂಡ ಹೆಂಡತಿಗೆ ಅರುಂಧತಿ ನಕ್ಷತ್ರ ತೋರಿಸುತ್ತಾರೆ. ಕಾರಣ ಗಂಡ ಹೆಂಡತಿ ಇಬ್ಬರೂ ಕೂಡ ಜೊತೆಯಾಗಿ ಬದುಕಿ ಬಾಳಿ ಸತ್ತ ಮೇಲೆ ಕೂಡ ಆಕಾಶದಲ್ಲಿ ನಕ್ಷತ್ರಗಳು ಆಗಿ ಉಳಿಯಬೇಕು ಅಂತ ಈ ಪದ್ಧತಿಯನ್ನು ಮಾಡಿದ್ದಾರೆ ಹಾಗಾದರೆ ಈ ಅರುಂಧತಿ ದೇವಿ ಅಂದರೆ ಯಾರು? ಯಾಕೆ ಈ ದೇವಿಗೆ ಇಷ್ಟೊಂದು ಪ್ರಾಮುಖ್ಯತೆಯನ್ನು ನೀಡಲಾಗಿದೆ. ಎಂತಹ ಪತಿವ್ರತೆಗೆ ಇರದ ಮಹತ್ವವೂ ಈ ಅರುಂಧತಿ ನಕ್ಷತ್ರಕ್ಕೆ ಯಾಕೆ ಇದೆ. ಹಾಗಾದರೆ ಇದರ ಹಿಂದೆ ಇರುವ ಕತೆ ಏನು ಅಂತ ಇಂದಿನ ಲೇಖನದಲ್ಲಿ ತಿಳಿಯೋಣ. ಅಹಲ್ಯೆ, ದ್ರೌಪದಿ ಸೀತೆ, ತಾರಾ ಮತ್ತು ಮಂಡೋದರಿ. ಈ ಪಂಚ ಕನ್ಯೆಯರ ಹೆಸರನ್ನು ನಿತ್ಯವೂ ಸ್ಮರಣೆ ಮಾಡುತ್ತಾ ಬಂದರೆ ನೀವು ಮಾಡಿರುವ ಎಲ್ಲ ಕರ್ಮ ಪಾಪಗಳು ಕಳೆದುಹೋಗುತ್ತದೆ. ಮೊದಲಿಗೆ ಅರುಂಧತಿ ನಕ್ಷತ್ರ ಇರುವ ದಿಕ್ಕು ಯಾವುದು ಅಂತ ಹೇಳುವುದಾದರೆ, ಆಗಸದಲ್ಲಿ ಸಪ್ತ ಋಷಿ ದಿಕ್ಕಿಗೆ ಇರುವ ಮಂಡಲದಲ್ಲಿ, ಇರುತ್ತದೆ. ಸಪ್ತ ಋಷಿಗಳಲ್ಲಿ ವಶಿಷ್ಠ ನಕ್ಷತ್ರ ಕೆಳಭಾಗದಲ್ಲಿ ಇರುತ್ತದೆ. ಇದರ ಪಕ್ಕದಲ್ಲಿ ಅರುಂಧತಿ ನಕ್ಷತ್ರ ಇರುತ್ತದೆ. ವಶಿಷ್ಠ ಮಹಾಮುನಿ ಧರ್ಮ ಪತ್ನಿ ಈ ಅರುಂಧತಿ ದೇವಿ. ಈ ದಂಪತಿಗಳು ಜೀವನ ಪರ್ಯಂತ ಜೊತೆಯಾಗಿ ಅನ್ಯೋನ್ಯವಾಗಿ ಬದುಕಿ ಬಾಳಿ ಸತ್ತ ಮೇಲೆ ಪಕ್ಕಪಕ್ಕದಲ್ಲೀ ನಕ್ಷತ್ರವಾಗಿ ಹಾಗೆ ಉಳಿದು ಬಿಟ್ಟಿದ್ದಾರೆ. ಆದರೆ ನಮ್ಮಲ್ಲಿ ಮದುವೆ ಮುಂಜಾನೆಯ ಸಮಯದಲ್ಲಿ ಆಗುವುದರಿಂದ ಅರುಂಧತಿ ನಕ್ಷತ್ರವೂ ಹಗಲಿನ ಸಮಯದಲ್ಲಿ ಕಾಣುವುದಿಲ್ಲ.

ನಕ್ಷತ್ರಗಳು ಇದ್ದ ಸ್ಥಳದಲ್ಲಿ ಇರುತ್ತವೆ. ಸೂರ್ಯನ ಬೆಳಕಿನಿಂದ ಕಾಣುವುದಿಲ್ಲ ಆದರೆ ಕಾಣದೆ ಇರುವುದು ಸುಳ್ಳು ಅಂತ ಅನ್ನಬಾರದು. ಈ ದೇವಿಯ ಕಥೆಯೂ ಶಿವ ಪುರಾಣದಲ್ಲಿ ಕೂಡ ತಿಳಿದು ಬರುತ್ತದೆ. ಜಾಂಬವಂತನ ಕಿರು ಮೊಮ್ಮಗಳು ಅರುಂಧತಿ ದೇವಿ. ಈಕೆಯನ್ನು ಮೋಹಿಸಿ ವಶಿಷ್ಠ ಮುನಿಗಳು ವಿವಾಹ ಆಗುತ್ತಾರೆ. ಪತಿಯೇ ದೇವರು ಅಂತ ಈಕೆ ತನ್ನ ಧರ್ಮ ಪತ್ನಿಯ ಕರ್ತವ್ಯವನ್ನು ನಿರ್ವಹಿಸುತ್ತಾ ಜನರಿಗೆ ಮತ್ತು ಲೋಕಕ್ಕೆ ಮಾದರಿಯಾಗಿದ್ದಾರೆ. ಇನ್ನೊಂದು ಪುರಾಣದ ಪ್ರಕಾರ ನೋಡುವುದಾದರೆ, ಬ್ರಹ್ಮನು ಸೃಷ್ಟಿಯನ್ನು ನಿರ್ಮಾಣ ಮಾಡುವಾಗ ಅತಿಲೋಕ ಸುಂದರಿಯರನ್ನು ಸೃಷ್ಟಿಸುತ್ತಾರೆ. ಇವರ ಜೊತೆಗೆ ಮನ್ಮಥನನ್ನು ಸೃಷ್ಟಿ ಮಾಡಬೇಕಾಗುತ್ತದೆ. ಈ ಮನ್ಮಥನಿಗೆ ಐದು ಬಾಣಗಳನ್ನು ಬ್ರಹ್ಮ ದೇವನು ನೀಡಿರುತ್ತಾರೆ. ಯಾರ ಮೇಲೆ ಈ ಬಾಣಗಳನ್ನು ಪ್ರಯೋಗ ಮಾಡುತ್ತಾರೆ ಅವರು ಮೋಹಗೊಂಡು ಸೃಷ್ಟಿಯ ಅಭಿವೃದ್ದಿ ಮಾಡುತ್ತಾರೆ.ಆದರೆ ಈ ತಪ್ಪನ್ನು ಮನ್ಮಥ ಮಾಡುತ್ತಾರೆ. ಈ ಬಾಣಗಳನ್ನು ಬ್ರಹ್ಮ ಲೋಕದ ಜನರ ಮೇಲೆ ಪ್ರಯೋಗ ಮಾಡುತ್ತಾನೆ. ಹೀಗಾಗಿ ಬ್ರಹ್ಮ ವಾಸಿಗಳು ಎಲ್ಲರೂ ಮೋಹಗೊಂಡು ಬ್ರಹ್ಮ ಸೃಷ್ಟಿಸಿದ ಅತಿಲೋಕದ ಸುಂದರಿಯರನ್ನು ಕಾ-ಮದ ದೃಷ್ಟಿಯಿಂದ ನೋಡುತ್ತಾರೆ.

ಜಗತ್ತೇ ಸೃಷ್ಟಿ ಮಾಡಿದ ಬ್ರಹ್ಮ ದೇವನು ಮೋಹಗೊಳ್ಳುತ್ತಾನೆ. ಇದನ್ನು ತೀಕ್ಷ್ಣವಾಗಿ ಗಮನಿಸಿದ ಸರಸ್ವತಿ ದೇವಿಯು ಇದರ ಪರಿಣಾಮವು ತುಂಬಾನೇ ದೊಡ್ಡದಾಗಿ ಪರಿಣಮಿಸುತ್ತದೆ ಎಂದುಕೊಂಡು ಶಿವನ ಹತ್ತಿರ ಹೋಗುತ್ತಾರೆ. ಆಗ ಶಿವನು ಬ್ರಹ್ಮ ದೇವನಿಗೆ ಉಪದೇಶ ಮಾಡಿ ಕಾಮದ ದೃಷ್ಟಿಯಿಂದ ಎಲ್ಲರನ್ನೂ ನಶಿಸಿತ್ತಾರೆ. ಇದನ್ನು ಅರಿತ ಬ್ರಹ್ಮ ದೇವನು ಮನ್ಮಥನ ಮೇಲೆ ಕೋಪಗೊಂಡು ನೀನು ಶಿವನ ಮೂರನೇ ಕಣ್ಣಿಗೆ ಬಲಿಯಾಗುತ್ತಿಯಾ ಅಂತ ಶಾಪ ಹಾಕುತ್ತಾರೆ. ಇದನ್ನು ಅರಿತ ಸಂಧ್ಯಾ ಇದಕ್ಕೆಲ್ಲ ಕಾರಣ ನನ್ನ ಕೆಟ್ಟ ದೇಹ ಎಂದುಕೊಂಡು ಕೊನೆಯವರೆಗೂ ದೇಹವು ನಶಿಸುವವರೆಗು ತಪಸ್ಸಿನಲ್ಲಿ ಇರಬೇಕೆಂದು ನಿರ್ಧಾರ ಮಾಡುತ್ತಾಳೆ. ಇವಳು ಭೂಲೋಕಕ್ಕೆ ಬಂದು ಶಿವನ ಮಂತ್ರವನ್ನು ಜಪಿಸುತ್ತಾಳೆ. ಹೀಗಾಗಿ ಶಿವನು ಪ್ರತ್ಯಕ್ಷವಾಗಿ ಏನು ವಾರಗಳು ಬೇಕು ಅಂತ ಕೇಳುತ್ತಾರೆ, ಆಗ ಆಕೆಯು ಮೂರು ವರಗಳನ್ನು ಕೇಳುತ್ತಾಳೆ.

ಮೊದಲಿಗೆ, ಜಗತ್ತಿನಲ್ಲಿ ಇರುವ ಎಲ್ಲ ಜೀವಿಗಳಿಗೆ ಯಮನ ಬಳಿ ಹೋಗುವ ಪರಿಸ್ಥಿತಿ ಬರುವವರೇಗು ಯಾರು ಕಾಮದ ದೃಷ್ಟಿಯನ್ನು ನೋಡಬಾರದು. ಎರಡನೆಯದು, ಯಾವ ಗಂಡಸು ಆದರೂ ನನ್ನನ್ನು ಕಾಮದ ದೃಷ್ಟಿಯಿಂದ ನೋಡಿದರೆ ಆತನು ನಪುಂಸಕನಾಗಬೇಕು ಮೂರನೆಯದು ನನ್ನ ದೇಹದ ಮೇಲೆ ಕಾಮುಕರ ಕಣ್ಣು ಬಿದ್ದಿರುವ ಕಾರಣ ಈ ದೇಹವು ನಶ್ವರ. ಅದಕ್ಕಾಗಿ ನಾನು ಅಗ್ನಿ ಕುಂಡದಲ್ಲಿ ಹಾರಿ ದೇಹವನ್ನು ತ್ಯಜಿಸಬೇಕು ಅಂತ ದೇವರನ್ನು ಕೇಳಿಕೊಳ್ಳುತ್ತಾಳೆ. ಅದಕ್ಕಾಗಿ ಶಿವನು, ಮಹಾ ಋಷಿಗಳು ಪವಿತ್ರವಾದ ಯಜ್ಞವನ್ನು ಮಾಡುತ್ತಿದ್ದಾರೆ ಅದರಲ್ಲಿ ನೀನು ನಿನ್ನ ದೇಹವನ್ನು ತ್ಯಜಿಸಬೇಕು. ಅದಕ್ಕೂ ಮೊದಲು ನಿನಗೆ ಮುಂದಿನ ಜನ್ಮದಲ್ಲಿ ಯಾರೂ ನಿನಗೆ ಪತಿಯಾಗಿ ಬೇಕು ಅವರ ಹೆಸರನ್ನು ಕೇಳಿ ನಿನ್ನ ದೇಹವನ್ನು ತ್ಯಜಿಸು ಅನ್ನುತ್ತಾನೆ.

ಅದಕ್ಕಾಗಿ ಆಕೆಯು ವಶಿಷ್ಠ ರನ್ನು ನೆನೆದು ದೇಹವನ್ನು ತ್ಯಜಿಸುತ್ತಾಳೆ. ಅದರಿಂದಲೇ ಮತ್ತೆ ಮಗುವಾಗಿ ಜನಿಸುತ್ತಾಳೆ. ಅವಳ ಹೆಸರು ಅರುಣ್ ಜ್ಯೋತಿ ಅಂತ ನಾಮಕರಣ ಮಾಡುತ್ತಾರೆ ಯೌವನದಲ್ಲಿ ಕೋರಿಕೆಯಂತೆ ವಶಿಷ್ಠ ಮುನಿಯನ್ನು ಮದುವೆ ಆಗುತ್ತಾಳೆ. ಅರುಣ್ ಅಂದರೆ ಅಗ್ನಿ ಜ್ಯೋತಿ ಅಂದರೆ ದಹಿಸಿದವಳು.ಕೇವಲ ದೇಹವನ್ನು ವರಿಸಿದಕ್ಕೆ ತನ್ನ ದೇಹವನ್ನು ತ್ಯಜಿಸಿ ಮತ್ತೆ ಮರು ಜನ್ಮ ಪಡೆದು ವಶಿಷ್ಠ ಮುನಿಗಳ ಧರ್ಮಪತ್ನಿ ಆಗಿ ಆಕಾಶದಲ್ಲಿ ಅವರ ಪಕ್ಕದಲ್ಲಿ ಜೊತೆಯಾಗಿ ಇದ್ದ ಶೀಲವತಿ ಈಕೆ. ಇಷ್ಟು ಅರುಂಧತಿ ನಕ್ಷತ್ರ ಮಾಹಿತಿ.

Leave a Reply

Your email address will not be published. Required fields are marked *